Kara Box Office Day 11 : 'ಇಡ್ಲಿ'ಗೆ ಸಿಕ್ಕ ಬೆಲೆ 'ಕಾರಾ'ಗೆ ಸಿಗಲಿಲ್ಲ - ಸೋಲಿನಿಂದ ಪಾರಾಗಲು ಧನುಷ್‌ಗೆ ಬೇಕು ಇನ್ನೂ 65 ಕೋಟಿ

ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಸದ್ಯದ ಅತ್ಯುತ್ತಮ ಉದಾಹರಣೆಯೇ ಕಾಲಿವುಡ್‌ನ ಸೂಪರ್ ಸ್ಟಾರ್ ಧನುಷ್.

ಹೌದು, ಹೆಚ್ಚೇನು ಇಲ್ಲ. ನಾಲ್ಕು ವರ್ಷದ ಹಿಂದಿನವರೆಗೆ ಒಂದಾದ ಮೇಲೊಂದು ಗೆಲುವನ್ನು ಕಂಡವರು ಧನುಷ್.ಆದರೆ.. 2021ರ ನಂತರ ಧನುಷ್‌ಗೆ ಅದೃಷ್ಟ ಕೈ ನೀಡಿದೆ. ಮಾಡಿದ ಯಾವ ಚಿತ್ರ ಕೂಡ ಮೊದಲಿನಂತೆ ಧಾಂ ಧೂಂ ಎಂದು ಸದ್ದು ಮಾಡುತ್ತಿಲ್ಲ. ಆರಂಭದಲ್ಲಿ ಕೆಲ ಚಿತ್ರಗಳು ನಿರೀಕ್ಷೆ ಮೂಡಿಸಿವೆಯಾದರೂ ಬಾಕ್ಸಾಫೀಸ್‌ನಲ್ಲಿ ಚಿತ್ರಗಳು ಗೆಲ್ಲಲಿಲ್ಲ.

Dhanush s 100 Crore Kara Stalls at 35 Crore Underperforms Significantly Compared to Idli Kadai

''ವಾತಿ'' ಮತ್ತು ''ರಾಯನ್'' ಮತ್ತು ''ತೇರೆ ಇಷ್ಕ್ ಮೇ'' ಚಿತ್ರದ ಸಾಧಾರಣ ಗೆಲುವು ಹೊರತು ಪಡಿಸಿದರೆ ''ಅತರಂಗಿ ರೇ'' .. ''ಕ್ಯಾಪ್ಟನ್ ಮಿಲ್ಲರ್''.. ''ಕುಬೇರ''.. ''ಇಡ್ಲಿ ಕಡೇ''.. ಹೀಗೆ ಧನುಷ್‌ ಕೈಗೆ ಒಂದಾದ ಮೇಲೊಂದರಂತೆ ದಕ್ಕಿದ್ದು ಕೇವಲ ನಿರಾಸೆ ಮಾತ್ರ. ಈ ಹಿನ್ನೆಲೆ '' ಕಾರಾ'' ಚಿತ್ರದ ಮೇಲೆ ತಮಿಳು ಚಿತ್ರರಂಗಕ್ಕೆ ಭರವಸೆ ಇತ್ತು. ಧನುಷ್‌ಗೆ ಕೂಡ ಚಿತ್ರ ಗೆಲ್ಲುತ್ತೆ ಎನ್ನುವ ವಿಶ್ವಾಸ ಇತ್ತು. ಆದರೆ ಈಗ ಈ ಚಿತ್ರವೂ ಸೋಲಿನತ್ತ ಮುಖ ಮಾಡಿದೆ.

ಹೌದು, ಪಕ್ಕದ ಚೆನ್ನೈನಲ್ಲಿ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ''ಕಾರಾ'' ಚಿತ್ರಕ್ಕೆ 100 ಕೋಟಿ ಸುರಿಯಲಾಗಿದೆ. ಆದರೆ, ತೆರೆಗೆ ಬಂದು ಹನ್ನೊಂದು ದಿನಗಳಾಗಿವೆ. ಈ ಹನ್ನೆರಡು ದಿನದಲ್ಲಿ ''ಕಾರಾ'' ದೋಚಿದ್ದು ಕೇವಲ ₹33.73 ಕೋಟಿ ಮಾತ್ರ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಸ್ಯಾಕ್ನಿಲ್ ಪ್ರಕಾರ ''ಕಾರಾ'' ಚಿತ್ರದ 11 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಕಲೆಕ್ಷನ್ (ಭಾರತದ ನಿವ್ವಳ ಗಳಿಕೆ)
ಮೊದಲ ದಿನ (1ನೇ ಗುರುವಾರ) ₹6.20 ಕೋಟಿ
ಎರಡನೇ ದಿನ (1ನೇ ಶುಕ್ರವಾರ) ₹6.95 ಕೋಟಿ
ಮೂರನೇ ದಿನ (1ನೇ ಶನಿವಾರ) ₹5.20 ಕೋಟಿ
ನಾಲ್ಕನೇ ದಿನ (1ನೇ ಭಾನುವಾರ) ₹5.00 ಕೋಟಿ
ಐದನೇ ದಿನ (1ನೇ ಸೋಮವಾರ) ₹1.80 ಕೋಟಿ
ಆರನೇ ದಿನ (1ನೇ ಮಂಗಳವಾರ) ₹2.00 ಕೋಟಿ
ಏಳನೇ ದಿನ (1ನೇ ಬುಧವಾರ) ₹1.58 ಕೋಟಿ
ಎಂಟನೇ ದಿನ (2ನೇ ಗುರುವಾರ) ₹1.53 ಕೋಟಿ
ಮೊದಲ ವಾರದ ಒಟ್ಟು ಗಳಿಕೆ ₹30.26 ಕೋಟಿ
ಒಂಬತ್ತನೇ ದಿನ (2ನೇ ಶುಕ್ರವಾರ) ₹0.96 ಕೋಟಿ
ಹತ್ತನೇ ದಿನ (2ನೇ ಶನಿವಾರ) ₹1.18 ಕೋಟಿ
ಹನ್ನೊಂದನೇ ದಿನ (2ನೇ ಭಾನುವಾರ) ₹1.33 ಕೋಟಿ
ಒಟ್ಟು ಭಾರತದ ನಿವ್ವಳ ಗಳಿಕೆ ₹33.73 ಕೋಟಿ

ಅಂದ್ಹಾಗೇ ಕಳೆದ ವರ್ಷ ಧನುಷ್ ಅಭಿನಯದ ''ಇಡ್ಲಿ ಕಡೇ'' ಚಿತ್ರ ತೆರೆಗೆ ಬಂದಿತ್ತು. ''ಕಾಂತಾರ'' ಎದುರು ಬಿಡುಗಡೆಯಾಗಿತ್ತು. ಈ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತಾದರೂ ''ಕಾಂತಾರ'' ಅಲೆಯ ಎದುರು ''ಇಡ್ಲಿ ಕಡೇ'' ₹50 ಕೋಟಿಯನ್ನು ಗಳಿಸಿತ್ತು.

dhanush-s-100-crore-kara-stalls-at-35-crore-underperforms-significantly-compared-to-idli-kadai

ಆದರೆ, ''ಕಾರಾ'' ಕಥೆ ''ಇಡ್ಲಿ ಕಡೇ'' ಚಿತ್ರಕ್ಕಿಂತ ಶೋಚನಿಯದಂತೆ ಕಂಡು ಬರುತ್ತಿದೆ. ''ಇಡ್ಲಿ''ಗೆ ಸಿಕ್ಕ ಬೆಲೆ ''ಕಾರಾ''ಗೆ ಸಿಕ್ತಿಲ್ಲ. ಇನ್ನೂ ''ಕಾರಾ''ಗೆ ಹೋಲಿಸಿದರೆ ''ಇಡ್ಲಿ ಕಡೇ'' ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್ ಸಿಕ್ಕಿರಲಿಲ್ಲ. ''ಕಾರಾ''ಗೆ ಸಿಕ್ಕಿದೆ. ಆದರೂ ಕೂಡ ಚಿತ್ರ ತೆವಳುತ್ತಾ ಸಾಗುತ್ತಿದೆ. ಹೀಗಾಗಿ ಭಾರತದಲ್ಲಿ ₹50 ಕೋಟಿಯ ಗಡಿಯನ್ನು ಕೂಡ ಈ ಚಿತ್ರ ತಲುಪುವುದು ಅನುಮಾನ ಎನ್ನುವ ಮಾತು ಟ್ರೇಡ್ ವಿಶ್ಲೇಷಕರ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನೂ ವರ್ಲ್ಡ್ ವೈಡ್ ಗಳಿಕೆಯ ಲೆಕ್ಕ ತೆಗೆದುಕೊಂಡರೆ ''ಇಡ್ಲಿ ಕಡೇ'' ಹನ್ನೊಂದು ದಿನದಲ್ಲಿ
₹66 ಕೋಟಿ ಗಳಿಸಿತ್ತು. ಆದರೆ''ಕಾರಾ'' ಹನ್ನೊಂದು ದಿನದಲ್ಲಿ ಕೇವಲ ₹33 ಕೋಟಿ ಮಾತ್ರ ಗಳಿಸಿದೆ. ವ್ಯತ್ಯಾಸ ಅಜಗಜಾಂತರ ಇದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲ ''ಇಡ್ಲಿ ಕಡೇ'' ಒಟ್ಟಾರೆಯಾಗಿ (ವರ್ಲ್ಡ್ ವೈಡ್) ₹71 ಕೋಟಿ ಗಳಿಸಿತ್ತು. ಆದರೂ ಕೂಡ ಈ ಚಿತ್ರವನ್ನು ಫ್ಲಾಪ್ ಎಂದು ಘೋಷಿಸಲಾಯ್ತು. ಯಾಕೆಂದರೆ ನಿರ್ಮಾಪಕರಿಗೆ ಬಂಡವಾಳದಲ್ಲಿ ಮರಳಿ ಬಂದಿದ್ದು ಕೇವಲ 50% ಹಣ ಮಾತ್ರ. ''ಕಾರಾ'' ಕಥೆ ಕೂಡ ಸದ್ಯ ಇದೇ ತರ ಇದೆ. ಲಾಭದ ಹಾದಿ ಕಠಿಣ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Can 'Kara' recover? Dhanush’s latest earns ₹1.14 Cr on Sunday, but the ₹100 Cr budget looms large as it fails to match 'Idli Kadai' numbers. Read the breakdown.
Read more about: dhanush kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X