Dhurandhar 2 Box Office Day 8 ; ಬಾಕ್ಸಾಫೀಸ್‌ನಲ್ಲಿ ಧುರಂಧರ್ ಧಮಾಕ - ಜವಾನ್, ಛಾವಾ ದಾಖಲೆ ಧೂಳಿಪಟ
ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ವಿಶೇಷ ದಿನಗಳಂದು.. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗುಳಿ ಕಂಡು ಬರುತ್ತದೆ. ಚಿತ್ರ ಚೆನ್ನಾಗಿದೆಯಾ.. ? ಚೆನ್ನಾಗಿಲ್ವಾ ? ಯಾವುದನ್ನೂ ಲೆಕ್ಕಿಸದೇ ಮಜಾ ಮಾಡುವ ಉದ್ದೇಶದಿಂದ ರಜಾದಿನದಂದು ಬಂದ ಚಿತ್ರವನ್ನು ಅನೇಕರು ನೋಡುತ್ತಾರೆ.
ಆದರೆ ಅಸಲಿ ಪರೀಕ್ಷೆ ಶುರುವಾಗುವುದೇ ಆ ನಂತರ. ಹಬ್ಬ ಮುಗಿದ ನಂತರ .. ರಜೆಯ ಮಜವೆಲ್ಲ ಮುಕ್ತಾಯವಾದ ನಂತರ.. ಆ ಚಿತ್ರ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟವಾಗಿದ್ದರೆ ಮಾತ್ರ ಚಿತ್ರಮಂದಿರದಲ್ಲಿ ಉಳಿಯುತ್ತೆ. ಗೆಲ್ಲುತ್ತೆ.

ಅದರಲ್ಲಿಯೂ ಪೈರಸಿಯ ಈ ಕಾಲದಲ್ಲಿ .. ಪ್ಯಾನ್ ಇಂಡಿಯಾದ ಗುಂಗಿನಲ್ಲಿ .. ಚಿತ್ರವೊಂದು ಚಿತ್ರಮಂದಿರದಲ್ಲಿ ಒಂದೆರಡು ವಾರ ಪ್ರದರ್ಶನ ಕಾಣುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿಯಲ್ಲಿ ಚಿತ್ರವೊಂದು ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಹಣ ದೋಚುತ್ತಿದೆ ಅಂದರೆ ಆ ಚಿತ್ರ ನಿಜಕ್ಕೂ ಗೆದ್ದಂತೆಯೇ. ಉದಾಹರಣೆಗೆ ''ಧುರಂಧರ್ 2''.
ಹೌದು, ಅಸಲಿಗೆ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಎಷ್ಟೇ ಚೆನ್ನಾಗಿರಲಿ.. ವೀಕೆಂಡ್ ಮೂಡ್‌ದಿಂದ ಜನ ಹೊರ ಬಂದ ನಂತರ ಆ ಚಿತ್ರದ ಗಳಿಕೆ ಕಡಿಮೆಯಾಗುತ್ತೆ. ''ಧುರಂಧರ್-2'' ಚಿತ್ರದ ಗಳಿಕೆ ಕೂಡ ಕಡಿಮೆಯಾಗಿದೆ.
ಆದರೆ..''ಧುರಂಧರ್ 2'', ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಹಿಂದೆಂದೂ ಕಾಣದಂತಹ ಎದ್ದಿರುವ ಬಾಕ್ಸ್ ಆಫೀಸ್ ಸುನಾಮಿ. ಇದಕ್ಕೆ ಕೈಗನ್ನಡಿ ಎಂಬಂತೆ ಆದಿತ್ಯ ಧರ್ ನಿರ್ದೇಶನದ ''ಧುರಂಧರ್-2'' ಎರಡನೇ ಗುರುವಾರ (ಮಾರ್ಚ್ 26 ) ₹49.70 ಕೋಟಿಯನ್ನು ದೋಚಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.
ನೆನಪಿರಲಿ, ರಜಾದಿನದಂದು ಕೂಡ ತೆರೆಗೆ ಬಂದ ಚಿತ್ರ ಇಷ್ಟೊಂದು ಮೊತ್ತ ಕಲೆ ಹಾಕುವುದು ಕಷ್ಟ ಎನ್ನುವಂತಹ ವಾತಾವರಣ ನಿರ್ಮಾಣವಾಗಿರುವಂತಹ ದಿನಗಳಿವು. ಇಂತಹ ದಿನಗಳಲ್ಲಿ ''ಧುರಂಧರ್ 2'' ವರ್ಕಿಂಗ್ ಡೇಯಂದು ₹49.70 ಕೋಟಿ ಗಳಿಸಿದೆ ಎಂದರೆ ಕ್ರೇಜ್ ಹೇಗಿದೆ ಎನ್ನುವುದನ್ನು ನೀವೆ ಲೆಕ್ಕ ಹಾಕಿ.

ಸ್ಯಾಕ್ನಿಲ್ ಪ್ರಕಾರ ''ಧುರಂಧರ್ 2'' ಚಿತ್ರದ 8 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಪೇಯ್ಡ್ ಪ್ರೀಮಿಯರ್ (ಬುಧವಾರ) ₹43 ಕೋಟಿ
ಮೊದಲ ದಿನ (ಗುರುವಾರ)₹102 ಕೋಟಿ
ಎರಡನೇ ದಿನ (ಶುಕ್ರವಾರ) ₹80.72 ಕೋಟಿ
ಮೂರನೇ ದಿನ (ಶನಿವಾರ) ₹113 ಕೋಟಿ
ನಾಲ್ಕನೇ ದಿನ (ಭಾನುವಾರ)₹114.85 ಕೋಟಿ
ಐದನೇ ದಿನ ( ಸೋಮವಾರ)₹65 ಕೋಟಿ
ಆರನೇ ದಿನ (ಮಂಗಳವಾರ) ₹₹56.60ಕೋಟಿ
ಏಳನೇ ದಿನ (ಬುಧವಾರ) ₹48.75 ಕೋಟಿ
ಎಂಟನೇ ದಿನ (ಗುರುವಾರ) ₹49.70ಕೋಟಿ
ಒಟ್ಟು ಗಳಿಕೆ - ₹674.17 ಕೋಟಿ
ಹೀಗೆ 8 ದಿನದಲ್ಲಿ ಕೇವಲ ಭಾರತದಲ್ಲಿಯೇ ₹674.17 ಕೋಟಿಯನ್ನು ಕೊಳ್ಳೆ ಹೊಡೆದಿರುವ ''ಧುರಂಧರ್ 2'' ಸದ್ಯ ವಿಕ್ಕಿ ಕೌಶಲ್ ಅಭಿನಯದ ''ಛಾವಾ'' (₹601.54 ಕೋಟಿ) ಮತ್ತು ಶಾರುಖ್ ಖಾನ್ ಅಭಿನಯದ ''ಜವಾನ್'' (₹640.25 ಕೋಟಿ) ಗಳಿಕೆಯನ್ನು ಹಿಂದಿಕ್ಕಿದೆ. ಇಷ್ಟೇ ಅಲ್ಲ ಶ್ರದ್ಧಾ ಕಪೂರ್ ಅಭಿನಯದ ''ಸ್ತ್ರೀ 2'' (₹597.99) ರೆಕಾರ್ಡ್ ಕೂಡ ''ಧುರಂಧರ್ 2'' ಕೇವಲ 8 ದಿನದಲ್ಲಿ ಉಡೀಸ್ ಮಾಡಿದೆ.
ಸದ್ಯ ''ಧುರಂಧರ್ 2'' ಅಬ್ಬರ ಜೋರಾಗಿದೆ. ಬೇರೆ ಯಾವ ದೊಡ್ಡ ಚಿತ್ರ ಇಲ್ಲದಿರುವುದರಿಂದ ಬಾಕ್ಸಾಫೀಸ್‌ನ ಮೈದಾನ ಖಾಲಿ ಇದೆ. ಈ ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ₹1500 ಕೋಟಿಗೂ ಅಧಿಕ ಹಣವನ್ನು ''ಧುರಂಧರ್ 2'' ಗಳಿಸುತ್ತೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಸದ್ಯ ಕೇಳಿ ಬರುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











