Dhurandhar Box Office Day 16; ಧುರಂಧರ್ ಸುನಾಮಿ,16ನೇ ದಿನವೂ ನೂಕುನುಗ್ಗಲು-ರಣ್ವೀರ್ ಸಿಂಗ್ ಹೊಸ ದಾಖಲೆ
ಪ್ರಯೋಗಕ್ಕೆ ಸಾವಿದೆ.ಆದರೆ ಪ್ರಯತ್ನಕ್ಕಲ್ಲ. ಈ ಮಾತನ್ನು ನಂಬುವ ಹಲವಾರು ಜನ ಚಿತ್ರರಂಗದಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವರು ತಮ್ಮ ಪ್ರಯತ್ನಕ್ಕೆ ಫಲ ಸಿಗದಿದ್ದಾಗ ನಿರಾಸೆಯಾಗುತ್ತಾರೆ. ನಿರಾಸೆಗೊಂಡು ಚಿತ್ರರಂಗದ ಸಹವಾಸ ಬೇಡ ಎಂದು ದೂರವಾಗುತ್ತಾರೆ. ಇನ್ನೂ ಕೆಲವರು ಎಷ್ಟೇ ಸೋತರು ಕೂಡ ಕುಗ್ಗದೇ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಾರೆ. ಇದಕ್ಕೆ ಉದಾಹರಣೆಯಂತೆ ಇರುವ ರಣವೀರ್ ಸಿಂಗ್...
ಸದ್ಯ ಮತ್ತೊಮ್ಮೆ ಪ್ರಯತ್ನ ಮಾಡಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ಆ ಚಿತ್ರದ ಹೆಸರು ''ಧುರಂಧರ್''. ಸದ್ಯ ಈ ಚಿತ್ರ ಇಂದು (ಡಿಸೆಂಬರ್ 21) 17ನೇ ದಿನಕ್ಕೆ ಕಾಲಿಟ್ಟಿದೆ. ಚಿತ್ರದ ಅಬ್ಬರಕ್ಕೆ ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಹಣದ ಹೊಳೆಯೇ ಹರಿಯುತ್ತಿದೆ.

ಹೌದು, ''ಧುರಂಧರ್'' ತೆರೆಗೆ ಬಂದು ಹದಿನೇಳು ದಿನಗಳಾಗಿವೆ. ಆದರೆ.. ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ ( ಡಿಸೆಂಬರ್ 20 ) ಹದಿನಾರನೇ ದಿನ ''ಧುರಂಧರ್'' ಭಾರತದಲ್ಲಿ ₹ 33.5 ಕೋಟಿಯನ್ನು ದೋಚಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.
ಇನ್ನೂ ಸಾಮಾನ್ಯವಾಗಿ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಹೇಗೆ ಇರಲಿ.. ಸೋಮವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ಆದರೆ..'' ಧುರಂಧರ್'' ವಿಚಾರದಲ್ಲಿ ಇದು ತದ್ವಿರುದ್ದ. ವಾರದ ದಿನಗಳಲ್ಲಿಯೂ ಕೂಡ ತಮ್ಮ ಕೆಲಸ ಕಾರ್ಯದ ಒತ್ತಡದ ನಡುವೆ ಹಲವರು ಬಂದು ಬೆಳ್ಳಿಪರದೆಯಲ್ಲಿ ''ಧುರಂಧರ್'' ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಕ್ಷಯ್ ಖನ್ನಾ ಅಭಿನಯಕ್ಕೆ ಬಹುಪರಾಕ್ ಹಾಕುತ್ತಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಈ ಚಿತ್ರದ ಗಳಿಕೆ ಒಂದಂಕಿಗೆ ಕುಸಿದಿಲ್ಲ. ಬದಲಿಗೆ ದಿನ ನಿತ್ಯ ಚಿತ್ರದ ಗಳಿಕೆ ಎರಡಂಕಿಯನ್ನು ದಾಟಿದೆ. ಶುಕ್ರವಾರಕ್ಕೆ ( ಡಿಸೆಂಬರ್ 19) ಹೋಲಿಸಿದರೆ ನಿನ್ನೆ ( ಡಿಸೆಂಬರ್ 20 ) ಶೇಕಡಾ 48.89% ಗಳಿಕೆಯಲ್ಲಿ ಏರಿಕೆಯಾಗಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ 17 ದಿನದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ
ಮೊದಲ ವಾರದ ಒಟ್ಟು ಗಳಿಕೆ- ₹ 207.25ಕೋಟಿ
ಎಂಟನೇ ದಿನ [ಶುಕ್ರವಾರ] - ₹ 32.5 ಕೋಟಿ
ಒಂಬತ್ತನೇ ದಿನ [ಶನಿವಾರ] - ₹ 53 ಕೋಟಿ
ಹತ್ತನೇ ದಿನ [ಭಾನುವಾರ]- ₹ 58 ಕೋಟಿ
ಹನ್ನೊಂದನೇ ದಿನ [ಸೋಮವಾರ]₹30.5 ಕೋಟಿ
ಹನ್ನೆರಡನೇ ದಿನ [ಮಂಗಳವಾರ] ₹30.5 ಕೋಟಿ
ಹದಿಮೂರನೇ ದಿನ [ಬುಧವಾರ ] ₹25.5 ಕೋಟಿ
ಹದಿನಾಲ್ಕನೇ ದಿನ [ ಗುರುವಾರ ] ₹23.25 ಕೋಟಿ

ಎರಡನೇ ವಾರದ ಒಟ್ಟು ಗಳಿಕೆ - ₹ 253.25 ಕೋಟಿ
ಹದಿನೈದನೇ ದಿನ [ಶುಕ್ರವಾರ] ₹22.5 ಕೋಟಿ
ಹದಿನಾರನೇ ದಿನ [ಶನಿವಾರ ] ₹33.5 ಕೋಟಿ
ಒಟ್ಟು ಗಳಿಕೆ - ₹ 520.06 ಕೋಟಿ
ಇನ್ನು ಮೊನ್ನೆ ( ಡಿಸೆಂಬರ್ 19 ) ಭಾರತದೆಲ್ಲೆಡೆ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ''ಅವತಾರ್ - ಫೈರ್ ಆಂಡ್ ಆಶ್'' ತೆರೆಗೆ ಬಂದಿದೆ. ವಿಶೇಷ ಅಂದರೆ ಎಲ್ಲರು ''ಅವತಾರ್'' ಎದುರು ''ಧುರಂಧರ್'' ಮಂಕಾಗುತ್ತೆ ಎಂದು ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ''ಧುರಂಧರ್'' ಅಬ್ಬರದಿಂದ ''ಅವತಾರ್'' ಸಾಮ್ರಾಜ್ಯ ಸದ್ಯ ನಡುಗುತ್ತಿದೆ.
ಅಂದ್ಹಾಗೇ ರಣ್ವೀರ್ ಸಿಂಗ್ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಈ 15 ವರ್ಷದಲ್ಲಿ ಹಲವು ಚಿತ್ರಗಳನ್ನು ರಣ್ವೀರ್ ಸಿಂಗ್ ಮಾಡಿದ್ದರೂ ಕೂಡ ಇಲ್ಲಿಯವರೆಗೆ ಇವರ ಯಾವ ಚಿತ್ರವೂ 500 ಕೋಟಿಯ ಗಡಿಯನ್ನು ದಾಟಿರಲಿಲ್ಲ. ದಾಟುವುದು ಬಿಡಿ ಹತ್ತಿರವೂ ಕೂಡ ಬಂದಿರಲಿಲ್ಲ. ₹ 302.15 ಕೋಟಿಯನ್ನು ಗಳಿಸಿದ್ದ ''ಪದ್ಮಾವತ್'' ಇವರ ಇಲ್ಲಿಯವರೆಗಿನ ನಂಬರ್ ಒನ್ ಸಿನಿಮಾ ಆಗಿತ್ತು. ಆದರೆ ಈಗ ಆ ಸ್ಥಾನ ''ಧುರಂಧರ್'' ಪಾಲಾಗಿದೆ. ಈ ಮೂಲಕ ಹೊಸದೊಂದು ದಾಖಲೆಯನ್ನು ರಣವೀರ್ ಸಿಂಗ್ ಬರೆದಿದ್ದಾರೆ.
ಸದ್ಯ ''ಧುರಂಧರ್'' 500 ಕೋಟಿಯನ್ನು ಕೊಳ್ಳೆ ಹೊಡೆದು ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದೆ. ಮುಂಬರುವ ದಿನಗಳಲ್ಲಿ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು 1000 ಕೋಟಿ ಗಡಿಯನ್ನು ಚಿತ್ರ ತಲುಪುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











