De De Pyaar De 2 Box Office Day 6;ಅಜಯ್ ದೇವಗನ್‌ಗೆ ಮತ್ತೊಂದು ಸೋಲು, 50ಕೋಟಿಗೆ ಸುಸ್ತಾದ ದೇ ದೇ ಪ್ಯಾರ್ ದೇ 2
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಬಾಲಿವುಡ್ ಕೆಲ ವರ್ಷಗಳಿಂದ ಕಳೆಗುಂದಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಮುಂದೆ ಮಂಡಿಯೂರಿತ್ತು. ಆದರೆ.. 2023ರಲ್ಲಿ ಬಾಲಿವುಡ್ ಮೈಕೊಡವಿ ಎದ್ದು ನಿಂತಿತ್ತು. ''ಜವಾನ್''.. ''ಪಠಾಣ್''.. ಸೇರಿ ಹಲವು ಚಿತ್ರಗಳು ಗೆದ್ದ ಹಿನ್ನೆಲೆ ಹತ್ ಹತ್ರ ₹13,000 ಕೋಟಿ ಹಿಂದಿ ಚಿತ್ರರಂಗದ ಖಜಾನೆ ಸೇರಿತ್ತು. ಈ ಮೂಲಕ ಹೊಸದೊಂದು ಮೈಲಿಗಲ್ಲನ್ನು ಬಾಲಿವುಡ್ ತಲುಪಿತ್ತು.
ಆದರೆ 2024ರಲ್ಲಿ ಬಾಲಿವುಡ್‌ನಲ್ಲಿ ಹಣದ ಹೊಳೆ ಹರಿಯಲಿಲ್ಲ . ''ಸ್ತ್ರೀ 2''.. ''ಮುಂಜ್ಯಾ''.. ''ಭೂಲ್ ಭೂಲಯ್ಯ 3'', ''ಸಿಂಗಂ ಅಗೇನ್'' , ಸೇರಿ ಅಲ್ಲೊಂದು ಇಲ್ಲೊಂದು ಚಿತ್ರಗಳು ಗೆದ್ದಿದ್ದು ಬಿಟ್ಟರೆ ಬೇರೆ ಯಾವ ಚಿತ್ರ ಕೂಡ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. ಈ ವರ್ಷ ಕೂಡ ಕಳೆದ ವರ್ಷದಂತೆಯೇ ವಾತಾವರಣ ಇದೆ. ''ಛಾವಾ''.. ''ಸೈಯಾರ'' .. ಹೀಗೆ ಅಲ್ಲೊಂದು.. ಇಲ್ಲೊಂದು.. ಬೆರಳಣಿಕಯ ಚಿತ್ರಗಳು ಮಾತ್ರ ಗೆದ್ದಿವೆ.

ಸಂದರ್ಭ- ಸನ್ನಿವೇಶ ಹೀಗಿರುವಾಗ ಕಳೆದ ವಾರ ತೆರೆಗೆ ಬಂದ ಅಜಯ್ ದೇವಗನ್, ಆರ್. ಮಾಧವನ್ ಅಭಿನಯದ ''ದೇ ದೇ ಪ್ಯಾರ್ ದೇ 2'' ಚಿತ್ರದ ಮೇಲೆ ಬಾಲಿವುಡ್‌ಗೆ ಭರವಸೆ ಇತ್ತು. ಚಿತ್ರ ಗೆಲ್ಲುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ.. ಈ ''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ''ದೇ ದೇ ಪ್ಯಾರ್ ದೇ 2'' ಚಿತ್ರದ ಮೇಲಿನ ನಿರೀಕ್ಷೆ ಹುಸಿಯಾಗಿದೆ. ಮತ್ತೊಂದು ಸೋಲು ಅಜಯ್ ದೇವಗನ್ ಖಾತೆಗೆ ಜಮೆಯಾಗಿದೆ.
ಹೌದು, ಅಸಲಿಗೆ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದ ''ದೇ ದೇ ಪ್ಯಾರ್ ದೇ 2'' ಬಾಲಿವುಡ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ₹8.75 ಕೋಟಿ ಗಳಿಸಿತ್ತು. ಆದರೆ ಆ ನಂತರ ಶನಿವಾರ ( ₹12.25 ಕೋಟಿ) ಮತ್ತು ಭಾನುವಾರ ( ₹13.75 ಕೋಟಿ ) ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿತ್ತು. ಇದರಿಂದ ಗೆಲ್ಲುವ ಭರವಸೆ ಬಾಲಿವುಡ್‌ಗಿತ್ತು. ಇದಕ್ಕೆ ಪೂರಕವಾಗಿ ಸಾಮಾನ್ಯವಾಗಿ ಸೋಮವಾರದ ನಂತರ ಚಿತ್ರ ಯಾವುದೇ ಇರಲಿ.. ಆ ಚಿತ್ರದ ಸ್ಟಾರ್ ಯಾರೇ ಇರಲಿ.. ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ.
ಆದರೆ.. ಅಚ್ಚರಿ ಎಂಬಂತೆ ಮೊನ್ನೆ ( ಮಂಗಳವಾರ ) ಚಿತ್ರದ ಗಳಿಕೆ ನಾಲ್ಕನೇ ದಿನಕ್ಕಿಂತ ( ಸೋಮವಾರ ) ಹೆಚ್ಚಾಗಿತ್ತು. ಸೋಮವಾರ ₹ 4.25 ಕೋಟಿ ಗಳಿಸಿದ್ದ ಚಿತ್ರ ಮೊನ್ನೆ ( ಮಂಗಳವಾರ-ನವೆಂಬರ್ 18 ) ಅಂದಾಜು ₹ 5 ಕೋಟಿ ಹಣವನ್ನು ದೋಚಿತ್ತು ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

ಆದರೆ.. ನಿನ್ನೆ ( ಬುಧವಾರ ) ಚಿತ್ರದ ಗಳಿಕೆ 33 % ಕುಸಿದಿದೆ. ಕೇವಲ ₹ 3.5 ಕೋಟಿಯನ್ನು ಮಾತ್ರ ಗಳಿಸಿದೆ. ಅಜಯ್ ದೇವಗನ್ ಮತ್ತು ಆರ್ ಮಾಧವನ್ ಅವರಂತಹ ಸ್ಟಾರ್‌ಗಳಿದ್ದರೂ ಕೂಡ ಈ ಚಿತ್ರ ಆರು ದಿನವಾದರೂ ಭಾರತದಲ್ಲಿ ₹50 ಕೋಟಿಯ ಗಡಿಯನ್ನು ದಾಟಿಲ್ಲ. ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಕೇವಲ ಈ ಆರು ದಿನದಲ್ಲಿ ₹47.75 ಕೋಟಿಯನ್ನು ಮಾತ್ರ ಗಳಿಸಿದೆ.
ಇನ್ನು ಈ ಶುಕ್ರವಾರ ( ನವೆಂಬರ್ 21) ಫರ್ಹಾನ್ ಅಖ್ತರ್ ಅಭಿನಯದ ''120 ಬಹದ್ದೂರ್'' .. ವಿವೇಕ್ ಓಬೆರಾಯ್.. ರಿತೇಶ್ ದೇಶಮುಖ್ ಮತ್ತು ಅಪ್ತಾಬ್ ಶಿವದಾಸನಿ ಅವರ ಬ್ಲಾಕ್ ಬಸ್ಟರ್ ಫ್ರಾಂಚೈಸಿ ''ಮಸ್ತಿ 4''.. ಬಿಡುಗಡೆಯಾಗುತ್ತಿವೆ. ಇ ಈ ಹಿನ್ನೆಲೆ ಚಿತ್ರದ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆಯಾಗಲಿದೆ. ಹಲವು ಸಿಂಗಲ್ ಸ್ಕ್ರೀನ್‌ಗಳಲ್ಲಿ ಚಿತ್ರ ಎತ್ತಂಗಡಿ ಕೂಡ ಆಗಲಿದೆ. ಹೀಗಾಗಿ ''ದೇ ದೇ ಪ್ಯಾರ್ ದೇ 2'' ಈ ವರ್ಷದ ಫ್ಲಾಪ್ ಚಿತ್ರಗಳ ಸಾಲಿಗೆ ಬಾಲಿವುಡ್ ಪಂಡಿತರು ಸದ್ಯ ಸೇರಿಸುತ್ತಿದ್ದಾರೆ. ಸದ್ಯ ₹50 ಕೋಟಿಯನ್ನಂತೂ ಈ ಚಿತ್ರ ಪಾರು ಮಾಡುತ್ತೆ. ಇದರ ಮೇಲೆ ಇನ್ನೆಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











