Kesari 2 Box Office Day 9 ; ದಿಢೀರ್ ಆಗಿ 73 % ಹೆಚ್ಚಾಯ್ತು ಕೇಸರಿ 2 ಚಿತ್ರದ ಕಲೆಕ್ಷನ್, 9ನೇ ದಿನದ ಗಳಿಕೆಯೆಷ್ಟು ?

ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್‌ಗಳು ತಮ್ಮ ಚಿತ್ರ ಬಿಡುಗಡೆಯಾದ ನಂತರ ಚಿತ್ರಮಂದಿರಕ್ಕೆ ಹೋಗಲ್ಲ. ಅಭಿಮಾನಿಗಳನ್ನು ಭೇಟಿಯಾಗುವುದಿಲ್ಲ. ಚಿತ್ರದ ಕುರಿತು ಮಾತನಾಡಲು ಕೂಡ ಹೋಗುವುದಿಲ್ಲ. ಆದರೆ ಅಕ್ಷಯ್ ಕುಮಾರ್ ಇದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ. ಚಿತ್ರ ಮುಗಿದ ನಂತರ ಚಿತ್ರ ಪ್ರೇಮಿಗಳ ಜೊತೆ ಸಂವಾದವನ್ನು ಮಾಡುತ್ತಿದ್ದಾರೆ. ನಿರಂತರವಾದ ಸೋಲುಗಳಿಂದ ಬೇಸತ್ತು ಅಕ್ಷಯ್ ಕುಮಾರ್ ಹೀಗೆ ಮಾಡ್ತಿದ್ದಾರಾ ಗೊತ್ತಿಲ್ಲ.

ಆದರೆ ಅಕ್ಷಯ್ ಕುಮಾರ್ ಅವರ ಈ ನಡೆಯಿಂದ ಕೇಸರಿ 2 ಚಿತ್ರದ ಗಳಿಕೆಯಲ್ಲಿ ಏರಿಕೆಯಂತೂ ಕಂಡು ಬಂದಿದೆ. ಶನಿವಾರ { ಏಪ್ರಿಲ್ 26 } ಶೇಕಡಾ 73% ಕೇಸರಿ 2 ಚಿತ್ರದ ಗಳಿಕೆ ಹೆಚ್ಚಾಗಿದೆ.

Day 9 Victory for Kesari 2 Akshay Kumar s Film Sees Unbelievable 73 Boost in Earnings

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಕೇಸರಿ 2 ಕಳೆದ ಶುಕ್ರವಾರ ₹4.5 ಕೋಟಿ ಹಣವನ್ನು ಗಳಿಸಿದೆ. ಆದರೆ ಶನಿವಾರ ಈ ಗಳಿಕೆಯಲ್ಲಿ ಶೇಕಡಾ 73% ಏರಿಕೆಯಾಗಿದೆ. ಚಿತ್ರ ಶನಿವಾರ ₹7 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ದೋಚಿದೆ. ಈ ಮೂಲಕ ಹತ್ತು ದಿನಗಳಲ್ಲಿ ಕೇಸರಿ 2 ಬಾಕ್ಸಾಫೀಸ್‌ನಲ್ಲಿ ₹52.87 ಕೋಟಿ ಹಣವನ್ನು ಗಳಿಸಿದೆ.

ಇನ್ನು ಕೇಸರಿ 2 ಚಿತ್ರವನ್ನು ಪ್ರೇಕ್ಷಕರು ಮತ್ತು ವಿಮರ್ಷಕರು ಮೆಚ್ಚಿಕೊಂಡಿದ್ದಾರೆ. ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ವರ್ಡ್ ಆಫ್ ಮೌತ್ ಕೇಸರಿ 2 ಚಿತ್ರಕ್ಕೆ ಸಹಕಾರಿಯಾಗಿದೆ. ನಿನ್ನೆ ಗಳಿಕೆಯಲ್ಲಿ ಏರಿಕೆ ಕೂಡ ಕಂಡು ಬಂದಿದೆ. ಈ ಹಿನ್ನೆಲೆ ಇವತ್ತು ಕೂಡ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಇಂದು { ಏಪ್ರಿಲ್ 27 } ಹತ್ತು ಕೋಟಿ ಹಣವನ್ನು ಚಿತ್ರ ಗಳಿಸಬಹುದು ಎನ್ನುವ ವಿಶ್ವಾಸ ಬಾಲಿವುಡ್ ಪಂಡಿತರಿಗಿದೆ.

ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಭಾರತದಲ್ಲಿ ಕೇಸರಿ 2 ಚಿತ್ರದ ಈ ಐದು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ : ₹ 7.75 ಕೋಟಿ

ಎರಡನೇ ದಿನ : ₹ 9.75 ಕೋಟಿ

ಮೂರನೇ ದಿನ : ₹ 12 ಕೋಟಿ

ನಾಲ್ಕನೇ ದಿನ : ₹ 4.5 ಕೋಟಿ

ಐದನೇ ದಿನ : ₹ 5 ಕೋಟಿ

ಆರನೇ ದಿನ : ₹ 3.6 ಕೋಟಿ

ಏಳನೇ ದಿನ : ₹ 3.5 ಕೋಟಿ


ಮೊದಲ ವಾರದ ಒಟ್ಟು ಗಳಿಕೆ : ₹46.1 ಕೋಟಿ

ಎಂಟನೇ ದಿನ : ₹ 4.5 ಕೋಟಿ

ಒಂಬತ್ತನೇ ದಿನ : ₹ 7 ಕೋಟಿ

ಹೀಗೆ ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ₹57.16 ಕೋಟಿ ಹಣವನ್ನು ಕೇಸರಿ 2 ಗಳಿಸಿದೆ. ಇನ್ನು ಈ ವಾರ ಹಿಂದಿಯಲ್ಲಿ ಯಾವುದೇ ದೊಡ್ಡ ಚಿತ್ರಗಳಿಲ್ಲ. ಈ ಅಂಶ ಕೇಸರಿ 2 ಚಿತ್ರಕ್ಕೆ ಸಹಕಾರಿಯಾದರು ಆಗಬಹುದಾದರೂ ಕೂಡ ಕೂಡ ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರದಿಂದ ಕೇಸರಿ 2 ಚಿತ್ರಕ್ಕೆ ಹಿನ್ನೆಡೆಯಂತೂ ಸದ್ಯ ಆಗ್ತಿದೆ. ಬಿಹಾರ್, ಉತ್ತರ ಪ್ರದೇಶ ಸೇರಿ ಉತ್ತರ ಭಾರತದ ಹಲವಡೆ ಅನೇಕರು ಕೇಸರಿ 2 ಚಿತ್ರದ ಬದಲು ಜಾಟ್ ಚಿತ್ರಕ್ಕೆ ಮಣೆ ಹಾಕುತ್ತಿದ್ದಾರೆ.

ಸದ್ಯ ಕೇಸರಿ 2 ₹57.16 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ₹100 ಕೋಟಿಯ ಗಡಿಯನ್ನು ಚಿತ್ರ ತಲುಪುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kesari 2 Box Office Collection Day 9: Akshay Kumar, R. Madhavan, and Ananya Panday's Kesari: Chapter 2 received a warm reception from critics, but its box office numbers didn’t fully reflect the early excitement. That said, the film experienced a strong upward trend on its second Saturday. After earning Rs 4.05 crore on Friday, the movie grossed around Rs 7 crore on Day 9, as reported by industry tracker Sacnilk.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X