Dhurandhar Box Office Day 34; ತಗ್ಗದ, ಬಗ್ಗದ, ಜಗ್ಗದ ಧುರಂಧರ್ - ಆರ್‌ಆರ್‌ಆರ್‌ ದಾಖಲೆ ಉಡೀಸ್

ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಕೊರೊನಾದ ನಂತರ ಬಾಲಿವುಡ್ಡಿಗೆ ಅಕ್ಷರಶ ಗರ ಬಡಿದಿತ್ತು. 2022ರಲ್ಲಿ ಕನ್ನಡ ಚಿತ್ರರಂಗ ಪಳ ಪಳ ಅಂತ ಹೊಳೆಯುತ್ತಿದ್ದಾಗ ಮಂಕಾಗಿದ್ದ ಹಿಂದಿ ಉದ್ಯಮ ಚೇತರಿಸಿಕೊಂಡಿದ್ದು 2023ರಲ್ಲಿ. ''ಜವಾನ್'' .. ''ಪಠಾಣ್'' .. ''ಗದರ್‌ 2'' .. ''ಅನಿಮಲ್'' ..

ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಗೆಲುವಿನ ನಗೆ ಬೀರಿದ್ದ ಬಾಲಿವುಡ್‌ ನಲ್ಲಿ ''ಸ್ತ್ರೀ 2''.. ''ಭೂಲ್ ಭುಲಯ್ಯ 3''.. ''ಸಿಂಘಂ ಅಗೇನ್''.. ''ಶೈತಾನ್''.. ''ಮುಂಜ್ಯಾ'' ಅಂತಹ ಚಿತ್ರಗಳು 2024ರಲ್ಲಿ ಗೆದ್ದವು. ಇನ್ನು ಕಳೆದ ವರ್ಷ ''ಸೈಯಾರ''.. ''ಛಾವಾ''.. ''ಸಿತಾರೆ ಜಮೀನ್ ಪರ್''.. ''ರೇಡ್ 2''.. ಸೇರಿ ಕೆಲ ಬೆರಳಣಿಯಷ್ಟೇ ಚಿತ್ರಗಳು ಮಾತ್ರ ಗೆದ್ದವು.

Dhurandhar Smashes RRR s Record Ranveer Singh Reigns Supreme as the New King of the Indian BO

ಹೀಗೆ ಕಳೆದ ಎರಡು ಮೂರು ವರ್ಷಗಳಿಂದ ಅಲ್ಲೊಂದು.. ಇಲ್ಲೊಂದು.. ಚಿತ್ರಗಳಷ್ಟೇ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದವು. ಗೆಲ್ಲುತ್ತಿದ್ದವಾದರೂ ಬಾಲಿವುಡ್‌ಗೆ ಬೇಕಿದ್ದ ಅಲೆ ಎದ್ದಿರಲಿಲ್ಲ. ದಕ್ಷಿಣ ಭಾರತೀಯ ಚಿತ್ರರಂಗಗಳ ಅಬ್ಬರಕ್ಕೆ ಬ್ರೇಕ್ ಹಾಕುವಂತಹ ಸಿನಿಮಾ ಬಂದಿರಲಿಲ್ಲ.

ಈ ಹಿನ್ನೆಲೆ ಬಾಲಿವುಡ್‌ನಲ್ಲಿ ಚಿಂತೆ ಮನೆ ಮಾಡಿತ್ತು. ಈ ಚಿಂತೆಯನ್ನು ಕಳೆದ ವರ್ಷಂದ ಅಂತ್ಯಕ್ಕೆ ಬಂದ ''ಧುರಂಧರ್'' ಈಗ ದೂರ ಮಾಡಿದೆ. ''ಧುರಂಧರ್'' ರೂಪದಲ್ಲಿ ಬಾಲಿವುಡ್‌ ಬಾಕ್ಸಾಫೀಸ್‌ಗೆ ಜ್ವಾಲಾಮುಖಿ ಅಪ್ಪಳಿಸಿದೆ. ಹೀಗೆ ಅಪ್ಪಳಿಸಿದ ಈ ಜ್ವಾಲಾಮುಖಿ ಸದ್ಯ ''ಆರ್‌ಆರ್‌ಆರ್‌'' ದಾಖಲೆಯನ್ನು ಕೂಡ ಬಲಿ ಪಡೆದಿದೆ.

ಹೌದು, ''ಧುರಂಧರ್''.. ತೆರೆಗೆ ಬಂದು ನಿನ್ನೆಗೆ (ಜನವರಿ 7) 34 ದಿನಗಳಾಗಿವೆ. ಈ 34 ದಿನದಲ್ಲಿ ಹತ್ತು ಹಲವು ದಾಖಲೆಗಳನ್ನು ಮುರಿದಿರುವ ''ಧುರಂಧರ್'' ಈಗ ''ಆರ್‌ಆರ್‌ಆರ್‌'' ಚಿತ್ರವನ್ನು ಬಾಕ್ಸಾಫೀಸ್‌ ರೇಸ್‌ನಲ್ಲಿ ಹಿಂದಿಕ್ಕಿದೆ. ಈ ಮೂಲಕ ಕೇವಲ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ''ಧುರಂಧರ್'' ಏರಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ನಿನ್ನೆ (ಜನವರಿ 7) ಐದನೇ ಬುಧವಾರ ₹ 4.25ಕೋಟಿಯನ್ನು ಗಳಿಸಿದೆ. ಈ ಮೂಲಕ ₹ 786 ಕೋಟಿಯನ್ನು ಗಳಿಸಿದೆ. ಅದೇ ಮತ್ತೊಂದು ಕಡೆ 2022ರಲ್ಲಿ ತೆರೆಗೆ ಬಂದಿದ್ದ ''ಆರ್‌ಆರ್‌ಆರ್'' ಚಿತ್ರಮಂದಿರಗಳಲ್ಲಿ ಆರು ವಾರಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. ಬಾಕ್ಸಾಫೀಸ್‌ನಲ್ಲಿ ₹782.2 ಕೋಟಿಯನ್ನು ಗಳಿಸಿತ್ತು. ''ಧುರಂಧರ್‌'' ಕೇವಲ 34 ದಿನದಲ್ಲಿ ಈ ಗಳಿಕೆಯನ್ನು ಹಿಂದಿಕ್ಕಿದೆ.

Dhurandhar Smashes RRR s Record Ranveer Singh Reigns Supreme as the New King of the Indian BO

ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಹತ್ತು ಚಿತ್ರಗಳ ಪಟ್ಟಿ ಇಲ್ಲಿದೆ.

1. ಪುಷ್ಪ 2 (2024 ) ₹1,234.1 ಕೋಟಿ
2.ಬಾಹುಬಲಿ 2 (2017) ₹1,030.4 ಕೋಟಿ
3.ಕೆಜಿಎಫ್ 2 (20220 ₹859.7 ಕೋಟಿ
4.ಧುರಂಧರ್* (2025) ₹786 ಕೋಟಿ
5.ಆರ್‌ಆರ್‌ಆರ್ (2022) ₹782.2 ಕೋಟಿ
6.ಕಲ್ಕಿ 2898 AD (2024) ₹646.3 ಕೋಟಿ
7. ಜವಾನ್ (2023) ₹640.2 ಕೋಟಿ
8.ಕಾಂತಾರ 1 (2025) ₹622.4 ಕೋಟಿ
9.ಛಾವಾ (2025)₹601.5 ಕೋಟಿ
10. ಸ್ತ್ರೀ 2 (2024 ) ₹597.9 ಕೋಟಿ

ಒಟ್ನಲ್ಲಿ ಸದ್ಯ 34 ದಿನಗಳಾದರೂ ''ಧುರಂಧರ್'' ಅಬ್ಬರ ಭಾರತದಲ್ಲಿ ಕಡಿಮೆಯಾಗಿಲ್ಲ. ಸದ್ಯ 34 ದಿನದಲ್ಲಿ ₹ 786 ಕೋಟಿ ದೋಚಿರುವ ''ಧುರಂಧರ್'' ಎದುರು ''ಕೆಜಿಎಫ್ 2'' ದಾಖಲೆ ಮುರಿಯುವ ಸವಾಲು ಇದೆ. ಸದ್ಯದ ''ಧುರಂಧರ್'' ನಾಗಾಲೋಟ ನೋಡುತ್ತಿದ್ದರೆ ''ಕೆಜಿಎಫ್‌ 2'' ಚಿತ್ರವನ್ನು ''ಧುರಂಧರ್'' ಹಿಂದಿಕ್ಕಲಿದೆ. ಅಂದ್ಹಾಗೇ ''ಪುಷ್ಪ 2''.. ''ಬಾಹುಬಲಿ 2'' ಮತ್ತು ''ಕೆಜಿಎಫ್‌2'' ಈ ಮೂರು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದವು. ಎಲ್ಲ ಭಾಷೆಯಲ್ಲಿ ಹಣ ದೋಚಿದ್ದವು. ಆದರೆ, ''ಧುರಂಧರ್'' ಇಷ್ಟೊಂದು ಹಣ ಗಳಿಸಿದ್ದು ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಎನ್ನುವುದು ನಿಮ್ಮ ಗಮನದಲ್ಲಿರಲಿ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
History rewritten! Dhurandhar zooms past RRR to become a box office legend. With over ₹785 crore in the bag by Day 34, Ranveer Singh has delivered the ultimate blockbuster. Is KGF Chapter 2 the next target? Read the full box office report here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X