ವಿಜಯ್‌ಯ 'ಲೀಯೋ' ದಾಖಲೆ ಮುರಿಯಲಿಲ್ಲ ರಜಿನಿಯ ಕೂಲಿ, ಅತೀ ಹೆಚ್ಚು ಹಣ ಗಳಿಸಿದ 3 ತಮಿಳು ಚಿತ್ರಗಳು ಯಾವುವು ?

ಪಾತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡು ಆ ಪಾತ್ರದ ಮೂಲಕವೇ ಮ್ಯಾಜಿಕ್ ಮಾಡುವವರು ರಜಿನಿಕಾಂತ್. ತಮ್ಮ ಅಭಿನಯ ಮತ್ತು ಸ್ಟೈಲ್ ನಿಂದ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳನ್ನು ಸಂಪಾದಿಸಿರುವ ರಜಿನಿ ವಯಸ್ಸು ಹೆಚ್ಚಾದಂತೆ ಧಾವಂತಕ್ಕೆ ಬಿದ್ದವರಂತೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವರ್ಷಕ್ಕೆ ಕೊನೆ ಪಕ್ಷ ಎರಡು ಚಿತ್ರವಾದರು ಮಾಡಬೇಕು ಎಂಬ ಹಠದೊಂದಿಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ.

ಆದರೆ, ಹೀಗೆ ರಜಿನಿ ಒಪ್ಪಿಕೊಂಡು ಮಾಡಿದ ಚಿತ್ರಗಳನ್ನೆಲ್ಲ.. ಪ್ರೇಕ್ಷಕರು ಸುಖಾ ಸುಮ್ಮನೆ ಮೊದಲಿನಂತೆ ತಲೆ ಮೇಲೆ ಹೊತ್ತು ಮೆರೆಸುತ್ತಿಲ್ಲ. ಆ ಚಿತ್ರದ ಕಥೆಯಲ್ಲಿ ಧಮ್ ಇದ್ದರೆ ಮಾತ್ರ ತಲೈವಾಗೆ ಉಘೇ ಉಘೇ ಎನ್ನುತ್ತಿದ್ದಾರೆ. ಇದಕ್ಕೆ ''ಕೂಲಿ'' ಚಿತ್ರವೇ ಸದ್ಯದ ಉದಾಹರಣೆ.

Coolie Box Office Verdict Rajinikanth s Film Fails to Crack the Top 3 Unable to Break His Own amp amp Le

ಹೌದು. ಅಸಲಿಗೆ ಕಾಲಿವುಡ್‌ನಲ್ಲಿ ಯಾವ ಚಿತ್ರ ಕೂಡ ಇಲ್ಲಿಯವರೆಗೆ ಬಾಕ್ಸಾಫೀಸ್‌ನಲ್ಲಿ ₹1000 ಕೋಟಿ ಹಣವನ್ನು ದೋಚಿಲ್ಲ. ಹೆಚ್ಚೆಂದರೆ ಭಾರತೀಯ ಮಾರುಕಟ್ಟೆಯಲ್ಲಿ ತಮಿಳು ಚಿತ್ರರಂಗದ ಸಾಧನೆ ಕೇವಲ 407.05 ಕೋಟಿ ಮಾತ್ರ. ಈ ಹಣ ಕೂಡ ಗಳಿಸಿದ್ದು ಇದೇ ರಜಿನಿಯ ಚಿತ್ರ.

2018ರಲ್ಲಿ ಬಂದಿದ್ದ ''2.0'' ಇಷ್ಟೊಂದು ಹಣವನ್ನು ಗಳಿಸಿತ್ತು. ಆ ನಂತರ ಇದೇ ರಜಿನಿ ಅಭಿನಯದ ''ಜೈಲರ್'' 345 ಕೋಟಿ ಹಣವನ್ನು ಗಳಿಸಿತ್ತು. ಆ ನಂತರ ವಿಜಯ್ ಅಭಿನಯದ ''ಲೀಯೋ'' ಇಂತಹದ್ದೊಂದು ಸಾಧನೆ ಮಾಡಿತ್ತು. ಭಾರತದ ಬಾಕ್ಸಾಫೀಸ್‌ನಲ್ಲಿ ₹ 341.04 ಕೋಟಿ ಹಣ ಗಳಿಸಿತ್ತು.

ಹೀಗೆ ಮೊದೆಲೆರಡು ಸ್ಥಾನ ರಜಿನಿ ಪಾಲಾದರೆ ಮೂರನೇ ಸ್ಥಾನ ವಿಜಯ್ ಪಾಲಾಗಿತ್ತು. ಈ ಮೂರನೇ ಸ್ಥಾನವನ್ನು ಕೂಡ ಆಕ್ರಮಿಸಿಕೊಳ್ಳುವ ಎಲ್ಲ ಅವಕಾಶ ಈಗ ರಜಿನಿಗೆ ಇತ್ತು. ಆದರೆ.. ಈ ಸುವರ್ಣ ಅವಕಾಶವನ್ನು ರಜಿನಿ ಕೈ ಚೆಲ್ಲಿದ್ದಾರೆ. ಮೂರನೇ ಸ್ಥಾನವನ್ನು ವಿಜಯ್ ಗೆ ನೀಡಿ ತಾವು ನಾಲ್ಕನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದಾರೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಕೂಲಿ'' ಈ ಹದಿನೈದು ದಿನದಲ್ಲಿ ₹ 269.81 ಕೋಟಿ ಮಾತ್ರ ಗಳಿಸಿದೆ. ಇಳಯ ದಳಪತಿ ವಿಜಯ್ ಅವರ ''ಲಿಯೋ'' ಗಳಿಕೆಯನ್ನು ಹಿಂದಿಕ್ಕಲು ರಜಿನಿಗೆ ಇನ್ನೂ ₹71.59 ಕೋಟಿ ಅವಶ್ಯಕತೆ ಇದೆ.

coolie-box-office-verdict-rajinikanths-film-fails-to-crack-the-top-3-unable-to-break-his-own-le

ಸದ್ಯದ ಪರಿಸ್ಥಿತಿಯಲ್ಲಿ ''ಕೂಲಿ'' ಇಷ್ಟೊಂದು ಹಣ ಗಳಿಸುವುದು ಬಹುತೇಕ ಅನುಮಾನ. ಯಾಕೆಂದರೆ.. ಈ ಶುಕ್ರವಾರ (ಆಗಸ್ಟ್ 29) ''ಪರಮ ಸುಂದರಿ'' ಸೇರಿ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಚಿತ್ರಗಳು ತೆರೆಗೆ ಬರುತ್ತಿವೆ.

ಇನ್ನೂ ''ಕೂಲಿ'' ಚಿತ್ರ ಮಾಮೂಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೂ ''ಸ್ಯಾಕ್ನಿಲ್'' ಪ್ರಕಾರ ನಿನ್ನೆಯ (ಆಗಸ್ಟ್ 28) ''ಕೂಲಿ''ಯ ಗಳಿಕೆ ಕೂಡ ಸಾಧಾರಣವಾಗಿದೆ. ₹2 ಕೋಟಿಯ ಗಡಿಯನ್ನು ಕೂಡ ನಿನ್ನೆ ಕೂಲಿ ತಲುಪಿಲ್ಲ.

ಈ ಎಲ್ಲಾ ಕಾರಣಗಳಿಂದ ಅನೇಕ ಚಿತ್ರಮಂದಿರಗಳಿಂದ ಈ ವಾರ ಬಹುತೇಕ ಚಿತ್ರಮಂದಿರಗಳಿಂದ ''ಕೂಲಿ'' ಎತ್ತಂಗಡಿಯಾಗುತ್ತಿದೆ. ಈ ಹಿನ್ನೆಲೆ ''ಕೂಲಿ'' ಭಾರತದ ಭಾಕ್ಸಾಫೀಸ್‌ನಲ್ಲಿ ಇನ್ನೂ ₹15 ರಿಂದ ₹20 ಕೋಟಿ ಹಣ ಗಳಿಸಿದರೆ ಅದೇ ಹೆಚ್ಚು ಎನ್ನುವ ಮಾತು ಸದ್ಯ ಟ್ರೇಡ್ ಪಂಡಿತರ ಸರ್ಕಲ್‌ನಲ್ಲಿ ಕೇಳಿ ಬರುತ್ತಿದೆ. ಹೀಗಿರುವಾಗ ''ಲೀಯೋ'' ದಾಖಲೆಯನ್ನು ಕೂಲಿ ಮುರಿಯಲು ಹೇಗೆ ಸಾಧ್ಯ ?

ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ತಮಿಳಿನ 3 ಚಿತ್ರಗಳು

1. 2.0 - ₹ 407.05 ಕೋಟಿ
2. ಜೈಲರ್ - ₹ 345 ಕೋಟಿ
3. ಲೀಯೋ - ₹ 341.04ಕೋಟಿ


ಒಟ್ನಲ್ಲಿ ತಮಿಳಿನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಮೊದಲ ಮೂರು ಚಿತ್ರಗಳು ರಜಿನಿಕಾಂತ್ ಅವರದ್ದೇ ಆಗಬಹುದಿತ್ತು. ಈ ಮೂಲಕ ಹೊಸದೊಂದು ದಾಖಲೆ ರಜಿನಿಕಾಂತ್ ಬರೆಯಬಹುದಿತ್ತು. ಆದರೆ ಸುವರ್ಣ ಅವಕಾಶ ರಜಿನಿ ಕೈ ಚೆಲ್ಲಿದ್ದು, ಐತಿಹಾಸಿಕ ದಾಖಲೆಯೊಂದು ಅಷ್ಟರಲ್ಲೇ ಜಸ್ಟ್ ಮಿಸ್ ಆಗಿದೆ. ಎಲ್ಲರ ಕಣ್ಣೀಗ ಜೈಲರ್ 2 ಮೇಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಜೈಲರ್ 2 ಪಾತ್ರವಾಗುತ್ತಾ ? ಉತ್ತರ ಕಾಲವೇ ನೀಡಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rajinikanth's latest film Coolie fails to break the box office records of his own blockbusters, Jailer and 2.0. Get the full details on its disappointing run.
Read more about: kollywood rajinikanth vijay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X