Dhurandhar Box Office Day 8 ; ಬಾಕ್ಸಾಫೀಸ್‌ನಲ್ಲಿ ಧುರಂಧರ್ ಧಮಾಕ, ಕೇವಲ ಎಂಟೇ ದಿನ- ಹೊಸ ಮೈಲಿಗಲ್ಲು

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಬಾಲಿವುಡ್ ಕೆಲ ವರ್ಷಗಳಿಂದ ಕಳೆಗುಂದಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಮುಂದೆ ಮಂಡಿಯೂರಿತ್ತು. ಆದರೆ.. 2023ರಲ್ಲಿ ಬಾಲಿವುಡ್ ಮೈಕೊಡವಿ ಎದ್ದು ನಿಂತಿತ್ತು. ''ಜವಾನ್''.. ''ಪಠಾಣ್''.. ಸೇರಿ ಹಲವು ಚಿತ್ರಗಳು ಗೆದ್ದ ಹಿನ್ನೆಲೆ ಹತ್ ಹತ್ರ ₹13,000 ಕೋಟಿ ಹಿಂದಿ ಚಿತ್ರರಂಗದ ಖಜಾನೆ ಸೇರಿತ್ತು. ಈ ಮೂಲಕ ಹೊಸದೊಂದು ಮೈಲಿಗಲ್ಲನ್ನು ಬಾಲಿವುಡ್ ತಲುಪಿತ್ತು.

ಆದರೆ 2024ರಲ್ಲಿ ಬಾಲಿವುಡ್‌ನಲ್ಲಿ ಹಣದ ಹೊಳೆ ಹರಿಯಲಿಲ್ಲ . ''ಸ್ತ್ರೀ 2''.. ''ಮುಂಜ್ಯಾ''.. ''ಭೂಲ್ ಭೂಲಯ್ಯ 3'', ''ಸಿಂಗಂ ಅಗೇನ್'' , ಸೇರಿ ಅಲ್ಲೊಂದು ಇಲ್ಲೊಂದು ಚಿತ್ರಗಳು ಗೆದ್ದಿದ್ದು ಬಿಟ್ಟರೆ ಬೇರೆ ಯಾವ ಚಿತ್ರ ಕೂಡ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. ಈ ವರ್ಷ ಕೂಡ ಕಳೆದ ವರ್ಷದಂತೆಯೇ ವಾತಾವರಣ ಇದೆ.

Dhurandhar Box Office Day 8 Ranveer amp amp Akshaye s Film STREAKS Towards 250 Crore Milestone

ನಿಜಾ.. ''ಸಿತಾರೆ ಜಮೀನ್ ಪರ್''.. ''ರೇಡ್ 2''.. ''ಹೌಸ್‌ಫುಲ್ 5'' ಅಂತಹ ಸಿನಿಮಾಗಳು ಗೆದ್ದಿವೆ. ಆದರೆ.. ಬ್ಲಾಕ್‌ಬಸ್ಟರ್ ಫಲಿತಾಂಶ ಬಾಲಿವುಡ್‌ಗೆ ಸಿಕ್ಕಿಲ್ಲ. ಕೇವಲ ಛಾವಾ ಮತ್ತು ಸೈಯಾರ ಈ ವರ್ಷ ಬಾಲಿವುಡ್‌ನಲ್ಲಿ ದಾಖಲೆಯ ಗಳಿಕೆಯನ್ನು ಮಾಡಿವೆ. ಹೀಗಾಗಿ ಈ ವರ್ಷ ಕೂಡ ಬಾಲಿವುಡ್‌ನ ಬ್ಯಾಲೆನ್ಸ್ ಶೀಟ್‌ನಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಕಾಣಿಸುತ್ತೆ ಎಂದು ಹಲವರು ಅಂದುಕೊಂಡಿದ್ದರು. ಆದರೆ ಈ ನಷ್ಟದ ಪ್ರಮಾಣ ಚೂರು ಕಡಿಮೆಯಾಗಿದೆ. ವರ್ಷಾಂತ್ಯಕ್ಕೆ ''ಧುರಂಧರ್‌'' ಅಬ್ಬರದಿಂದ ಬಾಲಿವುಡ್‌ ಕಳೆಗಟ್ಟಿದೆ.

ಹೌದು, ಬಿಡುಗಡೆಯಾದ ಮೊದಲ ದಿನದಿಂದಲೇ ಅಬ್ಬರಿಸುತ್ತಿರುವ ''ಧುರಂಧರ್'' ನಿನ್ನೆ (ಡಿಸೆಂಬರ್ 12 ) ಬಿಡುಗಡೆಗೊಂಡ 8ನೇ ದಿನ ದಾಖಲೆ ಗಳಿಕೆ ಮಾಡಿದೆ. ಮೊದಲ ದಿನಕ್ಕಿಂತ ನಿನ್ನೆ (ಡಿಸೆಂಬರ್ 12 ) ಹೆಚ್ಚಿನ ಹಣವನ್ನು ದೋಚಿದೆ. ಸಾಮಾನ್ಯವಾಗಿ ಸೋಮವಾರದ ನಂತರ ಚಿತ್ರ ಯಾವುದೇ ಇರಲಿ.. ಆ ಚಿತ್ರದ ಸ್ಟಾರ್ ಯಾರೇ ಇರಲಿ.. ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ.

Dhurandhar Box Office Day 8 Ranveer amp amp Akshaye s Film STREAKS Towards 250 Crore Milestone

ಆದರೆ..ಈ ಮಾತುಗಳಿಗೆ ''ಧುರಂಧರ್'' ತದ್ವಿರುದ್ದ. ವಾರದ ದಿನಗಳಲ್ಲಿ ಕೂಡ ಈ ಚಿತ್ರದ ಗಳಿಕೆ ಕಡಿಮೆ ಆಗಲಿಲ್ಲ. ಬದಲಿಗೆ ಕಳೆದ ಸೋಮವಾರದಿಂದ ನಿನ್ನೆ ಗುರುವಾರದವರೆಗೆ ಎರಡಂಕಿ ಗಳಿಕೆಯನ್ನು ಚಿತ್ರ ಮಾಡಿದೆ. ಅದರಲ್ಲಿಯೂ ''ಸ್ಯಾಕ್ನಿಲ್'' ಪ್ರಕಾರ ಕಳೆದ ಮೂರಿ ದಿನ ನಿರಂತರವಾಗಿ ₹ 27 ಕೋಟಿಯನ್ನು ಕೊಳ್ಳೆ ಹೊಡೆದ ಈ ಚಿತ್ರ ನಿನ್ನೆಯೊಂದೇ ದಿನ ₹ 32 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿದೆ. ಈ ಮೂಲಕ ಕೇವಲ 8 ದಿನದಲ್ಲಿ ₹ 239.25 ಕೋಟಿಯನ್ನು ಚಿತ್ರ ಗಳಿಸಿದೆ.


''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ 8 ದಿನಗಳ ಗಳಿಕೆ ಕೆಳಗಿನಂತೆ ಇದೆ.

ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ

ಮೊದಲ ವಾರದ ಒಟ್ಟು ಗಳಿಕೆ- ₹ 207.25ಕೋಟಿ

ಎಂಟನೇ ದಿನ [ಶುಕ್ರವಾರ] - ₹ 32 ಕೋಟಿ

ಒಟ್ಟು ಗಳಿಕೆ - ₹ 239.25 ಕೋಟಿ

ಹೀಗೆ ಕೇವಲ 8 ದಿನದಲ್ಲಿ ₹ 239.25 ಕೋಟಿಯನ್ನು ಗಳಿಸಿರುವ ''ಧುರಂಧರ್'' ಈ ವಾರಾಂತ್ಯಕ್ಕೆ ₹ 300 ಕೋಟಿ ಗಡಿ ತಲುಪುತ್ತೆ ಎನ್ನುವ ವಿಶ್ವಾಸ ಬಾಲಿವುಡ್ ಪಂಡಿತರಿಗಿದೆ. ಇಂದು ಕೂಡ ಚಿತ್ರದ ಗಳಿಕೆ 30 ಕೋಟಿಯ ಗಡಿಯನ್ನು ಪಾರು ಮಾಡುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ''ಧುರಂಧರ್'' ''ಛಾವಾ''.. ''ಸೈಯಾರ'' ಚಿತ್ರಗಳನ್ನು ಹಿಂದಿಕ್ಕಿ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ranveer Singh is set to score his biggest hit! Find out how Dhurandhar is performing on Day 8, closing in on the ₹250 Crore milestone. Read more now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X