Dhurandhar-2 Day 2 Boxoffice: 2ನೇ ದಿನ 'ಧುರಂದರ್' ಆರ್ಭಟ ಹೇಗಿತ್ತು? ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಆದಿತ್ಯಧರ್ ನಿರ್ದೇಶನದ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕೆಲವರು ಪ್ರಾಪೊಗಂಡಾ ಸಿನಿಮಾ ಎಂದು ಆರೋಪಿಸಿದರೂ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿಂದೆ ಬಿದ್ದಿದೆ. ಆದರೂ ಹೆಚ್ಚು ಕಮ್ಮಿ 4 ಗಂಟೆ ಸಿನಿಮಾ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಸಕ್ಸಸ್ ಕಂಡಿದೆ.
ಒಂದು ವರ್ಗದ ಪ್ರೇಕ್ಷಕರು 'ಧುರಂಧರ್'-2 ಕೊಂಡಾಡುತ್ತಿದ್ದಾರೆ. ಯುಗಾದಿ, ರಂಜಾನ್ ರಜೆ ಚಿತ್ರದ ಕಲೆಕ್ಷನ್‌ಗೆ ವರವಾಗಿದೆ. ಶುಕ್ರವಾರ ಕೂಡ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ಬಾಕ್ಸಾಫೀಸ್ ದಾಖಲೆಗಳನ್ನು ಪುಡಿ ಪುಡಿ ಮಾಡಿ ಮುನ್ನುಗ್ಗುತ್ತಿದೆ. ಒಂದು ದಿನ ಮೊದಲೇ ಪ್ರೀಮಿಯರ್ ಶೋಗಳು ಶುರುವಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. Sacnilk.com ವರದಿ ಪ್ರಕಾರ ಗುರುವಾದ ಪ್ರೀಮಿಯರ್ ಶೋಗಳಿಂದಲೇ ಸಿನಿಮಾ ಭಾರತದಲ್ಲಿ 43 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು.

2ನೇ ದಿನದ ಕಲೆಕ್ಷನ್
ಮೊದಲ ದಿನ 102 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 80 ಕೋಟಿ ರೂ. ಬಾಚಿದೆ. ಶನಿವಾರ ಹಾಗೂ ಭಾನುವಾರ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸುಳಿವು ಸಿಕ್ತಿದೆ. ಕಳೆದ ವರ್ಷದ ಕೊನೆಗೆ ಬಂದಿದ್ದ 'ಧುರಂಧರ್' ಸಿನಿಮಾ 1600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಹಾಗಾಗಿ ಸೀಕ್ವೆಲ್ 2000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎನ್ನುವುದು ಕೆಲವರ ಲೆಕ್ಕಾಚಾರ.
ಕರ್ನಾಟಕದಲ್ಲಿ 'ಧುರಂಧರ್- 2'
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ 'ಲವ್ ಮಾಕ್ಟೇಲ್'- 3 ಸಿನಿಮಾ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. 'ಧುರಂಧರ್'-2 ಆರ್ಭಟದ ನಡುವೆಯೂ ಈ ಫೀಲ್ ಗುಡ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಹಾಗಂತ 'ಧುರಂಧರ್' ಆರ್ಭಟ ಕಮ್ಮಿ ಆಗಿಲ್ಲ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಂಡು ಸಿನಿಮಾ ಸದ್ದು ಮಾಡ್ತಿದೆ. ಟಿಕೆಟ್ ದರ ಹೆಚ್ಚಾಗಿದ್ದರೂ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಕರ್ನಾಟಕದಲ್ಲಿ ಬರೀ ಪ್ರೀಮಿಯರ್ ಶೋಗಳಿಂದ 6 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಮೊದಲ ದಿನ 11 ಕೋಟಿ ರೂ. ಕೊಳ್ಳೆ ಹೊಡೆದಿತ್ತು. 2ನೇ ದಿನ 7ರಿಂದ 8 ಕೋಟಿ ರೂ. ಗಳಿಕೆ ಕಂಡಿದೆ. ಕನ್ನಡ ವರ್ಷನ್ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಗುರುವಾರ 20 ಶೋಗಳಿಂದ 3 ಲಕ್ಷ ರೂ. ಕಲೆಕ್ಷನ್ ಆಗಿರುವ ಅಂದಾಜಿದೆ.

'ಧುರಂಧರ್- 2' ಚಿತ್ರಕ್ಕೆ ಸ್ಟಾರ್ಸ್ ಸಾಥ್
ಅಂದಹಾಗೆ 'ಧುರಂಧರ್- 2' ಚಿತ್ರವನ್ನು ಖ್ಯಾತ ನಟ, ನಟಿಯರು ನೋಡಿ ಮೆಚ್ಚಿಕೊಂಡಿದ್ದಾರೆ. ಮೊದಲ ದಿನವೇ ಅಲ್ಲು ಅರ್ಜುನ್, ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಸಿನಿಮಾ ವೀಕ್ಷಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದ್ಭುತ ಸಿನಿಮಾ ಎಂದು ಹಾಡಿ ಕೊಂಡಾಡಿದ್ದಾರೆ. ಇದು ಕೂಡ ಸಿನಿಮಾ ಗಳಿಕೆ ಮೇಲೆ ಪರಿಣಾಮ ಬೀರಲಿದೆ.
ಶನಿವಾರ, ಭಾನುವಾರ ನಿರ್ಣಾಯಕ
'ಧುರಂಧರ್' ಸಿನಿಮಾ ಹೆಚ್ಚು ಕಮ್ಮಿ ಒಂದು ತಿಂಗಳ ಕಾಲ ಕ್ರೇಜ್ ಉಳಿಸಿಕೊಂಡಿತ್ತು. ದೇಶಾದ್ಯಂತ ಹಲವು ಭಾಗಗಳಲ್ಲಿ ತಿಂಗಳ ಬಳಿಕ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಸದ್ಯ ಸೀಕ್ವೆಲ್‌ಗೆ ಒಳ್ಳೆ ಓಪನಿಂಗ್ ಸಿಕ್ಕಿದೆ. ಮೊದಲ 2 ದಿನಗಳಲ್ಲಿ ಅಂದಾಜು 200 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಶನಿವಾರ ಹಾಗೂ ಭಾನುವಾರ ಬಹಳ ನಿರ್ಣಾಯಕ ಆಗಲಿದೆ. ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳಲಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











