Dhurandhar 2 Box Office Day 5 ; ಧುರಂಧರ್ 2 ಧಗಧಗ, ಸೋಮವಾರವೂ ನೂಕುನುಗ್ಗಲು - ದಾಖಲೆಗಳೆಲ್ಲಾ ಛಿದ್ರ, ಛಿದ್ರ

ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು.

ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗುತ್ತಿದ್ದಂತೆಯೇ ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ತೆರೆಗೆ ಬಂದ ''ಧುರಂಧರ್ 2'' ಬೆಳ್ಳಿತೆರೆಯಲ್ಲಿ ಅಕ್ಷರಶಃ ಧಗಧಗಿಸುತ್ತಿದೆ.

dhurandhar-2-crushes-monday-test-fastest-indian-film-to-500-crores

ಹೌದು, ''ಧುರಂಧರ್ 2'' ತೆರೆಗೆ ಬಂದು ನಿನ್ನೆಗೆ ( ಮಾರ್ಚ್ 23) ಐದು ದಿನಗಳಾಗಿವೆ. ಆದರೆ.. ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬದಲಿಗೆ ಬಾಕ್ಸಾಫೀಸ್‌ನಲ್ಲಿ ''ಧುರಂಧರ್ 2'' ಅಬ್ಬರಿಸುತ್ತಲೇ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಸಾಮಾನ್ಯವಾಗಿ ಸೋಮವಾರ ಚಿತ್ರದ ಸ್ಟಾರೇ ಯಾರೇ ಇರಲಿ. ಆ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ. ''ಧುರಂಧರ್ 2'' ಗಳಿಕೆಯಲ್ಲಿ ಕೂಡ ಕುಸಿತ ಕಂಡು ಬಂದಿದೆ.

ಆದರೂ ನಿನ್ನೆ (ಮಾರ್ಚ್ 23-ಸೋಮವಾರ) ಒಂದೇ ದಿನ ''ಧುರಂಧರ್ 2'' ₹65 ಕೋಟಿಯನ್ನು ಕೇವಲ ಭಾರತದಲ್ಲಿ ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಮೂಲಕ ಐದೇ ದಿನದಲ್ಲಿ ₹519.12 ಕೋಟಿಯನ್ನು ಚಿತ್ರ ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ಧುರಂಧರ್ 2'' ಚಿತ್ರದ ನಾಲ್ಕು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಪೇಯ್ಡ್ ಪ್ರೀಮಿಯರ್ (ಬುಧವಾರ) ₹43 ಕೋಟಿ
ಮೊದಲ ದಿನ (ಗುರುವಾರ)₹102 ಕೋಟಿ
ಎರಡನೇ ದಿನ (ಶುಕ್ರವಾರ) ₹80.72 ಕೋಟಿ
ಮೂರನೇ ದಿನ (ಶನಿವಾರ) ₹113 ಕೋಟಿ
ನಾಲ್ಕನೇ ದಿನ (ಭಾನುವಾರ)₹114.85 ಕೋಟಿ
ಐದನೇ ದಿನ ( ಸೋಮವಾರ)₹65 ಕೋಟಿ

ಒಟ್ಟು ಗಳಿಕೆ - ₹519.12 ಕೋಟಿ

dhurandhar-2-crushes-monday-test-fastest-indian-film-to-500-crores

ಹೀಗೆ ಕೇವಲ ಐದು ದಿನದಲ್ಲಿ ₹519.12 ಕೋಟಿಯನ್ನು ದೋಚುವ ಮೂಲಕ ₹500 ಕೋಟಿ ಕ್ಲಬ್‌ನ್ನ ಐದು ದಿನದಲ್ಲಿ ಸೇರಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ''ಧುರಂಧರ್ 2'' ಪಾತ್ರವಾಗಿದೆ.

ಇನ್ನು ''ಧುರಂಧರ್ 2'' ಈಗಾಗಲೇ ಆಮಿರ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ''ದಂಗಲ್'' ಚಿತ್ರವನ್ನು ಬಾಕ್ಸಾಫೀಸ್‌ನಲ್ಲಿ ಸೆಡ್ಡು ಹೊಡೆದಿದೆ. 'ದಂಗಲ್'' ಮಾತ್ರವಲ್ಲ ''ಪಿಕೆ'' (₹340.80 ಕೋಟಿ) ''ಸಂಜು'' (₹342.53 ಕೋಟಿ ) ''ಟೈಗರ್ ಜಿಂದಾ ಹೈ'' (₹339.16 ಕೋಟಿ) ''ಬಾಹುಬಲಿ'' ( ₹421 ಕೋಟಿ) ಗಳಿಕೆಯನ್ನು ಕೂಡ ''ಧುರಂಧರ್ 2'' ಕೇವಲ ಐದು ದಿನದಲ್ಲಿ ಹಿಂದಿಕ್ಕಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.

ಸದ್ಯ ''ಧುರಂಧರ್ 2'' ಕಣ್ಣೇದುರು ''ಗದರ್ 2''.. ''ಅನಿಮಲ್''..''ಜವಾನ್''.. ''ಪಠಾಣ್'' ''ಕಾಂತಾರ 2''.. ''ಕೆಜಿಎಫ್‌ 2''.. ''ಪುಷ್ಪ 2''.. ದಾಖಲೆಗಳನ್ನು ಹಿಂದಿಕ್ಕುವ ಸವಾಲು ಇದೆ. ''ಧುರಂಧರ್'' ಗಳಿಕೆಯನ್ನು ಕೂಡ ''ಧುರಂಧರ್ 2'' ಹಿಂದಿಕ್ಕಬೇಕಿದೆ. ಸದ್ಯ ''ಧುರಂಧರ್ 2'' ಅಲೆ ನೋಡುತ್ತಿದ್ದರೆ ಈ ಎಲ್ಲಾ ಚಿತ್ರಗಳ ದಾಖಲೆಯನ್ನು ''ಧುರಂಧರ್ 2'' ಅನಾಯಾಸವಾಗಿ ಮುರಿಯಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhurandhar 2 box office day 5: Ranveer Singh's latest hit crushes the Monday test with a massive ₹500 crore worldwide haul. Is it the biggest hit of 2026? Find out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X