Devil Boxoffice Day 6: ಮಂಗಳವಾರ 'ಡೆವಿಲ್' ಕಲೆಕ್ಷನ್ ಎಷ್ಟು? ಮುಂದಿನ ಲೆಕ್ಕಾಚಾರ ಏನು?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ವಾರದ ದಿನಗಳಲ್ಲಿ ಸಾಧಾರಣ ಗಳಿಕೆ ಕಾಣುತ್ತಿದೆ. ಫ್ಯಾಮಿಲಿ ಆಡಿಯನ್ಸ್ ನಿಧಾನವಾಗಿ ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು ಪದೇ ಪದೆ ಸಿನಿಮಾ ನೋಡುವ ಪ್ರಯತ್ನ ಮಾಡುತ್ತಿದ್ದಾರೆ.
ಗುರುವಾರ(ಡಿಸೆಂಬರ್ 11) ತೆರೆಕಂಡಿದ್ದ 'ಡೆವಿಲ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಅಭಿಮಾನಿಗಳು ಇಷ್ಟಪಟ್ಟರೂ ಇತರರಿಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಮೊದಲ ದಿನ 13.8 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಬಳಿಕ ಕಲೆಕ್ಷನ್ ಲೆಕ್ಕ ಕೊಡಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. sacnilk.com ವೆಬ್‌ಸೈಟ್ ವರದಿ ಪ್ರಕಾರ ಡೆವಿಲ್ ಸಿನಿಮಾ 6 ದಿನಕ್ಕೆ 23.65 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.

ಸೋಮವಾರ 1.45 ಕೋಟಿ ರೂ. ಗಳಿಕೆ ಕಂಡಿದ್ದ 'ಡೆವಿಲ್' ಸಿನಿಮಾ ಮಂಗಳವಾರ 1 ಕೋಟಿ ರೂ. ಗಡಿ ದಾಟಿರುವ ಅಂದಾಜಿದೆ ಎಂದು ವರದಿ ಮಾಡಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಕಮ್ಮಿ ಆಗುತ್ತಿರುವುದು ಗೊತ್ತಾಗುತ್ತಿದೆ. 7ನೇ ದಿನವಾದ ಇಂದು(ಡಿಸೆಂಬರ್ 17) ಕಲೆಕ್ಷನ್ ಲಕ್ಷಗಳಿಗೆ ಇಳಿಯುವ ಅಂದಾಜಿದೆ. 'ಡೆವಿಲ್' ಹಾದಿ ಮುಂದಿದೆ. ಇನ್ನು ಸಾಕಷ್ಟು ದೂರ ಸಾಗಬೇಕಿದೆ. ವೀಕೆಂಡ್ ಮತ್ತೆ ಕಲೆಕ್ಷನ್ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.
ಸಂಕಷ್ಟದ ಸಮಯದಲ್ಲಿ 'ಡೆವಿಲ್' ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನಟ ದರ್ಶನ್ ಸಂತಸಕ್ಕೆ ಕಾರಣವಾಗಿದೆ. ಈ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಜೊತೆ ಫೋನ್ ಮಾಡಿ ಚರ್ಚಿಸಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಸ್ವತಃ ವಿಜಯಲಕ್ಷ್ಮಿ ಈ ವಿಚಾರ ಬಹಿರಂಗಪಡಿಸಿದ್ದರು. ಅಭಿಮಾನಿಗಳ ಪ್ರೀತಿಗೆ ಆಕೆ ಧನ್ಯವಾದ ತಿಳಿಸಿದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.
'ವಿಜಯ'ಯಾತ್ರೆ
ದರ್ಶನ್ ಬದಲು ವಿಜಯಲಕ್ಷ್ಮಿ ರಾಜ್ಯಾದ್ಯಂತ ವಿಜಯಯಾತ್ರೆ ಮಾಡಲು ಮುಂದಾಗಿದ್ದಾರೆ. ಮೈಸೂರು ಹಾಗೂ ದಾವಣಗೆರೆಗೆ ತೆರಳಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿ ಎಲ್ಲರಿಗೂ ಧನ್ಯವಾದ ತಿಳಿಸಲು ಮನಸ್ಸು ಮಾಡಿದ್ದಾರೆ. ಇದು 'ಡೆವಿಲ್' ಚಿತ್ರದ ಗಳಿಕೆಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.
ಟ್ರೈಲರ್ ಟ್ರೆಂಡಿಂಗ್
'ಡೆವಿಲ್' ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಸಿನಿಮಾ ವೀಕ್ಷಿಸಿದ ಬಳಿಕ ಮತ್ತೆ ಜನ ಟ್ರೈಲರ್ ನೋಡುತ್ತಿದ್ದಾರೆ. ಆಕ್ಷನ್ ಪ್ಯಾಕ್ಟ್ ಝಲಕ್ ಅಭಿಮಾನಿಗಳ ಮನಗೆದ್ದಿದೆ. ಕೃಷ್ಣ, ರುಕ್ಕು ಜೋಡಿಯ 'ಏನೊ ಒಂಥರ ಚೆಂದ' ವೀಡಿಯೋ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮೆಲೋಡಿ ಸಾಂಗ್ ಅಭಿಮಾನಿಗಳ ಮನಗೆದ್ದಿದೆ.
ಇದ್ರೆ ನೆಮ್ದಿಯಾಗಿರ್ಬೇಕ್
'ಡೆವಿಲ್' ಚಿತ್ರದ 'ಇದ್ರೆ ನೆಮ್ದಿಯಾಗಿರ್ಬೇಕ್' ಲಿರಿಕಲ್ ಸಾಂಗ್ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು ಗೊತ್ತೆಯಿದೆ. ಇದೀಗ ವೀಡಿಯೋ ಸಾಂಗ್ ಕೂಡ ರಿಲೀಸ್ ಆಗಿದೆ. ದರ್ಶನ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಹಾಡು ಬಂದಾಗ ಅಭಿಮಾನಿಗಳು ಸ್ಕ್ರೀನ್ ಮುಂದೆ ಹೋಗಿ ಕುಣಿದು ಎಂಜಾಯ್ ಮಾಡಿದ್ದರು. ಕೆಲ ಸೆಲೆಬ್ರೆಟಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕಿರುತೆರೆ ನಟಿ ರಜಿನಿ ಕೂಡ ಪತಿ ಅರುಣ್ ಜೊತೆ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ವೀಡಿಯೋ ಮಾಡಿ ಹಾಕಿದ್ದಾರೆ.
ವಿಜಯಲಕ್ಷ್ಮಿ ಸಂದರ್ಶನ
ಪತಿ ದರ್ಶನ್ ಚಿತ್ರರಂಗದಲ್ಲಿ ಇದ್ದರೂ ವಿಜಯಲಕ್ಷ್ಮಿ ಅಷ್ಟಾಗಿ ಕ್ಯಾಮರಾ ಮುಂದೆ ಬರುತ್ತಿರಲಿಲ್ಲ. ಆದರೆ 'ಡೆವಿಲ್' ಚಿತ್ರಕ್ಕಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಡಿ ಕಂಪನಿ ಯೂಟ್ಯೂಬ್ ಚಾನಲ್‌ಗಾಗಿ ವಿಶೇಷ ಸಂದರ್ಶನ ನೀಡಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ. ಡೆವಿಲ್ ಸಿನಿಮಾ, ದರ್ಶನ್ ಅಭಿಮಾನಿಗಳು, ದರ್ಶನ್ ಸಂಕಷ್ಟ ಎಲ್ಲದರ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದ್ದಾರೆ.
ವಿಶೇಷ ಸೂಚನೆ: ಈ ಆರ್ಟಿಕಲ್‌ಗೆ ಸಂಬಂಧಿಸಿದ ಮಾಹಿತಿಯನ್ನು https://www.sacnilk.com/, ನಿರ್ಮಾಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಮಾಧ್ಯಮದ ವಿವರಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಬಹಿರಂಗಪಡಿಸಿದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











