ಬಾರ್ಡರ್ ಅಲೆಯ ನಡುವೆಯೂ ಧುರಂಧರ್ ಅಬ್ಬರ ; 50ನೇ ದಿನವೂ ರಾಜಾ ಸಾಬ್‌ಗೆ ಸೆಡ್ಡು ಹೊಡೆದ ರಣ್ವೀರ್ ಸಿಂಗ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಐವತ್ತು.. ನೂರು ದಿನ ಅಲ್ಲ ಬದಲಿಗೆ 25 ವಾರ 50 ವಾರದ ಪ್ರದರ್ಶನವನ್ನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲಿಯೇ ಇವತ್ತು ಮನರಂಜನೆ ಇದೆ. ಸಾಲದಕ್ಕೆ ಪೈರಸಿ ಬೇರೆ. ಇಂತಹ ಕಾಲದಲ್ಲಿ.. ಚಿತ್ರವೊಂದು ಎರಡು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ.

ಇನ್ನೂ ಹೊಸಬರ ಕಥೆ ಕೇಳುವುದಕ್ಕೂ .. ಹೇಳುವುದಕ್ಕೂ ಇದು ಸಮಯ ಅಲ್ಲ. ಆ ಭಾಷೆ ಈ ಭಾಷೆ ಅಂತಲ್ಲ. ಬಹುತೇಕ ಎಲ್ಲ ಭಾಷೆಯಲ್ಲಿ ಈ ಕಥೆ ಮತ್ತು ವ್ಯಥೆ ಒಂದೇ ರೀತಿ ಇದೆ. ಸಂದರ್ಭ.. ಸನ್ನಿವೇಶ ಹೀಗಿರುವಾಗ ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ''ಧುರಂಧರ್'' ಸದ್ಯ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. 50ನೇ ದಿನವೂ 15 ದಿನಗಳ ಹಿಂದೆ ತೆರೆಗೆ ಬಂದಿದ್ದ ಪ್ರಭಾಸ್ ಅಭಿನಯದ ''ದಿ ರಾಜಾ ಸಾಬ್'' ಚಿತ್ರಕ್ಕಿಂತ ಹೆಚ್ಚಿನ ಹಣವನ್ನು ದೋಚಿದೆ.

Dhurandhar Day 50 Ranveer Singh Hits Lowest Amid Border 2 Mania Surpasses Raja Saab Day 15

ಹೌದು, ''ಧುರಂಧರ್'' ತೆರೆಗೆ ಬಂದು 50 ದಿನಗಳಾಗಿವೆ. ಆದರೆ ಇವತ್ತು ಕೂಡ ಕ್ರೇಜ್ ಕಡಿಮೆಯಾಗಿಲ್ಲ. ''ಬಾರ್ಡರ್ 2'' ಅಲೆಯ ನಡುವೆ ಅನೇಕ ಕಡೆ ಈ ಚಿತ್ರ ಇನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ. ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ನಿನ್ನೆ (ಜನವರಿ 23) ಭಾರತದಲ್ಲಿ ₹55 ಲಕ್ಷ ಗಳಿಸಿದೆ. ಈ ಮೂಲಕ ಈ 50 ದಿನದಲ್ಲಿ ₹ 831.05 ಕೋಟಿಯನ್ನು ''ಧುರಂಧರ್'' ಕೊಳ್ಳೆ ಹೊಡೆದಿದೆ.

ಸ್ಯಾಕ್ನಿಲ್ ಪ್ರಕಾರ ''ಧುರಂಧರ್'' ಚಿತ್ರದ 7 ವಾರಗಳ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ವಾರ :₹ 207.25 ಕೋಟಿ
ಎರಡನೇ ವಾರ :₹ 253.25 ಕೋಟಿ
ಮೂರನೇ ವಾರ :₹ 172 ಕೋಟಿ
ನಾಲ್ಕನೇ ವಾರ :₹ 106.5 ಕೋಟಿ
ಐದನೇ ವಾರ :₹ 51.25 ಕೋಟಿ
ಆರನೇ ವಾರ :₹ 26.35 ಕೋಟಿ
ಏಳನೇ ವಾರ :₹ 13.9 ಕೋಟಿ
50ನೇ ದಿನ [8ನೇ ಶುಕ್ರವಾರ] ₹55 ಲಕ್ಷ

ಒಟ್ಟು ಗಳಿಕೆ ₹ 831.05 ಕೋಟಿ

Dhurandhar Day 50 Ranveer Singh Hits Lowest Amid Border 2 Mania Surpasses Raja Saab Day 15

ಅಂದ್ಹಾಗೇ 15 ದಿನಗಳ ಹಿಂದೆ ಪ್ರಭಾಸ್ ಅಭಿನಯದ ''ದಿ ರಾಜಾ ಸಾಬ್'' ಚಿತ್ರ ತೆರೆಗೆ ಬಂದಿತ್ತು. ಅಪಾರವಾದ ನಿರೀಕ್ಷೆಗಳು ಈ ಚಿತ್ರದ ಮೇಲೆ ಇದ್ದವು. ಆದರೆ ಮೊದಲ ದಿನ ಮಾತ್ರ ಅಬ್ಬರಿಸಿದ ''ದಿ ರಾಜಾ ಸಾಬ್'' ಆ ನಂತರ ಮಕಾಡೆ ಮಲಗಿದ. ಇದಕ್ಕೆ ಪುರಾವೆ ಎನ್ನುವಂತೆ ''ದಿ ರಾಜಾ ಸಾಬ್'' ನಿನ್ನೆ ಅಂದರೆ 15ನೇ ದಿನ ಕೇವಲ ₹22 ಲಕ್ಷ ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ. 15 ದಿನದಲ್ಲಿ ಕೇವಲ ₹143.03 ಕೋಟಿಯನ್ನಷ್ಟೇ ಭಾರತದಲ್ಲಿ ಗಳಿಸಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 50 ದಿನದ ಹಿಂದೆ ಬಂದ ''ಧುರಂಧರ್‌''ನ ದಿನದ ಗಳಿಕೆಯ ರೇಸ್‌ನಲ್ಲಿ ಹಿಂದಿಕ್ಕುವಲ್ಲಿ ಈ ಮೂಲಕ ವಿಫಲವಾಗಿದೆ.

ಇನ್ನುಳಿದಂತೆ ''ಧುರಂಧರ್'' ಕೇವಲ ಭಾರತದಲ್ಲಿ 1000 ಕೋಟಿಯನ್ನು ಕೊಳ್ಳೆ ಹೊಡೆಯುತ್ತೆ ಎನ್ನುವ ವಿಶ್ವಾಸ ಬಾಲಿವುಡ್‌ ಪಂಡಿತರಿಗಿತ್ತು. ಈ ಮೂಲಕ ರಣ್ವೀರ್ ಸಿಂಗ್ ಹೊಸ ಇತಿಹಾಸವನ್ನು ಬರೆಯುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೇವಲ ಭಾರತದಲ್ಲಿ ''ಧುರಂಧರ್'' 1000 ಕೋಟಿ ಗಳಿಸುವುದು ಅಸಾಧ್ಯ. ಅದ್ಯಾಗ್ಯೂ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಧುರಂಧರ್'' ಪಾತ್ರವಾಗಿದೆ. ರಣವೀರ್ ಸಿಂಗ್ ಹೆಸರಿನಲ್ಲಿ ಈ ಮೂಲಕ ದಾಖಲೆಯೊಂದು ನಿರ್ಮಾಣವಾಗಿದೆ.

ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 15 ಸಿನಿಮಾಗಳ ಪಟ್ಟಿ ಇಲ್ಲಿದೆ

1.ಧುರಂಧರ್: ₹ 831.05 ಕೋಟಿ*
2.ಜವಾನ್: ₹643.87 ಕೋಟಿ
3.ಸ್ತ್ರೀ 2: ₹627.02 ಕೋಟಿ
4.ಛಾವಾ: ₹615.39 ಕೋಟಿ
5.ಅನಿಮಲ್: ₹556.36 ಕೋಟಿ
6.ಪಠಾಣ್: ₹543.05 ಕೋಟಿ
7.ಗದರ್ 2: ₹525.45 ಕೋಟಿ
8.ದಂಗಲ್: ₹387.38 ಕೋಟಿ
9.ಸಂಜು: ₹342.53 ಕೋಟಿ
10. ಪಿಕೆ: ₹340.80 ಕೋಟಿ
11.ಟೈಗರ್ ಜಿಂದಾ ಹೈ: ₹339.16 ಕೋಟಿ
12.ಸೈಯಾರಾ: ₹337.69 ಕೋಟಿ
13.ಭಜರಂಗಿ ಭಾಯಿಜಾನ್: ₹320.34 ಕೋಟಿ
14. ವಾರ್: ₹317.91 ಕೋಟಿ
15. ಪದ್ಮಾವತ್: ₹302.15 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ranveer Singh's Dhurandhar completes 50 days at the box office. Despite Border 2 stealing the spotlight, it manages to surpass The Raja Saab Day 15 collections. Check the latest numbers!
Read more about: ranveer singh bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X