Dhurandhar-2 Day 3 Boxoffice: 'ಧುರಂಧರ್'-2 ಸುನಾಮಿ; ಮೊದಲ ದಿನಕ್ಕಿಂತ 3ನೇ ದಿನ ಹೆಚ್ಚು ಕಲೆಕ್ಷನ್

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ವಿಶ್ವದಾದ್ಯಂತ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೀಮಿಯರ್ ಶೋಗಳು ಸೇರಿ ಮೊದಲ 3 ದಿನಕ್ಕೆ ಭಾರತದಲ್ಲೇ 300 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಟೀಕೆಗಳನ್ನು ಮೀರಿ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಪರಿಣಾಮ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿದೆ.

ಆದಿತ್ಯಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಚಮತ್ಕಾರ ಮಾಡಿದೆ. 4 ತಿಂಗಳ ಹಿಂದೆ 'ಧುರಂಧರ್' ಚಿತ್ರ ತೆರೆಕಂಡು 1600 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಅದನ್ನು ಸೀಕ್ವೆಲ್ ಮೀರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಎಲ್ಲೆಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಟಿಕೆಟ್ ದರ ಹೆಚ್ಚಿದ್ದರೂ ತಲೆ ಕೆಡಿಸಿಕೊಳ್ಳದೇ ಜನ ಸಿನಿಮಾ ನೋಡುತ್ತಿದ್ದಾರೆ. ಯುಗಾದಿ, ರಂಜಾನ್ ವೀಕೆಂಡ್ ಚಿತ್ರದ ಗಳಿಕೆಗೆ ವರವಾಗಿದೆ. 4ನೇ ದಿನವಾದ ಭಾನುವಾರ ಮತ್ತೊಂದು ದಾಖಲೆ ನಿರ್ಮಾಣವಾಗುವ ಸುಳಿವು ಸಿಕ್ಕಿದೆ.

Dhurandhar-2 Storms Box Office Ranveer Singh Starrer Crosses 300 Crore in 3 Days

3 ದಿನದ ಕಲೆಕ್ಷನ್

ಗುರುವಾರವೇ 'ಧುರಂಧರ್- 2' ಸಿನಿಮಾ ಪ್ರೀಮಿಯರ್ ಶೋಗಳು ಶುರುವಾಗಿತ್ತು. ಮೊದಲ ಭಾಗ ನೋಡಿದವರು 2ನೇ ಭಾಗ ಚಿತ್ರಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಾಗಾಗಿ ಫಸ್ಟ್ ಶೋ ನೋಡಲು ಉತ್ಸಾಹ ತೋರಿಸಿದ್ದರು. ಚಿತ್ರದ ಬಗ್ಗೆ ಕೆಲವರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಆದರೂ ಸಿನಿಮಾ ನೋಡುವವರನ್ನು ತಡೆಯೋಕೆ ಸಾಧ್ಯವಾಗ್ತಿಲ್ಲ. 3ನೇ ದಿನಕ್ಕೆ ಚಿತ್ರ ಭಾರತದಲ್ಲಿ 113 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ Sacnilk ವೆಬ್ ಸೈಟ್ ವರದಿ ಮಾಡಿದೆ.

400 ಕೋಟಿ ರೂ. ಗ್ರಾಸ್

ಭಾರತದಲ್ಲಿ ಶನಿವಾರ 20822 ಶೋಗಳಲ್ಲಿ 'ಧುರಂಧರ್- 2' ಸಿನಿಮಾ ಪ್ರದರ್ಶನವಾಗಿತ್ತು. ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿತ್ತು. ಪರಿಣಾಮ ಒಂದೇ 113 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಗುರವಾರ ಪ್ರೀಮಿಯರ್‌ ಶೋಗಳಿಗೆ 43 ಕೋಟಿ ರೂ, ಬಳಿಕ ಶುಕ್ರವಾರ 102 ಕೋಟಿ ರೂ, 2ನೇ ದಿನ 80 ಕೋಟಿ ರೂ, ಹಾಗೂ 3ನೇ ದಿನ 113 ಕೋಟಿ ರೂ, ಸೇರಿ ಈಗಾಗಲೇ ನೆಟ್ ಕಲೆಕ್ಷನ್ 300 ಕೋಟಿ ರೂ. ಗಡಿ ದಾಟಿದೆ. ಒಟ್ಟಾರೆ ಗ್ರಾಸ್ ಕಲೆಕ್ಷನ್ 400 ಕೋಟಿ ರೂ,ಗೂ ಅಧಿಕ ಎನ್ನುವಂತಾಗಿದೆ.

ಮೊದಲ ದಿನಕ್ಕಿಂತ ಹೆಚ್ಚು

ಯಾವುದೇ ಸಿನಿಮಾ ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡುತ್ತದೆ. ಆದರೆ ಕೆಲ ಸಿನಿಮಾಗಳು ಅದಕ್ಕೆ ಭಿನ್ನ ಎನ್ನುವಂತೆ ನಿಧಾನವಾಗಿ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತ ಸಾಗುತ್ತವೆ. ಈ ಹಿಂದೆ 'ಧುರಂಧರ್' ಚಿತ್ರದ ಅದೇ ರೀತಿ ದಾಖಲೆ ಬರೆದಿತ್ತು. ಸೀಕ್ವೆಲ್ ಕೂಡ ಅದೇ ಹಾದಿಯಲ್ಲಿದೆ. ಮೊದಲ ದಿನ 102 ಕೋಟಿ ರೂ, ನೆಟ್ ಕಲೆಕ್ಷನ್ ಮಾಡಿದ್ದ ಸಿನಿಮಾ 3ನೇ ದಿನ 113 ಕೋಟಿ ದೋಚಿದೆ.

ಕರ್ನಾಟಕದಲ್ಲಿ ದಾಖಲೆ

ಉತ್ತರ ಭಾರತ ಮಾತ್ರವಲ್ಲ ದಕ್ಷಿಣದಲ್ಲಿ ಅದರಲ್ಲೂ ಕರ್ನಾಟಕದಲ್ಲಿ 'ಧುರಂಧರ್'-2 ದರ್ಬಾರ್ ಜೋರಾಗಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬಂದಿರುವುದು ಹೆಚ್ಚಿನ ಜನರನ್ನು ಸೆಳೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ 40 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ 100 ಕೋಟಿ ರೂ. ಕೊಳ್ಳೆ ಹೊಡೆದರೂ ಅಚ್ಚರಿ ಪಡಬೇಕಿಲ್ಲ ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ. ಭಾನುವಾರ ಕರ್ನಾಟಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್‌ನಿಂದ 8 ಕೋಟಿ ರೂ. ಬಾಚಿಕೊಂಡಿದೆ. ಸಾಕಷ್ಟು ಶೋಗಳ ಟಿಕೆಟ್ ಸೋಲ್ಡೌಟ್ ಆಗೋಗಿದೆ.

More from Filmibeat

Read more about: ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X