Dhurandhar Boxoffice Day 10: ಭಾನುವಾರ 'ಧುರಂದರ್' ಅದ್ಭುತ ಕಲೆಕ್ಷನ್; 'ಕಾಂತಾರ-1' ದಾಖಲೆಗೆ ಕುತ್ತು!

ಚಿತ್ರರಂಗದಲ್ಲಿ ದಾಖಲೆಗಳು ಬಹಳ ದಿನ ಉಳಿಯುವುದಿಲ್ಲ. ಚಿತ್ರಕ್ಕಿಂತ ಚಿತ್ರ ದೊಡ್ಡದಾಗಿ ಸದ್ದು ಮಾಡುತ್ತದೆ. ಒಂದು ಸಿನಿಮಾ ಬರೆದ ದಾಖಲೆಯನ್ನು ಮತ್ತೊಂದು ಸಿನಿಮಾ ಅಳಿಸಿ ಹಾಕುತ್ತದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನವ ದಾಖಲೆ ಕನ್ನಡದ 'ಕಾಂತಾರ'-1 ಹೆಸರಿನಲ್ಲಿದೆ. ಅದಕ್ಕೆ ಈಗ 'ಧುರಂದರ್' ಸವಾಲು ಹಾಕ್ತಿದೆ.

ಇನ್ನೊಂದು ತಿಂಗಳಲ್ಲಿ ಯಾವ ಸಿನಿಮಾ ಬಂದು 'ಕಾಂತಾರ'-1 ದಾಖಲೆ ಮುರಿಯೋಕೆ ಸಾಧ್ಯ ಎಂದೇ ಕೆಲವರು ಭಾವಿಸಿದ್ದರು. ಆದರೆ 'ಧುರಂಧರ್' ಸಿನಿಮಾ ಆ ಮಾತನ್ನು ಸುಳ್ಳಾಗಿಸುತ್ತಿದೆ. 2ನೇ ಭಾನುವಾರ ಕೂಡ ಅದ್ಭುತ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ. ಶೀಘ್ರದಲ್ಲೇ 'KGF- 2' ದಾಖಲೆ ಮುರಿಯುವ ಸುಳಿವು ಸಿಕ್ತಿದೆ. ಎಲ್ಲೆಲ್ಲೂ ಈಗ 'ಧುರಂಧರ್' ಬಗ್ಗೆ ಚರ್ಚೆ ಜೋರಾಗಿದೆ. ಮೌತ್ ಟಾಕ್ ಚೆನ್ನಾಗಿದ್ದು ಶೋಗಳ ಸಂಖ್ಯೆ ಹೆಚ್ಚುತ್ತಿದೆ. ಡಿಮ್ಯಾಂಡ್ ನೋಡಿ ಮುಂಬೈ, ಪುಣೆ ಸೇರಿ ಕೆಲವೆಡೆ ಮಿಡ್‌ನೈಟ್ ಶೋಗಳನ್ನು ಆಯೋಜಿಸಲಾಗುತ್ತಿದೆ.

Dhurandhar Roars at the Box Office Challenges Kantara-1 Record in Just 10 Days

ಮೊದಲ ವಾರ 207 ಕೋಟಿ ರೂ.ಗೂ ಅಧಿಕ ನೆಟ್‌ ಕಲೆಕ್ಷನ್ ಮಾಡಿದ್ದ 'ಧುರಂಧರ್' ಸಿನಿಮಾ 2ನೇ ವಾರವೂ ಆರ್ಭಟ ಮುಂದುವರೆಸಿದೆ. 2ನೇ ಶನಿವಾರ 52 ಕೋಟಿ ರೂ. ಗಳಿಸಿದ್ದ ಸಿನಿಮಾ 2ನೇ ಭಾನುವಾರ 59 ಕೋಟಿ ರೂ. ಕಲೆಕ್ಷನ್ ಮಾಡಿರುವಾಗಿ ಅಂದಾಜಿಸಲಾಗುತ್ತಿದೆ. www.sacnilk.com ವರದಿ ಪ್ರಕಾರ 10 ದಿನಕ್ಕೆ ಸಿನಿಮಾ 351.75 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಗ್ರಾಸ್ ಕಲೆಕ್ಷನ್ 450 ಕೋಟಿ ರೂ. ಗಡಿ ದಾಟಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

10 ದಿನಗಳ 'ಡೆವಿಲ್' ಸಿನಿಮಾ ಗಳಿಕೆ

ಮೊದಲ ದಿನ- 28 ಕೋಟಿ ರೂ.

ಎರಡನೇ ದಿನ- 32 ಕೋಟಿ ರೂ.

ಮೂರನೇ ದಿನ - 43 ಕೋಟಿ ರೂ.

ನಾಲ್ಕನೇ ದಿನ - 23 ಕೋಟಿ ರೂ.

ಐದನೇ ದಿನ - 27 ಕೋಟಿ ರೂ.

ಆರನೇ ದಿನ - 27 ಕೋಟಿ ರೂ.

ಏಳದೇ ದಿನ - 27 ಕೋಟಿ ರೂ.

ಎಂಟನೇ ದಿನ - 32 ಕೋಟಿ ರೂ.

ಒಂಭತ್ತನೇ ದಿನ - 53 ಕೋಟಿ ರೂ.

ಹತ್ತನೇ ದಿನ - 59 ಕೋಟಿ ರೂ.

ಒಟ್ಟು ಕಲೆಕ್ಷನ್ - 351 ಕೋಟಿ ರೂ.

Dhurandhar Roars at the Box Office Challenges Kantara-1 Record in Just 10 Days

ನೈಜ ಘಟನೆಗಳನ್ನು ಆಧರಿಸಿ 'ಧುರಂಧರ್' ಸಿನಿಮಾ ನಿರ್ಮಾಣವಾಗಿದೆ. ರಣ್‌ವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ಅಕ್ಷಯ್ ಖನ್ನಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಭಾಷಣೆಗಳು ಪ್ರೇಕ್ಷಕರ ಮನಗೆದ್ದಿದೆ. ರಣ್‌ವೀರ್ ಸಿಂಗ್ ಜೋಡಿಯಾಗಿ ಸಾರಾ ಅರ್ಜುನ್ ಮಿಂಚಿದ್ದಾರೆ. ಡಿಸೆಂಬರ್ 5ರಂದು ತೆರೆಗೆ ಬಂದಿದ್ದ ಸಿನಿಮಾ 2ನೇ ವಾರ ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಾಮಾನ್ಯವಾಗಿ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕಮ್ಮಿ ಆಗುತ್ತದೆ. ಆದರೆ 'ಧುರಂಧರ್' ಚಿತ್ರದಲ್ಲಿ ಇದು ಉಲ್ಟಾ ಆಗಿದೆ.

'ಕಾಂತಾರ'-1 ಸೇರಿದಂತೆ ಕೆಲ ಪ್ಯಾನ್ ಇಂಡಿಯಾ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಿತ್ತು. ಆದರೆ 'ಧುರಂಧರ್' ಬರೀ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಬೇರೆ ಭಾಷೆಗಳಿಗೆ ಡಬ್ ಮಾಡುವಂತೆ ಬೇಡಿಕೆ ಶುರುವಾಗಿದೆ. 'ಕಾಂತಾರ- 1' ಒಟ್ಟಾರೆ 622 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. 800 ಕೋಟಿ ರೂ,ಗೂ ಅಧಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಆದರೆ 10 ದಿನದಲ್ಲಿ 350 ಕೋಟಿ ರೂ. ಗಳಿಸಿರುವ 'ಧುರಂಧರ್' ಬಹಳ ಬೇಗ ಮೊದಲ ಸ್ಥಾನಕ್ಕೆ ಏರುವ ಸುಳಿವು ಸಿಕ್ಕಿದೆ.

ವಿಶೇಷ ಸೂಚನೆ: ಈ ಆರ್ಟಿಕಲ್‌ಗೆ ಸಂಬಂಧಿಸಿದ ಮಾಹಿತಿಯನ್ನು https://www.sacnilk.com/, ನಿರ್ಮಾಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಮಾಧ್ಯಮದ ವಿವರಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಬಹಿರಂಗಪಡಿಸಿದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: kantara bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X