Kalasipalya Re-Release: ಮತ್ತೆ 'ಕಲಾಸಿಪಾಳ್ಯ'ದ ಕೆಂಚನನ್ನು ನೋಡಿ ಫ್ಯಾನ್ಸ್ ಸಂಭ್ರಮ; ಕಲೆಕ್ಷನ್ ಎಷ್ಟಾಯ್ತು?

ದರ್ಶನ್ ನಟನೆಯ 'ಕಲಾಸಿಪಾಳ್ಯ' ಸಿನಿಮಾ 22 ವರ್ಷಗಳ ಬಳಿಕ ಮತ್ತೆ ತೆರೆಗಪ್ಪಳಿಸಿದೆ. ರಾಜ್ಯದ ಕೆಲವೆಡೆ ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳನ್ನು ರಂಜಿಸ್ತಿದೆ. ನಗರದ ಪ್ರಸನ್ನ ಹಾಗೂ ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. ಸಿನಿಮಾ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ.

ಫಸ್ಟ್ ವೀಕೆಂಡ್ ಕೆಲವೆಡೆ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮಹಿಳಾ ಅಭಿಮಾನಿಗಳು ಕೂಡ 'ಕಲಾಸಿಪಾಳ್ಯ'ದ ಕೆಂಚನ ಖದರ್ ನೋಡಿ ಮೆಚ್ಚಿಕೊಂಡಿದ್ದಾರೆ. ದರ್ಶನ್ ಸದ್ಯ ಜೈಲಿನಲ್ಲಿದ್ದು ಮರುಬಿಡುಗಡೆಯಾದ ಚಿತ್ರವನ್ನು ದೊಡ್ಡಮಟ್ಟದಲ್ಲಿ ನೋಡಿ ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ. ನಿಮ್ಮ ಜೊತೆ ನಾವು ಸದಾ ಇರ್ತೀವಿ ಎನ್ನುವ ಸಂದೇಶ ರವಾನೆ ಮಾಡುತ್ತಿದ್ದಾರೆ.

Darshan Fans Welcome Kalasipalya Back to the Big Screen Box Office Buzz Grows

ದಶಕದ ಹಿಂದೆಯೇ ನಿರ್ಮಾಪಕ ಕೋಟಿ ರಾಮು ಡಿಜಿಟಲ್ ಮಾಡಿಸಿ 'ಕಲಾಸಿಪಾಳ್ಯ' ಚಿತ್ರವನ್ನು ಮರುಬಿಡುಗಡೆ ಮಾಡಿದ್ದರು. ಚಿತ್ರಕ್ಕೆ ಸೀಕ್ವೆಲ್ ಮಾಡುವ ಕನಸು ಕಂಡಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ದರ್ಶನ್ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾದ ಸಿನಿಮಾ ಇದು. ನಾಲ್ಕೈದು ಪರಭಾಷೆ ಸಿನಿಮಾಗಳನ್ನು ಸೇರಿಸಿ ಓಂಪ್ರಕಾಶ್ ರಾವ್ ಸಿನಿಮಾ ಕಟ್ಟಿಕೊಟ್ಟಿದ್ದರು. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಭರ್ಜರಿ ಮನರಂಜನೆ ಒದಗಿಸಿತ್ತು. ಚಿತ್ರದ ಹಾಡುಗಳನ್ನು ಇವತ್ತಿಗೂ ಮರೆತ್ತಿಲ್ಲ. 22 ವರ್ಷಗಳ ಬಳಿಕ ಕೂಡ ತೆರೆಮೇಲೆ ಹಾಡು ಬರ್ತಿದ್ದಂತೆ ಅಭಿಮಾನಿಗಳು ಕುಣಿದು ಸಂಭ್ರಮಿಸಿದ್ದಾರೆ.

ಅಂದಹಾಗೆ ಫಸ್ಟ್ ವೀಕೆಂಡ್‌ನಲ್ಲೇ ಮರುಬಿಡುಗಡೆಯಾದ 'ಕಲಾಸಿಪಾಳ್ಯ' ಚಿತ್ರ 40 ಲಕ್ಷ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ಮೊದಲ 3 ದಿನಕ್ಕೆ 11 ಲಕ್ಷ ರೂ. ಗಳಿಕೆ ಕಂಡಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಷ್ಟು ಗಳಿಕೆ ಆಗಿಲ್ಲ ಎಂದು ಗಾಂಧಿನಗರದ ಮೂಲಗಳಿಂದ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ.

Darshan Fans Welcome Kalasipalya Back to the Big Screen Box Office Buzz Grows

15-20 ಲಕ್ಷ ರೂ. ಗಳಿಕೆ

ಕ್ರೇಜ್‌ಗೆ ತಕ್ಕಂತೆ ಪ್ರಸನ್ನ ಚಿತ್ರಮಂದಿರದಲ್ಲಿ ಹೆಚ್ಚು ಕಮ್ಮಿ 10 ಲಕ್ಷ ರೂ. ಕಲೆಕ್ಷನ್ ಆಗಿದೆ. ಎಲ್ಲಾ ಕಡೆ ಇದೇ ರೀತಿಯ ರೆಸ್ಪಾನ್ಸ್ ಸಿಕ್ಕಿಲ್ಲ. ಒಟ್ಟಾರೆ ಮೊದಲ 4 ದಿನಕ್ಕೆ ರಾಜ್ಯಾದ್ಯಂತ 15ರಿಂದ 22 ಲಕ್ಷ ರೂ. ಗಳಿಕೆ ಕಂಡಿರುವುದಾಗಿ ಮಾಹಿತಿ ಸಿಕ್ಕಿದೆ. ಅಭಿಮಾನಿಗಳಂತೂ ಸಡಗರ ಸಂಭ್ರಮದಿಂದಲೇ 'ಕಲಾಸಿಪಾಳ್ಯ' ಚಿತ್ರವನ್ನು ಮತ್ತೊಮ್ಮೆ ಸ್ವಾಗತಿಸಿದ್ದಾರೆ. ಫ್ಯಾಮಿಲಿ ಸಮೇತ ಹೋಗಿ ಸಿನಿಮಾ ನೋಡಿ ಬರ್ತಿದ್ದಾರೆ.

ಅಂದು 'ಕಲಾಸಿಪಾಳ್ಯ' ದಾಖಲೆ

2004ರಲ್ಲಿ ಬಿಡುಗಡೆಯಾಗಿದ್ದ 'ಕಲಾಸಿಪಾಳ್ಯ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ದರ್ಶನ್ ನಟನೆಯ ಹಿಂದಿನ ಸಿನಿಮಾಗಳ ದಾಖಲೆ ಅಳಿಸಿ ಹೊಸ ಇತಿಹಾಸ ನಿರ್ಮಿಸಿತ್ತು. ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳಲ್ಲಿ 35 ವಾ ಪ್ರದರ್ಶನ ಕಂಡಿತ್ತು. ಅವತ್ತಿನ ಕಾಲಕ್ಕೆ ಈ ಸಿನಿಮಾ 18ರಿಂದ 22 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ದರ್ಶನ್ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿತ್ತು.

ದರ್ಶನ್-ರಕ್ಷಿತಾ ಮೋಡಿ

'ಕಲಾಸಿಪಾಳ್ಯ' ಚಿತ್ರದಲ್ಲಿ ಕೆಂಚ(ದರ್ಶನ್) ಹಾಗೂ ಪ್ರಿಯಾ(ರಕ್ಷಿತಾ) ಜೋಡಿ ಮೋಡಿ ಮಾಡಿತ್ತು. 'ಕೆಂಚ ಓ ಕೆಂಚ' ಹಾಗೂ 'ಸುಂಟರಗಾಳಿ ಸುಂಟರಗಾಳಿ' ಹಾಡುಗಳು ಇವತ್ತಿಗೂ ಅಭಿಮಾನಿಗಳ ಹಾಟ್ ಫೇವರಿಟ್ ಎನಿಸಿಕೊಂಡಿವೆ. ಮುಂದೆ 'ಅಯ್ಯ', 'ಮಂಡ್ಯ', 'ಸುಂಟರಗಾಳಿ' ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು. ಸಿನಿಮಾ ಮರುಬಿಡುಗಡೆಯಾಗಿ ಅಭಿಮಾನಿಗಳ ಸಂಭ್ರಮಾಚರಣೆ ನೋಡಿ ರಕ್ಷಿತಾ ಕೂಡ ಸಂತಸ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Read more about: darshan fans sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X