Cocktail 2 Box Office Day 1 ; ಬಾಕ್ಸಾಫೀಸ್‌ಗೇರಿದ ಕಾಕ್‌ಟೇಲ್ ಅಮಲು, ಮೊದಲ ದಿನ ಗಳಿಸಿದ್ದೆಷ್ಟು ಈ ತ್ರಿಕೋನ ಪ್ರೇಮಕಥೆ ?

ಪ್ರೀತಿಯಿಂದ .. ಪ್ರೀತಿಗಾಗಿ .. ಪ್ರೀತಿಗೋಸ್ಕರ .. ಪ್ರೀತಿ ಎಂಬ ಎರಡಕ್ಷರದ ಮಧುರ ಭಾವದ ಸುತ್ತ ಮುತ್ತ ಭಾರತೀಯ ಬೆಳ್ಳಿತೆರೆಯ ಮೇಲೆ ಇಲ್ಲಿಯವರೆಗೆ ಹಲವಾರು ಚಿತ್ರಗಳು ಅರಳಿವೆ. ಎಷ್ಟೇ ಬರೆದರೂ ಮುಗಿಯದ ಬಣ್ಣ ಬಣ್ಣದ ಭಾವನೆಗಳ ಈ ಸಾಗರದಿಂದ ಕ್ಯಾಂಪಸ್, ಕ್ಲಾಸ್ ರೂಮ್, ಲೈಬ್ರರಿ, ಕ್ಯಾಂಟೀನ್, ಬಸ್ಸು, ರೋಡು, ಪಾರ್ಕು, ಹೀಗೆ ಎಲ್ಲೆಲ್ಲೂ ಪ್ರೀತಿಸುವ ಹೃದಯಗಳ ಬಡಿತದ ಕಥೆಗಳನ್ನು ಹೆಕ್ಕಿ ಹೇಳಲಾಗಿದೆ.

ಆ ಪೈಕಿ ಕೆಲ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ. ಇನ್ನೂ ಕೆಲ ಚಿತ್ರಗಳು ಪ್ರೇಕ್ಷಕರ ಮನಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿವೆ. ಇನ್ನೂ ಕೆಲ ಸಿನಿಮಾಗಳು ಮಕಾಡೆ ಮಲಗಿವೆ. ಹೇಳ ಹೆಸರಿಲ್ಲದಂತೆ ಕಾಣೆಯಾಗಿವೆ. ''ಕಾಕ್‌ಟೇಲ್ 2'' ಯಾವ ಸಾಲಿನಲ್ಲಿ ಸೇರುತ್ತೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಚಿತ್ರಕ್ಕೆ ಉತ್ತಮವಾದ ಆರಂಭವಂತೂ ಸಿಕ್ಕಿದೆ.

cocktail-2-box-office-day-1-shahid-kapoor-scores-his-2nd-biggest-opener-with-13-50-crore

ಹೌದು, ''ಕಾಕ್‌ಟೇಲ್ 2''.. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ಚಿತ್ರ. ಬಿಡುಗಡೆಗೆ ಮುನ್ನ ಭಾರೀ ಸದ್ದು ಮಾಡಿದ್ದ ಈ ಚಿತ್ರ ಮೊದಲ ದಿನ ಕೇವಲ ಭಾರತದಲ್ಲಿ ₹13.50 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ.

''ಸ್ಯಾಕ್ನಿಲ್'' ವರದಿಯ ಪ್ರಕಾರ ಮೊದಲ ದಿನ 10,835 ಪ್ರದರ್ಶನ ಕಂಡ ಈ ಚಿತ್ರವನ್ನು ಹೈದರಾಬಾದ್‌ನಲ್ಲಿ ಅತೀ ಹೆಚ್ಚು ಜನ ನೋಡಿದ್ಧಾರೆ. ಮುತ್ತಿನ ನಗರಿಯಲ್ಲಿ ನಿನ್ನೆ (ಜೂನ್ 19) 227 ಪ್ರದರ್ಶನಗಳನ್ನು ಚಿತ್ರ ಕಂಡಿದ್ದು ಚಿತ್ರಮಂದಿರಲ್ಲಿ ಸರಾಸರಿ 57 % ಆಕ್ಯುಪೆನ್ಸಿ ಕಂಡು ಬಂದಿದೆ. ಬೆಂಗಳೂರು ಎರಡನೇ ಸ್ಥಾನದಲ್ಲಿದೆ.ಸಿಲಿಕಾನ್ ಸಿಟಿಯಲ್ಲಿ 321 ಪ್ರದರ್ಶನಗಳನ್ನು ಚಿತ್ರ ಕಂಡಿದ್ದು ಚಿತ್ರಮಂದಿರದ ಆವರಣ 49% ಪ್ರೇಕ್ಷಕರಿಂದ ತುಂಬಿ ತುಳುಕಿದೆ.

ಶಾಹಿದ್ ಕಪೂರ್ ವೃತ್ತಿ ಬದುಕಿನ 2ನೇ ಬೆಸ್ಟ್ ಓಪನರ್

ಬಾಲಿವುಡ್‌ನ ಬ್ಯಾಂಕೆಬಲ್ ಮತ್ತು ಡಿಫೆಂಡೆಬಲ್ ಸ್ಟಾರ್ ಗಳಲ್ಲಿ ಶಾಹಿದ್ ಕಪೂರ್ ಕೂಡ ಒಬ್ಬರು. ಆದರೆ, ಇವರ ಇತ್ತೀಚಿನ ಕೆಲ ಚಿತ್ರಗಳು ಹೇಳಿಕೊಳ್ಳುವಂತಹ ಪ್ರದರ್ಶನ ಕಂಡಿಲ್ಲ. ಈ ಹಿನ್ನೆಲೆ ಹಲವರು ''ಕಾಕ್‌ಟೇಲ್ 2'' ಹತ್ತು ಕೋಟಿ ಗಡಿ ದಾಟುವುದು ಅನುಮಾನ ಎನ್ನುವ ಭವಿಷ್ಯ ಹೇಳಿದ್ದರು.

ಆದರೆ ಈ ಭವಿಷ್ಯವಾಣಿ ಸುಳ್ಳಾಗಿದ್ದು ಮೊದಲ ದಿನ ₹13.50 ಕೋಟಿಯನ್ನು ದೋಚುವ ಮೂಲಕ ಶಾಹಿದ್ ಕಪೂರ್ ವೃತ್ತಿ ಬದುಕಿನಲ್ಲಿ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಕಾಕ್‌ಟೇಲ್ 2'' ಪಾತ್ರವಾಗಿದೆ. 24 ಕೋಟಿಯನ್ನು ಗಳಿಸಿದ್ದ '' ಪದ್ಮಾವತ್'' ಮೊದಲ ಸ್ಥಾನದಲ್ಲಿದ್ದರೆ 20 ಕೋಟಿಯನ್ನು ಗಳಿಸಿದ್ದ ''ಕಬೀರ್ ಸಿಂಗ್'' ಎರಡನೇ ಸ್ಥಾನದಲ್ಲಿದೆ.

cocktail-2-box-office-day-1-shahid-kapoor-scores-his-2nd-biggest-opener-with-13-50-crore

ಮೊದಲ ದಿನ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಶಾಹಿದ್ ಕಪೂರ್ ಅಭಿನಯದ ಟಾಪ್ 5 ಚಿತ್ರಗಳು

ಶ್ರೇಣಿ ಚಲನಚಿತ್ರದ ಹೆಸರು ಬಿಡುಗಡೆಯಾದ ವರ್ಷ ಮೊದಲ ದಿನದ ಗಳಿಕೆ
1 ಪದ್ಮಾವತ್ 2018 ₹24.00 ಕೋಟಿ
2 ಕಬೀರ್ ಸಿಂಗ್ 2019 ₹20.21 ಕೋಟಿ
3 ಕಾಕ್‌ಟೈಲ್ 2 2026 ₹13.50 ಕೋಟಿ
4 ಶಾನ್‌ದಾರ್ 2015 ₹13.10 ಕೋಟಿ
5 ಆರ್... ರಾಜ್‌ಕುಮಾರ್ 2013 ₹10.20 ಕೋಟಿ

ಚಿತ್ರಕ್ಕೆ ಮುಳುವಾಗುತ್ತಾ ಮಿಶ್ರ ಪ್ರತಿಕ್ರಿಯೆ ?

ಮೊದಲ ದಿನ ₹13.50 ಕೋಟಿಯನ್ನು ದೋಚುವ ಮೂಲಕ ಉತ್ತಮವಾದ ಆರಂಭವನ್ನೇನೋ ಚಿತ್ರ ಪಡೆದಿದೆ. ಆದರೆ, ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಪ್ರೇಕ್ಷಕರ ವಲಯ ಮಾತ್ರ ಅಲ್ಲ ವಿಮರ್ಷಕರ ವಲಯ ಕೂಡ ಈ ಚಿತ್ರದ ವಿಚಾರದಲ್ಲಿ ಇಬ್ಬಾಗವಾಗಿದೆ. ಚಿತ್ರದ ಗಳಿಕೆಯ ಮೇಲೆ ಈ ಅಭಿಪ್ರಾಯಗಳು ಪರಿಣಾಮ ಬೀರಲಿವೆಯಾ..? ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ. ಇಂದು (ಜೂನ್ 20) ಮತ್ತು ನಾಳೆ (ಜೂನ್ 21) ಗಳಿಕೆ ಮೇಲೆ ''ಕಾಕ್‌ಟೇಲ್ 2'' ಚಿತ್ರದ ಭವಿಷ್ಯ ನಿಂತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X