Dhurandhar-2 Day 7 Boxoffice: 'ಧುರಂಧರ್- 2' ಫಸ್ಟ್ ವೀಕ್ ಕಲೆಕ್ಷನ್ ಎಷ್ಟು? ಡಬಲ್ ಆಯ್ತು ಕನ್ನಡ ಶೋಗಳು

ಸ್ಪೈ ಥ್ರಿಲ್ಲರ್ 'ಧುರಂಧರ್- 2' ಸಿನಿಮಾ ಆರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೊಟಿ ಕೊಳ್ಳೆ ಹೊಡೆದು ಸಿನಿಮಾ ಮುನ್ನುಗ್ಗುತ್ತಿದೆ. ಈಗಾಗಲೇ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವುದಾಗಿ ವರದಿಯಾಗಿದೆ. ಕರ್ನಾಟಕದಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕನ್ನಡ ಶೋಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದು ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಹೆಚ್ಚಿಸಿದೆ.

ಉತ್ತರ ಭಾರತ ಬಿಟ್ರೆ ಕರ್ನಾಟಕದಲ್ಲೇ 'ಧುರಂಧರ್- 2' ಕಲೆಕ್ಷನ್ ಹೆಚ್ಚಾಗಿದೆ. ಕನ್ನಡ ಸಿನಿರಸಿಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಕನ್ನಡ ವರ್ಷನ್ ಬಿಡುಗಡೆ ಕೊಂಚ ತಡವಾಗಿತ್ತು. ಸೆನ್ಸಾರ್ ಸಮಸ್ಯೆಯಿಂದ ಹೀಗಾಗಿತ್ತು. ಇದೀಗ ನಿಧಾನವಾಗಿ ಶೋಗಳ ಸಂಖ್ಯೆ ಹೆಚ್ಚಿಸಲಾಗ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡ ವರ್ಷನ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ.

Dhurandhar-2 Storms Box Office Crosses 1000 Crore Amid Massive Karnataka Response

ಆದಿತ್ಯಧರ್ ಪ್ರಯತ್ನಕ್ಕೆ ಅದ್ಭುತ ಯಶಸ್ಸು ಸಿಕ್ಕಿದೆ. ಪ್ರೊಪಾಗಂಡ ಸಿನಿಮಾ, ಬಿಜೆಪಿ ಪ್ರಚಾರಕ್ಕೆ ಮಾಡಿರುವ ಸಿನಿಮಾ ಎನ್ನುವ ಟೀಕೆಗಳು ಕೆಲವರಿಂದ ಶುರುವಾಗಿದೆ. ಅದನ್ನೆಲ್ಲಾ ಮೀರಿ 'ಧುರಂಧರ್-2' ಸಿನಿಮಾ ಮುನ್ನುಗ್ಗುತ್ತಿದೆ. ಸಾಕಷ್ಟು ಕಡೆಗಳಲ್ಲಿ ವಾರದ ಬಳಿಕ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ.

ಫಸ್ಟ್ ವೀಕ್ ಕಲೆಕ್ಷನ್

'ಧುರಂಧರ್- 2' ಸಿನಿಮಾ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. Sacnilk ವರದಿ ಪ್ರಕಾರ ಭಾರತದಲ್ಲಿ 623 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. 744 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ 1006 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಹೇಳಲಾಗ್ತಿದೆ. ಆ ಮೂಲಕ ಸಿನಿಮಾ ಹೊಸ ಇತಿಹಾಸ ನಿರ್ಮಿಸಿದೆ. ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿದೆ.

'ಪುಷ್ಪ-2' ರೆಕಾರ್ಡ್ ಸೇಫ್

ತೆಲುಗಿನ 'ಪುಷ್ಪ'-2 ಸಿನಿಮಾ ಕೂಡ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆ ಚಿತ್ರಕ್ಕೆ ಹೋಲಿಸಿದರೆ 'ಧುರಂಧರ್- 2' ಆರ್ಭಟ ಕೊಂಚ ಕಮ್ಮಿದೆ. ಅಲ್ಲು ಅರ್ಜುನ್ ಸಿನಿಮಾ ಮೊದಲ ವಾರ 1067 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ 'ಪುಷ್ಪ'-2 ಚಿತ್ರದ ಒಟ್ಟಾರೆ ಕಲೆಕ್ಷನ್ ದಾಖಲೆಯನ್ನು 'ಧುರಂಧರ್- 2' ಮುರಿಯುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಕಲೆಕ್ಷನ್

ರಾಜ್ಯದಲ್ಲಿ 'ಧುರಂಧರ್- 2' ಚಿತ್ರಕ್ಕೆ ಮೊದಲ ದಿನದಿಂದಲೂ ಒಳ್ಳೆ ರೆಸ್ಪಾನ್ಸ್ ಇದೆ. ಕರ್ನಾಟಕದಲ್ಲಿ 7 ದಿನಕ್ಕೆ 70 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ ಈ ಮಟ್ಟಿಗೆ ರೆಸ್ಪಾನ್ಸ್ ಸಿಗುತ್ತಿರುವುದು ವಿಶೇಷ. ಅದರಲ್ಲೂ ಬೆಂಗಳೂರಿನ ಪಾಲು ದೊಡ್ಡದ್ದಿದೆ.

ಕನ್ನಡ ಶೋಗಳ ಸಂಖ್ಯೆ

ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. 'ಜೈಲರ್', 'ಪುಷ್ಪ'-2 ಬಳಿಕ 'ಧುರಂಧರ್'-2 ಚಿತ್ರವನ್ನು ಕನ್ನಡದಲ್ಲೇ ನೋಡಲು ಸಾಕಷ್ಟು ಜನ ಮುಗಿಬಿದ್ದಿದ್ದಾರೆ. ಕೆಲವೆಡೆ ಶೋಗಳ ಸಂಖ್ಯೆ ಹೆಚ್ಚಿಸುವಂತೆ ಕೇಳುತ್ತಿದ್ದಾರೆ. ಎರಡು ದಿನಗಳ ಹಿಂದೆ ರಾಜ್ಯದ್ಯಂತ 70 ಕನ್ನಡ ವರ್ಷನ್ ಶೋಗಳು ಪ್ರದರ್ಶನವಾಗಿದ್ದವು. ಆದರೆ ಇವತ್ತು(ಮಾರ್ಚ್ 26) ಒಟ್ಟು 130ಕ್ಕೂ ಅಧಿಕ ಶೋಗಳಲ್ಲಿ ಕನ್ನಡದಲ್ಲೇ ಜನ ಸಿನಿಮಾ ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ 45, ನೆಲಮಂಗಲ 35, ದೊಡ್ಡಬಳ್ಳಾಪುರ 4, ತುಮಕೂರು 4, ಮೈಸೂರಿನಲ್ಲಿ 9, ಮಂಡ್ಯ 8, ಶಿವಮೊಗ್ಗ 3 ಹೀಗೆ ಹಲವು ಜಿಲ್ಲೆಗಳಲ್ಲಿ ಕನ್ನಡ ವರ್ಷನ್ ಸದ್ದು ಮಾಡ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X