ಬಾಲಿವುಡ್‌ನ ಟಾಪ್ 10 ನಾಯಕಿಯರಲ್ಲಿ ಕಾಜೋಲ್‌ಗೆ ಸಿಗುತ್ತಾ ಸ್ಥಾನ ?
ಕಾಜೋಲ್ ಬಾಲಿವುಡ್‌ನ ಕೃಷ್ಣ ಸುಂದರಿ. ಕೇವಲ 17ರ ಪ್ರಾಯದಲ್ಲಿಯೇ ಬಾಜಿಗರ್ ಚಿತ್ರದಲ್ಲಿ ಶಾರುಖ್ ಖಾನ್‌ಗೆ ಜೋಡಿಯಾಗಿದ್ದ ಕಾಜೋಲ್ ಆ ನಂತರ ಬಾಲಿವುಡ್‌ನ ನಂಬರ್ 1 ನಾಯಕಿಯಾಗಿದ್ದು.. ಚಿತ್ರರಂಗವನ್ನಾಳಿದ್ದು.. ಈಗ ಇತಿಹಾಸ. 32 ವರ್ಷಗಳ ಸುದೀರ್ಘ ತಮ್ಮ ವೃತ್ತಿ ಬದುಕಿನಲ್ಲಿ ಹಲವು ಏರಿಳಿತ ಕಂಡ ಕಾಜೋಲ್, ಅಜಯ್ ದೇವಗನ್ ಜೊತೆ 1999ರಲ್ಲಿ ಮದುವೆಯಾದ ನಂತರ ಚಿತ್ರರಂಗದಿಂದ ಅಂತರ ಕಾಪಾಡಿಕೊಳ್ಳಲು ಶುರು ಮಾಡಿದರು. ಮನೆ-ಮಕ್ಕಳು-ಗಂಡ-ಸಂಸಾರ ಎಂದು ಬ್ಯುಸಿಯಾದರು.
ನಿಜಾ..'ಕಭಿ ಖುಷಿ ಕಭಿ ಘಮ್'.. 'ಫನ್ಹಾ'.. 'ರಾಜು ಚಾಚಾ'.. ಹೀಗೆ ಕೆಲವು ಚಿತ್ರಗಳನ್ನು ಕಾಜೋಲ್ ಮಾಡಿದರು ಕೂಡ ಮದುವೆ ಮುನ್ನ ಇದ್ದ ಕ್ರೇಜ್ ಮದುವೆಯ ನಂತರ ಯಾವತ್ತೂ ಕಾಣಲಿಲ್ಲ.

ಬಹುಶಃ ಹೀಗಾಗಿಯೇ ಏನೋ ತಮ್ಮನ್ನು ತಾವು ವಿಶೇಷ ಪಾತ್ರಗಳಿಗಷ್ಟೇ ಸೀಮಿತ ಮಾಡಿಕೊಂಡ ಕಾಜೋಲ್, 'ಹಾಲ್ ಏ ದಿಲ್'.. 'ರಬ್ ನೇ ಬನಾ ದಿ ಜೋಡಿ'.. 'ಓಂ ಶಾಂತಿ ಓಂ'.. 'ಸ್ಟೂಡೆಂಟ್ ಆಫ್ ದಿ ಇಯರ್'.. ಹೀಗೆ ಹಲವು ಚಿತ್ರಗಳಲ್ಲಿ ಹಾಡೊಂದರಲ್ಲಿ ಹೆಜ್ಜೆ ಹಾಕಿ ಕಣ್ಮರೆಯಾಗಲು ಶುರುಮಾಡಿದರು. ಬಾಲಿವುಡ್‌ನಲ್ಲಿ ಏನೂ ಬರ್ಖತ್ ಆಗದಿದ್ದಾಗ ಸೌತ್ ಇಂಡಸ್ಟ್ರೀ ಕಡೆ ವಲಸೆ ಬಂದರು.
ಇಂಥಾ ಕಾಜೋಲ್ ಸದ್ಯ ''ಮಾ''ಎನ್ನುವ ಚಿತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಶೇಷ ಅಂದರೆ ಖುದ್ದು ಕಾಜೋಲ್ ಅವರ ನಿರೀಕ್ಷೆಯನ್ನು ಮೀರಿ ಈ ಚಿತ್ರ ಹಣ ಗಳಿಸುತ್ತಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ.
ಹೌದು, ಜೂನ್ 27-2025ರಂದು ಬಿಡುಗಡೆಯಾದ ''ಮಾ'' ಸದ್ಯ ಬಾಲಿವುಡ್ ಬಾಕ್ಸಾಫೀಸ್ ಕದನದಲ್ಲಿ ಕಂಗನಾ ರಣಾವತ್ ಅಭಿನಯದ ''ಎಮರ್ಜೆನ್ಸಿ'' ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಚಿತ್ರ ಒಂಬತ್ತು ದಿನದಲ್ಲಿ ₹ 29.25 ಕೋಟಿ ಹಣವನ್ನು ಕೂಡ ಗಳಿಸಿದೆ. ಈ ಮೂಲಕ ನಿರ್ಮಾಪಕರಿಗೆ ಲಾಭವನ್ನು ಕೂಡ ಈ ಚಿತ್ರ ಮಾಡಿಕೊಟ್ಟಿದೆ. ಯಾಕೆಂದರೆ ''ಮಾ'' ಚಿತ್ರದ ''ವಿಕಿಪೀಡಿಯ'' ಪ್ರಕಾರ ಈ ಚಿತ್ರಕ್ಕೆ ಖರ್ಚಾಗಿದ್ದು ₹ 18 ಕೋಟಿ ಮಾತ್ರ.

ಆದರೂ ಕೂಡ ಕಾಜೋಲ್ ಮುಂದೆ ಸವಾಲುಗಳಿವೆ. ಸ್ವಪ್ರತಿಷ್ಠೆ ಇದೆ. ಬಾಲಿವುಡ್‌ನಲ್ಲಿ ಬಂದ ''ಟಾಪ್ 10'' ಮಹಿಳಾ ಪ್ರಧಾನ ಚಿತ್ರಗಳಲ್ಲಿ ತಮ್ಮ ಚಾಪು ಮೂಡಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಕಾಜೋಲ್‌ಗೆ ಇದೆ. ಈ ಅಗ್ನಿ ಪರೀಕ್ಷೆಯಲ್ಲಿ ಕಾಜೋಲ್ ಪಾಸಾಗುತ್ತಾರಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಈ ನಂಬರ್ ಗೇಮ್ ಸದ್ಯ ಬಾಲಿವುಡ್‌ನಲ್ಲಿ ಹಲವರ ಕುತೂಹಲ ಕೆರಳಿಸಿದೆ.
ಇದಕ್ಕೆ ಕೈಗನ್ನಡಿ ಎನ್ನುವಂತೆ www.koimoi.com ವರದಿಯನ್ನು ಹಂಚಿಕೊಂಡಿದ್ದು ಟಾಪ್ ಹತ್ತರಲ್ಲಿ ಜಾಗ ಪಡೆಯಲು ಕಾಜೋಲ್‌ಗೆ ಇನ್ನೂ ₹ 43.26 ಕೋಟಿಯ ಅವಶ್ಯಕತೆ ಇದೆ. ಅದ್ಹೇಗೆ ಎನ್ನುವುದಕ್ಕೆ ಅತೀ ಹೆಚ್ಚು ಹಣ ಗಳಿಸಿದ ಮಹಿಳಾ ಪ್ರಧಾನ ಚಿತ್ರಗಳ ಪಟ್ಟಿಯನ್ನು koimoi ಉಲ್ಲೇಖಿಸಿದ್ದು ಆ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.
ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ 10 ಪ್ರಮುಖ ಮಹಿಳಾ ಪ್ರಧಾನ ಸಿನಿಮಾಗಳು
ಚಿತ್ರದ ಹೆಸರು ಗಳಿಕೆ
1. ದಿ ಕೇರಳ ಸ್ಟೋರಿ ₹238.27 ಕೋಟಿ
2. ತನು ವೆಡ್ಸ್ ಮನು ರಿಟರ್ನ್ಸ್ ₹152 ಕೋಟಿ
3. ಗಂಗೂಬಾಯಿ ಕಥಿಯಾವಾಡಿ ₹128.89 ಕೋಟಿ
4. ರಾಜಿ ₹123.17 ಕೋಟಿ
5. ಮಣಿಕರ್ಣಿಕಾ ₹94.92 ಕೋಟಿ
6. ಕ್ರೂ ₹90 ಕೋಟಿ
7. ಆರ್ಟಿಕಲ್ 370 ₹84 ಕೋಟಿ
8. ವೀರೆ ದಿ ವೆಡ್ಡಿಂಗ್ ₹83 ಕೋಟಿ
9. ದಿ ಡರ್ಟಿ ಪಿಕ್ಚರ್ ₹85 ಕೋಟಿ
10. ನೀರ್ಜಾ ₹75.61 ಕೋಟಿ
ಹೀಗೆ ಈ ಹತ್ತು ಸಿನಿಮಾಗಳ ದಾಖಲೆಯನ್ನು ಕಾಜೋಲ್ ಅಭಿನಯದ ''ಮಾ'' ಮುರಿಯುತ್ತಾ, ಕಾಜೋಲ್ ಈ ಹತ್ತರಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಟಾಪ್ ಓನ್ ಸ್ಥಾನಕ್ಕೆ ಬರುವುದು ಕಷ್ಟವಾದರೂ ಕೂಡ ''ನಿರ್ಜಾ'' ಚಿತ್ರದ ದಾಖಲೆಯನ್ನು ''ಮಾ'' ಮುರಿಯುತ್ತಾ ಎನ್ನುವ ಕುತೂಹಲ ಈಗ ಬಾಲಿವುಡ್ ಪಂಡಿತರನ್ನು ಕಾಡುತ್ತಿದೆ. ಉತ್ತರ ಇನ್ನೂ ಕೆಲವೇ ದಿನಗಳಲ್ಲಿ ಸಿಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











