Devil Day 12 Boxoffice: 2ನೇ ಸೋಮವಾರ ಇನ್ನಷ್ಟು ಕುಸಿದ ಕಲೆಕ್ಷನ್; ಅಭಿಮಾನಿಗಳಿಂದ್ಲೇ ಸಿನಿಮಾ ಗೆಲ್ಲುತ್ತಾ?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ 2ನೇ ವಾರ ಪ್ರದರ್ಶನ ಮುಂದುವರೆಸಿದೆ. ಹೊಸ ಸಿನಿಮಾಗಳು ಬರುತ್ತಿರುವುದರಿಂದ ಈ ವೀಕೆಂಡ್ ಬಹುತೇಕ ಶೋಗಳು ಕ್ಯಾನ್ಸಲ್ ಆಗುವ ಸಾಧ್ಯತೆಯಿದೆ. 2ನೇ ಸೋಮವಾರ(ಡಿಸೆಂಬರ್ 22) ಸಿನಿಮಾ ಕಲೆಕ್ಷನ್ ಮತ್ತಷ್ಟು ಕಮ್ಮಿಯಾಗಿದೆ.
ವಿಜಯಲಕ್ಷ್ಮಿ ದರ್ಶನ್ ರಾಜ್ಯಾದ್ಯಂತ 'ಡೆವಿಲ್' ವಿಜಯಯಾತ್ರೆ ಮಾಡುತ್ತಿದ್ದಾರೆ. ಮಂಡ್ಯ, ದಾವಣಗೆರೆಯಲ್ಲಿ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ಕುಂಟುತ್ತಾ ಸಾಗಿತ್ತು. ವಾರದ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಕಮ್ಮಿ ಆಗಿತ್ತು. ಸೆಕೆಂಡ್ ವೀಕೆಂಡ್ ಕೊಂಚ ಪರಲಾಗಿಲ್ಲ ಎನಿಸಿತ್ತು. ಮತ್ತೆ ಈಗ ಸೋಮವಾರ 'ಡೆವಿಲ್' ಕಲೆಕ್ಷನ್ ಲಕ್ಷಗಳಿಗೆ ಇಳಿದಿದೆ.

ವಾರದ ದಿನಗಳಲ್ಲಿ ಯಾವುದೇ ಚಿತ್ರಕ್ಕೆ ಗಳಿಕೆ ಕಮ್ಮಿ ಆಗುತ್ತದೆ. ಆದರೆ ಸ್ಟಾರ್ ನಟರ ಸಿನಿಮಾಗಳು ಅದನ್ನೆಲ್ಲಾ ಮೀರಿ ಗೆಲ್ಲುತ್ತವೆ. 'ಡೆವಿಲ್' ವಿಚಾರದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದೇ ಇದಕ್ಕೆಲ್ಲಾ ಕಾರಣ ಎನ್ನಬಹುದು. ಈಗಾಗಲೇ 35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಫ್ಯಾನ್ಸ್ ಶೋಗಳ ಟಿಕೆಟ್ ದರ ಹೆಚ್ಚಿಸಿದ್ದು ಕೂಡ ಕಲೆಕ್ಷನ್‌ಗೆ ಪ್ಲಸ್ ಆಗಿತ್ತು. ಇನ್ನುಳಿದಂತೆ 'ಡೆವಿಲ್' ಗಳಿಕೆ ಸಾಧಾರಣವಾಗಿದೆ ಎನ್ನಬಹುದು. ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಕೂಡ ಚೆನ್ನಾಗಿತ್ತು. ಆದರೆ ಬಳಿಕ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ.
ನಿರ್ದೇಶಕ ಪ್ರಕಾಶ್ ವೀರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ವಿತರಣೆಗೆ ಬೆಂಬಲವಾಗಿ ನಿಂತಿತ್ತು. ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ 'ಡೆವಿಲ್' ಸಿನಿಮಾ ಬಿಡುಗಡೆ ಆಗಿತ್ತು.
12 ದಿನದ ಕಲೆಕ್ಷನ್
'ಡೆವಿಲ್' ಸಿನಿಮಾ ಬಾಕ್ಸಾಫೀಸ್ ಗಳಿಕೆ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಡುತ್ತಿಲ್ಲ. sacnilk ವರದಿ ಪ್ರಕಾರ 12ನೇ ದಿನ ಸಿನಿಮಾ 33 ಲಕ್ಷ ರೂ. ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಆ ಮೂಲಕ ಒಟ್ಟು ಈವರೆಗೆ 27.93 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗಿದೆ.
ಫ್ಯಾನ್ಸ್ ಶಪಥ
ಸೋಲಿನ ಅಂಚಿಗೆ ಸಿಲುಕಿರುವ 'ಡೆವಿಲ್' ಚಿತ್ರವನ್ನು ಅಭಿಮಾನಿಗಳು ಗೆಲ್ಲಿಸುವುದಾಗಿ ಶಪಥ ಮಾಡಿದ್ದರು. ಮುಂದಿನ 4 ದಿನಗಳ ಕಾಲ ದೊಡ್ಡಮಟ್ಟದಲ್ಲಿ ತಾವೇ ಸಿನಿಮಾ ನೋಡುವುದಾಗಿ ಹೇಳಿದ್ದರು. ಡಿಕಂಪನಿ ಅಧಿಕೃತ ಪೇಜ್‌ನಲ್ಲೇ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಕೆಲವರು ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಆದರೂ ಇದು ಸಾಕಾಗುತ್ತಿಲ್ಲ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.
ಫ್ಯಾನ್ಸ್ ಮಾತ್ರ ಸಾಕಾ?
ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಬೇಕು ಅಂದ್ರೆ ಎಲ್ಲಾ ಪ್ರೇಕ್ಷಕರು ನೋಡಬೇಕು. ಬರೀ ಅಭಿಮಾನಿಗಳಿಂದಲೇ ಸಿನಿಮಾ ಗೆಲ್ಲುತ್ತದೆ ಎನ್ನುವುದು ತಪ್ಪಾಗುತ್ತದೆ. ಹಾಗಂತ ಅಭಿಮಾನಿಗಳ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಎಲ್ಲಾ ಪ್ರೇಕ್ಷಕರು ಸಿನಿಮಾ ನೋಡಿದರೆ ಗೆಲುವು ಸಾಧ್ಯ. 2 ವರ್ಷದ ಹಿಂದೆ 'ಕಾಟೇರ' ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ದೊಡ್ಡಮಟ್ಟದಲ್ಲಿ ಎಲ್ಲಾ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸಿದ್ದು ಗೊತ್ತೇಯಿದೆ.
ಓಟಿಟಿ, ಟಿವಿ ರೈಟ್ಸ್?
'ಡೆವಿಲ್' ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಚಿತ್ರದ ಓಟಿಟಿ ಹಾಗೂ ಟಿವಿ ರೈಟ್ಸ್ ಮಾರಾಟ ಆಗಿರುವ ಬಗ್ಗೆ ಕೂಡ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಬಹಳ ಹಿಂದೆಯೇ ಓಟಿಟಿ ರೈಟ್ಸ್‌ಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಂತರ ಅಪ್‌ಡೇಟ್ ಸಿಗಲಿಲ್ಲ.
ವಿಶೇಷ ಸೂಚನೆ: ಈ ಆರ್ಟಿಕಲ್‌ಗೆ ಸಂಬಂಧಿಸಿದ ಮಾಹಿತಿಯನ್ನು https://www.sacnilk.com/, ನಿರ್ಮಾಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಮಾಧ್ಯಮದ ವಿವರಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಬಹಿರಂಗಪಡಿಸಿದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











