ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯ್ತು ರಶ್ಮಿಕಾ ಮಂದಣ್ಣ ಪ್ರಯತ್ನ; ₹50 ಲಕ್ಷಕ್ಕೆ ಸುಸ್ತು-ದಿ ಗರ್ಲ್‌ಫ್ರೆಂಡ್‌ ದುರಂತ ಕಥನ

ಕನ್ನಡದಿಂದ ಕಣ್ಮರೆಯಾದ ರಶ್ಮಿಕಾ ಮಂದಣ್ಣ ಆ ನಂತರ ತೆಲುಗು ಚಿತ್ರರಂಗದಲ್ಲಿ ಬಿಡಾರ ಹೂಡಿದ್ದರು. ಅಲ್ಲಿ ಹೆಸರು .. ಹಣ .. ಕೀರ್ತಿ ಸಂಪಾದನೆ ಮಾಡಿ ಸದ್ಯ ಬಾಲಿವುಡ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ .. ಆಂಧ್ರದಲ್ಲಿ ಸಿಕ್ಕ ಗೆಲುವು ಮುಂಬೈನಲ್ಲಿ ಇವರಿಗೆ ಸಿಕ್ತಿಲ್ಲ. ರಶ್ಮಿಕಾ ಅಭಿನಯದ ಯಾವ ಹಿಂದಿ ಚಿತ್ರ ಕೂಡ ಗೆದ್ದಿಲ್ಲ.

ನಿಜಾ.. ''ಅನಿಮಲ್'' ಮತ್ತು ''ಛಾವಾ'' ಗೆದ್ದಿವೆ. ಆದರೆ .. ಗೆಲುವಲ್ಲಿ ರಶ್ಮಿಕಾ ಮಂದಣ್ಣಗೆ ಸಿಗಬೇಕಿದ್ದ ಪಾಲು ಕೊನೆಯವರೆಗೆ ಸಿಗಲೇ ಇಲ್ಲ. ಸಂದೀಪ್ ರೆಡ್ಡಿ ವಂಗಾ, ರಣ್‌ಬೀರ್ ಕಪೂರ್ ಮತ್ತು ತೃಪ್ತಿ ದಿಮ್ರಿ ''ಅನಿಮಲ್'' ಚಿತ್ರದ ಗೆಲುವನ್ನು ಹಂಚಿಕೊಂಡರೆ ''ಛಾವಾ'' ಚಿತ್ರದ ಸಂಪೂರ್ಣ ಕ್ರೆಡಿಟ್‌ನ್ನು ವಿಕ್ಕಿ ಕೌಶಲ್ ತೆಗೆದುಕೊಂಡು ಕಣ್ಮರೆಯಾದರು.

career-best-performance-box-office-zero-rashmika-mandannas-girlfriend-flops-badly-in-hindi-market

ಇನ್ನೂ ''ಸಿಕಂದರ್'' ಚಿತ್ರದಲ್ಲಿ ಸಲ್ಮಾನ್ ಖಾನ್ ಇದ್ದರು. ಆದರೂ ಕೂಡ ಚಿತ್ರ ಗೆಲ್ಲಲಿಲ್ಲ. ತೀರಾ ಇತ್ತೀಚೆಗೆ ಬಂದ "ಥಮ್ಮ'' ಗೆದ್ದಿದೆ ಎಂದು ಹೇಳಲಾಗುತ್ತಿದೆಯಾದರೂ ಚಿತ್ರತಂಡ ಈ ಗೆಲುವನ್ನು ಸಂಭ್ರಮಿಸಿದಂತೆ ಇಲ್ಲ. ಸಂಭ್ರಮಾಚರಣೆಯ ಫೋಟೊಗಳು ಕೂಡ ವೈರಲ್ ಆಗಿಲ್ಲ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್. ಹೀಗಾಗಿ ಇವರ ಚಿತ್ರವನ್ನು ಭಾಷೆಯ ಬೇಧ ಬಾವ ಇಲ್ಲದೆ ನೋಡುತ್ತಾರೆ ಎಂದು ಹಲವರು ಅಂದುಕೊಂಡಿದ್ದರು. ವಿಶೇಷವಾಗಿ ಹಿಂದಿ ಮಾರುಕಟ್ಟೆಯಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಅಪಾರವಾದ ಜನ ಬೆಂಬಲ ಇದೆ ಎಂದೇ ಭಾವಿಸಿದ್ದರು. ಆದರೆ.. ಎಲ್ಲಾ ಲೆಕ್ಕಾಚಾರ ಮತ್ತೊಮ್ಮೆ ತಲೆ ಕೆಳಗಾಗಿದೆ. '' ದಿ ಗರ್ಲ್‌ಫ್ರೆಂಡ್‌'' ಚಿತ್ರಕ್ಕೆ ಹಿಂದಿಯಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ.

career-best-performance-box-office-zero-rashmika-mandannas-girlfriend-flops-badly-in-hindi-market

ಹೌದು, ರಶ್ಮಿಕಾ ಮಂದಣ್ಣ ಅವರ ಸ್ಟಾರ್ ವ್ಯಾಲ್ಯೂ, ಸ್ಟಾರ್‌ ಪವರ್ ನಂಬಿ '' ದಿ ಗರ್ಲ್‌ಫ್ರೆಂಡ್‌'' ಚಿತ್ರವನ್ನು ಹಿಂದಿಗೆ ಡಬ್ ಮಾಡಲಾಗಿತ್ತು. ಅಖಂಡ ಮಹಾರಾಷ್ಟ್ರದೆಲ್ಲೆಡೆ ಬಿಡುಗಡೆ ಮಾಡಲಾಗಿತ್ತು. ಆದರೆ.. ಈ ಬಾರಿ ಕೂಡ ಅದ್ಯಾಕೋ ಉತ್ತರ ಭಾರತದ ಚಿತ್ರ ರಸಿಕರು ರಶ್ಮಿಕಾ ಮಂದಣ್ಣ ಅವರನ್ನು ಬೆಳ್ಳಿತೆರೆಯ ಮೇಲೆ ನೋಡುವ ಮನಸು ಮಾಡಲಿಲ್ಲ.

ಇದಕ್ಕೆ ಕೈಗನ್ನಡಿ ಎನ್ನುವಂತೆ ''ದಿ ಗರ್ಲ್‌ಫ್ರೆಂಡ್‌'' ಚಿತ್ರದ ಹಿಂದಿ ಅವರಣಿಕೆಯ ಗಳಿಕೆ ತುಂಬಾನೇ ಶೋಚನಿಯವಾಗಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಬಿಡುಗಡೆಯಾದ ಈ 8 ದಿನದಲ್ಲಿ ''ದಿ ಗರ್ಲ್ ಫ್ರೆಂಡ್‌'' ಇಲ್ಲಿಯವರೆಗೆ ₹12.3 ಕೋಟಿಯನ್ನು ಕೇವಲ ತೆಲುಗಿನಲ್ಲಿ ಗಳಿಸಿದೆ. ಆದರೆ .. ರಶ್ಮಿಕಾ ದುರಾದೃಷ್ಟ. ನಿರೀಕ್ಷೆಯನ್ನು ಮೂಡಿಸಿದ್ದ ಈ ಚಿತ್ರ ಹಿಂದಿಯಲ್ಲಿ ಈ 8 ದಿನದಲ್ಲಿ ಕೇವಲ ₹47 ಲಕ್ಷವನ್ನು ಮಾತ್ರ ಗಳಿಸಿದೆ.

ಇನ್ನು ಸದ್ಯ ಹಿಂದಿಯಲ್ಲಿ ಈ ವಾರ ''ದೇ ದೇ ಪ್ಯಾರ್ ದೇ 2'' ಸೇರಿ ಕೆಲ ಚಿತ್ರಗಳು ಬಿಡುಗಡೆಯಾಗಿವೆ. ಈ ಹಿನ್ನೆಲೆ ''ದಿ ಗರ್ಲ್‌ಫ್ರೆಂಡ್‌'' (ಹಿಂದಿ ) ಕೈಯಲ್ಲಿದ್ದ ಕೆಲವೇ ಕೆಲ ಚಿತ್ರಮಂದಿರಗಳನ್ನು ಕೂಡ ಕಿತ್ತುಕೊಳ್ಳಲಾಗಿದೆ. ಸದ್ಯ ''ದಿ ಗರ್ಲ್‌ ಫ್ರೆಂಡ್‌'' ಬಾಕ್ಸಾಫೀಸ್‌ನಲ್ಲಿ ಒಂದು ವಾರ ಗಳಿಸಿದ್ದು ತೆಲುಗಿನಲ್ಲಿ ತಕ್ಕಮಟ್ಟಿಗೆ ಹಣವನ್ನು ದೋಚುತ್ತಿದೆ. ಹಿಂದಿಯಲ್ಲಿ ಬಹುತೇಕ ಎತ್ತಂಗಡಿಯಾಗಿದೆ. ಮುಂಬರುವ ದಿನಗಳಲ್ಲಿ ''ದಿ ಗರ್ಲ್‌ ಫ್ರೆಂಡ್'' ತೆಲುಗಿನಲ್ಲಿ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The shocking truth behind 'The Girlfriend' failure: Rashmika Mandanna is hailed for her greatest performance, yet the film CRASHES in the crucial Hindi market. Read the full box office report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X