ಬಾಕ್ಸಾಫೀಸ್‌ಗೆ ಅಪ್ಪಳಿಸಿದ 'ಧುರಂಧರ್' ಧೂಮಕೇತು ; ಬಿಡುಗಡೆ ಮುನ್ನವೇ ₹18 ಕೋಟಿ ಲೂಟಿ - ಕನ್ನಡದಲ್ಲಿ ಸೇಲಾದ ಟಿಕೆಟ್‌ಗಳೆಷ್ಟು ?

ಆ ಭಾಷೆ.. ಈ ಭಾಷೆ ಅಂತಲ್ಲ. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಎಲ್ಲಾ ಭಾಷೆಯಲ್ಲಿಯೂ ಹಲವು ಪ್ರಯತ್ನಗಳಾಗುತ್ತಿವೆ. ಆದರೆ ಈ ಪ್ರಯತ್ನಗಳಿಗೆ ಸಿಕ್ಕ ಬೆಲೆ ತುಂಬಾ ಕಡಿಮೆ. ಅಲ್ಲೊಂದು.. ಇಲ್ಲೊಂದು ಚಿತ್ರಗಳು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿವೆ. ಸದ್ದು ಮಾಡುತ್ತಿವೆ. ಗಮನವನ್ನು ಕೂಡ ಸೆಳೆಯುತ್ತಿವೆ. ವಿಶೇಷ ಅಂದರೆ ಹೀಗೆ ಗೆದ್ದ ಸಿನಿಮಾದ ಮೇಲೆ ಅನೇಕರಿಗೆ ನಿರೀಕ್ಷೆಗಳೇ ಇರಲಿಲ್ಲ.ಬದಲಿಗೆ ಇದು ಕೂಡ ಹತ್ತರಲ್ಲಿ ಹನ್ನೊಂದನೇಯದ್ದು ಎಂದೇ ಹಲವರು ಆರಂಭದಲ್ಲಿ ಅಂದುಕೊಂಡಿರುತ್ತಾರೆ.

ಆದರೆ.. ಕೆಲ ಸಿನಿಮಾಗಳೇ ಹಾಗೇ. ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ಸದ್ದು ಮಾಡುತ್ತವೆ. ಹಣವನ್ನು ದೋಚುತ್ತಾವೆ. ದಾಖಲೆ ಮೇಲೆ ದಾಖಲೆ ಬರೆದು ನೋಡುಗರ ಹುಬ್ಬೇರಿಸುತ್ತಾವೆ. ಕಳೆದ ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಇದಕ್ಕೆ ಅತ್ಯುತ್ತಮ ಉದಾಹರಣೆ.

Dhurandhar 2 18 Cr Advance Shatters Records Historic 100 Cr Weekend

ಹೌದು, ನಿಮಗೆ ಗೊತ್ತಿರಲಿ.. ''ಧುರಂಧರ್'' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿರಲಿಲ್ಲ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ''ಧುರಂಧರ್'' ಗಳಿಸಿದ್ದು ಕೇವಲ

₹28 ಕೋಟಿಯಷ್ಟೇ. ಶನಿವಾರ ಮತ್ತು ಭಾನುವಾರ ಹೊರತು ಪಡಿಸಿದರೆ ಈ ಚಿತ್ರದ ಗಳಿಕೆ ಇದ್ದಿದ್ದು ₹20 ಕೋಟಿಯಿಂದ ₹28 ಕೋಟಿಯವರೆಗೆ ಮಾತ್ರ.

ಆದರೆ.. 09ನೇ ದಿನ ನಡೆದಿದ್ದು ಮಾತ್ರ ಅಕ್ಷರಶಃ ಪವಾಡ. ಎರಡನೇ ಶನಿವಾರದಂದು 5,865 ಪ್ರದರ್ಶನ ಕಂಡ ಈ ಚಿತ್ರ ₹53 ಕೋಟಿಯನ್ನು ಕೊಳ್ಳೆ ಹೊಡೆಯಿತು. ಇಲ್ಲಿಂದ ಶುರುವಾದ ''ಧುರಂಧರ್'' ಅಬ್ಬರ ಆ ನಂತರ ಕಡಿಮೆಯಾಗಲೇ ಇಲ್ಲ. ಈಗ ''ಧುರಂಧರ್ 2'' ಸರದಿ. ವ್ಯತ್ಯಾಸ ಅಂದರೆ ''ಧುರಂಧರ್'' ಮೇಲೆ ಯಾರೆಂದರೆ ಯಾರಿಗೂ ಕೂಡ ನಿರೀಕ್ಷೆ ಇರಲಿಲ್ಲ. ಆದರೆ.. ''ಧುರಂಧರ್ 2'' ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇದಕ್ಕೆ ಕೈಗನ್ನಡಿಯೇ ಪೇಯ್ಡ್ ಪ್ರಿವ್ಯೂ ನೋಡಲು ನಡೆಯುತ್ತಿರುವ ನೂಕು ನುಗ್ಗಲು.

ಹೌದು, ಈ ಹಿಂದೆ ನಿಮ್ಮ ಫಿಲ್ಮಿಬೀಟ್ ಕನ್ನಡ ವರದಿ ಮಾಡಿದಂತೆ ಮತ್ತು ಈಗಾಗಲೇ ಹಲವರಿಗೆ ಗೊತ್ತಿರುವಂತೆ '' ಧುರಂಧರ್ 2'' ಚಿತ್ರವನ್ನು ಒಂದು ದಿನದ ಮೊದಲು ಅಂದರೆ ಮಾರ್ಚ್ 18ರಂದು ಕಣ್ತುಂಬಿಕೊಳ್ಳುವ ಸೌಭಾಗ್ಯವನ್ನು ಚಿತ್ರತಂಡ ಚಿತ್ರರಸಿಕರಿಗೆ ನೀಡಿದೆ. ಮಾರ್ಚ್ 18ರ 5 ಗಂಟೆಯ ನಂತರ ಭಾರತದೆಲ್ಲೆಡೆ ಈ ಚಿತ್ರದ ಪೇಯ್ಡ್ ಪ್ರಿವ್ಯೂ ನಡೆಯಲಿದೆ.

Dhurandhar 2 18 Cr Advance Shatters Records Historic 100 Cr Weekend

ವಿಶೇಷ ಅಂದರೆ ಈ ಪೇಯ್ಡ್ ಪ್ರಿವ್ಯೂಗಳ ದರ ಗಗನಕ್ಕೇರಿದೆ. ವಿಚಿತ್ರ ಅಂದರೆ ಟಿಕೆಟ್ ದರ 1000, 2000, 3000, ಇದ್ದರೂ ಕೂಡ ಜನ ಹಿಂದೆ ಮುಂದೆ ಯೋಚನೆ ಮಾಡದೇ ಚಿತ್ರದ ಟಿಕೆಟ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.

ಇದಕ್ಕೆ ಪುರಾವೆ ಎನ್ನುವಂತೆ ಮುಂಗಡ ಬುಕಿಂಗ್ ಪ್ರಾರಂಭವಾದ ಮೊದಲ ದಿನವೇ (ಮಾರ್ಚ್ 7) 24 ಗಂಟೆಗಳಲ್ಲಿ, ಚಿತ್ರವು 1.2 ಲಕ್ಷ ಟಿಕೆಟ್‌ ಬಿಕರಿಯಾಗಿವೆ. ಇನ್ನು ನಿನ್ನೆ (ಮಾರ್ಚ್ 8) 80,000 ಟಿಕೆಟ್ ಸೇಲ್ ಆಗಿದ್ದು ಈ ಎರಡು ದಿನದಲ್ಲಿ 2,06,367 ಟಿಕೆಟ್ ಮಾರಾಟವಾಗಿವೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ. ಕೇವಲ ಈ ಪೇಯ್ಡ್ ಪ್ರಿವ್ಯೂವ್‌ದಿಂದ ''ಧುರಂಧರ್ 2'' ಎರಡು ದಿನದಲ್ಲಿ ₹18.11 ಕೋಟಿ ಕೊಳ್ಳೆ ಹೊಡೆದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ನೆನಪಿರಲಿ, ಪೇಯ್ಡ್ ಪ್ರಿವ್ಯೂವ್‌ಗೆ ಇನ್ನೂ 9 ದಿನ ಬಾಕಿ ಇವೆ. ಈ 9 ದಿನದಲ್ಲಿ ಇನ್ನೂ ಎಷ್ಟು ಟಿಕೆಟ್ ಸೇಲ್ ಆಗುತ್ತಾವೆ ಎಂದು ಲೆಕ್ಕ ಹಾಕುವುದು ಕಷ್ಟವಾದರೂ ''ಬಾಲಿವುಡ್ ಹಂಗಾಮಾ'' ಲೆಕ್ಕಾಚಾರದ ಪ್ರಕಾರ ಕೇವಲ ಪೇಯ್ಡ್ ಪ್ರಿವ್ಯೂದಿಂದ ''ಧುರಂಧರ್ 2'' ₹30 ಕೋಟಿಗೂ ಅಧಿಕ ಹಣವನ್ನು ಗಳಿಸುವುದು ಖಚಿತ.

ಇನ್ನೂ ''ಧುರಂಧರ್ 2'' ಈ ಬಾರಿ ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಡಬ್ ಆಗಿ ಬಿಡುಗಡೆಯಾಗಲಿದೆ. ಆದರೆ, ಹಿಂದಿಯ ಟಿಕೆಟ್‌ಗಳು ಮಾರಾಟವಾದಂತೆ ಬೇರೆ ಭಾಷೆಯಲ್ಲಿ ಟಿಕೆಟ್‌ಗಳು ಸೇಲ್ ಆಗುತ್ತಿಲ್ಲ. ''ಸ್ಯಾಕ್ನಿಲ್'' ವರದಿಯ ಪ್ರಕಾರ ''ಧುರಂಧರ್ 2'' ಚಿತ್ರವನ್ನು ತಮಿಳಿನಲ್ಲಿ ನೋಡಲು 7,317 ಜನ ಆಸಕ್ತಿ ತೋರಿಸಿದ್ದಾರೆ. ಈ ಮೂಲಕ ಚಿತ್ರದ ನಿರ್ಮಾಪಕರಿಗೆ 9.9 ಲಕ್ಷ ದೇಣಿಗೆ ನೀಡಿದ್ಧಾರೆ.ತೆಲುಗಿನಲ್ಲಿ 3,920 ಟಿಕೆಟ್‌ಗಳು ಎರಡು ದಿನದಲ್ಲಿ ಮಾರಾಟವಾಗಿದ್ದು ಇದರಿಂದ 9.6 ಲಕ್ಷ ನಿರ್ಮಾಪಕರ ಖಜಾನೆ ಸೇರಿದೆ.

ಮಲಯಾಳಂ ಡಬ್ ಆವೃತ್ತಿಯು ಇಲ್ಲಿಯವರೆಗೆ 338 ಟಿಕೆಟ್‌ಗಳಿಂದ 96,114 ರೂ. ಸಂಗ್ರಹಿಸಿದೆ. ಆದರೆ, ಅದ್ಯಾಕೋ ಕನ್ನಡದಲ್ಲಿ ''ಧುರಂಧರ್ 2'' ನೋಡುವ ಆಸಕ್ತಿ ಕನ್ನಡಿಗರಿಗೆ ಇದ್ದಂತೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಆವೃತ್ತಿಯು 198 ಟಿಕೆಟ್‌ ಮಾತ್ರ ಮಾರಾಟವಾಗಿದ್ದು ಇದರಿಂದ 67,150 ರೂಪಾಯಿಯನ್ನು ಚಿತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಒಟ್ನಲ್ಲಿ ಸದ್ಯ '' ಧುರಂಧರ್ 2'' ಚಿತ್ರದ ಟಿಕೆಟ್‌ಗಳು ಬಿಸಿಬಿಸಿ ಬೋಡಾದಂತೆ ಸೇಲ್ ಆಗುತ್ತಿದ್ದು, ಪೇಯ್ಡ್ ಪ್ರಿವ್ಯೂದಿಂದ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ದಾಖಲೆ ''ಧುರಂಧರ್ 2'' ಬರೆಯಲಿದೆ. ಮುಂದಿನ ದಿನಗಳಲ್ಲಿ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಮಾರ್ಚ್ 19ರ ಟಿಕೆಟ್ ಕೌಂಟರ್ ಬುಕ್ ಮೈ ಶೋದಲ್ಲಿ ತೆರೆದಿಲ್ಲ. ಮಾರ್ಚ್ 19ರಂದು ದೇಶದೆಲ್ಲೆಡೆ ''ಧುರಂಧರ್ 2'' ಭಜನೆ ನಡೆಯಲಿದ್ದು ಮೊದಲ ದಿನ 100 ಕೋಟಿಯ ಗಡಿಯನ್ನು ಚಿತ್ರ ಅನಾಯಾಸವಾಗಿ ದಾಟುತ್ತೆ ಎನ್ನುವ ಭವಿಷ್ಯವನ್ನು ಸದ್ಯ ಹಲವರು ಟ್ರೇಡ್ ಪಂಡಿತರು ಹೇಳುತ್ತಿದ್ಧಾರೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Box Office Alert: Dhurandhar 2 advance bookings explode. Over 2 lakh tickets sold as paid previews hit ₹18.11 Cr, surpassing Stree 2. Can it hit the ₹100 Cr milestone in 3 days? Read the latest report.
Read more about: bollywood r ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X