ಭಾರತದ ಬಾಕ್ಸಾಫೀಸ್‌ನಲ್ಲಿ 'ಜುರಾಸಿಕ್ ವರ್ಲ್ಡ್- ರೀ ಬರ್ತ್' ಅಬ್ಬರ, 6 ದಿನದಲ್ಲಿ ಗಳಿಸಿದ್ದೆಷ್ಟು ಕೋಟಿ ?
ಅಂಗೈನಲ್ಲೇ ಆಕಾಶ ತೋರಿಸೋದ್ರಲ್ಲಿ ''ಹಾಲಿವುಡ್''ನವರು ಸದಾ ಮುಂದು. ಮನುಷ್ಯನ ಊಹೆಗೂ ಮೀರಿದ ಕಥೆಗಳನ್ನು ಬೆಳ್ಳಿತೆರೆಗೆ ತರುವುದರಲ್ಲಿ ಎತ್ತಿದ ಕೈ. ಹೊಸ ಟೆಕ್ನಾಲಜಿ ತ್ರಿಡಿ ಯಾನ ಶುರುವಾದ ಮೇಲಂತೂ ಇವರ ಭಾವನೆ, ಕಲ್ಪನೆಗಳಿಗೆ, ಮತ್ತಷ್ಟು ಮೆರಗು ಬಂದಿದೆ. ಸಿನಿರಸಿಕರ ನಾಡಿ ಮಿಡಿತದ ಜೊತೆ ಇವರ ಕಲ್ಪನೆಗಳು ಬೆರಗಾಗಿಸುತ್ತಿವೆ. ಇದಕ್ಕೆ ಸದ್ಯದ ಉದಾಹರಣೆ ''ಜುರಾಸಿಕ್ ವರ್ಲ್ಡ್- ರೀ ಬರ್ತ್'' ಸಿನಿಮಾ.
ಹೌದು, ಕಳೆದ ವಾರವಷ್ಟೇ ತೆರೆಗೆ ಬಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ಈ ಚಿತ್ರ ಕೇವಲ ಉತ್ತರ ಅಮೆರಿಕಾದಲ್ಲಿಯೇ 4,308 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು ಮೊದಲ ಐದು ದಿನಗಳಲ್ಲಿ $147.3 ಮಿಲಿಯನ್ ಗಳಿಸಿದೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ಭಾರತದಲ್ಲಿ ಹಾಲಿವುಡ್ ಚಿತ್ರಗಳಿಗೆ ಅದ್ರದ್ದೇ ಆದ ಬೇಡಿಕೆ ಇದೆ. ಯಾರೇನೇ ಹೇಳಿದರೂ.. ಚಿತ್ರಕ್ಕೆ ನೆಗೆಟಿವ್ ರೆಸ್ಫಾನ್ಸ್ ಸಿಕ್ಕರೂ ಕೂಡ.. ಭಾರತದಲ್ಲಿ ಹಾಲಿವುಡ್ ಚಿತ್ರಗಳನ್ನು ಮುಗಿಬಿದ್ದು ನೋಡುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ''ಜುರಾಸಿಕ್ ವರ್ಲ್ಡ್- ರೀ ಬರ್ತ್'' ಸಿನಿಮಾ ಕೇವಲ ಭಾರತದಲ್ಲಿಯೇ ಈ ಆರು ದಿನದಲ್ಲಿ ₹ 50.1 ಕೋಟಿ ಹಣವನ್ನು ದೋಚಿದೆ ಎಂದು ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಮಾಹಿತಿಯನ್ನು ಹಂಚಿಕೊಂಡಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ 'ಜುರಾಸಿಕ್ ವರ್ಲ್ಡ್- ರೀ ಬರ್ತ್'ನ ಆರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲನೇ ದಿನ { ಶುಕ್ರವಾರ } ₹9.25 ಕೋಟಿ
ಎರಡನೇ ದಿನ { ಶನಿವಾರ } ₹13.5 ಕೋಟಿ
ಮೂರನೇ ದಿನ {ಭಾನುವಾರ} ₹16.25 ಕೋಟಿ
ನಾಲ್ಕನೇ ದಿನ {ಸೋಮವಾರ} ₹4.2 ಕೋಟಿ
ಐದನೇ ದಿನ {ಮಂಗಳವಾರ} ₹4.5 ಕೋಟಿ
ಆರನೇ ದಿನ {ಬುಧವಾರ} ₹2.4 ಕೋಟಿ { ಅಂದಾಜು }
ಒಟ್ಟು ಗಳಿಕೆ - ₹50.1 ಕೋಟಿ
ಇನ್ನು ''ಜುರಾಸಿಕ್ ವರ್ಲ್ಡ್- ರೀ ಬರ್ತ್'' ನೋಡಲು ಮಾಯಾನಗರಿಗಳಲ್ಲಿ ಹೆಚ್ಚಿನ ಉತ್ಸಾಹ ಪ್ರೇಕ್ಷಕರಲ್ಲಿ ಕಂಡು ಬಂದಿದೆ. ಅದರಲ್ಲಿಯೂ ಚೆನ್ನೈನಲ್ಲಿ ಈ ಚಿತ್ರದ ಆಕ್ಯಪೆನ್ಸಿ ನಿನ್ನೆ ಅಂದರೆ ಆರನೇ ದಿನ 30.67% ಇತ್ತು ಎಂದು 'ಸ್ಯಾಕ್ನಿಲ್' ವೆಬ್ ಸೈಟ್ ವರದಿಯನ್ನು ಮಾಡಿದೆ. ಚೆನ್ನೈ ಹೊರತು ಪಡಿಸಿದರೆ ಈ ಚಿತ್ರ ಇಷ್ಟೊಂದು ಹಣ ಗಳಿಸುವುದಲ್ಲಿ ಕೋಲ್ಕತ್ತಾ.. ಬೆಂಗಳೂರು ಮತ್ತು ಮುಂಬೈ ನಿವಾಸಿಗಳ ಕೊಡುಗೆ ದೊಡ್ಡದು.
ಸಿತಾರೆ ಜಮೀನ್ ಪರ್‌ಗೆ ಜುರಾಸಿಕ್ ವರ್ಲ್ಡ್ ಕಂಟಕ
ಸದ್ಯ ಭಾರತದಲ್ಲಿ ''ಸಿತಾರೆ ಜಮೀನ್ ಪರ್'' ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಿದೆ. ಆದರೆ ಆಮಿರ್ ಖಾನ್ ಅಭಿನಯಿಸಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಭಾರತದಲ್ಲಿ ಹಾಲಿವುಡ್‌ನವರ 'ಜುರಾಸಿಕ್ ವರ್ಲ್ಡ್' ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ.ಇನ್ನು 'ಸ್ಯಾಕ್ನಿಲ್' ವೆಬ್ ಸೈಟ್ ಪ್ರಕಾರ್ ಟಾಮ್ ಕ್ರೂಸ್ ಅಭಿನಯದ ಮಹತ್ವಕಾಂಕ್ಷೆಯ ಚಿತ್ರ ''ಮಿಷನ್ ಇಂಪಾಸಿಬಲ್ ದಿ ಫೈನಲ್ ರೆಕನಿಂಗ್'' ಚಿತ್ರ ಭಾರತದಲ್ಲಿ ₹ 103.75 ಕೋಟಿ ಹಣವನ್ನು ಗಳಿಸಿತ್ತು. ಈ ದಾಖಲೆಯನ್ನು ಕೂಡ ಸದ್ಯ ''ಜುರಾಸಿಕ್ ವರ್ಲ್ಡ್- ರೀ ಬರ್ತ್'' ಮುರಿಯುವ ಸಾಧ್ಯತೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











