Dhurandhar Box Office Day 15; ಅವತಾರ್‌ಗೆ ಸೆಡ್ಡು ಹೊಡೆದ ಧುರಂಧರ್-ರಣವೀರ್ ಸಿಂಗ್ ಅಬ್ಬರಕ್ಕೆ ಮಂಕಾಯ್ತು ಹಾಲಿವುಡ್
ಈ ವರ್ಷ ಚಿತ್ರರಂಗದಲ್ಲಿ ಹಲವಾರು ಪ್ರಯತ್ನಗಳಾಗಿವೆ. ಆದರೆ.. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಈ ಪ್ರಯತ್ನಗಳಿಗೆ ಸಿಕ್ಕ ಬೆಲೆ ತುಂಬಾ ಕಡಿಮೆ. ಅಲ್ಲೊಂದು.. ಇಲ್ಲೊಂದು ಚಿತ್ರಗಳು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಸದ್ದು ಮಾಡಿವೆ. ಗಮನವನ್ನು ಕೂಡ ಸೆಳೆದಿವೆ. ವಿಶೇಷ ಅಂದರೆ ಹೀಗೆ ಗೆದ್ದ ಸಿನಿಮಾದ ಮೇಲೆ ಅನೇಕರಿಗೆ ನಿರೀಕ್ಷೆಗಳೇ ಇರಲಿಲ್ಲ. ಹತ್ತರಲ್ಲಿ ಹನ್ನೊಂದನೇಯದ್ದು ಎಂದೇ ಎಲ್ಲರು ಅಂದುಕೊಂಡಿದ್ದರು.
ಆದರೆ.. ಕೆಲ ಸಿನಿಮಾಗಳೇ ಹಾಗೇ. ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ಸದ್ದು ಮಾಡುತ್ತವೆ. ಹಣವನ್ನು ದೋಚುತ್ತಾವೆ. ''ಧುರಂಧರ್'' ಇದಕ್ಕೆ ಸದ್ಯದ ಉದಾಹರಣೆ.

ಹೌದು, ರಣವೀರ್ ಸಿಂಗ್ ಅಭಿನಯದ ''ಧುರಂಧರ್'' ಸದ್ಯ ಬಾಕ್ಸಾಫೀಸ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಈ 15 ದಿನದಲ್ಲಿ ಕೇವಲ ಭಾರತದಲ್ಲಿ ₹ 483 ಕೋಟಿ ಕೊಳ್ಳೆ ಹೊಡೆದಿದೆ.
ಇನ್ನೂ ಸಾಮಾನ್ಯವಾಗಿ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಹೇಗೆ ಇರಲಿ.. ಸೋಮವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ಆದರೆ..'' ಧುರಂಧರ್'' ವಿಚಾರದಲ್ಲಿ ಇದು ತದ್ವಿರುದ್ದ. ವಾರದ ದಿನಗಳಲ್ಲಿಯೂ ಕೂಡ ತಮ್ಮ ಕೆಲಸ ಕಾರ್ಯದ ಒತ್ತಡದ ನಡುವೆ ಹಲವರು ಬಂದು ಬೆಳ್ಳಿಪರದೆಯಲ್ಲಿ ''ಧುರಂಧರ್'' ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಕ್ಷಯ್ ಖನ್ನಾ ಅಭಿನಯಕ್ಕೆ ಬಹುಪರಾಕ್ ಹಾಕುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಈ ಚಿತ್ರದ ಗಳಿಕೆ ಒಂದಂಕಿಗೆ ಕುಸಿದಿಲ್ಲ. ಬದಲಿಗೆ ದಿನ ನಿತ್ಯ ಚಿತ್ರದ ಗಳಿಕೆ ಎರಡಂಕಿಯನ್ನು ದಾಟಿದೆ. ನಿನ್ನೆಯೂ ( ಡಿಸೆಂಬರ್ 19) ಕೂಡ ''ಧುರಂಧರ್'' ₹ 22.50 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಂದ್ಹಾಗೇ ಈ 15 ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಸಿನಿಮಾಗಳು ಬಂದಿವೆ. ಆದರೆ.. ''ಧುರಂಧರ್''ನ ಯಾರಿಂದಲೂ ಕೂಡ ತಡೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಹಾಲಿವುಡ್‌ನ ದಂತಕತೆ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ''ಅವತಾರ್ - ಫೈರ್ ಆಂಡ್ ಆಶ್'' ಈ ''ಧುರಂಧರ್'' ಕ್ರೇಜ್‌ಗೆ ಕಡಿವಾಣ ಹಾಕುತ್ತೆ ಎಂದು ಹಲವರು ಅಂದುಕೊಂಡಿದ್ದರು.
ಯಾಕೆಂದರೆ, ಎಲ್ಲರಿಗೆ ಗೊತ್ತಿರುವಂತೆ ಹಾಲಿವುಡ್ ಸಿನಿಮಾಗಳಿಗೆ ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆ ಇದೆ. ಅದರಲ್ಲಿಯೂ ''ಅವತಾರ್'' ಸರಣಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಾಗಿ ''ಅವತಾರ್'' ಅಲೆ ಎದುರು ''ಧುರಂಧರ್'' ಆಟ ನಡೆಯಲ್ಲ ಎಂಬ ವಾದ ಹಲವರು ಮಾಡಿದ್ದರು. ಆದರೆ ಈಗ ಈ ಲೆಕ್ಕಾಚಾರ ಕೆಳಗಾಗಿದೆ. ''ಅವತಾರ್''ಗೆ ''ಮೊದಲ ದಿನ ''ಧುರಂಧರ್'' ಬಾಕ್ಸಾಫೀಸ್‌ನಲ್ಲಿ ಸೆಡ್ಡು ಹೊಡೆದಿದೆ. ನಿನ್ನೆ ( ಡಿಸೆಂಬರ್ 19) ಮೊದಲ ದಿನ ''ಅವತಾರ್ ಫೈರ್ ಆಂಡ್ ಆಶ್'' ಭಾರತದಲ್ಲಿ ₹ 20 ಕೋಟಿಯನ್ನಷ್ಟೇ ಗಳಿಸಿದೆ. ಆದರೆ ''ಧುರಂಧರ್'' ಆಗಲೇ ಹೇಳಿದಂತೆ ಹದಿನೈದನೇ ದಿನ ₹ 22.50 ಕೋಟಿಯನ್ನು ದೋಚಿದೆ.
ಸದ್ಯ ''ಧುರಂಧರ್'' 500 ಕೋಟಿ ಕ್ಲಬ್‌ಗೆ ಸೇರಲಿದೆ. ಈ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರಬೇಕಿದ್ದ ಅಮಿತಾಬ್ ಬಚ್ಚನ್ ಮೊಮ್ಮಗನ ಸಿನಿಮಾ ''ಇಕ್ಕೀಸ್'' ಚಿತ್ರವನ್ನು ''ಧುರಂಧರ್'' ಅಲೆಯಿಂದಾಗಿ ಮುಂದೂಡಲಾಗಿದೆ. ಈ ಹಿನ್ನೆಲೆ ಬಾಲಿವುಡ್‌ನಲ್ಲಿ ಮೈದಾನ ಖಾಲಿ ಇದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟನ್‌ಲ್ಲಿ ಕನ್ನಡದಿಂದ ''45'' ಮತ್ತು ''ಮಾರ್ಕ್'' ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಎರಡು ಸಿನಿಮಾಗಳಿಂದ ದಕ್ಷಿಣದಲ್ಲಿ ''ಧುರಂಧರ್'' ಅಲೆ ಕಡಿಮೆಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











