Dhurandhar Box Office Day 14; ಧುರಂಧರ್ ಅಬ್ಬರ,ಬಾಕ್ಸಾಫೀಸ್ ಗಡಗಡ- ಹೊಸ ಇತಿಹಾಸ ಬರೆಯುತ್ತಾರಾ ರಣ್ವೀರ್ ಸಿಂಗ್ ?
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆಯೇ...
ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ಭಾರತದೆಲ್ಲೆಡೆ ''ಧುರಂಧರ್'' ಅಕ್ಷರಶಃ ಅಬ್ಬರಿಸುತ್ತಿದೆ. ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತಿದೆ.

ಹೌದು, ''ಧುರಂಧರ್'' ತೆರೆಗೆ ಬಂದು 14 ದಿನಗಳಾಗಿವೆ. ಆದರೆ.. ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಮೊದಲ ದಿನದಿಂದ ಇಲ್ಲಿಯವರೆಗೆ ಎರಡಂಕಿ ಗಳಿಕೆಯನ್ನೇ ಮಾಡುತ್ತಾ ಬಂದ ಈ ಚಿತ್ರ ಸದ್ಯ ಕೇವಲ ಭಾರತದಲ್ಲಿ ₹ 460.5 ಕೋಟಿಯನ್ನು ಗಳಿಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಎರಡನೇ ವಾರದ ಗಳಿಕೆ ಮೊದಲ ವಾರಕ್ಕಿಂತ ಹೆಚ್ಚಿದೆ. ಎರಡನೇ ವಾರದಲ್ಲಿ ಕೇವಲ ಐದೇ ದಿನದಲ್ಲಿ ₹200 ಕೋಟಿಯನ್ನು ಕೊಳ್ಳೆ ಹೊಡೆಯುವ ಮೂಲಕ ''ಧುರಂಧರ್'' ಹೊಸ ಇತಿಹಾಸವನ್ನು ಕೂಡ ಬಾಲಿವುಡ್‌ನಲ್ಲಿ ನಿರ್ಮಾಣ ಮಾಡಿದೆ.
''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ ಹನ್ನೊಂದು ದಿನದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ
ಮೊದಲ ವಾರದ ಒಟ್ಟು ಗಳಿಕೆ- ₹ 207.25ಕೋಟಿ
ಎಂಟನೇ ದಿನ [ಶುಕ್ರವಾರ] - ₹ 32.5 ಕೋಟಿ
ಒಂಬತ್ತನೇ ದಿನ [ಶನಿವಾರ] - ₹ 53 ಕೋಟಿ
ಹತ್ತನೇ ದಿನ [ಭಾನುವಾರ]- ₹ 58 ಕೋಟಿ
ಹನ್ನೊಂದನೇ ದಿನ [ಸೋಮವಾರ]₹30.5 ಕೋಟಿ
ಹನ್ನೆರಡನೇ ದಿನ [ಮಂಗಳವಾರ] ₹30.5 ಕೋಟಿ
ಹದಿಮೂರನೇ ದಿನ [ಬುಧವಾರ ] ₹25.5 ಕೋಟಿ
ಹದಿನಾಲ್ಕನೇ ದಿನ [ ಗುರುವಾರ ] ₹23.25 ಕೋಟಿ
ಎರಡನೇ ವಾರದ ಒಟ್ಟು ಗಳಿಕೆ - ₹ 253.25 ಕೋಟಿ
ಒಟ್ಟು ಗಳಿಕೆ ₹ 207.25 + ₹ 253.25 = ₹ 460.5 ಕೋಟಿ

ಇನ್ನೂ ''ಧುರಂಧರ್'' ಅಬ್ಬರಕ್ಕೆ ಬಾಕ್ಸಾಫೀಸ್‌ನಲ್ಲಿ ಈಗಾಗಲೇ ದಂಗಲ್ ದಾಖಲೆ ಧೂಳಿಪಟವಾಗಿದೆ. ಪ್ರಭಾಸ್ ಸಲಾರ್ ಸಾಮ್ರಾಜ್ಯ ಕೂಡ ನೆಲಕ್ಕುರುಳಿದೆ. ಇಷ್ಟೇ ಅಲ್ಲ 14 ದಿನದಲ್ಲಿ ₹ 460.5 ಕೋಟಿಯನ್ನು ಗಳಿಸಿರುವ ''ಧುರಂಧರ್'' ಸದ್ಯ ಶಂಕರ್ ನಿರ್ದೇಶನದ ರಜಿನಿಕಾಂತ್ ಅಭಿನಯದ 2.0 ಚಿತ್ರದ (₹407.05 ಕೋಟಿ) ಗಳಿಕೆಯನ್ನು ಕೂಡ ಹಿಂದಿಕ್ಕಿದೆ. ರಾಜಮೌಳಿಯ ದೃಶ್ಯಕಾವ್ಯ ಬಾಹುಬಲಿ ದಿ ಬಿಗಿನಿಂಗ್ ಚಿತ್ರದ ದಾಖಲೆ ( ₹421 ಕೋಟಿ ) ಕೂಡ ಮುರಿದಿದೆ. ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 13ನೇ ಸ್ಥಾನಕ್ಕೇರಿದೆ.
ಸದ್ಯ ''ಧುರಂಧರ್'' ಎದುರು ಸದ್ಯ ''ಗದರ್ 2 ''( ₹525 .70 ಕೋಟಿ ) ''ಅನಿಮಲ್'' (₹553.87 ಕೋಟಿ) ''ಪಠಾಣ್'' (₹543ಕೋಟಿ) ದಾಖಲೆ ಮುರಿಯುವ ಸವಾಲು ಇದೆ. ಸ್ತ್ರೀ 2.. ಛಾವಾ.. ಕಾಂತಾರ 1.. ಜವಾನ್.. ಹೀಗೆ ಇನ್ನೂ ಕೆಲ ಸಿನಿಮಾಗಳಿಗಿಂತ ''ಧುರಂಧರ್'' ತುಸು ಹಿಂದೆ ಇದೆ.
ಅಂದ್ಹಾಗೇ ಹತ್ತಾರು ದಾಖಲೆಗಳನ್ನು ಬರೆದ ಬಾಲಿವುಡ್ ಕೈಯಿಂದ ಇಲ್ಲಿಯವರೆಗೆ ಕೇವಲ ಭಾರತದಲ್ಲಿಯೇ 1000 ಕೋಟಿಯನ್ನು ಗಳಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ 1000 ಕೋಟಿ ಗಳಿಸಿದ ಭಾರತದ ಚಿತ್ರಗಳ ಸಾಲಿನಲ್ಲಿ ''ಪುಷ್ಪ 2'' ಮೊದಲ ಸ್ಥಾನದಲ್ಲಿದ್ದರೆ, ''ಬಾಹುಬಲಿ 2'' ಎರಡನೇ ಸ್ಥಾನದಲ್ಲಿದೆ. ಈ ಎರಡು ಚಿತ್ರಗಳಿಗೆ ''ಧುರಂಧರ್'' ಸೆಡ್ಡು ಹೊಡೆಯುತ್ತಾ..? ಈ ಮೂಲಕ ಭಾರತದಲ್ಲಿ 1000 ಕೋಟಿ ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಧುರಂಧರ್'' ಪಾತ್ರವಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ. ಹಾಗೊಂದು ವೇಳೆ ''ಧುರಂಧರ್'' ಸಾವಿರ ಕೋಟಿ ಗಳಿಸಿದರೆ ರಣ್ವೀರ್ ಸಿಂಗ್ ಹೊಸ ಇತಿಹಾಸ ಬರೆದಂತೆ ಆಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











