The Devil Box Office Day 1 ; ಕರುನಾಡಿನೆಲ್ಲೆಡೆ ದರ್ಶನ್ ಅಬ್ಬರ, ಸವಾಲು ಗೆದ್ದ ಡೆವಿಲ್ ; ಮೊದಲ ದಿನ ದಾಖಲೆ ಗಳಿಕೆ

ದರ್ಶನ್ ಮತ್ತೊಮ್ಮೆ ಜೈಲಿನ ದರ್ಶನ ಮಾಡಿದ್ದಾರೆ. ಆದರೆ.. ಈ ಬಾರಿ ಅರಮನೆಯಲ್ಲ ಬದಲಿಗೆ ಅಕ್ಷರಶಃ ದರ್ಶನ್ ಪಾಲಿಗೆ ಜೈಲು ಸೆರೆಮನೆಯಾಗಿದೆ. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಎನ್ನುತ್ತಿದ್ದ ದರ್ಶನ್ ಗೆ ಜೈಲಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಹೀಗಿರುವಾಗ ದರ್ಶನ್ ಅಭಿನಯದ ''ಡೆವಿಲ್'' ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾದಾಗ ಹಲವರಲ್ಲಿ ಹಲವು ಪ್ರಶ್ನೆಗಳಿದ್ದವು. ಜೈಲು ಪಾಲಾದ ನಟನ ಚಿತ್ರವನ್ನು ನೋಡಲು ಜನ ಬರುತ್ತಾರಾ..?

ಎಂಬ ಮಾತುಗಳು ಕೇಳಿ ಬಂದಿದ್ದವು. ಪ್ರಚಾರದ ಕೊರತೆಯಿಂದ ಬಾಕ್ಸಾಫೀಸ್‌ನಲ್ಲಿ ''ಡೆವಿಲ್''ನ ಮಕಾಡೆ ಮಲಗುತ್ತೆ ಎಂದು ಹಲವರು ಅಂದುಕೊಂಡಿದ್ದರು. ಈ ಸಮಯದಲ್ಲಿ ಇದೆಲ್ಲಾ ಬೇಕಾ..? ಎಂಬ ಪ್ರಶ್ನೆಯನ್ನು ಕೂಡ ಹಲವರು ಕೇಳಿದ್ದರು. ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ''ಡೆವಿಲ್'' ಅಕ್ಷರಶಃ ಧಗಧಗಿಸುತ್ತಿದೆ.

DEVIL S FURY Darshan s Film Shatters Day 1 Record Roars to a 10Cr Opening

ಹೌದು, ಎಲ್ಲರಿಗೆ ಗೊತ್ತಿರುವಂತೆ ನಿನ್ನೆ ( ಡಿಸೆಂಬರ್ 11 ) ಕರುನಾಡಿನೆಲ್ಲೆಡೆ ''ಡೆವಿಲ್'' ಜಾತ್ರೆ ನಡೆದಿದೆ. ಜೈಲಿನಲ್ಲಿರುವ ತಮ್ಮ ಆರಾಧ್ಯ ದೈವನನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಆಸೆಯಲ್ಲಿ ಕಾದು ಕುಂತಿದ್ದ ಅಭಿಮಾನಿಗಳು ಅದ್ಧೂರಿಯಾಗಿ ನಿನ್ನೆ ''ಡೆವಿಲ್‌''ನ ಬರಮಾಡಿಕೊಂಡಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ. ಅಭಿಮಾನಿಗಳ ಅಭಿಮಾನದ ಈ ಮೆರವಣಿಗೆಯಿಂದ ಮೊದಲ ದಿನ ( ಗುರುವಾರ-ಡಿಸೆಂಬರ್ 11) ದಾಖಲೆಯ ಗಳಿಕೆಯನ್ನು ''ಡೆವಿಲ್'' ಮಾಡಿದೆ. ಮೊದಲ ದಿನ ''ಡೆವಿಲ್'' ₹ 10 ಕೋಟಿಯನ್ನು ದೋಚಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಹಲವು ಚಿತ್ರಗಳು ಬಂದಿವೆ. ಆದರೆ.. ''ಕಾಂತಾರ'' ಹೊರತು ಪಡಿಸಿದರೆ ಬೇರೆ ಯಾವ ಕನ್ನಡ ಚಿತ್ರ ಕೂಡ ಮೊದಲ ದಿನ ಅಬ್ಬರಿಸಿರಲಿಲ್ಲ. ''ಸ್ಯಾಕ್ನಿಲ್'' ವರದಿಯ ಪ್ರಕಾರ ''ಕಾಂತಾರ'' ಮೊದಲ ದಿನ ಕೇವಲ ಕನ್ನಡದಲ್ಲಿಯೇ ಮೊದಲ ದಿನ ₹19.6 ಕೋಟಿ ದೋಚಿತ್ತು. ಈ ಗಳಿಕೆಯನ್ನು ''ಡೆವಿಲ್'' ಹಿಂದಿಕ್ಕದಿದ್ದರೂ ಕೂಡ ಮೊದಲ ದಿನ ₹10 ಕೋಟಿ ಗಳಿಸುವ ಮೂಲಕ ಮೊದಲ ದಿನ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಯಾವ ರಜೆಯೂ ಇರದ ದಿನದಂದು ಚಿತ್ರ ಇಷ್ಟೊಂದು ಹಣ ಗಳಿಸಿದೆ ಎಂದರೆ ಅದು ಸಾಮಾನ್ಯ ಮಾತಲ್ಲ.

devils-fury-darshans-film-shatters-day-1-record-roars-to-a-10cr-opening

ತುಮಕೂರು, ಮೈಸೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ನಿನ್ನೆ (ಡಿಸೆಂಬರ್ 11 ) ನಡೆದ ಡೆವಿಲ್ ಜಾತ್ರೆಯಲ್ಲಿ ಹೆಚ್ಚಿನ ಜನ ಭಾಗವಹಿಸಿದ್ದಾರೆ. ತುಮಕೂರಿನಲ್ಲಿ ಚಿತ್ರಮಂದಿರದ ಆವರಣ 97.75% ಭರ್ತಿಯಾಗಿದ್ದರೆ, ಮೈಸೂರಿನಲ್ಲಿ 88.75%, ಶಿವಮೊಗ್ಗದಲ್ಲಿ 81.75% ಆಕ್ಯುಪೆನ್ಸಿ ಕಂಡು ಬಂದಿದೆ. ಹುಬ್ಬಳ್ಳಿಯಲ್ಲಿ 66.75% ಜನ ''ಡೆವಿಲ್'' ಕಣ್ತುಂಬಿಕೊಂಡಿದ್ದಾರೆ. ರಾಜ್ಯದೆಲ್ಲೆಡೆ ಬೆಳಗ್ಗೆಯ ಪ್ರದರ್ಶನಕ್ಕಿಂತ ರಾತ್ರಿ ಪ್ರದರ್ಶನದ ಸಮಯದಲ್ಲಿ ಹೆಚ್ಚಿನ ಜನ ಕಂಡು ಬಂದಿದ್ದು ವಿಶೇಷ.

ಸದ್ಯ ಮೊದಲ ದಿನ ''ಡೆವಿಲ್'' ₹ 10 ಕೋಟಿಯನ್ನು ಗಳಿಸಿದೆ. ಇಂದು ಕೂಡ ಚಿತ್ರದ ಗಳಿಕೆ ಎರಡಂಕಿ ದಾಟುವ ಸಾಧ್ಯತೆ ಇದೆ. ಇನ್ನು ಶನಿವಾರ ಮತ್ತು ಭಾನುವಾರ ಚಿತ್ರದ ಗಳಿಕೆ ವಾರಾಂತ್ಯವಾದ ಹಿನ್ನೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸೋಮವಾರದ ಹೊತ್ತಿಗೆ ''ಡೆವಿಲ್'' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Read how Darshan's 'The Devil' overcame initial challenges to collect a huge ₹10 Cr at the box office on Day 1. The Kannada superstar delivers a powerful opening!
Read more about: darshan devil filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X