Devil Boxoffice Day 7: ಬುಧವಾರ ಡಲ್ಲಾದ 'ಡೆವಿಲ್'; ಮೊದಲ ವಾರ ಸಿನಿಮಾ ಕಲೆಕ್ಷನ್ ಎಷ್ಟು?
ಒಂದ್ಕಡೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣ್ತಿದೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಶುರುವಾಗಿದೆ. 'ಡೆವಿಲ್' ಅದ್ಭುತ ಓಪನಿಂಗ್ ಪಡೆದುಕೊಂಡರೂ ವೀಕೆಂಡ್ ಬಳಿಕ ಕಲೆಕ್ಷನ್ ಇಳಿಮುಖವಾಗಿದೆ. ಪರಭಾಷೆಯ ದೊಡ್ಡ ಸಿನಿಮಾಗಳ ಆರ್ಭಟ ಕೂಡ ಪರಿಣಾಮ ಬೀರಿದೆ.
ಬಾಲಿವುಡ್ ಸಿನಿಮಾ 'ಧುರಂಧರ್' ಹಾಗೂ ತೆಲುಗು 'ಅಖಂಡ-2' ಬಾಕ್ಸಾಫೀಸ್‌ನಲ್ಲಿ 'ಡೆವಿಲ್' ಚಿತ್ರಕ್ಕೆ ಪೈಪೋಟಿ ಕೊಡುತ್ತಿವೆ. ಚಿತ್ರಕ್ಕೆ ಪ್ರೇಕ್ಷಕರಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು ಕೂಡ ಹಿನ್ನಡೆಗೆ ಕಾರಣವಾಗಿದೆ. ವಾರದ ದಿನಗಳಲ್ಲಿ ಸಹಜವಾಗಿಯೇ ಪ್ರೇಕ್ಷಕರ ರೆಸ್ಪಾನ್ಸ್ ಕಮ್ಮಿ ಇರುತ್ತದೆ. ಆದರೆ ಅದ್ಭುತ ಮೌತ್ ಟಾಕ್ ಇರುವ ಚಿತ್ರಗಳಿಗೆ ಇದೆಲ್ಲಾ ಲೆಕ್ಕಕ್ಕೆ ಬರಲ್ಲ. ಸಾಕಷ್ಟು ನೆಗೆಟಿವ್ ನಡುವೆಯೂ 'ಡೆವಿಲ್' ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ.

ಮೊದಲ ದಿನದ ಗಳಿಕೆ ಬಗ್ಗೆ ಮಾತ್ರ ಚಿತ್ರತಂಡ ಅಧಿಕೃತ ಮಾಹಿತಿ ಕೊಟ್ಟಿತ್ತು. ಇನ್ನುಳಿದಂತೆ ಯಾವುದೇ ಅಪ್‌ಡೇಟ್ ಸಿಗಲಿಲ್ಲ. ವಿಜಯಲಕ್ಷ್ಮಿ ಈಗ ಆಯ್ದ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿ ಧನ್ಯವಾದ ತಿಳಿಸಲು ಮುಂದಾಗಿದ್ದಾರೆ. ಮೈಸೂರು, ದಾವಣಗೆರೆಗೆ ವಿಜಯಯಾತ್ರೆ ಹೊರಟ್ಟಿದ್ದಾರೆ. ಅಂತೂ ಇಂತೂ 'ಡೆವಿಲ್' ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ.
ನಿನ್ನೆ ಅಂದ್ರೆ ಬುಧವಾರ(ಡಿಸೆಂಬರ್ 17) ರಂದು 'ಡೆವಿಲ್' ಸಿನಿಮಾ ಅಂದಾಜು 80 ಲಕ್ಷ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk. com ವೆಬ್‌ಸೈಟ್ ವರದಿ ಮಾಡಿದೆ. ಒಟ್ಟಾರೆ ಮೊದಲ ವಾರ 'ಡೆವಿಲ್' ಸಿನಿಮಾ 24.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗುತ್ತಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಬರ್ತಿದ್ದಾರೆ. ವಾರದ ದಿನಗಳಲ್ಲಿ ಕೂಡ ಫಸ್ಟ್ ಹಾಗೂ ಸೆಕೆಂಡ್ ಶೋಗಳಿಗೆ ರೆಸ್ಪಾನ್ಸ್ ಚೆನ್ನಾಗಿದೆ.
ಮತ್ತೆ ವೀಕೆಂಡ್‌ನಲ್ಲಿ 'ಡೆವಿಲ್' ಸಿನಿಮಾ ಕಲೆಕ್ಷನ್ ಹೆಚ್ಚುವ ನಿರೀಕ್ಷೆಯಿದೆ. ನಟ ದರ್ಶನ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಇಂತಾದೊಂದು ಸಿನಿಮಾ ಸಕ್ಸಸ್ ಅವರಿಗೆ ಅನಿವಾರ್ಯವಾಗಿತ್ತು. ಅಭಿಮಾನಿಗಳು ಕೂಡ ನೆಚ್ಚಿನ ನಟನ ಕೈ ಬಿಟ್ಟಿಲ್ಲ. ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಿದ್ದರು. ಕೆಲವರು ಪದೇ ಪದೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಭಿಮಾನಿಗಳು ಹೊರತುಪಡಿಸಿ ಸಾಮಾನ್ಯ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬಂದರೆ ದೊಡ್ಡ ಗೆಲುವು ಸಿಗುತ್ತದೆ.
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 'ಡೆವಿಲ್' ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಅಷ್ಟಾಗಿ ಬುಕ್ಕಿಂಗ್ ಕಂಡು ಬರುತ್ತಿಲ್ಲ. ಆದರೆ ಬಾಕ್ಸಾಫೀಸ್‌ನಲ್ಲಿ 'ಡೆವಿಲ್' ಸಿನಿಮಾ ಸಾಗಬೇಕಾದ ಹಾದಿ ಬಹಳ ದೊಡ್ಡದಿದೆ. ಮುಂದಿನ ದಿನಗಳಲ್ಲಿ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತದೆ ಎಂದು ಕಾದು ನೋಡಬೇಕು. ಬುಧವಾರದ ಗಳಿಕೆ ನೋಡಿದ್ರೆ ಗುರುವಾರ, ಶುಕ್ರವಾರ ಕೂಡ ಲಕ್ಷಗಳಲ್ಲೇ ಸಿನಿಮಾ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.
'ಅವತಾರ್' ಆರ್ಭಟ
ಈ ವಾರ ಹಾಲಿವುಡ್ ಸಿನಿಮಾ 'ಅವತಾರ್; ಫೈರ್ ಅಂಡ್ ಆಷ್' ಭಾರತದಲ್ಲಿ ದೊಡ್ಡದಾಗಿ ಬಿಡುಗಡೆ ಆಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಸಿನಿಮಾ ಆವರಿಸಿಕೊಳ್ಳಲಿದೆ. ಜೇಮ್ಸ್ ಕ್ಯಾಮರೂನ್ ನಿರ್ದೇನದ 'ಅವತಾರ್' ಸರಣಿ ಹೊಸ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
2 ಸಾಂಗ್ ರಿಲೀಸ್
ಯೂಟ್ಯೂಬ್‌ನಲ್ಲಿ 'ಡೆವಿಲ್' ಚಿತ್ರದ 2 ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡ್ತಿದೆ. 'ಏನೊ ಒಂಥರ ಚೆಂದ' ಸಾಂಗ್ ಸಿನಿಮಾ ಬಿಡುಗಡೆಗೂ ಮುನ್ನ ರಿಲೀಸ್ ಆಗಿರಲಿಲ್ಲ. ಆದರೆ ತೆರೆಮೇಲೆ ಹಾಡು ನೋಡಿ ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದರು. ಇದೀಗ ಯೂಟ್ಯೂಬ್‌ನಲ್ಲಿ ವೀಡಿಯೋ ಸಾಂಗ್ ಬಂದು ಸಖತ್ ಸದ್ದು ಮಾಡ್ತಿದೆ. ದರ್ಶನ್, ರಚನಾ ಕೆಮೆಸ್ಟ್ರಿ ಮೋಡಿ ಮಾಡಿದೆ. 'ಇದ್ರೆ ನೆಮ್ದಿಯಾಗಿರ್ಬೇಕ್' ವೀಡಿಯೋ ಸಾಂಗ್ ಕೂಡ ಅಪ್‌ಲೋಡ್ ಆಗಿದೆ.
ವಿಶೇಷ ಸೂಚನೆ: ಈ ಆರ್ಟಿಕಲ್‌ಗೆ ಸಂಬಂಧಿಸಿದ ಮಾಹಿತಿಯನ್ನು https://www.sacnilk.com/, ನಿರ್ಮಾಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಮಾಧ್ಯಮದ ವಿವರಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಬಹಿರಂಗಪಡಿಸಿದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











