Dhurandhan Day 31 Boxoffice: 'ಧುರಂಧರ್' ಆರ್ಭಟ, 30 ದಿನಕ್ಕೆ 'KGF-2' ದಾಖಲೆ ಧೂಳಿಪಟ

ಬಾಕ್ಸಾಫೀಸ್‌ನಲ್ಲಿ ಈಗ 'ಧುರಂಧರ್' ಆರ್ಭಟವೇ ಜೋರಾಗಿದೆ. ಸಿನಿಮಾ ತೆರೆಕಂಡು ತಿಂಗಳು ಕಳೆದರೂ ಅಬ್ಬರ ಕಮ್ಮಿ ಆಗಿಲ್ಲ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ದೇಶ ವಿದೇಶಗಳಲ್ಲಿ ಸಿನಿಮಾ ದಾಖಲೆಯ ಪ್ರದರ್ಶನ ಕಾಣುತ್ತಿದೆ. 30 ದಿನಗಳಲ್ಲಿ 'KGF-2' ದಾಖಲೆ ಮುರಿದು ಆದಿತ್ಯಾಧರ್ ನಿರ್ದೇಶನದ ಸಿನಿಮಾ ದರ್ಬಾರ್ ನಡೆಸ್ತಿದೆ.

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಧುರಂಧರ್' ಮೇಲೇರುತ್ತಿದೆ. 'ಅನಿಮಲ್', 'ಪಠಾಣ್', 'ಜವಾನ್' ಹೀಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹಿಂದಿಕ್ಕಿ ಇದೀಗ 5ನೇ ಸ್ಥಾನಕ್ಕೇರಿದೆ. ಇನ್ನೊಂದು ವಾರದಲ್ಲಿ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕಲೆಕ್ಷನ್ ಹಿಂದಿಕ್ಕಲಿದೆ. ಮುಂದೆ 'ಪುಷ್ಪ'-2 ಚಿತ್ರದ ದಾಖಲೆ ಮುರಿಯುವ ಲೆಕ್ಕಾಚಾರ ಶುರುವಾಗಿದೆ.

Dhurandhar Overtakes yash starrer KGF 2 Enters Elite Club of India s Biggest Blockbusters

4 ವಾರ ಕಳೆದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಕೆಲವರು ಪದೇ ಪದೆ ಸಿನಿಮಾ ನೋಡುತ್ತಿದ್ದಾರೆ. ಅಂದಾಜು 200ರಿಂದ 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಇದೀಗ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.

ಸ್ಪೈ ಥ್ರಿಲ್ಲರ್ 'ಧುರಂಧರ್' ಚಿತ್ರದಲ್ಲಿ ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವೆರೆದಿದೆ. ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರುವ ಸುಳಿವು ಸಿಗುತ್ತಿಲ್ಲ.

Dhurandhar Overtakes yash starrer KGF 2 Enters Elite Club of India s Biggest Blockbusters

'KGF-2' ದಾಖಲೆ ಧೂಳ್

ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ 'KGF'-2 ಸಿನಿಮಾ 5ನೇ ಸ್ಥಾನದಲ್ಲಿತ್ತು. 4 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಯಶ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ 1200 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. 4ನೇ ಭಾನುವಾರದ ವೇಳೆಗೆ ಇದನ್ನು ಮೀರಿ 'ಧುರಂಧರ್' ಸಿನಿಮಾ ಗಳಿಕೆ ಕಂಡಿದೆ. ಸದ್ಯ ಸಿನಿಮಾ 1217 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

5ನೇ ಸ್ಥಾನಕ್ಕೆ 'ಧುರಂಧರ್'

ಭಾರತೀಯ ಚಿತ್ರರಂಗದಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ(ವಿಕ್ಕಿಪಿಡಿಯದಲ್ಲಿ ದಾಖಲಾಗಿರುವಂತೆ) 'ದಂಗಲ್' ಮೊದಲ ಸ್ಥಾನದಲ್ಲಿದೆ. ಆಮೀರ್ ಖಾನ್ ನಟನೆಯ ಸಿನಿಮಾ 2000 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. 2ನೇ ಸ್ಥಾನದಲ್ಲಿರುವ 'ಬಾಹುಬಲಿ- 2' ಚಿತ್ರ 1800 ಕೋಟಿ ರೂ. ಅದೇ ರೀತಿ 3ನೇ ಸ್ಥಾನದಲ್ಲಿರುವ 'ಪುಷ್ಪ-2' ಒಟ್ಟಾರೆ 1600 ಕೋಟಿ ರೂ. ಗಳಿಕೆ ಕಂಡಿದ್ದಾಗಿ ವರದಿ ಆಗಿತ್ತು.

'RRR' ದಾಖಲೆ ಬ್ರೇಕ್?

30 ದಿನಗಳ ಬಳಿಕ ಕೂಡ 'ಧುರಂಧರ್' ಆರ್ಭಟ ಕಮ್ಮಿ ಆಗುತ್ತಿಲ್ಲ. ಹಾಗಾಗಿ ಶೀಘ್ರದಲ್ಲೇ ಮತ್ತಷ್ಟು ದಾಖಲೆಗಳನ್ನು ಸಿನಿಮಾ ಸ್ವಂತ ಮಾಡಿಕೊಳ್ಳಲಿಲ್ಲ. 'KGF'-2 ಬಳಿಕ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ 'RRR' ಸಿನಿಮಾ ಜಾಗ ಮಾಡಿಕೊಂಡಿದೆ. 4 ವರ್ಷಗಳ ಹಿಂದೆ ಈ ಸಿನಿಮಾ 1300 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದನ್ನು 'ಧುರಂಧರ್' ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ.

ಓಟಿಟಿ ರಿಲೀಸ್ ಡೇಟ್

ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ 'ಧುರಂಧರ್' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಹಿಂದಿ ಸಿನಿಮಾಗಳು ತೆರೆಕಂಡ 8 ವಾರಗಳ ಬಳಿಕ ಓಟಿಟಿಗೆ ಬರುವಂತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಸಾಲದ್ದಕ್ಕೆ ಈ ಸಿನಿಮಾ ಚಿತ್ರಮಂದಿರಗಳಲ್ಲೇ ಭರ್ಜರಿ ಪ್ರದರ್ಶನ ಕಾಣ್ತಿದೆ. ಹಾಗಾಗಿ ತಡವಾಗಿಯೇ ಓಟಿಟಿಗೆ ಬರುವ ನಿರೀಕ್ಷೆಯಿದೆ. ಜನವರಿ 30ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಬಹುದು ಎಂದು ಅಂದಾಜಿಸಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

More from Filmibeat

Read more about: kgf bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X