'ಕೆಜಿಎಫ್' -2 ದಾಖಲೆ ಮೇಲೆ ಕಣ್ಣಿಟ್ಟ 'ಧುರಂಧರ್-2'; ಮುಂದೆ ಬಾಕ್ಸಾಫೀಸ್ ಕಥೆಯೇನು?

ರಣ್‌ವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಮಾಧವನ್, ಸಾರಾ ಅರ್ಜುನ್ ನಟನೆಯ 'ಧುರಂಧರ್-2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಒಂದೇ ವಾರದಲ್ಲಿ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ಇದೀಗ 'ಕೆಜಿಎಫ್' -2 ದಾಖಲೆ ಹಿಂದಿಕ್ಕಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ ಮೇಲೇರುತ್ತಿದೆ.

ಆದಿತ್ಯಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. 7 ದಿನಕ್ಕೆ 1006 ಕೋಟಿ ರೂ. ಬಾಚಿದ್ದ ಸಿನಿಮಾ 2ನೇ ವಾರವೂ ಉತ್ತಮ ಪ್ರದರ್ಶನ ಮುಂದುವರೆಸಿದೆ. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡು ಬರ್ತಿದೆ. ರಿಪೀಟ್ ಆಡಿಯನ್ಸ್ ಸಂಸ್ಥೆ ಹೆಚ್ಚುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಧುರಂಧರ್-2' ಈಗ 8ನೇ ಸ್ಥಾನಕ್ಕೆ ಏರಿದೆ.

Dhurandhar-2 storms past 1000 crore in 7 days set to beat KGF Chapter 2 record

ನಂಬರ್ ವನ್ ಸ್ಥಾನದಲ್ಲಿ ಆಮೀರ್ ಖಾನ್ ನಟನೆಯ 'ದಂಗಲ್' ಸಿನಿಮಾ ಜಾಗ ಮಾಡಿಕೊಂಡಿದೆ. ನಿತೇಶ್ ತಿವಾರಿ ನಿರ್ದೇಶನದ ಆ ಸಿನಿಮಾ ವಿಶ್ವದಾದ್ಯಂತ 1,968 ರಿಂದ 2,024 ರೂ, ಕಲೆಕ್ಷನ್ ಮಾಡಿದ ಅಂದಾಜಿದೆ. 2ನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶದ 'ಬಾಹುಬಲಿ': ದಿ ಕನ್‌ಕ್ಲೂಷನ್ ಸಿನಿಮಾ ಇದೆ. 3ನೇ ಸ್ಥಾನದಲ್ಲಿ 'ಪುಪ್ಪ'-2 ಸಿನಿಮಾ ಸದ್ದು ಮಾಡ್ತಿದೆ.

1200ರಿಂದ 1250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ 'ಕೆಜಿಎಫ್-2' ಸಿನಿಮಾ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 8ನೇ ದಿನಕ್ಕೆ 'ಕಲ್ಕಿ 2898AD' ಹಾಗೂ 'ಪಠಾಣ್' ಸಿನಿಮಾಗಳ ದಾಖಲೆ ಮುರಿದು 'ಧುರಂಧರ್-2' ಗೆಲುವಿನ ಓಟ ಮುಂದುವರೆಸಿದೆ. ಈಗಾಗಲೇ ಸಿನಿಮಾ ಪೈರಸಿ ಆಗಿದೆ. ಅದು ಕೂಡ ಚಿತ್ರದ ಹಿನ್ನಡೆಗೆ ಕಾರಣವಾಗ್ತಿದೆ.

ಈ ವೀಕೆಂಡ್‌ನಲ್ಲಿ ಯಶ್ ನಟನೆಯ 'ಕೆಜಿಎಫ್-2' ಸಿನಿಮಾ ಕಲೆಕ್ಷನ್ ದಾಖಲೆಯನ್ನು 'ಧುರಂಧರ್-2' ಹಿಂದಿಕ್ಕಲಿದೆ.

More from Filmibeat

Read more about: kgf Dhurandhar 2 bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X