ಧುರಂಧರ್ 2 ಅಬ್ಬರ, ಇತಿಹಾಸ ಸೃಷ್ಟಿಸಿದ ರಣವೀರ್ ಸಿಂಗ್ ; ಬಿಡುಗಡೆಗೆ ಮುನ್ನವೇ ಬಾಕ್ಸಾಫೀಸ್‌ನಲ್ಲಿ 60 ಕೋಟಿ ಲೂಟಿ
ಸಿನಿಮಾ ಅಂದರೆ ಗಿಮಿಕ್ ಅಲ್ಲ. ಗಿಮಿಕ್ ಮಾಡೋರಿಗೆ ಇಲ್ಲಿ ಉಳಿಗಾಲ ಇಲ್ಲ. ಯಾಕೆಂದರೆ ಸಿನಿಮಾ ಅಂದರೆ ಅದೊಂದು ತಪಸ್ಸು. ಧ್ಯಾನ. ಚಿತ್ರಕ್ಕೆ ಇಲ್ಲಿ ಕೇವಲ ಹಣ ಮಾತ್ರ ಮುಖ್ಯ ಅಲ್ಲ. ತನು-ಮನ ಅರ್ಪಿಸಿ ಸಿನಿಮಾ ಮಾಡಿದಾಗಲೇ ಪ್ರಯತ್ನಕ್ಕೆ ಫಲ ಸಿಗುತ್ತೆ. ಪ್ರೇಕ್ಷಕರ ಆಶೀರ್ವಾದ ಸಿಗುತ್ತೆ.
ಅದನ್ನೂ ಮಾಡದೇ ಪೆಟ್ರೋಲ್ ಕುಡಿದರೂ ಅಷ್ಟೇ.. ಫಿನಾಯಿಲ್ ಕುಡಿದರೂ ಅಷ್ಟೇ. ಎಷ್ಟೇ ತಿಪ್ಪರಲಾಗ ಹಾಕಿದರೂ ಪ್ರೇಕ್ಷಕರು ಇಲ್ಲಿ ಕ್ಯಾರೇ ಎನ್ನಲ್ಲ. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಮಾತ್ರ ಕಲೆಗೆ ಬೆಲೆ. ಇದಕ್ಕೆ ''ಧುರಂಧರ್ 2'' ಸದ್ಯದ ಉದಾಹರಣೆ.

ಹೌದು, ''ಧುರಂಧರ್ 2''.. ವಾರಕ್ಕೂ ಮೊದಲೇ ಬಾಕ್ಸಾಫೀಸ್‌ಗೆ ಬಂದು ಅಪ್ಪಳಿಸಿರುವ ಸುನಾಮಿ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕೇವಲ ಭಾರತ ಮಾತ್ರ ಕಾತುರವಾಗಿಲ್ಲ. ಬದಲಿಗೆ ಸಪ್ತಸಾಗರದಾಚೆ ಇರುವ ಚಿತ್ರ ರಸಿಕರು ಕೂಡ ಜಾತಕ ಪಕ್ಷಿಯಂತೆ ಈ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಧುರಂಧರ್ 2'' ಚಿತ್ರವನ್ನು ಮಾರ್ಚ್ 18ರಂದೇ ನೋಡುವ ಅವಕಾಶವನ್ನು ಆದಿತ್ಯ ಧರ್ ಕಲ್ಪಿಸಿದ್ದೇ ತಡ ಜನ ಮುಗಿ ಬಿದ್ದು ಚಿತ್ರದ ಟಿಕೆಟ್‌ಗಳನ್ನು ಖರೀದಿ ಮಾಡುತ್ತಿದ್ಧಾರೆ. ಈ ಕ್ರೇಜ್ -ಹೈಪ್ ಖಂಡಿತ ಸಾಮಾನ್ಯವಾದದ್ದಂತು ಅಲ್ಲ.
ನಿಮಗೆ ಗೊತ್ತಿರಲಿ.. ಇಲ್ಲಿಯವರೆಗೆ (ಮಾರ್ಚ್ 13) ಭಾರತದಲ್ಲಿ ''ಧುರಂಧರ್ 2'' ಚಿತ್ರದ 4.7 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಬಿಕರಿಯಾಗಿವೆ. ''ಹಿಂದೂಸ್ತಾನ್ ಟೈಮ್ಸ್'' ಈ ಕುರಿತು ವರದಿಯನ್ನು ಮಾಡಿದ್ದು ಆ ಪ್ರಕಾರ ಚಿತ್ರ ₹24 ಕೋಟಿಯನ್ನು ಈಗಾಗಲೇ ಭಾರತದಲ್ಲಿ ಕೊಳ್ಳೆ ಹೊಡೆದಿದೆ. ನೆನಪಿರಲಿ.. ''ಪೇಯ್ಡ್ ಪ್ರಿವ್ಯೂವ್''ಗೆ ಇನ್ನೂ ನಾಲ್ಕೂವರೆ ದಿನ ಬಾಕಿ ಇದೆ.
ಇನ್ನೂ ಹೊರ ದೇಶದಲ್ಲಿ ಕೇವಲ ಈ ಪ್ರೀಮಿಯರ್ ದಿಂದ ''ಧುರಂಧರ್ 2'' ₹36 ಕೋಟಿಯನ್ನು ಗಳಿಸಿದೆ. ಈ ಮೂಲಕ ಒಟ್ಟಾರೆ ₹60 ಕೋಟಿ ಹಣವನ್ನು ಬಿಡುಗಡೆಯ ಮುನ್ನವೇ ಗಳಿಸಿದೆ ''ಧುರಂಧರ್ 2''.
ವಿಶೇಷ ಅಂದರೆ ಭಾರತದಲ್ಲಿ ''ಧುರಂಧರ್ 2'' ಚಿತ್ರದ ಟಿಕೆಟ್ ದರ ಗಗನಕ್ಕೇರಿದೆ. ಬೆಂಗಳೂರಿನಲ್ಲಿ 2000 ರೂಪಾಯಿ ಇದ್ದರೆ ಮುಂಬೈ ಮತ್ತು ದೆಹಲಿಯಲ್ಲಿ ಟಿಕೆಟ್ ರೇಟ್ 3000 ಗಡಿಯನ್ನು ದಾಟಿದೆ. ಆದರೂ ಕೂಡ ಕಂಡು ಬಂದಿರುವ ಈ ನೂಕು ನುಗ್ಗಲಿನ ವಾತಾವರಣ ಹಲವರನ್ನು ಅಚ್ಚರಿಗೊಳಿಸಿದೆ.

ಒಟ್ನಲ್ಲಿ ಸದ್ಯ ''ಧುರಂಧರ್ 2'' ಹಲವರ ಪಾಲಿಗೆ ಈಗ ಕೇವಲ ಸಿನಿಮಾ ಆಗಿ ಮಾತ್ರ ಉಳಿದಿಲ್ಲ. ಬದಲಿಗೆ ಎಮೋಷನ್ ಆಗಿದೆ. ಇದಕ್ಕೆ ಈ ಚಿತ್ರ ಮಾರ್ಚ್ 18ರಂದು ಮಾಡಿರುವ ಈ ಗಳಿಕೆಯೇ ಸಾಕ್ಷಿ. ''ಧುರಂಧರ್ 2'' ಸುನಾಮಿ ಸದ್ಯ ಗಲ್ಲಾಪೆಟ್ಟಿಗೆಗೆ ಅಪ್ಪಳಿಸಿದ್ದು ಮುಂಬರುವ ದಿನಗಳಲ್ಲಿ ಈ ''ಧುರಂಧರ್ 2'' ಅಬ್ಬರಕ್ಕೆ ಯಾವೆಲ್ಲಾ ದಾಖಲೆ ಉಡೀಸ್ ಆಗಲಿವೆ, ಚಿತ್ರಕ್ಕೆ ಮೊದಲ ದಿನ ಯಾವ ರೀತಿಯ ರೆಸ್ಫಾನ್ಸ್ ಸಿಗುತ್ತೆ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.
Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.
ಮುಂದಿನ 24-48 ಗಂಟೆಗಳಲ್ಲಿ ಭಾರತದಲ್ಲಿ ರೆಗ್ಯುಲರ್ ಬುಕ್ಕಿಂಗ್ ಆರಂಭವಾಗುವ ನಿರೀಕ್ಷೆ ಇದೆ. ಅಡ್ವಾನ್ಸ್ ಕಲೆಕ್ಷನ್ ಸುಲಭವಾಗಿ ₹100 ಕೋಟಿ ಗಡಿ ದಾಟಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿಯುತ್ತಿದ್ದಾರೆ. ಹಾಗೊಂದು ವೇಳೆ ಇದು ನಿಜಾ ಆಗಿದ್ದೇ ಆದಲ್ಲಿ 2026ರ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವುದಲ್ಲದೇ ಹಲವು ದಾಖಲೆಗಳನ್ನು ''ಧುರಂಧರ್ 2'' ಪುಡಿ ಪುಡಿ ಮಾಡಿದಂತಾಗಲಿದೆ.


Click it and Unblock the Notifications











