ಮಲಯಾಳಂ ಚಿತ್ರ'ಲೋಕ'ದಲ್ಲಿ ಐತಿಹಾಸಿಕ ದಾಖಲೆ,ಸೂಪರ್ ಸ್ಟಾರ್‌ಗಳಿಗೆಲ್ಲಾ ಸೆಡ್ಡು ಹೊಡೆದು ₹300ಕೋಟಿ ದೋಚಿದ ಕಲ್ಯಾಣಿ

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ವಂಡರ್ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತು ಮಾಡುತ್ತಾರೆ. ಉದಾಹರಣೆಗೆ ಕಲ್ಯಾಣಿ ಪ್ರಿಯದರ್ಶನ್ ಮತ್ತು ಅವರ ''ಲೋಕಾ-ಚಾಪ್ಟರ್ 1 : ಚಂದ್ರ''.

day-39-blockbuster-lokah-hits-300-cr-see-the-full-list-of-broken-records

ಹೌದು, ''ಲೋಕಾ-ಚಾಪ್ಟರ್ 1-ಚಂದ್ರ''.. ಮಲಯಾಳಂ ಚಿತ್ರರಂಗದ ಹೊಸ ಮ್ಯಾಜಿಕ್. 40 ದಿನಗಳ ಹಿಂದೆ ತೆರೆಗೆ ಬಂದ ಈ ಚಿತ್ರದ ಕ್ರೇಝ್ ಇನ್ನೂ ಕಡಿಮೆ ಆಗಿಲ್ಲ. ಈ 40 ದಿನಗಳಲ್ಲಿ ಹಲವು ಚಿತ್ರಗಳು ಬಂದವು. ಹೋದವು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ''ಕಾಂತಾರ'' ಇಡೀ ಭಾರತವನ್ನು ಆವರಿಸಿಕೊಂಡಿದೆ. ''ಕಾಂತಾರ'' ಅಬ್ಬರಕ್ಕೆ ಬಾಕ್ಸಾಫೀಸ್ ನಡುಗುತ್ತಿದೆ.

ಆದರೂ ಕೂಡ ಕಲ್ಯಾಣಿ ಪ್ರಿಯದರ್ಶನ್ ''ಲೋಕಾ''ದಲ್ಲಿ ಕಂಪನದ ಸದ್ದು ಕೇಳಿ ಬಂದಿಲ್ಲ. ಚಿತ್ರಮಂದಿರದಿಂದ ಎತ್ತಂಗಡಿಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ''ಲೋಕಾ'' ಹೊಸದೊಂದು ದಾಖಲೆಯನ್ನು ಬರೆದಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ 300 ಕೋಟಿ ಹಣವನ್ನು ಕೊಳ್ಳೆ ಹೊಡೆದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಚ್ಚರಿ ಆದರೂ ಕೂಡ ಇದೇ ಸತ್ಯ.

ಸ್ಯಾಕ್ನಿಲ್ ಪ್ರಕಾರ ''ಲೋಕಾ'' ಚಿತ್ರದ 40 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ವಾರ - ₹ 63.8 ಕೋಟಿ

ಎರಡನೇ ವಾರ - ₹ 55.5 ಕೋಟಿ

ಮೂರನೇ ವಾರ - ₹ 31.85 ಕೋಟಿ

ನಾಲ್ಕನೇ ವಾರ - ₹ 15.6 ಕೋಟಿ

ಐದನೇ ವಾರ - ₹ 11.55 ಕೋಟಿ

37ನೇ ದಿನ [6ನೇ ಶುಕ್ರವಾರ] - ₹ 0.6 ಲಕ್ಷ

38ನೇ ದಿನ [6ನೇ ಶನಿವಾರ ] - ₹ 0.8 ಲಕ್ಷ

39ನೇ ದಿನ [ 6ನೇ ಭಾನುವಾರ ]- ₹1.1 ಕೋಟಿ

40ನೇ ದಿನ [ 6ನೇ ಸೋಮವಾರ] ₹25 ಲಕ್ಷ

ಒಟ್ಟು ಗಳಿಕೆ - ₹ 181.72 ಕೋಟಿ

day-39-blockbuster-lokah-hits-300-cr-see-the-full-list-of-broken-records

ಹೀಗೆ ಭಾರತದಲ್ಲಿಯೇ ₹ 181.72 ಕೋಟಿಯನ್ನು ದೋಚಿರುವ ''ಲೋಕಾ'' ಹೊರ ದೇಶಗಳಲ್ಲಿ ₹ 118.75 ಕೋಟಿಯನ್ನು ಗಳಿಸಿದೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ ₹ 300.47 ಕೋಟಿ ಹಣವನ್ನು ದೋಚಿದೆ. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಹೊಚ್ಚ ಹೊಸ ಇತಿಹಾಸವನ್ನು ಬರೆದಿದೆ. ದೊಡ್ಡ ದೊಡ್ಡ ಮಲಯಾಳಂ ಸೂಪರ್ ಸ್ಟಾರ್‌ಗಳಿಂದ ಸಾಧ್ಯವಾಗದ ಈ ದಾಖಲೆಯನ್ನು ಚಿತ್ರರಂಗಕ್ಕೆ ಬಂದ ಹೊಸ ಹುಡುಗಿ ನಿರ್ಮಾಣ ಮಾಡಿರುವುದು ವಿಶೇಷ.

koimoi.com ಪ್ರಕಾರ ವಿಶ್ವದೆಲ್ಲೆಡೆ ಅತೀ ಹೆಚ್ಚು ಹಣ ಗಳಿಸಿದ ಮಲಯಾಳಂನ 5 ಚಿತ್ರಗಳು ಈ ಕೆಳಗಿನಂತಿವೆ

1- ಲೋಕ-ಚಾಪ್ಟರ್ 1-ಚಂದ್ರ : ₹300.47 ಕೋಟಿ
2- L2 ಎಂಪುರಾನ್ - ₹268.05 ಕೋಟಿ
3-ಮಂಜುಮ್ಮೆಲ್ ಬಾಯ್ಸ್ -₹241.56 ಕೋಟಿ
4- ಥುಂಡರಮ್ - ₹237.76 ಕೋಟಿ
5-2018- ₹181 ಕೋಟಿ

ಸದ್ಯ ಲೋಕಾ ಕೇರಳ ಸೇರಿ ಇನ್ನೂ ಕೆಲ ಕಡೆ ಚಿತ್ರಮಂದಿರಗಳಲ್ಲಿದೆ. ಆ ಪೈಕಿ ಹಲವಡೆ 50 ದಿನಗಳನ್ನು ಕೂಡ ಈ ಚಿತ್ರ ಪೂರೈಸಲಿದೆ. ಸದ್ಯ ₹ 300.47 ಕೋಟಿ ಹಣ ದೋಚಿರುವ ''ಲೋಕಾ'' ಇನ್ನೆಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
HISTORY MADE: On Day 39, 'Lokah Chapter 1: Chandra' officially crossed the ₹300 Cr mark worldwide, setting a new benchmark for Malayalam cinema's global power
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X