'ಪುಷ್ಪ' ದಾಖಲೆ ಧೂಳಿಪಟ; 'ಬಾಹುಬಲಿ' ದಾಖಲೆ ಹಿಂದಿಕ್ಕಲು 'ಧುರಂಧರ್‌'ಗೆ ಇನ್ನೆಷ್ಟು ಕೋಟಿ ಬೇಕು?

ಬಾಕ್ಸಾಫೀಸ್‌ನಲ್ಲಿ 'ಧುರಂಧರ್‌'-2 ಆರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ಇತ್ತೀಚೆಗೆ ಬಂದ ಅಕ್ಷಯ್‌ ಕುಮಾರ್ ನಟನೆಯ 'ಭೂತ್ ಬಂಗ್ಲಾ' ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡ್ತಿದೆ. ಆದರೂ ತಿಂಗಳ ಹಿಂದೆ ತೆರೆಗಪ್ಪಳಿಸಿದ 'ಧುರಂಧರ್' ಸೀಕ್ವೆಲ್ ಆರ್ಭಟ ನಿಧಾನವಾಗಿ ಮುಂದುವರೆದಿದೆ.

ಭಾರತದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಆದಿತ್ಯಧರ್ ಸಿನಿಮಾ 3ನೇ ಸ್ಥಾನಕ್ಕೆ ಏರಿದೆ. ಅಮೀರ್ ಖಾನ್ ನಟನೆಯ 'ದಂಗಲ್' ಮೊದಲ ಸ್ಥಾನದಲ್ಲಿ ಇದ್ದರೆ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ಎರಡನೇ ಸ್ಥಾನದಲ್ಲಿದೆ. ಇನ್ನೊಂದು ವಾರದಲ್ಲಿ ರಣ್‌ವೀರ್ ಸಿಂಗ್ ಸಿನಿಮಾ 2ನೇ ಸ್ಥಾನಕ್ಕೇರುವ ಲೆಕ್ಕಾಚಾರ ಶುರುವಾಗಿದೆ.

Dhurandhar 2 Roars Towards Record Baahubali 2 Set to Be Overtaken Soon

ಐಪಿಎಲ್ ಆರ್ಭಟ, ಪೈರಸಿ ನಡುವೆಯೂ 'ಧುರಂಧರ್- 2' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಪ್ರಾಪೊಗಂಡಾ ಸಿನಿಮಾ ಎಂದು ಕೆಲವರು ಟೀಕಿಸಿದ್ದರು. ಆದರೂ ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ಎರಡು ವಾರ ದೇಶಾದ್ಯಂತ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡು ಸದ್ದು ಮಾಡಿತ್ತು. 'ಧುರಂಧರ್' ಸಿನಿಮಾ ತೆರೆಕಂಡ 4 ತಿಂಗಳ ಅಂತರದಲ್ಲಿ ಸೀಕ್ವೆಲ್ ಬಂದು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 4 ತಿಂಗಳ ಅಂತರದಲ್ಲಿ 'ಧುರಂಧರ್' ಸರಣಿ ಸಿನಿಮಾಗಳು 3000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದಂತಾಗಿದೆ.

34 ದಿನಗಳ ಕಲೆಕ್ಷನ್

ತಿಂಗಳು ಕಳೆದರೂ ಬಾಕ್ಸಾಫೀಸ್‌ನಲ್ಲಿ 'ಧುರಂಧರ್'-2 ದರ್ಬಾರ್ ನಿಂತಿಲ್ಲ. 34ನೇ ದಿನ(ಏಪ್ರಿಲ್ 21) ಭಾರತದಲ್ಲಿ ಒಟ್ಟು 3854 ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಆ ಮೂಲಕ 2 ಕೋಟಿ ರೂ. ಕಲೆಕ್ಷನ್ ಆಗಿದೆ. ಒಟ್ಟಾರೆ ವಿಶ್ವದಾದ್ಯಂತ 34 ದಿನಗಳಲ್ಲಿ 1,761.76 ಕೋಟಿ ರೂ. ಗಳಿಕೆ ಕಂಡು ಸಿನಿಮಾ ಗಮನ ಸೆಳೆದಿದೆ. ಭಾರತದಲ್ಲಿ 1,339.76 ಕೋಟಿ ರೂ. ಗ್ರಾಸ್ ಕಲೆಕ್ಷ್ ಜೊತೆಗೆ 1,119.29 ರೂ. ನೆಟ್ ಕಲೆಕ್ಷನ್ ಮಾಡಿದೆ. ವಾರದ ದಿನಗಳಲ್ಲಿ ಕೂಡ ಸಿನಿಮಾ ಗಳಿಕೆ ಚೆನ್ನಾಗಿದೆ.

Dhurandhar 2 Roars Towards Record Baahubali 2 Set to Be Overtaken Soon

'ಬಾಹುಬಲಿ' ದಾಖಲೆ ಮುರಿತ್ತಾನಾ?

Sacnilk.com ವರದಿ ಪ್ರಕಾರ 'ಬಾಹುಬಲಿ- 2' ಸಿನಿಮಾ ಒಟ್ಟು 1,788.06 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇನ್ನು 25 ಕೋಟಿ ರೂ. ಗಳಿಸಿದ್ರೆ 'ಧುರಂಧರ್'-2, ಪ್ರಭಾಸ್ ಸಿನಿಮಾ ದಾಖಲೆ ಮುರಿಯಲಿದೆ. ಈ ವೀಕೆಂಡ್ ದೊಡ್ಡಮಟ್ಟದಲ್ಲಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಐಪಿಎಲ್ ಎಫೆಕ್ಟ್ ಸಿನಿಮಾ ಕಲೆಕ್ಷನ್ ಮೇಲೆ ಆಗಿರುವುದು ನಿಜ.

ಹೇಗಿದೆ ಲೆಕ್ಕಾಚಾರ?

9 ವರ್ಷಗಳ ಹಿಂದೆ ಟಿಕೆಟ್ ದರ ಇಷ್ಟು ಇರಲಿಲ್ಲ. ಅವತ್ತಿನ ಕಾಲಕ್ಕೆ 'ಬಾಹುಬಲಿ- 2' ಸಿನಿಮಾ ಕಲೆಕ್ಷನ್ ಬಹಳ ಜಾಸ್ತಿ ಎನ್ನುವ ವಾದ ಕೆಲವರದ್ದು. ಆ ಲೆಕ್ಕದಲ್ಲಿ 'ಧುರಂಧರ್- 2' ಹತ್ತಿರಕ್ಕೂ ಸುಳಿಯುವುದಿಲ್ಲ ಎನ್ನುವವರು ಇದ್ದಾರೆ. ಗಲ್ಫ್ ದೇಶಗಳಲ್ಲಿ 'ಧುರಂಧರ್- 2' ಸಿನಿಮಾ ಬ್ಯಾನ್ ಆಗಿದೆ. ಹಾಗಿದ್ದರೂ ಇಷ್ಟು ಕಲೆಕ್ಷನ್ ಮಾಡಿರುವುದು ಹೆಚ್ಚು ಎನ್ನುವ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ.

ಓಟಿಟಿ ಸ್ಟ್ರೀಮಿಂಗ್?

'ಧುರಂಧರ್- 2' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಬಾಲಿವುಡ್ ಸಿನಿಮಾಗಳು ತೆರೆಕಂಡ 2 ತಿಂಗಳ ಬಳಿಕ ಓಟಿಟಿಗೆ ಬರುತ್ತವೆ. ಆ ಲೆಕ್ಕದಲ್ಲಿ ಮೇ 3ನೇ ವಾರ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ. ಜಿಯೋ ಹಾಟ್‌ಸ್ಟರ್ 150 ಕೋಟಿ ರೂ.ಗೆ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಬಹುತೇಕರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ್ದಾರೆ. ಹಾಗಾಗಿ ಓಟಿಟಿಯಲ್ಲಿ ರೆಸ್ಪಾನ್ಸ್ ಹೇಗಿರುತ್ತದೆ ಕಾದು ನೋಡಬೇಕಿದೆ.

Read more about: baahubali Dhurandhar 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X