KD Boxoffice Day 3: ಶನಿವಾರ ಕಮ್ಮಿ ಆಯ್ತಾ 'ಕೆಡಿ' ಕಲೆಕ್ಷನ್? ಮೊದಲ 3 ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಮಾಸ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಅದ್ಧೂರಿತನ, ಘಟಾನುಘಟಿ ಕಲಾವಿದರ ಸಮಾಗಮ, ಪ್ರೇಮ್ ನಿರ್ದೇಶನ, ಧ್ರುವ ಆರ್ಭಟ ಅಭಿಮಾನಿಗಳ ಮನಗೆದ್ದಿದೆ. ಮೊದಲ 3 ದಿನಗಳಲ್ಲಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿದೆ.

'ಲವ್ ಮಾಕ್ಟೇಲ್- 3' ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನಿಸಿಕೊಂಡಿತ್ತು. ಆ ದಾಖಲೆಯಲ್ಲಿ ಧ್ರುವ ಸರ್ಜಾ ಸಿನಿಮಾ ಮೀರಿಸುವ ಸುಳಿವು ಸಿಕ್ಕಿದೆ. ಮೇ 1 ಕಾರ್ಮಿಕರ ದಿನ ರಜೆ ಕೂಡ
'ಕೆಡಿ' ಸಿನಿಮಾ ಗಳಿಕೆಗೆ ಪ್ಲಸ್ ಆಗಿತ್ತು. ಗುರುವಾರ ತೆರೆ ಕಂಡ ಸಿನಿಮಾ ಮೊದಲ 3 ದಿನ ಒಳ್ಳೆ ಕಲೆಕ್ಷನ್ ಮಾಡಿದೆ. 4ನೇ ದಿನವಾದ ಇಂದು(ಭಾನುವಾರ) ಭಾರೀ ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ. ಆದರೆ ಗುರುವಾರ, ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಗಳಿಕೆ ಕಮ್ಮಿ ಆಗಿದೆ.

Dhruva Sarja and Jogi Prem s KD The devil film collection slightly dull on day 3

ಹೆಚ್ಚು ಕಮ್ಮಿ 70 ಕೋಟಿ ರೂ. ಬಜೆಟ್‌ನಲ್ಲಿ 'ಕೆಡಿ' ಸಿನಿಮಾ ನಿರ್ಮಾಣವಾಗಿದೆ. ಓಟಿಟಿ, ಸ್ಯಾಟಲೈಟ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಥ್ರಿಯೇಟ್ರಿಕಲ್ ಕಲೆಕ್ಷನ್ ಕೂಡ ಬಹಳ ಇಂಪಾರ್ಟೆಂಟ್ ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 'ಕೆಡಿ' ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ವಿಫಲವಾಗಿದೆ. ಸದ್ಯ ಕರ್ನಾಟಕದಲ್ಲಿ ಮಾತ್ರ ಸಿನಿಮಾ ತೆರೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ಕೂಡ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.

ಇತ್ತೀಚೆಗೆ 'ಕೆಡಿ' ಸಿನಿಮಾ ಸೆಲೆಬ್ರೆಟಿ ಶೋ ಕೂಡ ನಡೀತು. ನಟ-ನಿರ್ದೇಶಕ ಉಪೇಂದ್ರ, ನಿರ್ದೇಶಕ ತರುಣ್ ಸುಧೀರ್, ನಟ ಅಜಯ್ ರಾವ್ ಸೇರಿ ಚಿತ್ರರಂಗದ ತಾರೆಯರು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಪ್ರೇಮ್ ಮತ್ತವರ ತಂಡದ ಶ್ರಮವನ್ನು ಕೊಂಡಾಡಿದ್ದಾರೆ.

Dhruva Sarja and Jogi Prem s KD The devil film collection slightly dull on day 3

'ಕೆಡಿ' 3 ದಿನದ ಗಳಿಕೆ

ಅಧಿಕೃತವಾಗಿ ಚಿತ್ರತಂಡ 'ಕೆಡಿ' ಸಿನಿಮಾ ಕಲೆಕ್ಷನ್ ಲೆಕ್ಕ ಕೊಟ್ಟಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸುಳ್ಳು ಸುದ್ದಿ ಹರಿದಾಡ್ತಿದೆ. ಆದರೆ ಸಿನಿಮಾ ಒಳ್ಳೆ ಗಳಿಕೆ ಕಾಣುತ್ತಿದೆ. ಆಹಾ ಓಹೋ ಎನ್ನುವಂತಹ ಕಲೆಕ್ಷನ್ ಇಲ್ಲದೇ ಇದ್ದರೂ ನಿಜವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ತಿದೆ. Sacnilk ವರದಿ ಪ್ರಕಾರ 3ನೇ ದಿನ(ಶನಿವಾರ) ಸಿನಿಮಾ 2.08 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಮೊದಲ 2 ದಿನ ತಲಾ 3.50 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿ ಆಗಿತ್ತು. ಆ ಮೂಲಕ ಮೊದಲ 3 ದಿನಕ್ಕೆ 9 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಗ್ರಾಸ್ ಕಲೆಕ್ಷನ್ 12 ಕೋಟಿ ರೂ. ಗಡಿ ದಾಟಿದೆ ಎನ್ನಬಹುದು.

ಶನಿವಾರ ಕಮ್ಮಿ ಯಾಕೆ?

ಗುರುವಾರ ಮೊದಲ ದಿನ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಕೆಲವೆಡೆ ಬೆಳಗ್ಗೆ 6 ಗಂಟೆಗೆ ಶೋಗಳು ಶುರುವಾಗಿತ್ತು. ಹಾಗಾಗಿ 3.50 ಕೋಟಿ ರೂ. ಕಲೆಕ್ಷನ್ ಆಗಿತ್ತು. 2ನೇ ದಿನ ಕಾರ್ಮಿಕರ ದಿನದ ರಜೆ ಇತ್ತು. ಹಾಗಾಗಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ 3ನೇ ದಿನ ಕೊಂಚ ಡಲ್ ಆಗಿದೆ. ಆದರೆ ಭಾನುವಾರ ರಜೆ ಇರುವುದರಿಂದ, ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿರುವುದರಿಂದ ಒಳ್ಳೆ ಗಳಿಕೆ ನಿರೀಕ್ಷಿಸಬಹುದು.

BMS ಟಿಕೆಟ್ ಮಾರಾಟ

ಬುಕ್‌ಮೈ ಶೋನಲ್ಲಿ ಚಿತ್ರಕ್ಕೆ ಭರ್ಜರಿ ಟಿಕೆಟ್ ಮಾರಾಟವಾಗುತ್ತಿರುವ ಲೆಕ್ಕ ಸಿಗುತ್ತಿದೆ. 52 ಸಾವಿರ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿತ್ತು. ಇನ್ನು ಮೊದಲ ದಿನ 51 ಸಾವಿರ, 2ನೇ ದಿನ 73 ಸಾವಿರಕ್ಕೂ ಅಧಿಕ ಟಿಕೆಟ್ ಆನ್ಲೈನ್‌ನಲ್ಲಿ ಬುಕ್ ಆಗಿದ್ದು ವಿಶೇಷ. 3ನೇ ದಿನ 39 ಸಾವಿರ ಟಿಕೆಟ್ ಸೇಲ್ ಆಗಿತ್ತು. ಒಟ್ಟಾರೆ ಆನ್ಲೈನ್‌ನಲ್ಲಿ 2 ಲಕ್ಷದ 15 ಸಾವಿರ ಟಿಕೆಟ್ ಖರೀದಿಸಿ ಪ್ರೇಕ್ಷಕರು 'ಕೆಡಿ' ಸಿನಿಮಾ ನೋಡಿದಂತಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Read more about: dhruva sarja kd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X