De De Pyaar De 2 Box Office Day 2 ; ಅಜಯ್ ದೇವಗನ್ , ಮಾಧವನ್ ಜುಗಲಬಂದಿ - 2ನೇ ದಿನ ಬಂಪರ್ ಲಾಟರಿ

ಈ ವರ್ಷ ''ಛಾವಾ'' ಹೊರತು ಪಡಿಸಿದರೆ ಬಾಲಿವುಡ್‌ನಲ್ಲಿ ಬೇರೆ ಯಾವ ಚಿತ್ರ ಕೂಡ ದೊಡ್ಡ ಹಂತದಲ್ಲಿ ಸದ್ದು ಮಾಡಿಲ್ಲ. ಸಲ್ಮಾನ್ ಖಾನ್ ಅಭಿನಯದ ''ಸಿಕಂದರ್'' ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದವಾದರೂ ಚಿತ್ರ ಮಕಾಡೆ ಮಲಗಿತು. ಈ ಮೂಲಕ ಸಲ್ಮಾನ್ ಖಾನ್‌ಗೆ ಭಾರೀ ಮುಖಭಂಗವೂ ಆಯಿತು. ಕೇವಲ ''ಸಿಕಂದರ್'' ಮಾತ್ರ ಅಲ್ಲ ಸನ್ನಿ ಡಿಯೋಲ್ ಅಭಿನಯದ ''ಜಾಟ್''..

ಅಕ್ಷಯ್ ಕುಮಾರ್ ಅಭಿನಯದ ''ಕೇಸರಿ 2''.. ''ಜಾಲಿ ಎಲ್‌ ಎಲ್‌ ಬಿ 3''.. ''ಹೌಸ್‌ ಫುಲ್ 5''.. ಕಾಜೋಲ್ ಅಭಿನಯದ ''ಮಾ''.. ರಾಜ್ ಕುಮಾರ್ ರಾವ್ ಅಭಿನಯದ ''ಮಾಲೀಕ್''.. ತೃಪ್ತಿ ದಿಮ್ರಿಯ ''ಧಡಕ್ 2''.. ಅಜಯ್ ದೇವಗನ್ ಅಭಿನಯದ ''ಸರ್ದಾರ್ 2''.. ಹೃತಿಕ್ ರೋಷನ್-ಜ್ಯೂ ಎನ್‌ಟಿಆರ್ ಅಭಿನಯದ ''ವಾರ್ 2''.. ಟೈಗರ್ ಶ್ರಾಫ್ ಅಭಿನಯದ ''ಬಾಘಿ 4''.. ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಪರಮ ಸುಂದರಿ''.. ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ.''. ವಿವೇಕ್ ಅಗ್ನಿಹೋತ್ರಿಯ ''ದಿ ಬೆಂಗಾಲ್ ಫೈಲ್ಸ್''..

DE DE PYAAR DE 2 BLASTS OFF Ajay Devgn-Madhavan film sees 50 LEAP CROSSES 20 CR

ಹೀಗೆ ಬಂದ ಬಹುತೇಕ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ''ಸೈಯಾರ''.. ''ಸಿತಾರೆ ಜಮೀನ್ ಪರ್''.. ''ರೇಡ್ 2''.. ''ಏಕ್ ದಿವಾನೆ ಕೀ ದೀವಾನಿಯತ್'' .. ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಈ ವರ್ಷ ಗೆದ್ದಿವೆ. ಬಾಲಿವುಡ್‌ಗೆ ಆಸರೆಯಾಗಿವೆ. ಹೀಗಿರುವಾಗ ಇದೀಗ ''ದೇ ದೇ ಪ್ಯಾರ್ ದೇ 2'' ಚಿತ್ರ ತೆರೆಗೆ ಬಂದಿದೆ. ಸೋಲುಗಳಿಂದ ಹೈರಾಣಾದ ಬಾಲಿವುಡ್‌ನಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ.

ಹೌದು, ಕಳೆದ ಶುಕ್ರವಾರ ( ನವೆಂಬರ್ 14 ) ತೆರೆಗೆ ಬಂದ ಅಜಯ್ ದೇವಗನ್.. ಆರ್ ಮಾಧವನ್.. ರಕುಲ್ ಪ್ರೀತ್ ಸಿಂಗ್.. ಗೌತಮಿ ಕಪೂರ್.. ಅಭಿನಯದ ''ದೇ ದೇ ಪ್ಯಾರ್ ದೇ 2'' ಚಿತ್ರ ಮೊದಲ ದಿನ ಸಾಧಾರಣ ಗಳಿಕೆ ಕಂಡಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ₹ 8.75 ಕೋಟಿಯನ್ನಷ್ಟೇ ಗಳಿಸಿತ್ತು. ಈ ಹಿನ್ನೆಲೆ ಈ ಚಿತ್ರ ಕೂಡ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ವಿಫಲವಾಯ್ತಲ್ಲ ಎಂದು ಬಾಲಿವುಡ್ ಚಿಂತೆಗೀಡಾಗಿತ್ತು.

DE DE PYAAR DE 2 BLASTS OFF Ajay Devgn-Madhavan film sees 50 LEAP CROSSES 20 CR

ಆದರೆ .. ಎರಡನೇ ದಿನ ಅಂದರೆ ನಿನ್ನೆ (ನವೆಂಬರ್ 15 ) ಚಿತ್ರದ ಗಳಿಕೆಯಲ್ಲಿ ಶೇಕಡಾ 40% ಏರಿಕೆ ಕಂಡು ಬಂದಿದೆ. ಅಂದಾಜು ₹ 12.25 ಕೋಟಿಯನ್ನು ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ₹ 21.56 ಕೋಟಿಯನ್ನು ''ದೇ ದೇ ಪ್ಯಾರ್ ದೇ 2'' ಚಿತ್ರ ಗಳಿಸಿದೆ. ಇನ್ನು ಇಂದು (ನವೆಂಬರ್ 16 ) ಭಾನುವಾರವಾದ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಇಂದು 15 ಕೋಟಿಗೂ ಅಧಿಕ ಹಣವನ್ನು ಈ ಚಿತ್ರ ಗಳಿಸುತ್ತೆ ಎನ್ನುವ ಲೆಕ್ಕಾಚಾರವನ್ನು ಸದ್ಯ ಬಾಲಿವುಡ್ ಪಂಡಿತರು ಹಾಕಿದ್ದಾರೆ.

ಒಟ್ನಲ್ಲಿ ಸದ್ಯ ವಾರಾಂತ್ಯದಲ್ಲಿ ''ದೇ ದೇ ಪ್ಯಾರ್ ದೇ 2'' ಚಿತ್ರದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂದಿದೆ. ಸೋಮವಾರದ ನಂತರದ ಗಳಿಕೆ ಈ ಚಿತ್ರದ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Devgn's latest film, De De Pyaar De 2, records 40% to 50% growth on its second day of release. The box office total now stands strong at over ₹20 Crores. Get the detailed Day 2 Box Office Collection figures now.
Read more about: bollywood ajay devgn
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X