Dhurandhar Box Office Day 7 ; ಕೇವಲ ಏಳೇ ದಿನ, ಇತಿಹಾಸ ಸೃಷ್ಟಿಸಿದ ಧುರಂಧರ್-ರಣವೀರ್ ಸಿಂಗ್ ಸಿಡಿಲಬ್ಬರ

ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರ, ಬಾಲಿವುಡ್ ನ ಬಾವಿಗೆ ತಳ್ಳಿದೆ ಎನ್ನುವುದು ಅನೇಕರ ಅಭಿಪ್ರಾಯ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡಾ ಹೌದು. ಯಾಕೆಂದರೆ ಕೊರೊನಾ ನಂತರದ ದಿನಗಳಲ್ಲಿ ಬಾಲಿವುಡ್ ಎದ್ದಿದ್ದು ಕಡಿಮೆ. ಬೋರಲು ಬಿದ್ದಿದ್ದೇ ಹೆಚ್ಚು. ಕೊರೊನಾ ನಂತರ ಒಂದು ಕಡೆ ''ಬಾಹುಬಲಿ 1 ಮತ್ತು 2''.. ''ಕೆಜಿಎಫ್ 1 ಮತ್ತು 2'' ..

''ಪುಷ್ಪ 1 ಮತ್ತು 2'' ..''ಆರ್‌ಆರ್‌ಆರ್‌'' .. ''ಕಾಂತಾರ'' .. ''777 ಚಾರ್ಲಿ'' ...ಅಂತಹ ಚಿತ್ರಗಳು ಅಬ್ಬರಿಸಿದ್ದರೆ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ನೆಲಕಚ್ಚಿದ್ದವು. ಆದರೆ.. 2023ರ ಸುಮಾರು ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳಲು ಶುರು ಮಾಡಿತ್ತು. ಹಾಗಂಥ.. ಮೊದಲಿನ ಲಯಕ್ಕೆ ಹಿಂದಿ ಉದ್ಯಮ ಆಗಲೂ ಮರಳಲಿಲ್ಲ. ಈಗಲೂ ಕೂಡ ಮರಳಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಮಾತ್ರ ಮಕಾಡೆ ಮಲಗಿದ ಬಾಲಿವುಡ್‌ನ ಬಡಿದೆಬ್ಬಿಸುತ್ತಿವೆ. ಗೆಲ್ಲುತ್ತಿವೆ. ಈ ಸಾಲಿಗೆ ಈಗ ''ಧುರಂಧರ್'' ಸೇರಿಕೊಂಡಿದೆ.

Dhurandhar s Glorious Week 1 Ranveer Singh Spy Thriller Crosses 200 Cr Milestone

ಹೌದು, ಕಳೆದ ಶುಕ್ರವಾರ ( ಡಿಸೆಂಬರ್ 5 ) ಬಿಡುಗಡೆಯಾದ ''ಧುರಂಧರ್'' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇನ್ನೂ ಸಾಮಾನ್ಯವಾಗಿ ಸೋಮವಾರದ ನಂತರ ಚಿತ್ರ ಯಾವುದೇ ಇರಲಿ.. ಆ ಚಿತ್ರದ ಸ್ಟಾರ್ ಯಾರೇ ಇರಲಿ.. ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುವುದು ಸರ್ವೆ ಸಾಮಾನ್ಯ.

ಆದರೆ..ಈ ಮಾತುಗಳಿಗೆ ''ಧುರಂಧರ್'' ತದ್ವಿರುದ್ದ. ವಾರದ ದಿನಗಳಲ್ಲಿ ಕೂಡ ಈ ಚಿತ್ರದ ಗಳಿಕೆ ಕಡಿಮೆ ಆಗುತ್ತಿಲ್ಲ. ಬದಲಿಗೆ ಕಳೆದ ಸೋಮವಾರದಿಂದ ನಿನ್ನೆ (ಗುರುವಾರ)ವರೆಗೆ ಎರಡಂಕಿ ಗಳಿಕೆಯನ್ನು ಚಿತ್ರ ಮಾಡಿದೆ. ''ಸ್ಯಾಕ್ನಿಲ್'' ಪ್ರಕಾರ ಕಳೆದ ಮೂರಿ ದಿನ ನಿರಂತರವಾಗಿ ₹ 27 ಕೋಟಿಯನ್ನು ಚಿತ್ರ ಕೊಳ್ಳೆ ಹೊಡೆದಿದೆ. ಕೇವಲ ಏಳೇ ದಿನದಲ್ಲಿ ₹200 ಕೋಟಿಯ ಗಡಿಯನ್ನು ದಾಟಿರುವ ''ಧುರಂಧರ್'' ₹ 207.25 ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ದೋಚಿದೆ.

dhurandhars-glorious-week-1-ranveer-singh-spy-thriller-crosses-200-cr-milestone

''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ ಐದು ದಿನಗಳ ಗಳಿಕೆ ಕೆಳಗಿನಂತೆ ಇದೆ.

ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ *


ಒಟ್ಟು ಗಳಿಕೆ ₹ 207.25 ಕೋಟಿ

ಹೀಗೆ ಕೇವಲ ಏಳು ದಿನದಲ್ಲಿ ₹207.25 ಕೋಟಿಯನ್ನು ದೋಚಿರುವ ''ಧುರಂಧರ್'' ಈಗಾಗಲೇ ಭಾರತದ ಬಾಕ್ಸಾಫೀಸ್‌ನಲ್ಲಿ ಸಲ್ಮಾನ್ ಖಾನ್ ಅಭಿನಯದ ''ಸಿಕಂದರ್'' (₹109.83 ಕೋಟಿ ) ಅಕ್ಷಯ್ ಕುಮಾರ್ ಅಭಿನಯದ ''ಸ್ಕೈ ಫೋರ್ಸ್‌'' (₹112.75 ಕೋಟಿ)ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ''ಥಮ್ಮ'' ( ₹134.78 ಕೋಟಿ) ಸೇರಿ ಈ ವರ್ಷ ಬಂದ ಹಲವು ಸಿನಿಮಾಗಳನ್ನು ಹಿಂದಿಕ್ಕಿದೆ. ಇಷ್ಟೇ ಅಲ್ಲ ರಣವೀರ್ ಸಿಂಗ್ ಅಭಿನಯದ ಹಿಂದಿನ ಚಿತ್ರಗಳಾದ ''ಗಲ್ಲಿ ಬಾಯ್'' (₹ 139.63 ಕೋಟಿ) ''ರಾಕಿ ರಾಣಿ ಕೀ ಪ್ರೇಮ್ ಕಥಾ'' (₹153.55 ಕೋಟಿ) ''ಬಾಜಿರಾವ್ ಮಸ್ತಾನಿ'' (₹ 184.3 ಕೋಟಿ) ದಾಕಲೆ ಕೂಡ ''ಧುರಂಧರ್'' ಅಬ್ಬರದ ಮುಂದೆ ಪುಡಿಪುಡಿಯಾಗಿವೆ.

ಸದ್ಯ ಕೇವಲ ಒಂದು ವಾರದಲ್ಲಿ ₹207.25 ಕೋಟಿಯನ್ನು ಗಳಿಸಿರುವ ''ಧುರಂಧರ್'' ಗಳಿಕೆ ಈ ವಾರಾಂತ್ಯಕ್ಕೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ₹300 ಕೋಟಿಯ ಗಡಿಯನ್ನು ಚಿತ್ರ ಸುಲಭವಾಗಿ ಪಾರು ಮಾಡಲಿದೆ. ''ಛಾವಾ'' ಮತ್ತು ''ಸೈಯಾರ'' ದಾಖಲೆಯನ್ನು ಈ ಚಿತ್ರ ಮುರಿಯುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Read the full box office report! 'Dhurandhar' achieves a historic feat, sailing past the ₹200 Cr milestone on Day 7. Ranveer Singh's latest blockbuster dominates the charts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X