Raid 2 VS Kesari 2 ;ಬಾಕ್ಸಾಫೀಸ್‌ನಲ್ಲಿ ಅಕ್ಷಯ್‌ ಕುಮಾರ್‌ಗೆ ಸೆಡ್ಡು ಹೊಡೆದ ಅಜಯ್ ದೇವಗನ್,ರೇಡ್ 2 ಗಳಿಸಿದ್ದೆಷ್ಟು?

ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಸಿನಿಮಾಗಳನ್ನು ನೋಡಲು ಗ್ರಾಮೀಣ ಪ್ರದೇಶದವರು ಬಂಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ದೂರ ದೂರಕ್ಕೆ ನೋಡಿದರೂ ಪ್ರೇಕ್ಷಕರು ಕಾಣುತ್ತಿಲ್ಲ. ಎಲ್ಲೋ ಅಲ್ಲೊಂದು .. ಇಲ್ಲೊಂದು .. ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುತ್ತೆ. ಚಿತ್ರಮಂದಿರ ಅಪರೂಪಕ್ಕೆ ಭರ್ತಿಯಾಗುತ್ತೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುತ್ತೆ. ರೇಡ್ 2 ಇದಕ್ಕೆ ಸದ್ಯದ ಉದಾಹರಣೆ.

ಹೌದು, ರೇಡ್ 2.. ಮೇ 1 ರಂದು ತೆರೆಗೆ ಬಂದ ಚಿತ್ರ. ಅಪಾರ ನಿರೀಕ್ಷೆಯನ್ನೊತ್ತು ತೆರೆಗೆ ಬಂದ ಈ ಚಿತ್ರ ಗೆಲ್ಲುವ ವಿಶ್ವಾಸ ಬಾಲಿವುಡ್‌ಗೆ ಇತ್ತು. ಈ ನಂಬಿಕೆ ಹುಸಿಯಾಗಿಲ್ಲ. ನಿಧಾನಕ್ಕೆ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ನೂರು ಕೋಟಿಯ ಗಡಿಯತ್ತ ಚಿತ್ರ ಬಂದಿದೆ.

Clash of Titans Ajay Devgn s Raid 2 Roars Past Akshay Kumar s Kesari 2 on Day 7 at the Box Office

ಬಾಲಿವುಡ್‌ ಚಿತ್ರಗಳ ಅಂಕಿ- ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಈ ಏಳು ದಿನದಲ್ಲಿ 90.50 ಕೋಟಿ ಹಣವನ್ನು ಗಳಿಸಿದೆ.

ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಚಿತ್ರದ ಏಳು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ { ಗುರುವಾರ } - ₹19.25 ಕೋಟಿ

ಎರಡನೇ ದಿನ { ಶುಕ್ರವಾರ } - ₹ 12 ಕೋಟಿ

ಮೂರನೇ ದಿನ { ಶನಿವಾರ } - ₹ 18 ಕೋಟಿ

ನಾಲ್ಕನೇ ದಿನ { ಭಾನುವಾರ }- ₹ 22 ಕೋಟಿ

ಐದನೇ ದಿನ { ಸೋಮವಾರ }- ₹ 7.5 ಕೋಟಿ

ಆರನೇ ದಿನ { ಮಂಗಳವಾರ }-₹ 7 ಕೋಟಿ

ಏಳನೇ ದಿನ { ಬುಧವಾರ } - ₹4.75 ಕೋಟಿ {ಅಂದಾಜು}

ಒಟ್ಟು ಗಳಿಕೆ - ₹ 90.50 ಕೋಟಿ

ಹೀಗೆ ಈ 07 ದಿನದಲ್ಲಿ ₹90.50 ಕೋಟಿಯನ್ನು ಕೊಳ್ಳೆ ಹೊಡೆದಿರುವ ರೇಡ್ 2, ಬಾಕ್ಸಾಫೀಸ್‌ನಲ್ಲಿ ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರವನ್ನು ಕೂಡ ಹಿಂದಿಕ್ಕಿದೆ. ಹೌದು, ಅಸಲಿಗೆ.. ರೇಡ್ 2 ಚಿತ್ರ ತೆರೆಗೆ ಬರುವ ಮುನ್ನವೇ ಬಂದ ಕೇಸರಿ 2 ಚಿತ್ರ ಬಾಕ್ಸಾಫೀಸ್‌ನಲ್ಲಿ ತೆವಳುತ್ತಾ ಸಾಗಿದೆ. ಬಿಡುಗಡೆಯಾಗಿ 20 ದಿನವಾದರೂ ಕೂಡ ಚಿತ್ರದ ಗಳಿಕೆ ₹85 ಕೋಟಿಯ ಗಡಿಯನ್ನು ದಾಟಿಲ್ಲ. ಬದಲಿಗೆ ಸ್ಯಾಕ್ನಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ ಕೇಸರಿ 2 ಇಲ್ಲಿಯವರೆಗೆ ಕೇವಲ 82.70 ಕೋಟಿಯನ್ನು ಮಾತ್ರ ಗಳಿಸಿದೆ. ಚಿತ್ರದ ಗಳಿಕೆಯ ಮೇಲೆ ಹದ್ದಿನ ಕಣ್ಣಿಡುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಕೇಸರಿ 2 ಚಿತ್ರದ 20 ದಿನದ ಬಾಕ್ಸಾಫೀಸ್‌ ಲೆಕ್ಕ ಈ ಕೆಳಗಿನಂತೆ ಇದೆ.

ಕೇಸರಿ 2 ಚಿತ್ರದ 20 ದಿನದ ಬಾಕ್ಸಾಫೀಸ್ ಕಲೆಕ್ಷನ್

ಮೊದಲ ದಿನ - { ಶುಕ್ರವಾರ } ₹ 7.75 ಕೋಟಿ

ಎರಡನೇ ದಿನ - { ಶನಿವಾರ } ₹ 9.75 ಕೋಟಿ

ಮೂರನೇ ದಿನ - {ಭಾನುವಾರ} ₹ 12 ಕೋಟಿ

ನಾಲ್ಕನೇ ದಿನ - {ಸೋಮವಾರ} ₹ 4.5 ಕೋಟಿ

ಐದನೇ ದಿನ - { ಮಂಗಳವಾರ} ₹ 5 ಕೋಟಿ

ಆರನೇ ದಿನ - { ಬುಧವಾರ } ₹ 3.6 ಕೋಟಿ

ಏಳನೇ ದಿನ - { ಗುರುವಾರ } ₹ 3.5 ಕೋಟಿ

ಮೊದಲ ವಾರದ ಒಟ್ಟು ಗಳಿಕೆ - ₹ 46.1 ಕೋಟಿ

ಎಂಟನೆ ದಿನ - { ಎರಡನೇ ಶುಕ್ರವಾರ } ₹ 4.5 ಕೋಟಿ

ಒಂಬತ್ತನೇ ದಿನ -{ ಎರಡನೇ ಶನಿವಾರ } ₹ 7.15 ಕೋಟಿ

ಹತ್ತನೇ ದಿನ - { ಎರಡನೇ ಭಾನುವಾರ} ₹ 8.1 ಕೋಟಿ

ಹನ್ನೊಂದನೇ ದಿನ -{ ಎರಡನೇ ಸೋಮವಾರ} ₹2.75 ಕೋಟಿ

ಹನ್ನೆರಡನೇ ದಿನ - {ಎರಡನೇ ಮಂಗಳವಾರ } ₹ 2.65 ಕೋಟಿ

ಹದಿಮೂರನೇ ದಿನ -{ ಎರಡನೇ ಬುಧವಾರ } ₹ 2.15 ಕೋಟಿ

ಹದಿನಾಲ್ಕನೇ ದಿನ - { ಎರಡನೇ ಗುರುವಾರ } ₹ 1.8 ಕೋಟಿ

ಎರಡನೇ ವಾರದ ಒಟ್ಟು ಗಳಿಕೆ - ₹28.65 ಕೋಟಿ

ಹದಿನೈದನೇ ದಿನ - { ಮೂರನೇ ಶುಕ್ರವಾರ } ₹1.25 ಕೋಟಿ

ಹದಿನಾರನೇ ದಿನ - { ಮೂರನೇ ಶನಿವಾರ } ₹ 2 ಕೋಟಿ

ಹದಿನೇಳನೇ ದಿನ - { ಮೂರನೇ ಭಾನುವಾರ } ₹ 2.5 ಕೋಟಿ

ಹದಿನೆಂಟನೇ ದಿನ - { ಮೂರನೇ ಸೋಮವಾರ } ₹ 75 ಲಕ್ಷ

ಹತ್ತೊಂಬತ್ತನೇ ದಿನ -{ ಮೂರನೇ ಮಂಗಳವಾರ } ₹ 85 ಲಕ್ಷ

ಇಪ್ಪತ್ತನೇ ದಿನ - { ಮೂರನೇ ಬುಧವಾರ } ₹ 60 ಲಕ್ಷ * {ಅಂದಾಜು }

ಒಟ್ಟು ಗಳಿಕೆ - ₹ 82.70 ಕೋಟಿ

ಹೀಗೆ ಕೇಸರಿ 2 ಸದ್ಯ ₹ 82.70 ಕೋಟಿಯನ್ನು ಮಾತ್ರ ಗಳಿಸಿದ್ದು, ಸದ್ಯ ಚಿತ್ರ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಹಣವನ್ನು ಕೂಡ ಗಳಿಸುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಈ ವಾರ ಅನೇಕ ಕಡೆ ಕೇಸರಿ 2 ಚಿತ್ರಮಂದಿರಗಳಿಂದ ಎತ್ತಂಗಡಿ ಕೂಡ ಆಗಲಿದೆ. ಈ ಮೂಲಕ ಅಕ್ಷಯ್ ಕುಮಾರ್ ಮತ್ತೊಮ್ಮೆ ಸೋಲನ್ನು ಕಂಡಂತೆ ಆಗಿದೆ.

ರೈಡ್ 2 ವರ್ಸಸ್ ರೈಡ್

ಇನ್ನು ರೈಡ್ 2 ಚಿತ್ರದ ಮೊದಲ ಭಾಗ 2018ರಲ್ಲಿ ತೆರೆಗೆ ಬಂದಿತ್ತು. ಆ ಕಾಲದಲ್ಲಿ ಬಂದ ರೇಡ್ ಬಾಕ್ಸಾಫೀಸ್‌ನಲ್ಲಿ ₹ 101.45 ಕೋಟಿ ಹಣವನ್ನು ಗಳಿಸಿತ್ತು. ರೇಡ್ 2 ಈಗಾಗಲೇ ₹90 ಕೋಟಿ ಹಣವನ್ನು ಗಳಿಸಿದೆ. ಹೀಗಾಗಿ ರೇಡ್ ಚಿತ್ರದ ಗಳಿಕೆಯನ್ನು ರೇಡ್ 2 ಈ ಭಾನುವಾರದೊಳಗೆ ಹಿಂದಿಕ್ಕುವ ಸಾಧ್ಯತೆ ಇದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.

ಇನ್ನು ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ ಚಿತ್ರಗಳ ಸಾಲಿನಲ್ಲಿ ರೇಡ್ 2 ಚಿತ್ರ ಸದ್ಯ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರವನ್ನು ಕೂಡ ರೇಡ್ 2 ಚಿತ್ರ ಹಿಂದಿಕ್ಕಿದೆ. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದ ದಾಖಲೆಯನ್ನು ಕೂಡ ಮುಂಬರುವ ದಿನ ಗಳಲ್ಲಿ ರೇಡ್ 2 ಮುರಿಯುವ ಸಾಧ್ಯತೆ ಇದೆ.

ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ 5 ಚಿತ್ರಗಳು

ಚಿತ್ರದ ಹೆಸರು ಚಿತ್ರದ ಗಳಿಕೆ

1.ಛಾವಾ ₹615.39 ಕೋಟಿ

2.ಸ್ಕೈ ಫೋರ್ಸ್ ₹134.93 ಕೋಟಿ

3.ಸಿಕಂದರ್ ₹129.95 ಕೋಟಿ

4. ರೇಡ್ 2 ₹90.50 ಕೋಟಿ

5. ಜಾಟ್ ₹89.28 ಕೋಟಿ

ಒಟ್ನಲ್ಲಿ ಸದ್ಯ ರೇಡ್ 2 ಚಿತ್ರ ನೂರು ಕೋಟಿಯ ಗಡಿಯನ್ನು ಬಂದು ತಲುಪಿದೆ.ಈ ವಾರ ಬೇರೆ ಯಾವ ದೊಡ್ಡ ಚಿತ್ರಗಳು ಹಿಂದಿಯಲ್ಲಿ ಬಿಡುಗಡೆಯಾಗದ ಕಾರಣ ಈ ಶನಿವಾರ ಮತ್ತು ಭಾನುವಾರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ರೇಡ್ 2 ಇನ್ನೆಷ್ಟು ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ದೋಚುತ್ತೆ, ಛಾವಾ ನಂತರ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ರೇಡ್ 2 ಚಿತ್ರ ಪಾತ್ರವಾಗುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ಕೊಯಿ ಮೊಹಿ ವೆಬ್ ಸೈಟ್, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Devgn’s ‘Raid 2’ is on fire at the box office, storming past the ₹85 crore mark in just Seven days! Fueled by a thunderous opening and a power-packed extended weekend, the action-drama has crushed the lifetime collection of Akshay Kumar’s ‘Kesari 2’. With director Raj Kumar Gupta at the helm, and roaring support from metro audiences and explosive advance bookings, ‘Raid 2’ is rewriting the rules of the box office game.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X