ಧುರಂಧರ್ ಅಬ್ಬರಕ್ಕೆ ಪತರುಗಟ್ಟಿದ ಕರಣ್ ಜೋಹರ್ ; ಐದೇ ದಿನ- ಕೊಚ್ಚಿ ಹೋಯ್ತು ಕಾರ್ತಿಕ್ ಆರ್ಯನ್ ಸಿನಿಮಾ

ದಕ್ಷಿಣ ಭಾರತದ ಚಿತ್ರಗಳ ಅಬ್ಬರದಿಂದ ಕಂಗಾಲಾಗಿ ತಲೆ ಮೇಲೆ ಕೈಹೊತ್ತು ಕುಂತಿದ್ದ ಬಾಲಿವುಡ್‌ನಲ್ಲಿ ಹೊಸದೊಂದು ಅಲೆ ಎದ್ದಿದೆ. ಆ ಅಲೆಯ ಹೆಸರು ''ಧುರಂಧರ್''. ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ಚಿತ್ರ ಇದು. ಭಾಷೆಯ ಭೇದ ಭಾವ ಇಲ್ಲದೆ ಹಲವರು ನೋಡುತ್ತಿದ್ದಾರೆ. ಬಿಡುಗಡೆಯಾಗಿ 25 ದಿನವಾದರು ಕೂಡ ಈ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ.

ಇನ್ನು ''ಧುರಂಧರ್'' ಕೇವಲ ದಾಖಲೆಗಳನ್ನು ಬರೆಯುತ್ತಿಲ್ಲ. ಬದಲಿಗೆ ತನ್ನ ಎದುರು ಬಂದವರನ್ನೆಲ್ಲ ನೆಲಕ್ಕುರುಳಿಸುತ್ತಿದೆ. ಹಾಲಿವುಡ್‌ನ ''ಅವತಾರ್'' ಕೂಡ ಬಾಲಿವುಡ್‌ನ ಈ ಧುರಂಧರ್ ಎದುರು ಸಾಧ್ಯವಾಗಲಿಲ್ಲ. ಹೀಗಿರುವಾಗ ಕರಣ್ ಜೋಹರ್ ಮತ್ತು ಕಾರ್ತಿಕ್ ಆರ್ಯನ್ ನಿಲ್ಲಲು ಹೇಗೆ ಸಾಧ್ಯ..?

DHURANDHAR MAYHEM Karan Johar Rattled as the Ranveer Singh Tsunami Sweeps Away Kartik Aaryan s Film

ಹೌದು, ''ಧುರಂಧರ್'' ಅಲೆಗೆ ಹೆದರಿ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ಅಭಿನಯದ ಚೊಚ್ಚಲ ಚಿತ್ರ ''ಇಕ್ಕೀಸ್‌''ನ ಮುಂದೂಡಲಾಗಿತ್ತು. ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಜನವರಿ 1ರಂದು ಬಿಡುಗಡೆ ಮಾಡುವ ನಿರ್ಧಾರವನ್ನು ಚಿತ್ರತಂಡ ಮಾಡಿತ್ತು.

ಆದರೆ.. ಕರಣ್ ಜೋಹರ್ ಅಂತಹ ದೈತ್ಯ ಮಾರ್ಕೆಟಿಂಗ್ ತಜ್ಞ ಹುಂಬುತನದ ಪ್ರದರ್ಶನ ಮಾಡಿದ್ದರು. ತಮ್ಮ ನಿರ್ಮಾಣದ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಚಿತ್ರವನ್ನು ಕ್ರಿಸಮಸ್ ಹಬ್ಬದಂದು ಬಿಡುಗಡೆ ಮಾಡಿದರು. ಇದರ ಪರಿಣಾಮವನ್ನು ಕರಣ್ ಜೋಹರ್ ಈಗ ಅನುಭವಿಸುತ್ತಿದ್ದಾರೆ. ಯಾಕೆಂದರೆ ''ಧುರಂಧರ್'' ಅಬ್ಬರಕ್ಕೆ ''ತು ಮೇರಿ ಮೇ ತೇರಾ'' ಮಕಾಡೆ ಮಲಗಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಚಿತ್ರ ನಿನ್ನೆ(ಸೋಮವಾರ) ಕೇವಲ ₹ 1.75 ಕೋಟಿಯನ್ನಷ್ಟೇ ಗಳಿಸಿದೆ. ತೆರೆಗೆ ಬಂದ ಐದು ದಿನದಲ್ಲಿ ₹ 25.25 ಕೋಟಿಯನ್ನು ಮಾತ್ರ ದೋಚುವಲ್ಲಿ ಯಶಸ್ವಿಯಾಗಿದೆ.

ಆದರೆ, ಅದೇ ಮತ್ತೊಂದು ಕಡೆ ''ಧುರಂಧರ್'' ತೆರೆಗೆ ಬಂದು 25 ದಿನಗಳಾಗಿವೆ. ಆದರೂ ಕೂಡ ಬೇಡಿಕೆ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ (ಸೋಮವಾರ) ₹ 10.50 ಕೋಟಿಯನ್ನು ಈ ಚಿತ್ರ ಕೊಳ್ಳೆ ಹೊಡೆದಿದೆ. ಇನ್ನು 5 ದಿನದಲ್ಲಿ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಗಳಿಸಿದ ಹಣವನ್ನು (25,25 ಕೋಟಿ ) ''ಧುರಂಧರ್''ಕೇವಲ ಮೊನ್ನೆಯ ಭಾನುವಾರದಂದು ( ಡಿಸೆಂಬರ್ 28 ) ಗಳಿಸಿದೆ. ''ಸ್ಯಾಕ್ನಿಲ್'' ವರದಿ ಮಾಡಿದಂತೆ ಭಾನುವಾರ ₹ 22.5 ಕೋಟಿಯನ್ನು ಈ ಚಿತ್ರ ಗಳಿಸಿದೆ.

DHURANDHAR MAYHEM Karan Johar Rattled as the Ranveer Singh Tsunami Sweeps Away Kartik Aaryan s Film

ಅಂದ್ಹಾಗೇ ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಯಂಗ್ ಸೂಪರ್ ಸ್ಟಾರ್. ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದವರು ಇವರು. ''ಶೆಹಜಾದಾ'' ಹೊರತು ಪಡಿಸಿದರೆ ಇವರ ಬೇರೆ ಯಾವ ಚಿತ್ರ ಕೂಡ ಇಷ್ಟೊಂದು ಕಡಿಮೆ ಗಳಿಕೆಯನ್ನು ಆರಂಭದ ಒಂದು ವಾರದಲ್ಲಿ ಮಾಡಿಲ್ಲ. ಕಾರ್ತಿಕ್ ಆರ್ಯನ್ ಅವರ ಈ ಸ್ಟಾರ್ ಪವರ್‌ ಮೇಲಿನ ನಂಬಿಕೆಯಿಂದನೇ ಕರಣ್ ಜೋಹರ್ ಮುಂದಡಿ ಇಡಲಿಲ್ಲವೇನೋ..?

ಆದರೆ ಈಗ ''ಧುರಂಧರ್'' ಎದುರು ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದ್ದಕ್ಕೆ ಕರಣ್ ಜೋಹರ್ ಕೈ ಕೈ ಹಿಸುಕಿಕೊಳ್ಳುವಂತೆ ಆಗಿದೆ. Bollymoviereviewz ಪ್ರಕಾರ ಈ ಚಿತ್ರಕ್ಕೆ ₹90 ಕೋಟಿಗೂ ಅಧಿಕ ಹಣ ಹೂಡಲಾಗಿದ್ದು ಸದ್ಯದ ವಾತಾವರಣ ನೋಡುತ್ತಿದ್ದರೆ ಹಾಕಿದ ಬಂಡವಾಳ ಮರಳಿ ಕರಣ್ ಜೋಹರ್ ಕೈ ಸೇರುವುದು ಬಹುತೇಕ ಅನುಮಾನ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Box Office Disaster! ‘Tu Meri Main Tera’ collapses on its first Monday, earning less than ₹2 Cr. Find out how the Dhurandhar wave destroyed the competition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X