'ಕೂಲಿ' ಅಬ್ಬರಕ್ಕೆ ನಡುಗಿದ 'ಕಬಾಲಿ', ಹೊಸ ದಾಖಲೆ ಬರೆದು ಮೂರನೇ  ಸ್ಥಾನಕ್ಕೇರಿದ ತಲೈವಾ

ಕೂಲಿಯನ್ನು ಖಾಲಿ ಕುಳಿತವರಷ್ಟೇ ನೋಡಬಹುದು. ಯಾಕೆಂದರೆ ಈ ಕೂಲಿ ಮಾಮೂಲಿ ಎನ್ನುವ ಅಭಿಪ್ರಾಯ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ವ್ಯಕ್ತವಾಗುತ್ತಿದೆ. ಜಾಲಿ ಮೂಡಿನಲ್ಲಿ ಈ ಚಿತ್ರವನ್ನು ನೋಡಿ ಅನೇಕರು ನಿರಾಸೆಗೊಂಡಿದ್ದಾರೆ . ಲೋಕೇಶ್ ಕನಕರಾಜ್ ಹೆಣೆದ ಚಿತ್ರಕಥೆಯ ಗೇಲಿ ಮಾಡುತ್ತಾ ಹೊರ ಬಂದಿದ್ದಾರೆ. ಆದರೂ ಕೂಡ ಬಾಕ್ಸಾಫೀಸ್‌ನಲ್ಲಿ ಕೂಲಿ ಕಾಸು ಮಾಡುತ್ತಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರು...

ಕೂಡ ಜನ ಸಮೂಹ ಚಿತ್ರಮಂದಿರದತ್ತ ದಾಂಗುಡಿ ಇಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊನ್ನೆ (ಆಗಸ್ಟ್ 23 ) ಶನಿವಾರದಂದು ಶೇಕಡಾ 79 % ಏರಿಕೆ ಗಳಿಕೆಯಲ್ಲಿ ಕಂಡು ಬಂದಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹ 10.5 ಕೋಟಿಯನ್ನು ಗಳಿಸಿದೆ. ಇಲ್ಲಿಯವರೆಗೆ ಅಂದರೆ ಹನ್ನೊಂದು ದಿನದಲ್ಲಿ ಕೂಲಿ ₹ 257.02 ಕೋಟಿಯನ್ನು ಗಳಿಸಿದೆ.

Coolie Storms Box Office Becomes 3rd Highest-Grossing Tamil Film in Hindi

ವಿಶೇಷ ಅಂದರೆ ಕೂಲಿಯ ಅಬ್ಬರಕ್ಕೆ ಕಬಾಲಿ ಕೂಡ ನಡುಗಿದೆ. ಕಬಾಲಿಯ ದಾಖಲೆಯನ್ನು ಕೂಡ ಈ ಕೂಲಿ ಬಲಿ ಪಡೆದಿದೆ. ಹೌದು 2016ರಲ್ಲಿ ಬಿಡುಗಡೆಯಾದ ಕಬಾಲಿ ಚಿತ್ರ ಕೂಡ ಸದ್ಯ ಕೂಲಿಯಂತೆಯೇ ಹೈಪ್ ಸೃಷ್ಟಿಸಿತ್ತು. ಆದರೆ.. ಕೂಲಿಯಂತೆಯೇ ಕಬಾಲಿ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ವಿಫಲವಾಗಿತ್ತು, ಆದರೂ ಕೂಡ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಹಣ ಕಮಾಯಿ ಮಾಡಿತ್ತು. ಆ ಕಾಲದಲ್ಲಿ ಕೇವಲ ಹಿಂದಿಯಲ್ಲಿ ಕಬಾಲಿ ₹28 ಕೋಟಿಯನ್ನು ಗಳಿಸಿತ್ತು.

ಈ ಗಳಿಕೆಯನ್ನು ಈಗ ಕೂಲಿ ಹಿಂದಿಕ್ಕಿದೆ. ಕೇವಲ ಹಿಂದಿಯಲ್ಲಿ ಕೂಲಿ ಈ ಹನ್ನೊಂದು ದಿನದಲ್ಲಿ ₹29.52 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರಗಳ ಸಾಲಿನಲ್ಲಿ ಕೂಲಿ ಮೂರನೇ ಸ್ಥಾನಕ್ಕೇರಿದೆ ಎಂದು ''koimoi.com'' ವರದಿಯನ್ನು ಮಾಡಿದೆ.

coolie-storms-box-office-becomes-3rd-highest-grossing-tamil-film-in-hindi

ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ತಮಿಳಿನ ಐದು ಚಿತ್ರಗಳು

2.0 - ₹188 ಕೋಟಿ
ಲೀಯೋ - ₹32.21ಕೋಟಿ
ಕೂಲಿ - ₹29.52 ಕೋಟಿ
ಕಬಾಲಿ - ₹28 ಕೋಟಿ
ಪೊನ್ನಿಯನ್ ಸೆಲ್ವನ್ (ಭಾಗ 1) -₹25 ಕೋಟಿ

ಸದ್ಯ ಕೂಲಿಯ ಎದುರು ಲೀಯೋ ದಾಖಲೆ ಮುರಿಯುವ ಸವಾಲು ಇದೆ. ಹಿಂದಿ ಮಾರುಕಟ್ಟೆಯಲ್ಲಿ ''ವಾರ್ 2'' ಮಕಾಡೆ ಮಲಗಿರುವ ಹಿನ್ನೆಲೆ ಲಿಯೋ ದಾಖಲೆಯನ್ನು ಹಿಂದಿಕ್ಕುವ ಕೂಲಿ ಹಿಂದಿಕ್ಕುತ್ತೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನೂ ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ತಮಿಳಿನ ಐದು ಚಿತ್ರಗಳ ಈ ಪಟ್ಟಿಯಲ್ಲಿ ರಜಿನಿಕಾಂತ್ ಅವರದ್ದೇ ಮೂರು ಚಿತ್ರಗಳಿರುವುದು ವಿಶೇಷ.

ಒಟ್ನಲ್ಲಿ ಸದ್ಯ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಕೂಡ ಕೂಲಿ ಚಿತ್ರ ಸದ್ದು ಮಾಡುತ್ತಾ ಮುನ್ನುಗ್ಗುತ್ತಿದೆ. ಕಳೆದ ಸೋಮವಾರ ₹ 7.5 ಕೋಟಿಯನ್ನು ಗಳಿಸಿದ್ದ ಕೂಲಿ ಈ ಸೋಮವಾರ ಅಂದರೆ ಇಂದು (ಆಗಸ್ಟ್ 25) ಎಷ್ಟು ಹಣ ಗಳಿಸಬಹುದು ಎನ್ನುವ ಕುತೂಹಲ ಇದೆ. ₹300 ಕೋಟಿಯ ಗಡಿಯನ್ನು ಕೂಲಿ ದಾಟುತ್ತಾ ? ಅಥವಾ ಅಷ್ಟರಲ್ಲಿಯೇ ಕೂಲಿ ಖೇಲ್ ಖತಂ ಆಗುತ್ತಾ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The undisputed superstar strikes again. "Coolie" has officially dethroned Rajinikanth's own "Kabali," cementing its place as the 3rd highest-grossing Tamil film in the Hindi box office. Get the complete box office breakdown.
Read more about: rajinikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X