Dhurandhar 2 Box Office Day 9 ; ಧುರಂಧರ್ ಪರಾಕ್ರಮ , ಕೇವಲ 9 ದಿನ - ಬಾಕ್ಸಾಫೀಸ್‌ನ ನಯಾ ಸುಲ್ತಾನ್‌ ಆದ ರಣ್ವೀರ್ ಸಿಂಗ್

ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಕೊರೊನಾದ ನಂತರ ಬಾಲಿವುಡ್ಡಿಗೆ ಅಕ್ಷರಶ ಗರ ಬಡಿದಿತ್ತು. 2022ರಲ್ಲಿ ಕನ್ನಡ ಚಿತ್ರರಂಗ ಪಳ ಪಳ ಅಂತ ಹೊಳೆಯುತ್ತಿದ್ದಾಗ ಮಂಕಾಗಿದ್ದ ಹಿಂದಿ ಉದ್ಯಮ ಚೇತರಿಸಿಕೊಂಡಿದ್ದು 2023ರಲ್ಲಿ.

2023ರಲ್ಲಿ ''ಜವಾನ್'' .. ''ಪಠಾಣ್'' .. ''ಗದರ್‌ 2'' .. ''ಅನಿಮಲ್'' .. ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಗೆಲುವಿನ ನಗೆ ಬೀರಿದ್ದ ಬಾಲಿವುಡ್‌ನಲ್ಲಿ ಕಳೆದ ವರ್ಷ ''ಸೈಯಾರ''.. ''ಛಾವಾ''.. ''ಸಿತಾರೆ ಜಮೀನ್ ಪರ್''.. ''ರೇಡ್ 2''.. ಸೇರಿ ಕೆಲ ಬೆರಳಣಿಯಷ್ಟೇ ಚಿತ್ರಗಳು ಮಾತ್ರ ಗೆದ್ದವು.

Dhurandhar 2 Mega-Storm Ranveer Singh Smashes 700 Cr India Net in 9 Days

ಹೀಗೆ ಕಳೆದ ಎರಡು ಮೂರು ವರ್ಷಗಳಿಂದ ಅಲ್ಲೊಂದು.. ಇಲ್ಲೊಂದು.. ಚಿತ್ರಗಳಷ್ಟೇ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದವು. ಗೆಲ್ಲುತ್ತಿದ್ದವಾದರೂ ಬಾಲಿವುಡ್‌ಗೆ ಬೇಕಿದ್ದ ಅಲೆ ಎದ್ದಿರಲಿಲ್ಲ. ದಕ್ಷಿಣ ಭಾರತೀಯ ಚಿತ್ರರಂಗಗಳ ಅಬ್ಬರಕ್ಕೆ ಬ್ರೇಕ್ ಹಾಕುವಂತಹ ಸಿನಿಮಾ ಬಂದಿರಲಿಲ್ಲ.

ಈ ಹಿನ್ನೆಲೆ ಬಾಲಿವುಡ್‌ನಲ್ಲಿ ಚಿಂತೆ ಮನೆ ಮಾಡಿತ್ತು. ಈ ಚಿಂತೆಯನ್ನು ಕಳೆದ ವರ್ಷಂದ ಅಂತ್ಯಕ್ಕೆ ಬಂದ ''ಧುರಂಧರ್'' ದೂರ ಮಾಡಿತ್ತು. ಈಗ ''ಧುರಂಧರ್ 2'' ಸರದಿ.

ಹೌದು, ''ಧುರಂಧರ್-2''.. ತೆರೆಗೆ ಬಂದು ನಿನ್ನೆಗೆ (ಮಾರ್ಚ್ 27) 9 ದಿನಗಳಾಗಿವೆ. ಈ 9 ದಿನದಲ್ಲಿ ಹತ್ತು ಹಲವು ದಾಖಲೆಗಳನ್ನು ಮುರಿದಿರುವ ''ಧುರಂಧರ್-2'' ನಿನ್ನೆ (ಮಾರ್ಚ್ 27)₹41.55 ಕೋಟಿಯನ್ನು ದೋಚಿದೆ. ಈ ಮೂಲಕ ಕೇವಲ 9 ದಿನದಲ್ಲಿ ₹715.72 ಕೋಟಿ ಹಣವನ್ನು ಕೇವಲ ಭಾರತದಲ್ಲಿಯೇ ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ಧುರಂಧರ್ 2'' ಚಿತ್ರದ 9 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಪೇಯ್ಡ್ ಪ್ರೀಮಿಯರ್ (ಬುಧವಾರ) ₹43 ಕೋಟಿ
ಮೊದಲ ದಿನ (ಗುರುವಾರ)₹102 ಕೋಟಿ
ಎರಡನೇ ದಿನ (ಶುಕ್ರವಾರ) ₹80.72 ಕೋಟಿ
ಮೂರನೇ ದಿನ (ಶನಿವಾರ) ₹113 ಕೋಟಿ
ನಾಲ್ಕನೇ ದಿನ (ಭಾನುವಾರ)₹114.85 ಕೋಟಿ
ಐದನೇ ದಿನ ( ಸೋಮವಾರ)₹65 ಕೋಟಿ
ಆರನೇ ದಿನ (ಮಂಗಳವಾರ) ₹₹56.60ಕೋಟಿ
ಏಳನೇ ದಿನ (ಬುಧವಾರ) ₹48.75 ಕೋಟಿ
ಎಂಟನೇ ದಿನ (ಗುರುವಾರ) ₹49.70ಕೋಟಿ
ಒಂಬತ್ತನೇ ದಿನ (ಶುಕ್ರವಾರ)₹₹41.55 ಕೋಟಿ

ಒಟ್ಟು ಗಳಿಕೆ - ₹715.72 ಕೋಟಿ

dhurandhar-2-mega-storm-ranveer-singh-smashes-700-cr-india-net-in-9-days

ಐತಿಹಾಸಿಕ ದಾಖಲೆ-ರಣ್ವೀರ್ ಸಿಂಗ್ ಹೊಸ ಬಾಕ್ಸಾಫೀಸ್ ಸುಲ್ತಾನ್

ಹಿಂದಿ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹಲವು ಚಿತ್ರಗಳು ಅಬ್ಬರಿಸಿವೆ. ಹಲವಾರು ದಾಖಲೆಗಳನ್ನು ಕೂಡ ಬರೆದಿವೆ. ಆದರೆ.. ಎಲ್ಲವನ್ನೂ ಸಾಧಿಸಿ ಭೇದಿಸಿದ ಬಾಲಿವುಡ್‌ಗೆ ಮಾತ್ರ ಇಲ್ಲಿಯವರೆಗೆ ಕೇವಲ ಭಾರತದಲ್ಲಿ ₹700 ಕೋಟಿಯನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗಿರಲಿಲ್ಲ.

ನಿಜಾ.. ''ದಂಗಲ್''.. ''ಪಠಾಣ್'' .. ಸೇರಿ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ 1000 ಕೋಟಿಯನ್ನು ಗಳಿಸಿವೆ. ಆದರೆ.. ಆ ಗಳಿಕೆ ಕೇವಲ ಭಾರತದಲ್ಲಿ ಮಾಡಿದ್ದಲ್ಲ. ಬದಲಿಗೆ ವರ್ಲ್ಡ್ ವೈಡ್ ಪ್ರದರ್ಶನ ಕಂಡು ಚಿತ್ರ ಮಾಡಿದ್ದ ಗಳಿಕೆ ಅದು. ವಿಶೇಷ ಅಂದರೆ ಹಿಂದಿ ಉದ್ಯಮದ ಘಟಾನುಘಟಿಗಳಿಂದ ಮಾಡಲಾಗದ ಈ ಸಾಧನೆಯನ್ನು ರಣವೀರ್ ಸಿಂಗ್ ಒಂದಲ್ಲ ಬದಲಿಗೆ ಎರಡು ಬಾರಿ ಮಾಡಿದ್ದಾರ. ಈ ಮೂಲಕ ಬಾಕ್ಸಾಫೀಸ್‌ನ ಹೊಸ ಸುಲ್ತಾನ್‌ನಾಗಿ ಹೊರ ಹೊಮ್ಮಿದ್ದಾರೆ.

ಹೌದು, ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ''ಧುರಂಧರ್'' ಬಾಲಿವುಡ್‌ನ ಇತಿಹಾಸದಲ್ಲಿಯೇ ಕೇವಲ ಭಾರತದಲ್ಲಿ 700 ಕೋಟಿ ಕೊಳ್ಳೆ ಹೊಡೆದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ''ಧುರಂಧರ್ 2'' ಕೂಡ 700 ಕೋಟಿಯ ಗಡಿಯನ್ನು ದಾಟಿದೆ. ಈ ಮೂಲಕ ಹೊಸದೊಂದು ಇತಿಹಾಸವನ್ನು ''ಧುರಂಧರ್'' ಫ್ರಾಂಚೈಸಿ ಬರೆದಿದೆ. 700 ಕೋಟಿಯ ಕ್ಲಬ್‌ನಲ್ಲಿ ಎರಡು ಬಾರಿ ರಣವೀರ್ ಸಿಂಗ್ ಹೆಸರು ದಾಖಲಾಗಿದೆ. ಈ ದಾಖಲೆ ಅಳಿಸಿ ಹಾಕುವುದು ಸುಲಭ ಅಲ್ಲ.

ಸದ್ಯ 700 ಕೋಟಿಯ ಗಡಿಯನ್ನು ದಾಟಿ ''ಧುರಂಧರ್ 2'' ಬಾಕ್ಸಾಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಸದ್ಯದ ಈ ನಾಗಾಲೋಟ ನೋಡುತ್ತಿದ್ದರೆ ಕೇವಲ ಭಾರತದಲ್ಲಿಯೇ ''ಧುರಂಧರ್ 2'' 1000 ಕೋಟಿ ದೋಚುತ್ತೆ ಎನ್ನುವ ವಿಶ್ವಾಸದ ನುಡಿ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಭಾರತದಲ್ಲಿ ''ಧುರಂಧರ್ 2'' ಸಾವಿರ ಕೋಟಿ ಗಳಿಸುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhurandhar 2 Collection Update: With a ₹41 Cr haul on Day 9, the Ranveer Singh starrer hits ₹712 Cr in India and over ₹1,128 Cr worldwide. Check out the day-wise box office report and upcoming projections.
Read more about: Dhurandhar 2 ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X