ಅಪ್ಪ, ಮಗ ಹಾಗೂ ಚಿಕ್ಕಪ್ಪ; ಒಂದೇ ವರ್ಷ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಲೂಟಿ!

ಮಾಡಿದ್ರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ಬೇಕು, ಕಡಿಮೆ ಅಂದ್ರು 300, 400 ಕೋಟಿ ರೂ. ಕಲೆಕ್ಷನ್ ಆಗ್ಬೇಕು ಎನ್ನುವ ಲೆಕ್ಕಾಚಾರ ಚಿತ್ರರಂಗದಲ್ಲಿ ಶುರುವಾಗಿದೆ. ಇದೇ ಕಾರಣಕ್ಕೆ ನೂರಾರು ಕೋಟಿ ರೂ. ಬಂಡವಾಳ ಸುರಿದು ಸ್ಟಾರ್ ನಟರು, ತಂತ್ರಜ್ಞರು ಒಟ್ಟು ಸೇರಿಸಿ ಸಿನಿಮಾ ಮಾಡುವ ಟ್ರೆಂಡ್ ನಡೀತಿದೆ. ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ಚಿತ್ರತಂಡಗಳೇ ಸೋಶಿಯಲ್ ಮೀಡಿಯಾದಲ್ಲಿ ಇಷ್ಟು ಕೋಟಿ ಅಷ್ಟು ಕೋಟಿ ಎಂದು ಪೋಸ್ಟರ್ ಪೋಸ್ಟ್ ಮಾಡುತ್ತಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಬಾಲಿವುಡ್ ಸ್ಟಾರ್ ಕಲಾವಿದರು ಕೇಳಿದಷ್ಟು ಸಂಭಾವನೆ ಕೊಟ್ಟು ಕರೆಸಿ ಸಿನಿಮಾ ಮಾಡ್ತಿದ್ದಾರೆ. ಕೆಲ ಸಿನಿಮಾಗಳು ಆಂಧ್ರ, ತೆಲಂಗಾಣ ಬಿಟ್ಟು ಬೇರೆ ಭಾಗಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡ್ತಿವೆ. ಸದ್ಯ 'ಪೆದ್ದಿ' ಕ್ರೇಜ್ ಜೋರಾಗಿವೆ. 10 ದಿನಕ್ಕೆ 378 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಈ ಮೂಲಕ ಒಂದೇ ವರ್ಷದಲ್ಲಿ ಚಿರಂಜೀವಿ, ಪವನ್ ಕಲ್ಯಾಣ್ ಹಾಗೂ ರಾಮ್‌ಚರಣ್ ಸೇರಿ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಕಲೆಕ್ಷನ್ ಸಿನಿಮಾಗಳನ್ನು ಕೊಟ್ಟಂತಾಗಿದೆ.

Chiranjeevi Pawan Kalyan and RamCharan films Cross 1 000 Cr boxoffice collection in a Year

ಚಿರಂಜೀವಿ ಸೋದರಳಿಯ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಕಳೆದ ವರ್ಷ 1500 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಬಳಿಕ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ 280 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಇನ್ನು ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಮನಶಂಕರವರಪ್ರಸಾದ್‌ಗಾರು' ಸಿನಿಮಾ 300 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಈಗ ರಾಮ್‌ಚರಣ್ 'ಪೆದ್ದಿ' ಸರದಿ.

'OG' ಪವನ್ ಪವರ್

ಸದ್ಯ ಪವನ್ ಕಲ್ಯಾಣ್ ರಾಜಕೀಯರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆಂಧ್ರ ಡಿಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ 'OG' ಚಿತ್ರವನ್ನು ಕಳೆದ ವರ್ಷ ಸೆಪ್ಟೆಂಬರ್ 25ಕ್ಕೆ ಬಿಡುಗಡೆ ಮಾಡಲಾಗಿತ್ತು. ಸುಜಿತ್ ನಿರ್ದೇಶನದ ಗ್ಯಾಂಗ್‌ಸ್ಟರ್ ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. ವಿಶ್ವದಾದ್ಯಂತ ಸಿನಿಮಾ 293 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಬಜೆಟ್ ಹೆಚ್ಚಾಗಿ ಕೊಂಚ ಹಿನ್ನಡೆ ಆಗಿದ್ದು ನಿಜ, ಆದರೆ ಓಟಿಟಿ, ಸ್ಯಾಟಲೈಟ್ ರೈಟ್ಸ್ ಮೂಲಕ ಚಿತ್ರಕ್ಕೆ ಒಳ್ಳೆ ಆದಾಯವೇ ಬಂದಿತ್ತು.

Chiranjeevi Pawan Kalyan and RamCharan films Cross 1 000 Cr boxoffice collection in a Year

ಶಂಕರವರಪ್ರಸಾದ್‌ ಹವಾ

ಸಿನಿಮಾ ಬಿಟ್ಟು ರಾಜಕೀಯರಂಗಕ್ಕೆ ಹೋಗಿ ಸೋತಿದ್ದ ಚಿರು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿ ಬಹಳ ವರ್ಷಗಳಾಯ್ತು. ಆದರೆ ಈವೆರೆಗೆ ಹೇಳಿಕೊಳ್ಳುವಂತಹ ಹಿಟ್ ಸಿಕ್ಕಿರಲಿಲ್ಲ. 'ಮನಶಂಕರವರಪ್ರಸಾದ್‌ಗಾರು' ರೀತಿ ಕಾಮಿಡಿ ಸಿನಿಮಾ ಮೂಲಕ ಆ ಬರವನ್ನು ನೀಗಿಸಿಕೊಂಡಿದ್ದರು. ಅನಿಲ್ ರಾವಿಪುಡಿ ನಿರ್ದೇಶನದ ಚಿತ್ರದಲ್ಲಿ ನಯನತಾರಾ ಚಿರಂಜೀವಿ ಜೋಡಿಯಾಗಿ ಮಿಂಚಿದ್ದರು. ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ಬಲ ತುಂಬಿದ್ದರು. ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದ್ದ ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಘೋಷಿಸಿತ್ತು.

'ಪೆದ್ದಿ' ಖದರ್

'RRR' ಬಳಿಕ ರಾಮ್‌ಚರಣ್ ನಟಿಸಿದ ಸಿನಿಮಾಗಳು ಗೆಲ್ಲಲಿಲ್ಲ. ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರಕ್ಕೆ ತನು ಮನ ಅರ್ಪಿಸಿ ಕೆಲಸ ಮಾಡಿದ್ದರು. ಸದ್ಯ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಈ ಸ್ಪೋರ್ಟ್ಸ್ ಡ್ರಾಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 12ನೇ ದಿನವೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸೆಕೆಂಡ್ ವೀಕೆಂಡ್‌ನಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. 2ನೇ ಸೋಮವಾರವೂ ಬುಕ್ಕಿಂಗ್ ಚೆನ್ನಾಗಿದೆ. ಸಿನಿಮಾ ಶೀಘ್ರದಲ್ಲೇ 400 ಕೋಟಿ ರೂ. ಕ್ಲಬ್ ಸೇರುವ ಸುಳಿವು ಸಿಕ್ತಿದೆ.

ಅಪ್ಪ, ಮಗ, ಚಿಕ್ಕಪ್ಪ ಮ್ಯಾಜಿಕ್

'ಪುಷ್ಪ'-2 ಬಾಕ್ಸಾಫೀಸ್ ಗಳಿಕೆ ಪಕ್ಕಕ್ಕಿಟ್ರು 'OG', 'ಮನಶಂಕರವರಪ್ರಸಾದ್‌ಗಾರು' ಹಾಗೂ 'ಪೆದ್ದಿ' ಸಿನಿಮಾ ಕಲೆಕ್ಷನ್ ಅಂದಾಜು 1000 ಕೋಟಿ ರೂ. ಗಡಿ ತಲುಪಿದೆ. ಇನ್ನೊಂದು ವಾರದಲ್ಲಿ 'ಪೆದ್ದಿ' 400 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ, ಒಂದೇ ವರ್ಷದ ಅಂತರದಲ್ಲಿ ಒಂದೇ ಮನೆಯ ಮೂವರು ಸ್ಟಾರ್ಸ್ ನಟಿಸಿದ ಸಿನಿಮಾಗಳು ಸೇರಿ 1000 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X