Kara Box Office Day 6 : ಮತ್ತೊಮ್ಮೆ ಧನುಷ್‌ಗೆ ಭಾರೀ ಮುಖಭಂಗ ; ಆರೇ ದಿನಕ್ಕೆ ಮಕಾಡೆ ಮಲಗಿದ ‘ಕಾರಾ’- ಗಳಿಸಿದ್ದು ಇಷ್ಟೇ

ಸಾಮಾನ್ಯವಾಗಿ ಚಿತ್ರವೊಂದರ ಹಣೆಬರಹ ಮೊದಲ ದಿನದ ಮೊದಲ ಪ್ರದರ್ಶನದ ನಂತರವೇ ಗೊತ್ತಾಗುತ್ತೆ. ಪ್ರೇಕ್ಷಕರು ಮತ್ತು ವಿಮರ್ಷಕರು ಕೇವಲ ಮೂರು ಗಂಟೆಯಲ್ಲಿ ಚಿತ್ರದ ಭವಿಷ್ಯವೊಂದನ್ನು ನಿರ್ಧಾರ ಮಾಡುತ್ತಾರೆ. ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಆ ಚಿತ್ರ ಎಷ್ಟೇ ಕಳಪೆ ಇದ್ದರೂ ಕೂಡ ಮೊದಲ ಮೂರು ದಿನ ಆ ಸ್ಟಾರ್‌ನ ಅಭಿಮಾನಿಗಳು ಚಿತ್ರಮಂದಿರಕ್ಕೆ ದಾಂಗುಡಿ ಇಡುತ್ತಾರೆ.

ಚಿತ್ರದಿಂದ ತಮ್ಮ ಅಭಿಮಾನಕ್ಕೆ ಧಕ್ಕೆಯಾದರೂ ಕೂಡ ಎಲ್ಲರೆದುರು ಪುಂಖಾನುಪುಂಖವಾಗಿ ಪುಂಗುತ್ತಾರೆ. ಹೀಗಾಗಿಯೇ ಚಿತ್ರದ ನಿಜವಾದ ಗೆಲುವು ಅಥವಾ ಸೋಲು ನಿರ್ಧಾರ ಆಗುವುದು ಮೊದಲ ಮೂರು ದಿನಗಳ ನಂತರವಷ್ಟೇ ಎಂದು ಬಾಕ್ಸಾಫೀಸ್‌ನ ಲೆಕ್ಕಾಚಾರವನ್ನು ಹಾಕುವ ಪಂಡಿತರು ಹೇಳುತ್ತಲೇ ಇರುತ್ತಾರೆ. ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಚಿತ್ರ ತೇರ್ಗಡೆಯಾದರೆ ಆ ಚಿತ್ರ ಆ ನಂತರ ಗೆದ್ದಂತೆ, ಇಲ್ಲದಿದ್ದರೆ ಖೇಲ್ ಖತಂ ದುಕಾನ್ ಬಂದ್. ಇದಕ್ಕೆ ಜ್ವಲಂತ ಉದಾಹರಣೆಯಂತೆ ಕಣ್ಣೇದುರು ಇರುವ ಚಿತ್ರವೇ ಧನುಷ್ ಅಭಿನಯದ ''ಕಾರಾ'' .

Dhanush s Kara Crumbles Massive Monday Crash Leaves 100 Cr Epic Heading for Disaster

ಹೌದು, ''ಕಾರಾ''.. ಈ ವರ್ಷ ತೆರೆಗೆ ಬಂದ ಧನುಷ್ ಅಭಿನಯದ ಮೊದಲ ಸಿನಿಮಾ. ಬಿಡುಗಡೆಗೆ ಮುನ್ನ ಅಪಾರವಾದ ನಿರೀಕ್ಷೆಯನ್ನು ಮೂಡಿಸಿದ್ದ ಚಿತ್ರ ಇದು. ಆದರೆ.. ದುರಾದೃಷ್ಟವಶಾತ್ ಬಾಕ್ಸಾಫೀಸ್‌ನ ಅಗ್ನಿ ಪರೀಕ್ಷೆಯಲ್ಲಿ ಈ ಚಿತ್ರ ಮಕಾಡೆ ಮಲಗುವ ಎಲ್ಲ ಲಕ್ಷಣ ಕಂಡು ಬರುತ್ತಿವೆ. ಚಿತ್ರದ ಅಂಕಿ-ಅಂಶ ಇದಕ್ಕೆ ಪೂರಕವಾಗಿಯೇ ಇವೆ.

ಮೊನ್ನೆ (ಮೇ 5- ಸೋಮವಾರ) ಚಿತ್ರದ ಗಳಿಕೆಯಲ್ಲಿ ಶೇಕಡಾ 65% ಕುಸಿತ ಕಂಡು ಬಂದಿದೆ. ಬಾಕ್ಸಾಫೀಸ್‌ನ ಲೆಕ್ಕ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಸೋಮವಾರ ಈ ಚಿತ್ರ ಕೇವಲ ₹1.80 ಕೋಟಿಯನ್ನು ಮಾತ್ರ ದೋಚಿದೆ. ನಿಜಾ.. ನಿನ್ನೆ (ಮೇ 6-ಮಂಗಳವಾರ) ಚಿತ್ರದ ಗಳಿಕೆಯಲ್ಲಿ ಮತ್ತೆ ಚೂರು ಏರಿಕೆ ಕಂಡು ಬಂದಿದೆ. ಚುನಾವಣೆಯ ಕಾವು ಕಡಿಮೆಯಾದ ಹಿನ್ನೆಲೆ ₹2 ಕೋಟಿಯನ್ನು ಗಳಿಸಿದೆ.

''ಸ್ಯಾಕ್ನಿಲ್'' ಪ್ರಕಾರ ''ಕಾರಾ'' ಚಿತ್ರದ 6 ದಿನದ ಗಳಿಕೆ ಈ ಕೆಳಗಿನಂತೆ ಇದೆ

ದಿನ ಗಳಿಕೆ
ಮೊದಲ ದಿನ (ಗುರುವಾರ) ₹6.20 ಕೋಟಿ
ಎರಡನೇ ದಿನ (ಶುಕ್ರವಾರ) ₹6.95 ಕೋಟಿ
ಮೂರನೇ ದಿನ (ಶನಿವಾರ) ₹5.20 ಕೋಟಿ
ನಾಲ್ಕನೇ ದಿನ (ಭಾನುವಾರ) ₹5.00 ಕೋಟಿ
ಐದನೇ ದಿನ (ಸೋಮವಾರ) ₹1.80 ಕೋಟಿ
ಆರನೇ ದಿನ (ಮಂಗಳವಾರ) ₹2.00 ಕೋಟಿ
ಒಟ್ಟು ಗಳಿಕೆ (Total) ₹27.15 ಕೋಟಿ

ವರ್ಲ್ಡ್ ವೈಡ್ ಗಳಿಕೆ ಎಷ್ಟು ?

ಹೀಗೆ ಆರು ದಿನದಲ್ಲಿ ₹27.15 ಕೋಟಿಯನ್ನು ಕಾರಾ ಗಳಿಸಿದೆ. ಇನ್ನೂ ವಿಶ್ವದಾಂದ್ಯಂತದ ಲೆಕ್ಕ ತೆಗೆದುಕೊಂಡರೆ ಇಲ್ಲಿಯವರೆಗಿನ ಗಳಿಕೆ ಕೇವಲ ₹40 ಕೋಟಿ ಮಾತ್ರ.

Dhanush s Kara Crumbles Massive Monday Crash Leaves 100 Cr Epic Heading for Disaster

ಆದರೆ ಹೀಗೆ ತೆವಳುತ್ತಾ ಸಾಗಿದರೆ ಸೋಲಿನ ಸುಳಿಯಿಂದ ''ಕಾರಾ'' ಪಾರಾಗಲು ಸಾಧ್ಯವೇ ಇಲ್ಲ. ಯಾಕೆಂದರೆ ಚಿತ್ರಕ್ಕೆ 100 ಕೋಟಿ ಬಂಡವಾಳ ಹೂಡಲಾಗಿದೆ. ಎನ್ನುವ ಸುದ್ದಿ ಸದ್ಯ ಚೆನ್ನೈನಲ್ಲಿ ಕೇಳಿ ಬರುತ್ತಿದೆ. ಆ ಪ್ರಕಾರ ಹಾಕಿದ ಬಂಡವಾಳದಲ್ಲಿ ಕೇವಲ 30%ಗಿಂತ ಕಡಿಮೆ ಹಣ ಮಾತ್ರ ಮರಳಿ ಬಂದಿದೆ.

ಹೆಚ್ಚೆಂದರೆ ಎಷ್ಟು ಗಳಿಸಬಹುದು ''ಕಾರಾ'' ?

ಇನ್ನು ಮುಂಬರುವ ದಿನಗಳಲ್ಲಿ ಬೇರೆ ಬೇರೆ ಭಾಷೆಯಲ್ಲಿ ಚಿತ್ರಗಳು ತೆರೆಗೆ ಬರುತ್ತಿವೆ. ಸಹಜವಾಗಿ ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ''ಕಾರಾ'' ಚಿತ್ರದ ಸ್ಕ್ರೀನ್ ಗಳ ಸಂಖ್ಯೆ ಈ ಶುಕ್ರವಾರದಿಂದ ಕಡಿಮೆಯಾಗಲಿವೆ. ಈ ಹಿನ್ನೆಲೆ ಲಾಭ ಬಿಡಿ ಹಾಕಿದ ಬಂಡವಾಳ ಕೂಡ ಮರಳಿ ಬರುವುದಿಲ್ಲ ಎನ್ನುವ ಮಾತು ತಮಿಳು ಚಿತ್ರರಂಗದಲ್ಲಿ ಸದ್ಯ ಕೇಳಿ ಬರುತ್ತಿದೆ. ₹60 ಕೋಟಿ ಗಳಿಸಿದರೆ ಅದೇ ಹೆಚ್ಚು ಎಂಬ ಅಭಿಪ್ರಾಯ ಟ್ರೇಡ್ ವಿಶ್ಲೇಷಕರ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೊಂದು ವೇಳೆ ಚಿತ್ರಪಂಡಿತರ ಈ ಲೆಕ್ಕಾಚಾರ ಸರಿಯಾದರೆ ನಿರ್ಮಾಪಕರಿಗೆ ₹40 ಕೋಟಿ ನಷ್ಟವಾದಂತೆ. ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಿಂದ ನಷ್ಟದ ಪ್ರಮಾಣ ಕಡಿಮೆಯಾಗಬಹುದಷ್ಟೇ.

ಸೋಲಿನ ಸುಳಿಯಲ್ಲಿ ಸಿಲುಕಿರುವ ಧನುಷ್

ಅಂದ್ಹಾಗೇ ಹಿಂದಿಯ ''ತೇರೆ ಇಷ್ಕ್ ಮೇ'' ಚಿತ್ರದ ಸಾಧಾರಣ ಯಶಸ್ಸು ಮತ್ತು ''ವಾತಿ'' ಹಾಗೂ ''ರಾಯನ್'' ಹೊರತು ಪಡಿಸಿದರೆ ಧನುಷ್ ಅಭಿನಯದ ''ಅತರಂಗಿ ರೇ'' .. ''ಕ್ಯಾಪ್ಟನ್ ಮಿಲ್ಲರ್''.. ''ಕುಬೇರ''..''ಇಡ್ಲಿ ಕಡೇ''.. ಹೀಗೆ ಧನುಷ್‌ ಕೈಗೆ ಒಂದಾದ ಮೇಲೊಂದರಂತೆ ದಕ್ಕಿದ್ದು ಕೇವಲ ನಿರಾಸೆ ಮಾತ್ರ. ಈ ಹಿನ್ನೆಲೆ '' ಕಾರಾ'' ಚಿತ್ರದ ಮೇಲೆ ತಮಿಳು ಚಿತ್ರರಂಗಕ್ಕೆ ಭರವಸೆ ಇತ್ತು. ಧನುಷ್‌ಗೆ ಕೂಡ ಚಿತ್ರ ಗೆಲ್ಲುತ್ತೆ ಎನ್ನುವ ವಿಶ್ವಾಸ ಇತ್ತು. ಆದರೆ ಈಗ ಈ ಚಿತ್ರವೂ ಸೋಲಿನತ್ತ ಮುಖ ಮಾಡಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
The 'Kara' Box Office Disaster deepens! After a massive Monday crash, Dhanush’s latest film is officially in jeopardy. Read the latest numbers on its ₹25 Cr domestic run and the predicted ₹60 Cr lifetime cap.
Read more about: dhanush kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X