Dhurandhar Box Office Day 11 ; ಧುರಂಧರ್ ಅಬ್ಬರ, ದಂಗಲ್ ದಾಖಲೆ ಮುರಿದ ರಣವೀರ್ ಸಿಂಗ್

ಬಾಲಿವುಡ್‌ನಲ್ಲಿ ಈ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್‌ಗಳ ಅಬ್ಬರ ಬಾಲಿವುಡ್‌ನ ಬೆಚ್ಚಿ ಬೀಳಿಸಿತ್ತು. ಆದರೆ.. ವರ್ಷಾಂತ್ಯ ಇದೇ ಬಾಲಿವುಡ್‌ಗೆ ಹೊಸ ಚೈತನ್ಯ ತುಂಬಿದೆ. ಮರಭೂಮಿಯಲ್ಲಿ ಬಾಲಿವುಡ್‌ಗೆ ಓಯಾಸಿಸ್ ಸಿಕ್ಕಿದೆ. ಆ ಓಯಾಸಿಸ್‌ನ ಹೆಸರೇ ''ಧುರಂಧರ್''.

ಹೌದು.. ''ಧುರಂಧರ್''.. ಬಾಕ್ಸಾಫೀಸ್‌ಗೆ ಸದ್ಯ ಅಪ್ಪಳಿಸಿರುವ ಜ್ವಾಲಾಮುಖಿ. ಮೊದಲ ವಾರ ತಣ್ಣನೆಯ ಗಾಳಿಯಂತೆ ಭಾಸವಾದ ಈ ಚಿತ್ರ ಎರಡನೇ ವಾರದಲ್ಲಿ ಕೆಂಡದಂತೆ ಉರಿಯುತ್ತಿದೆ. ದಾಖಲೆಯ ಗಳಿಕೆಯನ್ನು ಮಾಡುತ್ತಿದೆ. ಹತ್ತು ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡುತ್ತಿದೆ.

Dangal Dethroned Dhurandhar Blasts Past 375 Crore Sets New Benchmarks on Day 11

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಹನ್ನೊಂದು ದಿನದಲ್ಲಿ ''ಧುರಂಧರ್'' ಕೇವಲ ಭಾರತದಲ್ಲಿ ₹ 379.75 ಕೋಟಿಯನ್ನು ಗಳಿಸಿದೆ. ಇಂದು (ಡಿಸೆಂಬರ್ 16) ಆಮಿರ್ ಖಾನ್ ಅಭಿನಯದ 2016ರ ಮೆಗಾ ಬ್ಲಾಕ್‌ ಬಸ್ಟರ್ ಚಿತ್ರ ''ದಂಗಲ್'' ದಾಖಲೆಯನ್ನು ಮುರಿಯಲಿದೆ. ಇನ್ನು ₹387.38 ಕೋಟಿಯನ್ನು ಗಳಿಸಲು ''ದಂಗಲ್'' ಚಿತ್ರಕ್ಕೆ ಹನ್ನೊಂದು ವಾರ ಬೇಕಾಗಿದ್ದವು. ಈ ದಾಖಲೆಯನ್ನು ''ಧುರಂಧರ್'' ಕೇವಲ ಹನ್ನೆರಡೇ ದಿನದಲ್ಲಿ ಮುರಿಯುತ್ತಿರುವುದು ವಿಶೇಷ.

ಕೇವಲ ''ದಂಗಲ್'' ಮಾತ್ರ ಅಲ್ಲ ಆಮಿರ್ ಖಾನ್ ಅಭಿನಯದ ''ಪಿಕೆ''.. ರಣ್ಭೀರ್ ಕಪೂರ್ ಅಭಿನಯದ ''ಸಂಜು''.. ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕಿರುವ ''ಧುರಂಧರ್'' ಈ ವರ್ಷ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹೊಸ ಹುಡುಗನ ''ಸೈಯಾರ'' ದಾಖಲೆಯನ್ನು ಕೂಡ ಮುರಿದಿದೆ. ಸದ್ಯ ''ಧುರಂಧರ್'' ಕಣ್ಣೇದುರು ''ಛಾವಾ'' (₹601.54 ಕೋಟಿ)ಇದೆ. ಈ ಚಿತ್ರವನ್ನು ಕೂಡ ಹಿಂದಿಕ್ಕಿದರೆ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ ಸಿನಿಮಾ ಎನ್ನುವ ಕೀರ್ತಿಗೆ ''ಧುರಂಧರ್'' ಪಾತ್ರವಾಗಲಿದೆ.

dangal-dethroned-dhurandhar-blasts-past-375-crore-sets-new-benchmarks-on-day-11

ಇನ್ನು ಸಾಮಾನ್ಯವಾಗಿ ಚಿತ್ರ ಯಾವುದೇ ಇರಲಿ, ಸ್ಟಾರ್ ಯಾರೇ ಇರಲಿ. ಸೋಮವಾರದಿಂದ ಶುಕ್ರವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ಗಳಿಕೆ ಮಂದಗತಿಯಲ್ಲಿ ಇರುತ್ತೆ. ಆದರೆ.. ''ಧುರಂಧರ್'' ಕ್ರೇಜ್ ಸದ್ಯ ಹೇಗಿದೆ ಅಂದರೆ ಎರಡನೇ ಸೋಮವಾರ ಈ ಚಿತ್ರ ₹ 29 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಇಂದು (ಡಿಸೆಂಬರ್ 16) ಕೂಡ ಚಿತ್ರದ ಗಳಿಕೆ ಎರಡಂಕಿಯನ್ನು ಪಾರು ಮಾಡುವ ಸಾಧ್ಯತೆ ಇದೆ. ಇಂದು (ಡಿಸೆಂಬರ್ 16) 400 ಕೋಟಿಯ ಗಡಿಯನ್ನು ''ಧುರಂಧರ್'' ದಾಟುವ ವಿಶ್ವಾಸ ಬಾಲಿವುಡ್‌ಗೆ ಇದೆ.

''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ ಹನ್ನೊಂದು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ

ಮೊದಲ ವಾರದ ಒಟ್ಟು ಗಳಿಕೆ- ₹ 207.25ಕೋಟಿ

ಎಂಟನೇ ದಿನ [ಶುಕ್ರವಾರ] - ₹ 32.5 ಕೋಟಿ
ಒಂಬತ್ತನೇ ದಿನ [ಶನಿವಾರ] - ₹ 53 ಕೋಟಿ
ಹತ್ತನೇ ದಿನ [ಭಾನುವಾರ]- ₹ 58 ಕೋಟಿ
ಹನ್ನೊಂದನೇ ದಿನ [ಸೋಮವಾರ]₹ 29 ಕೋಟಿ

ಒಟ್ಟು ಗಳಿಕೆ - ₹ 379. 75 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The 'Dhurandhar' box office saga gets bigger! Find out how the Ranveer Singh, Akshaye Khanna, and R Madhavan starrer beat Dangal and set a NEW RECORD on its second Monday, aiming for ₹400 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X