Devil Day 8 Boxoffice: ಮತ್ತಷ್ಟು ಕುಸಿದ ಕಲೆಕ್ಷನ್; ಲೀಕಾಸುರರ ಆರ್ಭಟಕ್ಕೆ ಜಗ್ಗದ 'ಡೆವಿಲ್'
ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕಮ್ಮಿ ಆಗುತ್ತಲೇ ಇದೆ. ಮೊದಲ ವಾರ ಕೋಟಿಗಳಲ್ಲಿ ಕಲೆಕ್ಷನ್ ಮಾಡಿದ್ದ ಸಿನಿಮಾ ಈಗ ಅರ್ಧ ಕೋಟಿ ರೂ.ಗೂ ಕಮ್ಮಿ ಕಮಾಯಿ ಮಾಡ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದೇ ಇದಕ್ಕೆ ಮುಖ್ಯ ಕಾರಣ.
ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶನ ಮಾಡಿರುವ 'ಡೆವಿಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ದರ್ಶನ್ ಅನುಪಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡುವಂತಾಗಿತ್ತು. ಆದರೂ ಅಭಿಮಾನಿಗಳು ಕೈಬಿಡಲಿಲ್ಲ. ದೊಡ್ಡಮಟ್ಟದಲ್ಲಿ ಸೆಲೆಬ್ರೇಷನ್ ಮಾಡಿ ಸಿನಿಮಾ ಬರಮಾಡಿಕೊಂಡಿದ್ದರು. ಫಸ್ಟ್ ವೀಕೆಂಡ್ ಮುಗಿಬಿದ್ದು ಸಿನಿಮಾ ನೋಡಿದ್ದರು. ಆದರೆ ನಿಧಾನವಾಗಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಕಮ್ಮಿ ಆಗುತ್ತಿದೆ. ವಾರದ ದಿನಗಳಲ್ಲಿ ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದೆ.

'ಧುರಂಧರ್', 'ಅಖಂಡ- 2' ಚಿತ್ರಗಳ ಆರ್ಭಟ ಕೂಡ 'ಡೆವಿಲ್' ಹಿನ್ನಡೆಗೆ ಕಾರಣ ಎನ್ನಬಹುದು. ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತೆ ಚಿತ್ರವನ್ನು ಪ್ರಕಾಶ್ ಕಟ್ಟಿಕೊಟ್ಟಿದ್ದಾರೆ. ಆದರೆ ಸಾಧಾರಣಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ವಿಫಲವಾಗಿದೆ. sacnilk ವರದಿ ಪ್ರಕಾರ 8 ದಿನಕ್ಕೆ 25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವಲ್ಲಿ ಸಕ್ಸಸ್ ಕಂಡಿದೆ. 2ನೇ ಗುರುವಾರ 53 ಲಕ್ಷ ರೂ. ಗಳಿಕೆ ಕಂಡಿರುವುದಾಗಿ ಅಂದಾಜಿಸಲಾಗುತ್ತಿದೆ.
ವಾರದ ದಿನಗಳಲ್ಲಿ ಕಲೆಕ್ಷನ್ ಕಮ್ಮಿ ಆಗುವುದು ಸಹಜ. ಆದರೂ ದರ್ಶನ್ ರೀತಿಯ ಸ್ಟಾರ್ ನಟನ ಚಿತ್ರಕ್ಕೆ ಈ ಗಳಿಕೆ ಕಮ್ಮಿ ಎನಿಸದೇ ಇರದು. ಸೆಕೆಂಡ್ ವೀಕೆಂಡ್ ಆದರೂ ಸಿನಿಮಾ ಟೇಕ್ ಆಫ್ ಆಗುತ್ತಾ ಎಂದು ಕಾದು ನೋಡಬೇಕಿದೆ. ಅಭಿಮಾನಿಗಳೇ ಮತ್ತೆ 'ಡೆವಿಲ್' ಕೈಹಿಡಿಯಬೇಕಿದೆ. ವಿಜಯಲಕ್ಷ್ಮಿ ದರ್ಶನ್ ರಾಜ್ಯಾದ್ಯಂತ ವಿಜಯಯಾತ್ರೆಗೂ ಮುಂದಾಗಿದ್ದಾರೆ.
ಫಲ ಕೊಡದ ಪ್ರಯತ್ನ
'ಡೆವಿಲ್' ಚಿತ್ರದ ಬಗ್ಗೆ ಬುಕ್ ಮೈ ಶೋನಲ್ಲಿ ರೇಟಿಂಗ್, ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲು ಚಿತ್ರತಂಡ ನ್ಯಾಯಾಲಯದಿಂದ ಆದೇಶ ತಂದಿತ್ತು. ಆ ಮೂಲಕ ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್, ಅಪಪ್ರಚಾರವನ್ನು ಸಾಧ್ಯವಾಗುವ ಮಟ್ಟಕ್ಕೆ ತಡೆಯುವ ಪ್ರಯತ್ನ ಮಾಡಲಾಗಿದೆ. ಆದರೂ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿಲ್ಲ.
ಪೈರಸಿಗೆ ಬ್ರೇಕ್
ಇನ್ನು ಪೈರಸಿ ಎನ್ನುವುದು ಚಿತ್ರರಂಗಕ್ಕೆ ಮಾರಕ. 'ಡೆವಿಲ್' ಚಿತ್ರವನ್ನು ಕೂಡ ಪೈರಸಿ ಮಾಡಲು ಕೆಲ ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಅದಕ್ಕೆ ಬ್ರೇಕ್ ಹಾಕಲು ಚಿತ್ರತಂಡ ಶ್ರಮಿಸುತ್ತಿದೆ. ಈವರೆಗೆ 'ಡೆವಿಲ್' ಚಿತ್ರದ 9500ಕ್ಕೂ ಅಧಿಕ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಆ ಮೂಲಕ ಚಿತ್ರಕ್ಕೆ ಎದುರಾಗಬಹುದಾದಾ ದೊಡ್ಡ ಸಮಸ್ಯೆಗೆ ಬ್ರೇಕ್ ಹಾಕಿದ್ದಾರೆ.
ಗ್ರಾಸ್ ಕಲೆಕ್ಷನ್
8 ದಿನಕ್ಕೆ 25.3 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದರೆ ಅಂದಾಜು 35 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರಬಹುದು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.
ವೀಡಿಯೋ ಸಾಂಗ್ ರಿಲೀಸ್
'ಡೆವಿಲ್' ಚಿತ್ರದ ಹಾಡುಗಳು ಸದ್ದು ಮಾಡ್ತಿದೆ. ಈ ಹಿಂದೆ ಲಿರಿಕಲ್ ವೀಡಿಯೋಗಳನ್ನು ರಿಲೀಸ್ ಮಾಡಿದ್ದ ಚಿತ್ರತಂಡ ಈಗ ಒಂದೊಂದೇ ವೀಡಿಯೋ ಸಾಂಗ್ ತೇಲಿ ಬಿಡುತ್ತಿದೆ. 'ಇದ್ರೆ ನೆಮ್ದಿಯಾಗಿರ್ಬೇಕ್' ಬಳಿಕ 'ಒಂದೇ ಒಂದು ಸಲ' ರೊಮ್ಯಾಂಟಿಕ್ ವೀಡಿಯೋ ಸಾಂಗ್ ರಿಲೀಸ್ ಆಗ್ತಿದೆ.
ವಿಶೇಷ ಸೂಚನೆ: ಈ ಆರ್ಟಿಕಲ್‌ಗೆ ಸಂಬಂಧಿಸಿದ ಮಾಹಿತಿಯನ್ನು https://www.sacnilk.com/, ನಿರ್ಮಾಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಮಾಧ್ಯಮದ ವಿವರಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಬಹಿರಂಗಪಡಿಸಿದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











