Cocktail 2 Box Office Day 2 ; ಶಾಹಿದ್, ರಶ್ಮಿಕಾ, ಕೃತಿ ಮ್ಯಾಜಿಕ್, ಬಾಕ್ಸಾಫೀಸ್‌ನಲ್ಲಿ ಕಾಕ್‌ಟೇಲ್ 2 ಅಬ್ಬರ

ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಅದರಲ್ಲಿಯೂ ವಿಶೇಷವಾಗಿ ಹಿಂದಿ ಚಿತ್ರರಂಗಕ್ಕೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ.

ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಸದ್ಯ ಟ್ರಂಪ್ ಕಾರ್ಡ್‌ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ''ಕಾಕ್‌ಟೇಲ್ 2'' ಬಾಕ್ಸಾಫೀಸ್‌ನಲ್ಲಿ ಸದ್ಯ ಭರ್ಜರಿ ಕಮಾಯಿ ಮಾಡುತ್ತಿದೆ.

Cocktail 2 Box Office Fire Shahid Kriti amp amp Rashmika Starrer Soars on Saturday to Hit 28 Crore

ಹೌದು, ''ಕಾಕ್‌ಟೇಲ್ 2''.. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ಚಿತ್ರ. ಬಿಡುಗಡೆಗೆ ಮುನ್ನ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ₹13.50 ಕೋಟಿಯನ್ನು ಭಾರತದಲ್ಲಿ ದೋಚಿತ್ತು. ಈ ಮೂಲಕ ಶಾಹಿದ್ ಕಪೂರ್ ವೃತ್ತಿ ಬದುಕಿನಲ್ಲಿ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಕಾಕ್‌ಟೇಲ್ 2'' ಪಾತ್ರವಾಗಿತ್ತು.

ಸದ್ಯ ಎರಡನೇ ದಿನದ (ಜೂನ್ 20) ಗಳಿಕೆಯಲ್ಲಿ 20.4% ಏರಿಕೆ ಕಂಡು ಬಂದಿದ್ದು, ₹16.25 ಕೋಟಿಯನ್ನು ಚಿತ್ರ ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ''ಕಾಕ್‌ಟೇಲ್ 2'' ಚಿತ್ರ ₹29.75 ಕೋಟಿಯನ್ನು ಕೊಳ್ಳೆ ಹೊಡೆದಿದೆ.

ಸ್ಯಾಕ್ನಿಲ್ ಪ್ರಕಾರ ''ಕಾಕ್‌ಟೇಲ್ 2'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net)
ಮೊದಲನೇ ದಿನ (ಶುಕ್ರವಾರ) ₹13.50 ಕೋಟಿ
ಎರಡನೇ ದಿನ (ಶನಿವಾರ) ₹16.25 ಕೋಟಿ
ಒಟ್ಟು ಕಲೆಕ್ಷನ್ ₹29.75 ಕೋಟಿ

ವರುಣ್ ಧವನ್ VS ಶಾಹಿದ್ ಕಪೂರ್

ಇನ್ನು, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ವರುಣ್ ಧವನ್ ಅಭಿನಯದ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಚಿತ್ರಕ್ಕೆ ಹೋಲಿಸಿದರೆ, ''ಕಾಕ್‌ಟೇಲ್ 2'' ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಒಂದು ಹಿಡಿ ಜಾಸ್ತಿ ಸಿಕ್ಕಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಚಿತ್ರ ಮೂರು ದಿನದಲ್ಲಿ ₹28.51 ಕೋಟಿಯನ್ನು ಗಳಿಸಿತ್ತು. ಆದರೆ, ''ಕಾಕ್‌ಟೇಲ್ 2'' ಎರಡೇ ದಿನದಲ್ಲಿ ₹29.75 ಕೋಟಿಯನ್ನು ಗಳಿಸಿದೆ. ಈ ಮೂಲಕ ಈ ವರ್ಷ ಮೊದಲ ವಾರಾಂತ್ಯದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ ''ಕಾಕ್‌ಟೇಲ್ 2''.

cocktail-2-box-office-fire-shahid-kriti-rashmika-starrer-soars-on-saturday-to-hit-28-crore

ಓಪನಿಂಗ್ ವೀಕೆಂಡ್ ಕಲೆಕ್ಷನ್ ; 2026ರ ಬಾಲಿವುಡ್‌ನ ಟಾಪ್ 5 ಸಿನಿಮಾಗಳ ಪಟ್ಟಿ ಈ ಕೆಳಗಿನಂತಿದೆ.

ಚಲನಚಿತ್ರದ ಹೆಸರು ಗಳಿಕೆ
ಧುರಂಧರ್ 2 ₹466 ಕೋಟಿ (4 ದಿನಗಳಲ್ಲಿ)
ಬಾರ್ಡರ್ 2 ₹129.89 ಕೋಟಿ
ಭೂತ್ ಬಾಂಗ್ಲಾ ₹65.65 ಕೋಟಿ
ಓ ರೋಮಿಯೋ ₹34.51 ಕೋಟಿ
ಕಾಕ್‌ಟೇಲ್ 2* ₹29.75 ಕೋಟಿ (ಇನ್ನೂ ಒಂದು ದಿನ ಬಾಕಿ ಇದೆ!)

ಲೆಕ್ಕ ಹಂಚಿಕೊಂಡ ಚಿತ್ರದ ನಿರ್ಮಾಣ ಸಂಸ್ಥೆ

''ಕಾಕ್‌ಟೇಲ್ 2'' ಚಿತ್ರದ ಗಳಿಕೆಯ ವಿವರವನ್ನು ಚಿತ್ರದ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ಸ್ ಅಧಿಕೃತವಾಗಿ ಹಂಚಿಕೊಂಡಿದೆ. ಆ ಪ್ರಕಾರ ಮೊದಲ ದಿನ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವದಕ್ಕಿಂತ ಹೆಚ್ಚಿನ ಹಣವನ್ನು ಅಂದರೆ ₹14.1 ಕೋಟಿಯನ್ನು ಚಿತ್ರ ಗಳಿಸಿದೆ. ವಿದೇಶದಲ್ಲಿ ₹7.36 ಕೋಟಿಯನ್ನು ಚಿತ್ರ ಗಳಿಸಿದ್ದು ಮೊದಲ ದಿನವೇ ₹24 ಕೋಟಿಯನ್ನು ''ಕಾಕ್‌ಟೇಲ್ 2'' ಗಳಿಸಿದೆ.

ಸೋಮವಾರದ ಅಗ್ನಿಪರೀಕ್ಷೆ ಮುಖ್ಯ

ಎರಡು ದಿನದಲ್ಲಿ ₹29.7 ಕೋಟಿಯನ್ನೇನೋ ಚಿತ್ರ ಗಳಿಸಿದೆ. ಇಂದು (ಜೂನ್ 21) ಕೂಡ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ಆದರೆ.. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಪ್ರೇಕ್ಷಕರ ವಲಯ ಮಾತ್ರ ಅಲ್ಲ ವಿಮರ್ಷಕರ ವಲಯ ಕೂಡ ಈ ಚಿತ್ರದ ವಿಚಾರದಲ್ಲಿ ಇಬ್ಬಾಗವಾಗಿದೆ. ಚಿತ್ರದ ಗಳಿಕೆಯ ಮೇಲೆ ಈ ಅಭಿಪ್ರಾಯಗಳು ನಾಳೆಯಿಂದ ಪರಿಣಾಮ ಬೀರಲಿವೆಯಾ..? ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.
ಸೋಮವಾರದ ಗಳಿಕೆಯ ಮೇಲೆ ಈ ಚಿತ್ರದ ಮುಂದಿನ ಭವಿಷ್ಯ ನಿಂತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Big weekend wave for Cocktail 2! The Shahid Kapoor, Kriti Sanon, and Rashmika Mandanna starrer rakes in ₹15.50 crore on Day 2. Check out the breakdown here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X