2ನೇ ಭಾನುವಾರವೂ ಎಲ್ಲಾ ಕಡೆ ಹೌಸ್‌ಫುಲ್; ಇವತ್ತು 'ಧುರಂಧರ್'-2 ಹೊಸ ದಾಖಲೆ ಬರೆಯುತ್ತಾ?

ಸದ್ಯಕ್ಕೆ 'ಧುರಂಧರ್- 2' ಚಿತ್ರವನ್ನು ಬಾಕ್ಸಾಫೀಸ್‌ನಲ್ಲಿ ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲ. ಸಿನಿಮಾ ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. 2ನೇ ಶುಕ್ರವಾರಕ್ಕಿಂತ ಶನಿವಾರ ಎರಡು ಪಟ್ಟು ಕಲೆಕ್ಷನ್ ಹೆಚ್ಚಾಗಿದೆ. ಅಲ್ಲಿಗೆ ಸಿನಿಮಾ ಎಷ್ಟರಮಟ್ಟಿಗೆ ಸದ್ದು ಮಾಡ್ತಿದೆ ಎನ್ನುವುದು ಅರ್ಥವಾಗುತ್ತಿದೆ.

2ನೇ ಭಾನುವಾರ(ಮಾರ್ಚ್ 29) ಅಂದರೆ ಇವತ್ತೂ ಕೂಡ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಬಹುತೇಕ ಎಲ್ಲಾ ಕಡೆ ಸಿನಿಮಾ ಹೌಸ್‌ಫುಲ್ ಎನ್ನುವಂತಹ ವಾತವರಣ ನಿರ್ಮಾಣವಾಗಿದೆ. ಸಾಕಷ್ಟು ಜನ ಸಿನಿಮಾ ನೋಡಲು ಇನ್ನು ಕಾಯುತ್ತಿದ್ದಾರೆ. ಕೆಲವರು ಈಗಾಗಲೇ 2ನೇ ಬಾರಿ ನೋಡಿದ್ದಾರೆ. ಇನ್ನು ಕೆಲವರು ಮತ್ತೆ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಅದೆಲ್ಲವೂ ಬಾಕ್ಸಾಫೀಸ್ ಗಳಿಕೆ ಮೇಲೆ ಪರಿಣಾಮ ಬೀರುವಂತಾಗಿದೆ.

Dhurandhar-2 Eyes 100 Cr on Day 11 Set to Challenge KGF-2 Record

7 ದಿನಕ್ಕೆ ಸಾವಿರ ಕೋಟಿ ರೂ. ಕ್ಲಬ್ ಸೇರಿದ್ದ ಸಿನಿಮಾ ಸದ್ಯ ನಾಗಾಲೋಟದಿಂದ ವಿಶ್ರಮಿಸುವಂತೆ ಕಾಣ್ತಿಲ್ಲ. ಕೆಲವರ ಟೀಕೆಗಳ ನಡುವೆಯೂ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಅದೇ ಕಾರಣಕ್ಕೆ ಸಿನಿಮಾ ಬಾಕ್ಸಾಫೀಸ್ ದೋಚುತ್ತಿದೆ. ಹೆಚ್ಚಿನ ಪ್ರಚಾರ ಇಲ್ಲದೇ ಬಂದು ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ. 10 ದಿನಗಳಲ್ಲಿ 8ನೇ ಸ್ಥಾನಕ್ಕೇರಿದೆ.

10 ದಿನಗಳ ಗಳಿಕೆ

ಅಧಿಕೃತವಾಗಿ 'ಧುರಂಧರ್'- 2 ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಭಾರತದಲ್ಲಿ 10 ದಿನಕ್ಕೆ 778 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವ ಅಂದಾಜಿದೆ. 930 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವ ಸಾಧ್ಯತೆಯಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಇನ್ನು ವಿಶ್ವದಾದ್ಯಂತ 1226 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಲಾಗ್ತಿದೆ.

Dhurandhar-2 Eyes 100 Cr on Day 11 Set to Challenge KGF-2 Record

11ನೇ ದಿನದ ಕಲೆಕ್ಷನ್?

ಭಾನುವಾರ ಜನರಿಗೆ ಬಿಡುವು. ಹಾಗಾಗಿ ಹೆಚ್ಚು ಜನ ಭಾನುವಾರ ಸಿನಿಮಾ ನೋಡಲು ಮನಸ್ಸು ಮಾಡುತ್ತಾರೆ. ಹಾಗಾಗಿ ದೊಡ್ಡ ಸಿನಿಮಾಗಳಿಗೆ ಶನಿವಾರ, ಭಾನುವಾರ ಕಲೆಕ್ಷನ್ ಹೆಚ್ಚಾಗುತ್ತದೆ. 'ಧುರಂಧರ್-2' ಚಿತ್ರಕ್ಕೆ 2ನೇ ಭಾನುವಾರ ಕಲೆಕ್ಷನ್ ಡಬ್ ಆಗುವ ಲೆಕ್ಕಾಚಾರ ನಡೀತಿದೆ. ಅಡ್ವಾನ್ಸ್ ಬುಕ್ಕಿಂಗ್ ಟ್ರೆಂಡ್ ಚೆನ್ನಾಗಿದೆ. ಇವತ್ತು ಒಂದೇ ದಿನ ಅನಾಯಾಸವಾಗಿ 100 ಕೋಟಿ ರೂ. ಕೊಳ್ಳೆ ಹೊಡೆಯಬಹುದು ಎನ್ನುವ ಚರ್ಚೆ ನಡೀತಿದೆ.

ಕರ್ನಾಟಕದಲ್ಲಿ 'ಧುರಂಧರ್-2'

ರಾಜ್ಯದಲ್ಲಿ ಕೂಡ 'ಧುರಂಧರ್-2' ಸಿನಿಮಾ ಅದ್ಭುತ ಪ್ರದರ್ಶನ ಕಾಣ್ತಿದೆ. ಈ ಹಿಂದೆ ಯಾವುದೇ ಪರಭಾಷೆ ಸಿಗದಷ್ಟು ರೆಸ್ಪಾನ್ಸ್ ಈ ಸ್ಪೈ ಥ್ರಿಲ್ಲರ್ ಚಿತ್ರಕ್ಕೆ ಸಿಗುತ್ತಿದೆ. ಕನ್ನಡ ವರ್ಷನ್‌ ಕೂಡ ಜನ ಮುಗಿಬಿದ್ದು ನೋಡುತ್ತಿದ್ದಾರೆ. ಕನ್ನಡದಲ್ಲೇ ಸಿನಿಮಾ 1 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗ್ತದೆ. 11 ದಿನಕ್ಕೆ ಕರ್ನಾಕದಲ್ಲಿ ಸಿನಿಮಾ ಒಟ್ಟು ಗಳಿಕೆ 100 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ.

ಇವತ್ತೇ 'KGF-2' ದಾಖಲೆ ಉಡೀಸ್

ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಕನ್ನಡದ 'KGF-2' ಸಿನಿಮಾ 4 ವರ್ಷಗಳ ಹಿಂದೆ ದಾಖಲೆ ನಿರ್ಮಿಸಿತ್ತು. 1250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಕೇವಲ 11 ದಿನಗಳಲ್ಲಿ ಈ ದಾಖಲೆಯನ್ನು 'ಧುರಂಧರ್'-2 ಸಿನಿಮಾ ಮುರಿದು ಮುನ್ನುಗುವ ಸುಳಿವು ಸಿಕ್ತಿದೆ.

ಪೈರಸಿ ಕಾಟ

ಸಿನಿಮಾಗಳಿಗೆ ಪೈರಸಿ ಕಾಟ ಹೊಸದೇನು ಅಲ್ಲ. ದೊಡ್ಡ ಸಿನಿಮಾಗಳು ಬಿಡುಗಡೆಯಾದ ದಿನವೇ ಆನ್ಲೈನ್‌ನಲ್ಲಿ ಲೀಕ್ ಆಗಿಬಿಡುತ್ತದೆ. 'ಧುರಂಧರ್- 2' ಸಿನಿಮಾ ಕೂಡ ಪೈರಸಿ ಆಗಿದೆ. ಆದರೂ ಅದನ್ನೆಲ್ಲಾ ಮೀರಿ ಜನ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಲು ಮುಂದಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X