ರಣ್ವೀರ್ ಧುರಂಧರ್ ಅಬ್ಬರದ ನಡುವೆ ಧನುಷ್ ಆರ್ಭಟ ; ಕಡಿಮೆಯಾಗದ ತೇರೆ ಇಷ್ಕ್ ಮೇ ಕ್ರೇಜ್ - ಅಜಯ್ ದೇವಗನ್ ದಾಖಲೆ ಉಡೀಸ್
ಸಾಮಾನ್ಯವಾಗಿ ಚಿತ್ರವೊಂದರ ಹಣೆಬರಹ ಮೊದಲ ದಿನದ ಮೊದಲ ಪ್ರದರ್ಶನದ ನಂತರವೇ ಗೊತ್ತಾಗುತ್ತೆ. ಪ್ರೇಕ್ಷಕರು ಮತ್ತು ವಿಮರ್ಷಕರು ಕೇವಲ ಮೂರು ಗಂಟೆಯಲ್ಲಿ ಚಿತ್ರದ ಭವಿಷ್ಯವೊಂದನ್ನು ನಿರ್ಧಾರ ಮಾಡುತ್ತಾರೆ. ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಆ ಚಿತ್ರ ಎಷ್ಟೇ ಕಳಪೆ ಇದ್ದರೂ ಕೂಡ ಮೊದಲ ಮೂರು ದಿನ ಆ ಸ್ಟಾರ್‌ನ ಅಭಿಮಾನಿಗಳು ಚಿತ್ರಮಂದಿರಕ್ಕೆ ದಾಂಗುಡಿ ಇಡುತ್ತಾರೆ.ಚಿತ್ರದಿಂದ ತಮ್ಮ ಅಭಿಮಾನಕ್ಕೆ ಧಕ್ಕೆಯಾದರೂ..
ಕೂಡ ಎಲ್ಲರೆದುರು ಪುಂಖಾನುಪುಂಖವಾಗಿ ಪುಂಗುತ್ತಾರೆ. ಹೀಗಾಗಿಯೇ ಚಿತ್ರದ ನಿಜವಾದ ಗೆಲುವು ಅಥವಾ ಸೋಲು ನಿರ್ಧಾರ ಆಗುವುದು ಮೊದಲ ಮೂರು ದಿನಗಳ ನಂತರವಷ್ಟೇ ಎಂದು ಬಾಕ್ಸಾಫೀಸ್‌ನ ಲೆಕ್ಕಾಚಾರವನ್ನು ಹಾಕುವ ಪಂಡಿತರು ಹೇಳುತ್ತಲೇ ಇರುತ್ತಾರೆ. ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಚಿತ್ರ ತೇರ್ಗಡೆಯಾದರೆ ಆ ಚಿತ್ರ ಆ ನಂತರ ಗೆದ್ದಂತೆಯೇ ಎಂದು ಹೇಳುತ್ತಾರೆ. ಸದ್ಯ ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರದ ವಿಚಾರದಲ್ಲಿ ಈ ಮಾತು ನಿಜವಾದಂತೆ ಇದೆ.

ಹೌದು, ಧನುಷ್ ಮತ್ತು ಕೃತಿ ಸನೋನ್ ಅಭಿನಯದ ''ತೇರೆ ಇಷ್ಕ್ ಮೇ'' ತೆರೆಗೆ ಬಂದು ಹತ್ತು ದಿನಗಳಾಗಿವೆ. ಆದರೆ.. ಇವತ್ತು ಕೂಡ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಇನ್ನೂ ಚಿತ್ರ ಯಾವುದೇ ಇರಲಿ.. ಆ ಚಿತ್ರದ ಸ್ಟಾರ್ ಯಾರೇ ಇರಲಿ.. ಒಂದು ವಾರದ ನಂತರ ಮತ್ತೊಬ್ಬ ಸ್ಟಾರ್‌ನ ಚಿತ್ರ ತೆರೆಗೆ ಬಂದರೆ ಆ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ.
ಆದರೆ.. ''ತೇರೆ ಇಷ್ಕ್ ಮೇ'' ಈ ಮಾತುಗಳಿಗೆ ಸದ್ಯ ಅಪವಾದ. ''ತೇರೆ ಇಷ್ಕ್ ಮೇ'' ತೆರೆಗೆ ಬಂದ ಒಂದು ವಾರದ ನಂತರ ರಣ್ವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ಚಿತ್ರ ''ಧುರಂಧರ್'' ತೆರೆಗೆ ಬಂದಿದೆ. ಎಲ್ಲೆಡೆ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಆದರೂ ಕೂಡ ''ತೇರೆ ಇಷ್ಕ್ ಮೇ'' ಚಿತ್ರದ ಗಳಿಕೆ ಕಡಿಮೆಯಾಗಿಲ್ಲ. ಬದಲಿಗೆ ಇಂದು (ಡಿಸೆಂಬರ್ 7) ಹತ್ತನೇ ದಿನ ಚಿತ್ರದ ಗಳಿಕೆ ಏರಿಕೆಯಾಗಿದೆ. ನಿನ್ನೆಗಿಂತ (ಡಿಸೆಂಬರ್ 6) ಚಿತ್ರದ ಕಲೆಕ್ಷನ್ ಹೆಚ್ಚಿದೆ. ಇದಕ್ಕೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಹಂಚಿಕೊಂಡಿರುವ ಲೆಕ್ಕಾಚಾರವೇ ಸಾಕ್ಷಿ.
ಸ್ಯಾಕ್ನಿಲ್ ಪ್ರಕಾರ ''ತೇರೆ ಇಷ್ಕ್ ಮೇ'' ಚಿತ್ರದ 10 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ (ಶುಕ್ರವಾರ) : ₹16 ಕೋಟಿ
ಎರಡನೇ ದಿನ (ಶನಿವಾರ) : ₹17 ಕೋಟಿ
ಮೂರನೇ ದಿನ (ಭಾನುವಾರ):₹19 ಕೋಟಿ
ನಾಲ್ಕನೇ ದಿನ (ಸೋಮಾವರ):₹8.75ಕೋಟಿ
ಐದನೇ ದಿನ (ಮಂಗಳವಾರ):₹10.25ಕೋಟಿ
ಆರನೇ ದಿನ (ಬುಧವಾರ) : ₹6.85ಕೋಟಿ
ಏಳನೇ ದಿನ (ಗುರುವಾರ) : ₹5.8ಕೋಟಿ
ಮೊದಲ ವಾರದ ಕಲೆಕ್ಷನ್ : ₹83.65 ಕೋಟಿ
ಎಂಟನೇ ದಿನ (ಶುಕ್ರವಾರ) : ₹3.75ಕೋಟಿ
ಒಂಬತ್ತನೇ ದಿನ(ಶನಿವಾರ ) :₹ 5.7ಕೋಟಿ
ಹತ್ತನೇ ದಿನ (ಭಾನುವಾರ ) : ₹5.84 ಕೋಟಿ * ಅಂದಾಜು
ಒಟ್ಟು ಗಳಿಕೆ ₹98.94 ಕೋಟಿ

ಹೀಗೆ ಹತ್ತು ದಿನದಲ್ಲಿ ಕೇವಲ ಭಾರತದಲ್ಲಿ ₹98.94 ಕೋಟಿಯನ್ನು ದೋಚಿರುವ ''ತೇರೆ ಇಷ್ಕ್ ಮೇ'' ಅಜಯ್ ದೇವಗನ್ ಅಭಿನಯದ ಇತ್ತೀಚೆಗಷ್ಟೇ ತೆರೆಗೆ ಬಂದಿದ್ದ ''ದೇ ದೇ ಪ್ಯಾರ್ ದೇ-2'' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ಹತ್ ಹತ್ರ 25 ದಿನ ಪ್ರದರ್ಶನ ಕಂಡಿದ್ದ ''ದೇ ದೇ ಪ್ಯಾರ್ ದೇ -2'' ಕೇವಲ ₹ 87.51ಕೋಟಿಯನ್ನಷ್ಟೇ ಬಾಕ್ಸಾಫೀಸ್‌ನಲ್ಲಿ ಗಳಿಸಿತ್ತು.
ಸದ್ಯ ''ತೇರೆ ಇಷ್ಕ್ ಮೇ'' ನೂರು ಕೋಟಿಯ ಗಡಿಯನ್ನು ದಾಟಲಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಹೇಗೆ ಪ್ರದರ್ಶನ ಕಾಣುತ್ತೆ..? ಒಟ್ಟಾರೆಯಾಗಿ ಎಷ್ಟು ಹಣ ಗಳಿಸುತ್ತೆ..? 200 ಕೋಟಿಯ ಗಡಿ ತಲುಪುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











