45 Movie Day 3 Boxoffice: ಪೈರಸಿಗೂ ಜಗ್ಗದೇ '45' ಆರ್ಭಟ; ಶನಿವಾರವೂ ಕಲೆಕ್ಷನ್ ಜೋರು

ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾಗಿರುವ '45' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಶಿವರಾಜ್‌ಕುಮಾರ್, ಉಪೇಂದ್ರ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಸುದೀಪ್ 'ಮಾರ್ಕ್' ಸಿನಿಮಾ ಆರ್ಭಟದ ನಡುವೆಯೂ '45' ಬಾಕ್ಸಾಫೀಸ್ ಶೇಕ್ ಮಾಡ್ತಿದೆ.

ಅರ್ಜುನ್ ಜನ್ಯಾ ನಿರ್ದೇಶನದ ಫ್ಯಾಂಟಸಿ ಎಂಟರ್‌ಟೈನರ್ ಸಿನಿಮಾ '45' ಗುರುವಾರ ತೆರೆಗೆ ಬಂದಿತ್ತು. ಅದಕ್ಕೂ ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ಶುರುವಾಗಿತ್ತು. ಇಂದು(ಡಿಸೆಂಬರ್ 28) ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. sacnilk ವರದಿ ಪ್ರಕಾರ '45' ಸಿನಿಮಾ ಮೊದಲ 3 ದಿನಕ್ಕೆ 9.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.

Christmas Release 45 Dominates Box Office with Shivarajkumar Upendra s Climax Magic

ದೊಡ್ಡ ದೊಡ್ಡ ಸಿನಿಮಾಗಳ ಆರ್ಭಟದ ನಡುವೆ ಕನ್ನಡ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡ್ತಿವೆ. ಭಾನುವಾರದ ರಜೆ '45' ಚಿತ್ರಕ್ಕೆ ಪ್ಲಸ್ ಆಗಿದೆ. ಫ್ಯಾಮಿಲಿ ಆಡಿಯನ್ಸ್ ಮುಖ್ಯವಾಗಿ ಮಹಿಳಾ ಪ್ರೇಕ್ಷಕರ ಸಿನಿಮಾ ನೋಡಲು ಬರುತ್ತಿದ್ದಾರೆ. ಮುಂದೆ ತೆಲುಗು, ತಮಿಳು ಸೇರಿ ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.

ಟಿಕೆಟ್ ದರ ಕಮ್ಮಿ

'45' ಚಿತ್ರದ ಟಿಕೆಟ್ ದರವನ್ನು ಚಿತ್ರತಂಡ ಹೆಚ್ಚಿಸಲಿಲ್ಲ. ಹಾಗಾಗಿ ಚಿತ್ರದ ಗಳಿಕೆ ಕೊಂಚ ಕಮ್ಮಿ ಎನಿಸುತ್ತಿದೆ. ಗ್ರಾಸ್ ಕಲೆಕ್ಷನ್ ಈಗಾಗಲೇ 15 ಕೋಟಿ ರೂ. ಗಡಿ ದಾಟಿರುವ ಅಂದಾಜಿದೆ. ಬುಕ್‌ಮೈ ಶೋನದಲ್ಲಿ ಸಾಕಷ್ಟು ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಲ್ಲೇ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿದ್ದಾರೆ.

ಕ್ಲೈಮ್ಯಾಕ್ಸ್ ಮ್ಯಾಜಿಕ್

ಇಡೀ ಚಿತ್ರ ಒಂದು ತೂಹವಾದರೆ ಕ್ಲೈಮ್ಯಾಕ್ಸ್ ಮತ್ತೊಂದು ತೂಕ. ಶಿವನ 11 ಅವತಾರಗಳನ್ನು ತೆರೆಮೇಲೆ ತೋರಿಸುವ ಪ್ರಯತ್ನ ನಡೆದಿದೆ. ಅದು ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ. ಶಿವಣ್ಣನನ್ನು ಅಷ್ಟು ಅವತಾರಗಳಲ್ಲಿ ನೋಡಿ ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯಾ ತೆರೆಗೆ ತಂದಿರುವ ಕಾನ್ಸೆಪ್ಟ್ ಇಷ್ಟವಾಗುತ್ತಿದೆ.

ಬೆಂಗಳೂರಿನಲ್ಲಿ ಭರ್ಜರಿ ಗಳಿಕೆ

ಕರ್ನಾಟಕದಲ್ಲಿ ಸಿನಿಮಾಗಳು ಹೆಚ್ಚು ಗಳಿಕೆ ಮಾಡುವುದು ಬೆಂಗಳೂರಿನಲ್ಲಿ. '45' ಸಿನಿಮಾ ಕೂಡ ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಿದೆ. 'ಡೆವಿಲ್' ಚಿತ್ರದ ಹಲವು ಶೋಗಳು ಈ ಚಿತ್ರಕ್ಕಿದೆ ಸಿಕ್ಕಿದೆ.

ಭಾನುವಾರದ ಲೆಕ್ಕಾಚಾರ?

ನಾಲ್ಕನೇ ದಿನವಾದ ಇಂದು ಭಾನುವಾರ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ದೊಡ್ಡಮಟ್ಟದಲ್ಲಿ ಗಳಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಇದು ಯೂನಿವರ್ಸಲ್ ಸಬ್ಜೆಕ್ಟ್ ಆಗಿರುವುದರಿಂದ ಪರಭಾಷಾ ಪ್ರೇಕ್ಷಕರಿಗೂ ಇಷ್ಟವಾಗಲಿದೆ. ಮುಖ್ಯವಾಗಿ ತೆಲುಗು ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಳ್ಳುವ ಸಾಧ್ಯತೆಯಿದೆ.

ಪೈರಸಿ ಕಾಟ

'45' ಚಿತ್ರಕ್ಕೂ ಪೈರಸಿ ಕಾಟ ಶುರುವಾಗಿದೆ. ಈ ಬಗ್ಗೆ ಇತ್ತೀಚೆಗೆ ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದರು. ನನಗೆ ನಾಲ್ಕೈದು ಲಿಂಕ್ ಕಳಿಸಿದ್ದರು ಎಂದು ತಿಳಿಸಿದ್ದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೂಡ ಹೇಳಿದ್ದಾರೆ. ಕೋರ್ಟ್ ಆರ್ಡರ್ ತಂದಿದ್ದಾರೆ. ದೊಡ್ಡ ಪರದೆಗಾಗಿ ಮಾಡಿರುವ ಸಿನಿಮಾ ಇದು. ಹಾಗಾಗಿ ಎಲ್ಲರೂ ಬೆಳ್ಳಿ ಪರದೆಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X