ಸಾವಿರ ಕೋಟಿಯ ಸರದಾರನಾಗುವತ್ತ ರಣವೀರ್ ಸಿಂಗ್ ; ಧುರಂಧರ್ 2 ಅಬ್ಬರ - 3ನೇ ಶನಿವಾರವೂ ಭರ್ಜರಿ ಗಳಿಕೆ
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು.
ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗುತ್ತಿದ್ದಂತೆಯೇ ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ತೆರೆಗೆ ಬಂದ ''ಧುರಂಧರ್ 2'' ಚಿತ್ರದ ಹವಾ 17 ದಿನವಾದರು ಕೂಡ ಕಡಿಮೆ ಆಗಿಲ್ಲ.

ಹೌದು, ''ಧುರಂಧರ್ 2'' ತೆರೆಗೆ ಬಂದು ನಿನ್ನೆಗೆ ( ಏಪ್ರಿಲ್ 4) 17 ದಿನಗಳಾಗಿವೆ. ಆದರೆ.. ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬದಲಿಗೆ ಬಾಕ್ಸಾಫೀಸ್‌ನಲ್ಲಿ ''ಧುರಂಧರ್ 2'' ಅಬ್ಬರಿಸುತ್ತಲೇ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ (ಏಪ್ರಿಲ್ 4) ಅಂದರೆ ಮೂರನೇ ಶನಿವಾರ ''ಧುರಂಧರ್ 2'' ಕೇವಲ ಭಾರತದಲ್ಲಿ ₹25.65 ಕೋಟಿ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಮೂಲಕ ಈ 17 ದಿನಗಳಲ್ಲಿ ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿರುವ ''ಧುರಂಧರ್ 2'' ₹985.02 ಕೋಟಿ ಕೊಳ್ಳೆ ಹೊಡೆದಿದೆ.
ಸ್ಯಾಕ್ನಿಲ್ ಪ್ರಕಾರ ''ಧುರಂಧರ್ 2'' ಚಿತ್ರದ 17 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಪೇಯ್ಡ್ ಪ್ರೀಮಿಯರ್ (ಬುಧವಾರ) ₹43 ಕೋಟಿ
ಮೊದಲ ದಿನ (ಗುರುವಾರ)₹102 ಕೋಟಿ
ಎರಡನೇ ದಿನ (ಶುಕ್ರವಾರ) ₹80.72 ಕೋಟಿ
ಮೂರನೇ ದಿನ (ಶನಿವಾರ) ₹113 ಕೋಟಿ
ನಾಲ್ಕನೇ ದಿನ (ಭಾನುವಾರ)₹114.85 ಕೋಟಿ
ಐದನೇ ದಿನ ( ಸೋಮವಾರ)₹65 ಕೋಟಿ
ಆರನೇ ದಿನ (ಮಂಗಳವಾರ)₹56.60 ಕೋಟಿ
ಏಳನೇ ದಿನ (ಬುಧವಾರ)₹48.75 ಕೋಟಿ
ಎಂಟನೇ ದಿನ (ಗುರುವಾರ) ₹49.70 ಕೋಟಿ
ಮೊದಲ ವಾರದ ಒಟ್ಟು ಗಳಿಕೆ - ₹674.17 ಕೋಟಿ
ಒಂಬತ್ತನೇ ದಿನ (ಶುಕ್ರವಾರ) ₹41.75ಕೋಟಿ
ಹತ್ತನೇ ದಿನ (ಶನಿವಾರ) ₹62.85 ಕೋಟಿ
ಹನ್ನೊಂದನೇ ದಿನ (ಭಾನುವಾರ)₹68.10 ಕೋಟಿ
ಹನ್ನೆರಡನೇ ದಿನ ( ಸೋಮವಾರ)₹25.30 ಕೋಟಿ
ಹದಿಮೂರನೇ ದಿನ (ಮಂಗಳವಾರ)₹27.25 ಕೋಟಿ
ಹದಿನಾಲ್ಕನೇ ದಿನ (ಬುಧವಾರ)₹20.10 ಕೋಟಿ
ಹದಿನೈದನೇ ದಿನ (ಗುರುವಾರ)₹18.30 ಕೋಟಿ
ಎರಡನೇ ವಾರದ ಒಟ್ಟು ಗಳಿಕೆ -₹263.65 ಕೋಟಿ

ಹದಿನಾರನೇ ದಿನ ( ಶುಕ್ರವಾರ)₹21.55 ಕೋಟಿ
ಹದಿನೇಳನೇ ದಿನ ( ಶನಿವಾರ )₹25.65 ಕೋಟಿ
ಒಟ್ಟು ಗಳಿಕೆ - ₹985.02 ಕೋಟಿ
ಅಂದ್ಹಾಗೇ ಹಿಂದಿ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹಲವು ಚಿತ್ರಗಳು ಅಬ್ಬರಿಸಿವೆ. ಹಲವಾರು ದಾಖಲೆಗಳನ್ನು ಕೂಡ ಬರೆದಿವೆ. ಆದರೆ.. ಎಲ್ಲವನ್ನೂ ಸಾಧಿಸಿ ಭೇದಿಸಿದ ಬಾಲಿವುಡ್‌ನ ಸೂಪರ್ ಸ್ಟಾರ್ ಗಳಿಗೆ ಮಾತ್ರ ಇಲ್ಲಿಯವರೆಗೆ ಕೇವಲ ಭಾರತದಲ್ಲಿ ₹1000 ಕೋಟಿಯನ್ನು ಕೊಳ್ಳೆ ಹೊಡೆಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
ನಿಜಾ.. ''ದಂಗಲ್''.. ''ಪಠಾಣ್'' .. ಸೇರಿ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ 1000 ಕೋಟಿಯನ್ನು ಗಳಿಸಿವೆ. ಆದರೆ.. ಆ ಗಳಿಕೆ ಕೇವಲ ಭಾರತದಲ್ಲಿ ಮಾಡಿದ್ದಲ್ಲ. ಬದಲಿಗೆ ವರ್ಲ್ಡ್ ವೈಡ್ ಪ್ರದರ್ಶನ ಕಂಡು ಚಿತ್ರ ಮಾಡಿದ್ದ ಗಳಿಕೆ ಅದು.
ವಿಶೇಷ ಅಂದರೆ ಹಿಂದಿ ಉದ್ಯಮದ ಘಟಾನುಘಟಿಗಳಿಂದ ಮಾಡಲಾಗದ ಈ ಸಾಧನೆಯನ್ನು ರಣವೀರ್ ಸಿಂಗ್ ಈಗ ಮಾಡುತ್ತಿದ್ದಾರೆ. ಸಾವಿರ ಕೋಟಿಯ ಸರದಾರನಾಗುವ ಸನಿಹದಲ್ಲಿದ್ದಾರೆ.
ಇನ್ನೂ ವರ್ಲ್ಡ್ ವೈಡ್ ಗಳಿಕೆಯ ವಿಚಾರಕ್ಕೆ ಬಂದರೆ ₹1,564.30 ಕೋಟಿಯನ್ನು ''ಧುರಂಧರ್ 2'' ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಸದ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ ''ಧುರಂಧರ್ 2'' ಚಿತ್ರಕ್ಕೆ ಯಾವುದೇ ದೊಡ್ಡ ಪೈಪೋಟಿ ಇಲ್ಲ. ಮುಂದಿನ ದಿನಗಳಲ್ಲಿ ಅಮೀರ್ ಖಾನ್ ಅವರ ''ದಂಗಲ್'' ಮತ್ತು ಪ್ರಭಾಸ್ ಅವರ ''ಬಾಹುಬಲಿ 2'' ಲೈಫ್ ಟೈಮ್ ದಾಖಲೆಗಳನ್ನು ಈ ಸಿನಿಮಾ ಮುರಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯದ ವೇಗವನ್ನು ನೋಡಿದರೆ, ಧುರಂಧರ್ 2 ಸದ್ಯದಲ್ಲೇ ₹2000 ಕೋಟಿ ಕ್ಲಬ್ ಕಡೆಗೆ ದಾಪುಗಾಲು ಹಾಕುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ವಿಶ್ವದೆಲ್ಲೆಡೆ ಅತೀ ಹೆಚ್ಚು ಹಣ ಗಳಿಸಿದ ಭಾರತದ 5 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ
ದಂಗಲ್ ₹2070.30 ಕೋಟಿ
ಬಾಹುಬಲಿ 2 ₹1788 ಕೋಟಿ
ಧುರಂಧರ್ 2* ₹1564.30 ಕೋಟಿ
ಧುರಂಧರ್ ₹1307 ಕೋಟಿ
ಪುಷ್ಪ 2 ₹1742 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











