Junior Box Office Day 4 ; ಸೋಮವಾರ ಕುಸಿದ ಜೂನಿಯರ್ ಗಳಿಕೆ, ಗಣಿ ಧಣಿ ಮಗನ ಸಿನಿಮಾ ಗಳಿಸಿದ್ದೆಷ್ಟು?
ಚಿತ್ರರಂಗಕ್ಕೆ ಬರಬೇಕು.. ಬೆಳೆಯಬೇಕು.. ಹೆಸರು ಮಾಡಬೇಕು.. ಎಂಬ ಉದ್ದೇಶದಿಂದ ಬರುವವರ ಸಂಖ್ಯೆ ಅಂದಾಜಿಗೆ ನಿಲುಕದಷ್ಟಿದೆ. ಅದ್ಯಾವ ಅಲೆ ಇದ್ದರೂ.. ಸವಾಲುಗಳ ಸಂತೆ ನೆರದಿದ್ದರೂ ಕೂಡ ಈ ಹೊಸಬರ ಹಾವಳಿ ಕಡಿಮೆಯಾಗಿಲ್ಲ. ಹಾಗಂಥ ಬಂದವರೆಲ್ಲರಿಗೆ ಇಲ್ಲಿ ಗೆಲುವು ಕೂಡ ಸಿಗುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರ ಗೆಲ್ಲುತ್ತೆ. ಕೆಲವರ ನಸೀಬು ಮಾತ್ರ ಖುಲಾಯಿಸುತ್ತೆ. ಆದರೂ.. ಪ್ರಯತ್ನ ಮಾತ್ರ ನಿಲ್ಲಲ್ಲ. ಪ್ರಯೋಗಕ್ಕೆ ಇಲ್ಲಿ ಬರ ಇಲ್ಲ.
ಇನ್ನು.. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹಲವಾರು ಕಾಲೇಜ್ ಕ್ಯಾಂಪಸ್‌ನ ಕಥೆಗಳು ಬಂದು ಹೋಗಿವೆ. ಆದರೂ ಕೂಡ ಈ ಕಾಲೇಜ್‌ನ ಕಾರಿಡಾರ್ ಮೇಲಿನ ವ್ಯಾಮೋಹ ನಮ್ಮ ಚಿತ್ರರಂಗದ ನಿರ್ದೇಶಕರಲ್ಲಿ ಕಡಿಮೆಯಾಗಿಲ್ಲ. ವರ್ಷದಲ್ಲಿ ಒಬ್ಬರಲ್ಲ ಒಬ್ಬರು ಕಾಲೇಜ್ ಸುತ್ತ ಮುತ್ತ ಕಥೆ ಹೆಣೆದು ಇಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಜೂನಿಯರ್.

ಹೌದು, ಗಣಿಧಣಿ ಜನಾರ್ಧನ್ ರೆಡ್ಡಿ ಮಗ ಕಿರೀಟಿಯ ಚೊಚ್ಚಲ ಚಿತ್ರವಾದ 'ಜೂನಿಯರ್' ನಲ್ಲಿ ಇದೇ ಕಾಲೇಜ್‌ನ ಕಥನ ಇದೆ. ಚೇಷ್ಠೆ ಇದೆ. ಹಾಗಂಥ 'ಜೂನಿಯರ್' ಕೇವಲ ಕಾಲೇಜ್ ಕಾಲೇಜ್ ವಿದ್ಯಾರ್ಥಿಯ ಕಥೆ ಮಾತ್ರ ಅಲ್ಲ. ಅಪ್ಪ-ಮಗನ ಸಂಬಂಧ.. ಅಕ್ಕ-ತಮ್ಮನ ಬಾಂಧ್ಯವ ಕೂಡ ಈ ಚಿತ್ರದಲ್ಲಿದೆ.
ಸದ್ಯ ಈ ಕಥೆ ಪ್ರೇಕ್ಷಕರ ಗಮನ ಸೆಳೆಯುತ್ತಿರುವಂತೆ ಇದೆ. ಹೃದಯ ಗೆಲ್ಲುತ್ತಿರುವಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ 'ಜೂನಿಯರ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದಾನೆ. ಇಲ್ಲಿಯವರೆಗೆ ₹ 6.25 ಕೋಟಿ ಹಣ ಗಳಿಸಿದ್ದಾನೆ.
ಹೌದು, ಚಿತ್ರದ ಗಳಿಕೆಯ ಅಂಕಿ-ಅಂಶವನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಕಿರೀಟಿಯ 'ಜೂನಿಯರ್' ಚಿತ್ರ ನಿನ್ನೆ { ಜುಲೈ 21 } ಅಂದಾಜು ₹ 75 ಲಕ್ಷವನ್ನು ಗಳಿಸಿದೆ. ಮೊದಲ ಮೂರು ದಿನಕ್ಕೆ ಹೋಲಿಸಿದರೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದಿದೆಯಾದರೂ ಸೋಮವಾರದಂದು ದೊಡ್ಡ ದೊಡ್ಡ ಚಿತ್ರಗಳೇ ಹಣ ಗಳಿಸಲು ಪರದಾಡುತ್ತಿರುವ ಸಮಯದಲ್ಲಿ 'ಜೂನಿಯರ್' ಚಿತ್ರದ ಈ ಗಳಿಕೆ ಮೆಚ್ಚುವಂತಹದ್ದೇ ಎನ್ನುವ ಮಾತು ಸದ್ಯ ಚಿತ್ರಸಂತೆಯಲ್ಲಿ ಕೇಳಿ ಬರುತ್ತಿದೆ.
ಸ್ಯಾಕ್ನಿಲ್ ಪ್ರಕಾರ ಜೂನಿಯರ್ ಚಿತ್ರದ ನಾಲ್ಕು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ[ಶುಕ್ರವಾರ]₹1.5ಕೋಟಿ[ತೆಲುಗು:₹1.3ಕೋಟಿ,ಕನ್ನಡ ₹20ಲಕ್ಷ]
ಎರಡನೇ ದಿನ[ಶನಿವಾರ]₹1.8ಕೋಟಿ[ತೆಲುಗು:₹1.55ಕೋಟಿ,ಕನ್ನಡ ₹25ಲಕ್ಷ]
ಮೂರನೇ ದಿನ[ಭಾನುವಾರ]₹2.2ಕೋಟಿ[ತೆಲುಗು::₹1.75ಕೋಟಿ,ಕನ್ನಡ ₹45ಲಕ್ಷ
ನಾಲ್ಕನೇ ದಿನ [ಸೋಮವಾರ]₹75 ಲಕ್ಷ * ಅಂದಾಜು
ಒಟ್ಟು ಗಳಿಕೆ ₹6.25 ಕೋಟಿ

ಇನ್ನು ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ಬೆಂಗಳೂರಿನಲ್ಲಿ ಜೂನಿಯರ್ ಚಿತ್ರದ ಕನ್ನಡ ವರ್ಷನ್‌ಗೆ ಹೆಚ್ಚಿನ ಬೆಂಬಲ ಸೋಮವಾರ { ಜುಲೈ 21 } ಸಿಕ್ಕಿದೆ. ಬೆಂಗಳೂರಿನಲ್ಲಿ ಕನ್ನಡ ವರ್ಷನ್ 12.00% ಆಕ್ಯುಪೆನ್ಸಿ ಇದ್ದರೆ, ತೆಲುಗು ವರ್ಷನ್‌ಗೆ 9.50% ಆಕ್ಯುಪೆನ್ಸಿ ಕಂಡು ಬಂದಿದೆ. ಹೈದರಾಬಾದ್‌ನಲ್ಲಿ 17.25% ಜನ ಜೂನಿಯರ್‌ಗೆ ಬಹುಪರಾಕ್ ಹಾಕಿದ್ದಾರೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಹೀಗೆ ರಾಧಾಕಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರ ಸದ್ಯ ನಾಲ್ಕು ದಿನದಲ್ಲಿ ₹6.25 ಕೋಟಿ ಗಳಿಸಿದೆ. ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಅತ್ಯಲ್ಪ ಅಂಕ ಪಡೆದು ಪಾಸಾಗಿದೆ. ಈ ವಾರ ಚಿತ್ರದ ಗಳಿಕೆ ಇಷ್ಟೇ ಇರುತ್ತಾ ? ಅಥವಾ ಇನ್ನು ಕುಸಿಯುತ್ತಾ ಹೋಗುತ್ತಾ ? ಕುಸಿದರೂ ವಾರಾಂತ್ಯಕ್ಕೆ ಮತ್ತೆ ಜೂನಿಯರ್ ಚೇತರಿಸಿಕೊಂಡು ಮೇಲೆ ಎಳುತ್ತಾನಾ ? ಕನ್ನಡ ಮತ್ತು ತೆಲುಗುದಲ್ಲಿ ಈ ಜೂನಿಯರ್ ಎಷ್ಟು ಹಣ ಗಳಿಸುತ್ತಾನೆ ? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











