Dhamaal 4 Box Office Day 5 ; ಐದನೇ ದಿನ ಅಜಯ್ ದೇವಗನ್ ಅಂಡ್ ಗ್ಯಾಂಗ್ ಮ್ಯಾಜಿಕ್, 100 ಕೋಟಿಯತ್ತ 'ಧಮಾಲ್ 4'

ಸಾಮಾನ್ಯವಾಗಿ ಚಿತ್ರವೊಂದರ ಹಣೆಬರಹ ಮೊದಲ ದಿನದ ಮೊದಲ ಪ್ರದರ್ಶನದ ನಂತರವೇ ಗೊತ್ತಾಗುತ್ತೆ. ಪ್ರೇಕ್ಷಕರು ಮತ್ತು ವಿಮರ್ಶಕರು ಕೇವಲ ಮೂರು ಗಂಟೆಯಲ್ಲಿ ಚಿತ್ರದ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ. ಹಲವಾರು ಸಿನಿಮಾಗಳು ಕೇವಲ ಒಂದೇ ದಿನ ಪ್ರದರ್ಶನ ಕಂಡು,ಎರಡನೇ ದಿನಕ್ಕೆ ಎತ್ತಂಗಡಿ ಆದ ಉದಾಹರಣೆಗಳಿವೆ.

ಆದರೆ.. ಸೂಪರ್ ಸ್ಟಾರ್ ಗಳ ಚಿತ್ರಕ್ಕೆ ಈ ಮಾತು ಅನ್ವಯವಾಗಲ್ಲ. ಯಾಕೆಂದರೆ ಚಿತ್ರ ಎಷ್ಟೇ ಕಳಪೆ ಇರಲಿ ಮೊದಲ ಮೂರು ದಿನ ಸ್ಟಾರ್‌ಗಳ ಅಭಿಮಾನಿಗಳು ಚಿತ್ರಮಂದಿರಕ್ಕೆ ದಾಂಗುಡಿ ಇಡುತ್ತಾರೆ.ಚಿತ್ರದಿಂದ ತಮ್ಮ ಅಭಿಮಾನಕ್ಕೆ ಧಕ್ಕೆಯಾದರೂ ಕೂಡ ಕ್ಯಾಮರಾ ಮತ್ತು ಎಲ್ಲರೆದುರು ಚಿತ್ರವನ್ನು ಬಾಯ್ತುಂಬ ಹೊಗಳುತ್ತಾರೆ. ಇವರ ಮಾತು ನಂಬಿಕೊಂಡು ಇನ್ನೊಂದಿಷ್ಟು ಜನ ಹೋಗುತ್ತಾರೆ.

dhamaal-4-box-office-riot-ajay-devgn-starrer-defies-weekday-drop-rockets-to-rs-9-50-cr-on-tuesday

ಹೀಗಾಗಿಯೇ ಚಿತ್ರದ ನಿಜವಾದ ಗೆಲುವು ಅಥವಾ ಸೋಲು ನಿರ್ಧಾರ ಆಗುವುದು ಮೊದಲ ಮೂರು ದಿನಗಳ ನಂತರವಷ್ಟೇ ಎಂದು ಬಾಕ್ಸಾಫೀಸ್‌ನ ಲೆಕ್ಕಾಚಾರವನ್ನು ಹಾಕುವ ಪಂಡಿತರು ಹೇಳುತ್ತಲೇ ಇರುತ್ತಾರೆ. ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಚಿತ್ರ ತೇರ್ಗಡೆಯಾದರೆ ಆ ಚಿತ್ರ ಆ ನಂತರ ಗೆದ್ದಂತೆಯೇ, ಇಲ್ಲವಾದಲ್ಲಿ ಸೋಲಿನತ್ತ ಚಿತ್ರ ಮುಖ ಮಾಡಿದೆ ಎಂದರ್ಥ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸದ್ಯ ''ಧಮಾಲ್ 4'' ಚಿತ್ರದ ಗಳಿಕೆ ನೋಡುತ್ತಿದ್ದರೆ ಈ ಚಿತ್ರ ಗೆಲುವಿನತ್ತ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ.

ಹೌದು, ''ಧಮಾಲ್ 4''.. ಕಳೆದ ವಾರ (ಜುಲೈ 10) ತೆರೆಗೆ ಬಂದಿದ್ದ ಮಲ್ಟಿ ಸ್ಟಾರರ್ ಸಿನಿಮಾ. ಅಜಯ್ ದೇವಗನ್ ಅಂತಹ ಸ್ಟಾರ್ ಇದ್ದರೂ ಮೊದಲ ದಿನ ಕೇವಲ 14 ಕೋಟಿಯನ್ನು ಗಳಿಸಿದ್ದ ಈ ಚಿತ್ರ ಶನಿವಾರ ಮತ್ತು ಭಾನುವಾರ ಮಾತ್ರ ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡಿತ್ತು. ಕೇವಲ ಮೂರೇ ದಿನದಲ್ಲಿ ₹65 ಕೋಟಿಯನ್ನು ದೋಚಿತ್ತು. ಈ ಮೂಲಕ ಹೊಸದೊಂದು ಭರವಸೆ ಮೂಡಿಸಿತ್ತು.

ಆದರೆ ಸೋಮವಾರ (ಜುಲೈ 13) ಈ ಚಿತ್ರದ ಗಳಿಕೆಯಲ್ಲಿ ಶೇಕಡಾ 69.3% ಕುಸಿತ ಕಂಡು ಬಂದಿತ್ತು. ಚಿತ್ರ ₹8.75 ಕೋಟಿಯನ್ನು ಮಾತ್ರ ಗಳಿಸಿತ್ತು. ಇನ್ನು ಸಾಮಾನ್ಯವಾಗಿ ಸೋಮವಾರದ ಗಳಿಕೆಯ ಆಧಾರದ ಮೇಲೆ ವಾರದ ಉಳಿದ ದಿನಗಳ ಗಳಿಕೆ ಕುಸಿಯುತ್ತಾ ಸಾಗುತ್ತದೆ. ಹೀಗಾಗಿ ಹಲವರು ''ಧಮಾಲ್'' ಢಮಾರ್ ಎಂದು ಅಂದುಕೊಂಡಿದ್ದರು.

ಆದರೆ. ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಏನು ಬೇಕಾದರೂ ಮಿರಾಕಲ್ ಆಗಬಹುದು. ಇದಕ್ಕೆ ಕೈಗನ್ನಡಿ ಎಂಬಂತೆ ''ಧಮಾಲ್ 4'' ಚಿತ್ರದ ಗಳಿಕೆಯಲ್ಲಿ ನಿನ್ನೆ (ಜುಲೈ 14) 8.6% ಏರಿಕೆ ಕಂಡು ಬಂದಿದೆ. ಸೋಮವಾರಕ್ಕಿಂತ ಮಂಗಳವಾರದ ಗಳಿಕೆ ಹೆಚ್ಚಾಗಿದ್ದು ಚಿತ್ರ ₹9.50 ಕೋಟಿ ಗಳಿಸಿದೆ.

dhamaal-4-box-office-riot-ajay-devgn-starrer-defies-weekday-drop-rockets-to-rs-9-50-cr-on-tuesday

ಸ್ಯಾಕ್ನಿಲ್ ಪ್ರಕಾರ ಧಮಾಲ್ 4 ಚಿತ್ರದ 5ದಿನದ ಗಳಿಕೆ ಈ ಕೆಳಗಿನಂತಿದೆ.

ಮೊದಲ ದಿನ (ಶುಕ್ರವಾರ) ₹14.00 ಕೋಟಿ

ಎರಡನೇ ದಿನ (ಶನಿವಾರ) ₹22.50 ಕೋಟಿ

ಮೂರನೇ ದಿನ (ಭಾನುವಾರ) ₹28.50 ಕೋಟಿ
ನಾಲ್ಕನೇ ದಿನ ( ಸೋಮವಾರ)₹8.75 ಕೋಟಿ
ಐದನೇ ದಿನ (ಮಂಗಳವಾರ) ₹9.50 ಕೋಟಿ

100 ಕೋಟಿ ಕ್ಲಬ್‌ನತ್ತ ''ಧಮಾಲ್ 4''

ಸದ್ಯ ''ಧಮಾಲ್ 4'' 100 ಕೋಟಿಯತ್ತ ಮುನ್ನುಗ್ಗುತ್ತಿದೆ. ಈ ವೀಕ್‌ಡೇಸ್‌ನಲ್ಲಿ ಇದೇ ರೀತಿಯ ಹಿಡಿತ ಮುಂದುವರೆಸಿದರೆ ವಾರಾಂತ್ಯದೊಳಗೆ ''ಧಮಾಲ್ 4'' ಸೆಂಚುರಿ ಬಾರಿಸಲಿದೆ. ಇನ್ನು ವಾರಾಂತ್ಯದ ಗಳಿಕೆ ಚಿತ್ರಕ್ಕೆ ಇನ್ನೂ ಹೆಚ್ಚಿನ ಬೂಸ್ಟ್ ನೀಡುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಕ್ಸಾಫೀಸ್‌ನ ಮೈದಾನ ಸದ್ಯಕ್ಕೆ ಖಾಲಿ ಇದೆ. ಮುಂಬರುವ ಮೂರು ವಾರ ಯಾವ ದೊಡ್ಡ ಚಿತ್ರ ತೆರೆಗೆ ಬರುತ್ತಿಲ್ಲ. ಈ ಹಿನ್ನೆಲೆ ''ಧಮಾಲ್'' ಧಮಾಕಗೆ ಅಂತಿಮವಾಗಿ ಬಾಕ್ಸಾಫೀಸ್‌ನಲ್ಲಿ ಎಷ್ಟು ಹಣ ಲೂಟಿಯಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Huge Tuesday jump for Dhamaal 4! Ajay Devgn's comic caper defies expectations with a Rs 9.50 crore collection on Day 5. See total box office collections inside!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X