Idli Kadai BO Day1; ಧನುಷ್ ಮಾಡಿದ ಇಡ್ಲಿಗೆ ಮೊದಲ ದಿನ ಸಿಕ್ಕ ಕಿಮ್ಮತ್ತೆಷ್ಟು? ಕರ್ನಾಟಕದಲ್ಲಿ ಹೇಗಿದೆ ರೆಸ್ಫಾನ್ಸ್?

ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿ ಕೂಡ ಈ ವರ್ಷ ಗೆದ್ದ ಚಿತ್ರಗಳ ಸಂಖ್ಯೆ ಕಡಿಮೆ ಇದೆ. ''ಟೂರಿಸ್ಟ್ ಫ್ಯಾಮಿಲಿ''.. ''ಡ್ರ್ಯಾಗನ್''.. ಹೀಗೆ ಒಂದು ನಾಲ್ಕೈದು ಚಿತ್ರಗಳು ಮಾತ್ರ ತಮಿಳುನಾಡಿನಲ್ಲಿ ಗೆದ್ದಿವೆ. ಸದ್ದು ಮಾಡಿವೆ. ಇನ್ನು, ಸ್ಟಾರ್‌ಗಳಿಗೆ ಈ ಆರು ತಿಂಗಳಿನಲ್ಲಿ ದಕ್ಕಿದ್ದು ಸೋಲು ಮಾತ್ರ. ಚಿಯಾನ್ ವಿಕ್ರಮ್.. ಸೂರ್ಯ.. ಕಮಲ್ ಹಾಸನ್‌.. ಅವರ..

ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಈ ವರ್ಷ ಮಕಾಡೆ ಮಲಗಿವೆ. ಅಜಿತ್ ಅಭಿನಯದ ''ಗುಡ್ ಬ್ಯಾಡ್ ಅಗ್ಲಿ'' ಮಾತ್ರ ಹಣವನ್ನು ದೋಚುವಲ್ಲಿ ಯಶಸ್ವಿಯಾಗಿದೆ. ಇದೇ ಅಜಿತ್ ಅಭಿನಯದ ''ವಿಡಾಮುಯಾರ್ಚಿ'' ಈ ವರ್ಷದ ಪರಮತೋಪು ಚಿತ್ರಗಳಲ್ಲಿ ಒಂದು. ಇನ್ನೂ ಧನುಷ್ ಅಭಿನಯದ ''ಕುಬೇರ'' ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಗೆಲ್ಲಲಿಲ್ಲ.

Dhanush s 10 CR Feast Idli Kadai Secures Solid Opening But is Karnataka Finding the Flavour

ಈ ಹಿನ್ನೆಲೆ ಈ ವಾರ ಬಿಡುಗಡೆಯಾದ ''ಇಡ್ಲಿ ಕಡೇ'' ಮೇಲೆ ತಮಿಳಿಗರ ಕಣ್ಣಿದೆ. ಈ ಚಿತ್ರವಾದರೂ ಗೆಲ್ಲುತ್ತಾ ಎನ್ನುವ ಪ್ರಶ್ನೆ ಇದೆ. ಈ ಪ್ರಶ್ನೆಗೆ ಮುಂಬರುವ ದಿನಗಳಲ್ಲಿ ಸ್ಪಷ್ಟವಾದ ಉತ್ತರ ಸಿಗಲಿದೆಯಾದರೂ ಸದ್ಯ ''ಇಡ್ಲಿ ಕಡೇ'' ಮೊದಲ ದಿನ ಸಾಧಾರಣ ಗಳಿಕೆಯನ್ನು ಮಾಡಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ''ಇಡ್ಲಿ ಕಡೇ'' ಚಿತ್ರದ ಮೊದಲ ದಿನದ ಗಳಿಕೆಯನ್ನು ಹಂಚಿಕೊಂಡಿದ್ದು ಆ ಪ್ರಕಾರ ಮೊದಲ ದಿನ ₹11 ಕೋಟಿಯನ್ನು ಚಿತ್ರ ಗಳಿಸಿದೆ. ಆ ಪೈಕಿ ತಮಿಳು ಅವತರಣಿಕೆಯ ಗಳಿಕೆ ₹10.35 ಕೋಟಿಯಾದರೆ ತೆಲುಗು ವರ್ಷನ್ ಪಾಲು ₹65 ಲಕ್ಷ ಇದೆ.

Dhanush s 10 CR Feast Idli Kadai Secures Solid Opening But is Karnataka Finding the Flavour

ಕನ್ನಡಿಗರಿಗೆ ಇಷ್ಟವಾಯ್ತಾ ಧನುಷ್ ಮಾಡಿದ ಇಡ್ಲಿ..?

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಅಕ್ಕ-ಪಕ್ಕದ ರಾಜ್ಯದ ಸ್ಟಾರ್‌ಗಳನ್ನು ಆರಾಧಿಸುವ ಚಿತ್ರಪ್ರೇಮಿಗಳ ಸಂಖ್ಯೆ ಕರ್ನಾಟಕದಲ್ಲಿ ತುಸು ಹೆಚ್ಚೇ ಇದೆ. ಆ ಪೈಕಿ ಧನುಷ್ ಅಭಿಮಾನಿಗಳು ಕೂಡ ಇದ್ಧಾರೆ. ಈ ಹಿನ್ನೆಲೆ.. ಕರ್ನಾಟಕದಲ್ಲಿ ''ಇಡ್ಲಿ ಕಡೇ'' ಎಷ್ಟು ಗಳಿಸಬಹುದು ಎನ್ನುವ ಕುತೂಹಲ ಇದ್ದು ಸದ್ಯ ಮೊದಲ ದಿನ ''ಇಡ್ಲಿ ಕಡೇ'' ಕರ್ನಾಟಕದಲ್ಲಿ ₹ 1.25 ಕೋಟಿ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ರಾಯನ್ VS ಕುಬೇರ VS ಇಡ್ಲಿ ಕಡೇ

''ಸ್ಯಾಕ್ನಿಲ್'' ವರದಿಯಂತೆ ಕಳೆದ ವರ್ಷ ತೆರೆಗೆ ಬಂದಿದ್ದ, ಧನುಷ್ ಅಭಿನಯಿಸಿ ನಿರ್ದೇಶಿಸಿದ್ದ ''ರಾಯನ್‌'' ಚಿತ್ರ ಮೊದಲ ದಿನ ₹15.7 ಕೋಟಿಯನ್ನು ಗಳಿಸಿತ್ತು. ತಮಿಳುನಾಡಿನಲ್ಲಿಯೇ ಈ ಚಿತ್ರ ₹ 10.6 ಕೋಟಿಯನ್ನು ಮೊದಲ ದಿನ ಗಳಿಸಿತ್ತು. ಇನ್ನು ಈ ವರ್ಷ ಜೂನ್‌ನಲ್ಲಿ ಬಂದಿದ್ದ ''ಕುಬೇರ'' ಮೊದಲ ದಿನ ₹ 14.75 ಕೋಟಿಯನ್ನು ಗಳಿಸಿತ್ತು. ''ಇಡ್ಲಿ ಕಡೇ'' ಈ ಎರಡು ಚಿತ್ರಗಳನ್ನು ಹಿಂದಿಕ್ಕುವಲ್ಲಿ ಮೊದಲ ದಿನ ವಿಫಲವಾಗಿದೆ. ಈ ಹಿನ್ನೆಲೆ ಧನುಷ್ ಈ ಬಾರಿಯಾದರೂ ಗೆಲ್ತಾರಾ ಎನ್ನುವ ಚಿಂತೆ ಕೂಡ ಹಲವರನ್ನು ಕಾಡುತ್ತಿದೆ. ಇನ್ನೂ ''ರಾಯನ್'' ಮತ್ತು ''ಕುಬೇರ'' ಚಿತ್ರಗಳಿಗೆ ಕೂಡ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ''ಇಡ್ಲಿ ಕಡೇ'' ಚಿತ್ರವನ್ನು ನೋಡಿದವರು ಕೂಡ ಓಕೆ..ಓಕೆ..ಎನ್ನುವ ವಿಮರ್ಷೆ ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸದ್ಯ ಭಾರತದೆಲ್ಲೆಡೆ ಕನ್ನಡದ ''ಕಾಂತಾರ'' ಅಲೆ ಎದ್ದಿದೆ. ಈ ವಾರಾಂತ್ಯದ ಗಳಿಕೆಯ ಮೇಲೆ ''ಇಡ್ಲಿ ಕಡೇ'' ಚಿತ್ರದ ಮುಂದಿನ ಭವಿಷ್ಯ ನಿಂತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Idli Kadai opens strong in Tamil Nadu, posting a respectable Day 1 collection of ₹10 Crore. Read how the Dhanush starrer performed across India.
Read more about: dhanush kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X